ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಇಂದು ನಡೆದ 2024ರ ಇಂಡಿಯನ್ ಪ್ರೀಮಿಯರ್ ಲೀಗ್ನ (ಐಪಿಎಲ್) 17ನೇ ಪಂದ್ಯದಲ್ಲಿ ಅತಿಥೇಯ ಗುಜರಾತ್ ಟೈಟನ್ಸ್ ತಂಡವನ್ನು ಪಂಜಾಬ್ ಕಿಂಗ್ಸ್ ತಂಡವು 3 ವಿಕೆಟ್ಗಳಿಂದ ರೋಚಕವಾಗಿ ಸೋಲಿಸಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ್ದ ಗುಜರಾತ್ ಟೈಟನ್ಸ್ ತಂಡ ಶುಭ್ಮನ್ ಗಿಲ್ ಅವರ ಭರ್ಜರಿ ಬ್ಯಾಟಿಂಗ್ ನೆರವಿನಿಂದ ನಿಗದಿತ 20 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ 199 ರನ್ಗಳನ್ನು ಗಳಿಸುವ ಮೂಲಕ, ಪಂಜಾಬ್ ಕಿಂಗ್ಸ್ ತಂಡಕ್ಕೆ 200 ರನ್ಗಳ ಗುರಿ ನೀಡಿತ್ತು.
ಈ ಗುರಿಯನ್ನು ಬೆನ್ನತ್ತಿದ ಶಿಖರ್ ಧವನ್ ನೇತೃತ್ವದ ಪಂಜಾಬ್ ತಂಡವು 19.5 ಓವರ್ಗಳಲ್ಲಿ ಗುರಿ ಮುಟ್ಟುವ ಮೂಲಕ ಜಯ ಸಾಧಿಸಿತು.
Right Through The Defence \|/ 👌
Noor Ahmad gets Jonny Bairstow
Powerplay done, #PBKS are 54/2
Watch the match LIVE on @StarSportsIndia and @JioCinema 💻📱#TATAIPL | #GTvPBKS | @gujarat_titans pic.twitter.com/v60gkXe7Sh
— IndianPremierLeague (@IPL) April 4, 2024
ಗುಜರಾತ್ ಟೈಟಾನ್ಸ್ ನೀಡಿದ್ದ 200 ರನ್ಗಳ ಗುರಿಯನ್ನು ಬೆನ್ನಟ್ಟಿದ ಪಂಜಾಬ್ ಕಿಂಗ್ಸ್ಗೆ ಉತ್ತಮ ಆರಂಭ ಸಿಗಲಿಲ್ಲ. ನಾಯಕ ಶಿಖರ್ ಧವನ್ ಹಾಗೂ ಜಾನಿ ಬೈರ್ಸ್ಟೋವ್ ಅವರ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಆ ಬಳಿಕ ಪ್ರಭಾಸಿಮ್ರಾನ್ ಸಿಂಗ್ ಸ್ವಲ್ಪ ಹೊತ್ತು ಆಸರೆಯಾದರು. ಔಟಾಗುವುದಕ್ಕೂ ಮುನ್ನ ಪ್ರಭಾಸಿಮ್ರಾನ್ ಸಿಂಗ್ 35 ರನ್ ಗಳಿಸಿದ್ದರು. ಕೊನೆಯಲ್ಲಿ IMPACT PLAYER ಆಗಿ ಬಂದ ಅಶುತೋಶ್ ಶರ್ಮಾ 31 ರನ್(17 ಎಸೆತ, 3 ಬೌಂಡರಿ,1 ಸಿಕ್ಸ್) ಹಾಗೂ ಶಶಾಂಕ್ ಸಿಂಗ್ ಔಟಾಗದೆ 61 ರನ್(29 ಎಸೆತ, 6 ಬೌಂಡರಿ, 4 ಸಿಕ್ಸ್) ಬಾರಿಸುವ ಮೂಲಕ ಕೊನೆಯ ಓವರ್ನ 5ನೇ ಎಸೆತದಲ್ಲಿ ನಿಗದಿತ ಗುರಿ ಮುಟ್ಟುವಲ್ಲಿ ಯಶಸ್ವಿಯಾದರು.
ಈ ಗೆಲುವಿನ ಮೂಲಕ ಈವರೆಗೆ ಆಡಿದ ಒಟ್ಟು ನಾಲ್ಕು ಪಂದ್ಯಗಳ ಪೈಕಿ 2ರಲ್ಲಿ ಸೋತು, ಎರಡರಲ್ಲಿ ಗೆಲುವು ಕಂಡಿದೆ. ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನವನ್ನು ಕಾಯ್ದುಕೊಂಡಿದೆ.
Most successful 200 or more run chases in IPL history:
Punjab Kings – 6*.
Mumbai Indians – 5. pic.twitter.com/ego8rhdFWq
— Mufaddal Vohra (@mufaddal_vohra) April 4, 2024
ಗುಜರಾತ್ ಪರ ನೂರ್ ಅಹ್ಮದ್ 2 ವಿಕೆಟ್ ಪಡೆದರೆ, ಅಝ್ಮತುಲ್ಲ ಒಮರ್ ಝಾಯ್, ಉಮೇಶ್ ಯಾದವ್, ರಶೀದ್ ಖಾನ್, ಮೋಹಿತ್ ಶರ್ಮಾ, ದರ್ಶನ್, ಉಮೇಶ್ ಯಾದವ್ ತಲಾ ಒಂದೊಂದು ವಿಕೆಟ್ ಪಡೆದರು.
