ಐಪಿಎಲ್ ಸೀಸನ್ 17ರ ಫೈನಲ್ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ಮಣಿಸುವ ಮೂಲಕ ಕೊಲ್ಕತ್ತಾ ನೈಟ್ ರೈಡರ್ಸ್ ತಂಡವು ಮೂರನೇ ಬಾರಿಗೆ ಚಾಂಪಿಯನ್ ಆಗಿದೆ.
ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಸನ್‌ರೈಸರ್ಸ್ ತಂಡದ ನಾಯಕ ಪ್ಯಾಟ್ ಕಮ್ಮಿನ್ಸ್ ಟಾಸ್ ಗೆದ್ದು, ಬ್ಯಾಟಿಂಗ್ ಆಯ್ದುಕೊಂಡಿದ್ದರು. ಆದರೆ, ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಮಾರಕ ಬೌಲಿಂಗ್ ದಾಳಿಗೆ ಮಕಾಡೆ ಮಲಗಿ, ಕೇವಲ 113 ರನ್ ಗಳಿಸುವಷ್ಟರಲ್ಲಿ ಆಲೌಟ್ ಆಗಿತ್ತು.
114 ರನ್‌ಗಳ ಸುಲಭ ಗುರಿಯನ್ನು ಬೆನ್ನತ್ತಿದ ಶ್ರೇಯಸ್ ಅಯ್ಯರ್ ನೇತೃತ್ವದ ಕೊಲ್ಕತ್ತಾ ನೈಟ್ ರೈಡರ್ಸ್ ತಂಡವು, ಕೇವಲ 10.3 ಓವರ್‌ಗಳಲ್ಲಿ ಕೇವಲ 2 ವಿಕೆಟ್ ಕಳೆದುಕೊಂಡು ಗುರಿ ತಲುಪಿತು. ಆ ಮೂಲಕ 8 ವಿಕೆಟ್‌ಗಳ ಭರ್ಜರಿ ಗೆಲುವಿನೊಂದಿಗೆ ಮೂರನೇ ಬಾರಿಗೆ ಚಾಂಪಿಯನ್ ಆಗಿದೆ.
𝗖𝗛𝗔𝗠𝗣𝗜𝗢𝗡𝗦 𝗢𝗙 #𝗧𝗔𝗧𝗔𝗜𝗣𝗟 𝟮𝟬𝟮𝟰 😍🏆
The 𝗞𝗢𝗟𝗞𝗔𝗧𝗔 𝗞𝗡𝗜𝗚𝗛𝗧 𝗥𝗜𝗗𝗘𝗥𝗦! 💜#KKRvSRH | #Final | #TheFinalCall | @KKRiders pic.twitter.com/iEfmGOrHVp
— IndianPremierLeague (@IPL) May 26, 2024
ಕೊಲ್ಕತ್ತಾ ನೈಟ್ ರೈಡರ್ಸ್ ಪರ ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿದ ವೆಂಕಟೇಶ್ ಅಯ್ಯರ್ 26 ಎಸೆತಗಳಲ್ಲಿ 3 ಸಿಕ್ಸ್ ಹಾಗೂ 4 ಬೌಂಡರಿಯ ನೆರವಿನಿಂದ 52 ರನ್ ಗಳಿಸುವ ಮೂಲಕ ಅರ್ಧಶತಕ ಪೂರೈಸಿದರು. ಕೊನೆಯಲ್ಲಿ ನಾಯಕ ಶ್ರೇಯಸ್ ಅಯ್ಯರ್ 6 ರನ್ ಗಳಿಸಿ, ಔಟಾಗದೇ ಉಳಿದರು.
ರಹ್ಮಾತುಲ್ಲಾ ಗುರ್ಬಾಝ್ 31 ಎಸೆತಗಳಲ್ಲಿ 39 ರನ್ (5 ಬೌಂಡರಿ ಹಾಗೂ 2 ಸಿಕ್ಸರ್) ಗಳಿಸಿ, ಶಾಬಾಝ್ ಬೌಲಿಂಗ್‌ನಲ್ಲಿ ಎಲ್‌ಬಿಡಬ್ಲ್ಯೂ ಬಲೆಗೆ ಬಿದ್ದು, ವಿಕೆಟ್ ಒಪ್ಪಿಸಿದರು. 2 ಎಸೆತಗಳನ್ನು ಎದುರಿಸಿದ್ದ ಸುನಿಲ್ ನರೇನ್ ಒಂದು ಸಿಕ್ಸ್‌ನ ನೆರವಿನಿಂದ 6 ರನ್ ಗಳಿಸಿ, ಪ್ಯಾಟ್ ಕಮ್ಮಿನ್ಸ್ ಎಸೆತದಲ್ಲಿ ಶಾಬಾಝ್‌ಗೆ ಕ್ಯಾಚಿತ್ತು ನಿರ್ಗಮಿಸಿದರು.
ಬಾಲಿವುಡ್ ನಟ ಶಾರೂಖ್ ಖಾನ್ ಮಾಲೀಕತ್ವದ ಕೊಲ್ಕತ್ತಾ ನೈಟ್ ರೈಡರ್ಸ್ ತಂಡವು, 4ನೇ ಬಾರಿಗೆ ಐಪಿಎಲ್ ಟೂರ್ನಿಯಲ್ಲಿ ಫೈನಲ್‌ಗೆ ಲಗ್ಗೆ ಇಟ್ಟಿತ್ತು. ಈ ಮೊದಲು 2012, 2014 ಹಾಗೂ 2021ರಲ್ಲಿ ಫೈನಲ್ ಪ್ರವೇಶಿಸಿತ್ತು. ಈ ಪೈಕಿ 2012ರಲ್ಲಿ ಚೆನ್ನೈಯನ್ನು ಹಾಗೂ 2014ರಲ್ಲಿ ಕಿಂಗ್ಸ್ ಎಲೆವೆನ್ ಪಂಜಾಬ್ ಅನ್ನು ಸೋಲಿಸಿ ಐಪಿಎಲ್ ಟ್ರೋಫಿ ಎತ್ತಿ ಹಿಡಿಯುವ ಮೂಲಕ, ಚಾಂಪಿಯನ್ ಆಗಿತ್ತು.
— KolkataKnightRiders (@KKRiders) May 25, 2024
2021ರಲ್ಲಿ ಕೂಡ ಫೈನಲ್ ಪ್ರವೇಶಿಸಿದ್ದರೂ ಕೂಡ, ಕೋಲ್ಕತ್ತಾ ನೈಟ್ ರೈಡರ್ಸ್ ತಂಡವು 27 ರನ್‌ಗಳಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ವಿರುದ್ಧ ಸೋಲನುಭವಿಸಿ, ರನ್ನರ್ ಅಪ್ ಆಗಿತ್ತು. 2024ರಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ಸೋಲಿಸಿ, ಮೂರನೇ ಬಾರಿಗೆ ಚಾಂಪಿಯನ್ ಆಗಿದೆ.
113ಕ್ಕೆ ಆಲೌಟ್ ಆಗಿದ್ದ ಹೈದರಾಬಾದ್ ತಂಡ
ಐಪಿಎಲ್‌ನ ಲೀಗ್ ಹಂತದಲ್ಲಿ ಭರ್ಜರಿ ಸ್ಫೋಟಕ ಬ್ಯಾಟಿಂಗ್‌ನ ಕಾರಣಕ್ಕೆ ಸುದ್ದಿಯಾಗುತ್ತಿದ್ದ ಪ್ಯಾಟ್ ಕಮ್ಮಿನ್ಸ್ ನೇತೃತ್ವದ ಸನ್‌ರೈಸರ್ಸ್ ಹೈದರಾಬಾದ್ ತಂಡ, ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಮಾರಕ ಬೌಲಿಂಗ್ ದಾಳಿಗೆ ಫೈನಲ್‌ನಲ್ಲಿ ಮಕಾಡೆ ಮಲಗಿತ್ತು.
Time for the ultimate 𝗰𝗵𝗮𝘀𝗲! 👊 pic.twitter.com/3qYRtIiLgu
— KolkataKnightRiders (@KKRiders) May 26, 2024
ಫೈನಲ್ ಪಂದ್ಯದಲ್ಲಿ ಸನ್‌ರೈಸರ್ಸ್ ತಂಡದ ನಾಯಕ ಪ್ಯಾಟ್ ಕಮ್ಮಿನ್ಸ್ ಟಾಸ್ ಗೆದ್ದು, ಬ್ಯಾಟಿಂಗ್ ಆಯ್ದುಕೊಂಡಿದ್ದರು. ಆದರೆ ಇದನ್ನು ಸಮರ್ಥವಾಗಿ ಬಳಸಿಕೊಳ್ಳಲು ಮೊದಲ ಓವರ್‌ನಿಂದಲೇ ಹೈದರಾಬಾದ್ ಬ್ಯಾಟರ್‌ಗಳು ವಿಫಲರಾಗಿ, 18.3 ಓವರ್‌ಗಳಲ್ಲಿ ಕೇವಲ 113 ರನ್ ಗಳಿಸುವಷ್ಟರಲ್ಲಿ ಆಲೌಟ್ ಆದರು.
