ಈ ಬಾರಿಯ ಐಪಿಎಲ್‌ನಲ್ಲಿ ಸಂಜು ಸ್ಯಾಮ್ಸನ್ ನೇತೃತ್ವದ ರಾಜಸ್ಥಾನ್ ರಾಯಲ್ಸ್ ಬಳಗ ಇನ್ನೇನು ಫೈನಲ್‌ಗೆ ಹೋಗೇಬಿಟ್ಟಿತು ಎನ್ನುವಾಗಲೇ ಅದೃಷ್ಟ ಕೈಕೊಟ್ಟಿದೆ.
ಸನ್‌ರೈಸರ್ಸ್ ಹೈದರಾಬಾದ್ ನೀಡಿದ್ದ ಕೇವಲ 176 ರನ್‌ಗಳ ಸಾಧಾರಣ ಗುರಿಯನ್ನು ಬೆನ್ನಟ್ಟುವಲ್ಲಿ ವಿಫಲವಾದ ರಾಜಸ್ಥಾನ್ ರಾಯಲ್ಸ್ ತಂಡ, ಸ್ಪಿನ್ ದಾಳಿಗೆ ಮಂಕಾಗಿದೆ. ಆ ಮೂಲಕ 17ನೇ ಆವೃತ್ತಿಯ ಫೈನಲ್‌ಗೆ ತಲುಪುವ ಅವಕಾಶವನ್ನು ತಾನೇ ಕೈಚೆಲ್ಲಿದೆ.
Plenty to cheer & celebrate for the @SunRisers 🥳
An impressive team performance to seal a place in the all important #Final 🧡
Scorecard ▶️ https://t.co/Oulcd2FuJZ… #TATAIPL | #Qualifier2 | #SRHvRR | #TheFinalCall pic.twitter.com/nG0tuVfA22
— IndianPremierLeague (@IPL) May 24, 2024
ರಾಜಸ್ಥಾನವನ್ನು 36 ರನ್‌ಗಳಿಂದ ರೋಚಕವಾಗಿ ಸೋಲಿಸಿದ ಪ್ಯಾಟ್ ಕಮ್ಮಿನ್ಸ್ ನೇತೃತ್ವದ ಸನ್‌ರೈಸರ್ಸ್ ಹೈದರಾಬಾದ್ ತಂಡ, ಮೂರನೇ ಬಾರಿಗೆ ಫೈನಲ್‌ಗೆ ಲಗ್ಗೆ ಇಟ್ಟಿತು.
A round of applause for the #TATAIPL 2024 FINALISTS 😍
𝐊𝐨𝐥𝐤𝐚𝐭𝐚 𝐊𝐧𝐢𝐠𝐡𝐭 𝐑𝐢𝐝𝐞𝐫𝐬 🆚 𝗦𝘂𝗻𝗿𝗶𝘀𝗲𝗿𝘀 𝗛𝘆𝗱𝗲𝗿𝗮𝗯𝗮𝗱
A cracking #Final awaits on the 26th of May 💥
Scorecard ▶️ https://t.co/Oulcd2FuJZ#Qualifier2 | #SRHvRR | #TheFinalCall pic.twitter.com/bZNFqHPm8A
— IndianPremierLeague (@IPL) May 24, 2024
2009(ಆಗಿನ ಹೆಸರು ಡೆಕ್ಕನ್ ಚಾರ್ಜರ್ಸ್) ಹಾಗೂ 2016ರಲ್ಲಿ ಫೈನಲ್ ಪ್ರವೇಶಿಸಿದ್ದ ಹೈದರಾಬಾದ್ ಚಾಂಪಿಯನ್ ಆಗಿತ್ತು. ಎರಡು ಬಾರಿಯೂ ರಾಯಲ್ ಚಾಲೆಂಜರ್ಸ್(ಆರ್‌ಸಿಬಿ) ತಂಡವನ್ನು ಸೋಲಿಸಿತ್ತು.
ಈ ಬಾರಿ ಮೂರನೇ ಬಾರಿಗೆ ಪ್ರಶಸ್ತಿಯ ಸುತ್ತು ತಲುಪಿದ್ದು, ಮೇ 26ರ ಭಾನುವಾರ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಎದುರಿಸಲಿದೆ. ಫೈನಲ್ ಪಂದ್ಯವು ಇಂದು ಕ್ವಾಲಿಫೈಯರ್ ಪಂದ್ಯದ ನಡೆದ ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲೇ ನಡೆಯಲಿದೆ.
SRH HAVE REACHED THE FINAL OF IPL 2024. 🏆 pic.twitter.com/d88igzbgwh
— Mufaddal Vohra (@mufaddal_vohra) May 24, 2024
ರಾಜಸ್ಥಾನದ ಬ್ಯಾಟಿಂಗ್‌ನ ಬೆನ್ನುಮೂಳೆ ಮುರಿದ ಸ್ಪಿನ್ನರ್‌ಗಳು
ಟಾಸ್ ಗೆದ್ದಿದ್ದ ಸಂಜು ಸ್ಯಾಮ್ಸನ್ ನೇತೃತ್ವದ ರಾಜಸ್ಥಾನ್ ರಾಯಲ್ಸ್ ತಂಡ, ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತ್ತು. ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ಸಂಘಟಿತ ಬೌಲಿಂಗ್ ಮೂಲಕ 175 ರನ್‌ಗಳಿಗೆ ಕಟ್ಟಿ ಹಾಕುವಲ್ಲಿ ಯಶಸ್ವಿಯಾಗಿತ್ತು.
176 ರನ್‌ಗಳ ಗುರಿಯನ್ನು ಬೆನ್ನಟ್ಟಿದ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಆರಂಭಿಕ ಆಟಗಾರರಾದ ಯಶಸ್ವಿ ಜೈಸ್ವಾಲ್ ಹಾಗೂ ಕ್ಯಾಡ್‌ಮೋರ್ ಉತ್ತಮ ಆರಂಭವನ್ನೇ ನೀಡಿದ್ದರು. 10 ರನ್ ಗಳಿಸಿದ್ದ ಕ್ಯಾಡ್‌ಮೋರ್ ಕಮ್ಮಿನ್ಸ್‌ಗೆ ವಿಕೆಟ್ ಒಪ್ಪಿಸಿದರು. ಆ ಬಳಿಕ 21 ಎಸೆತದಲ್ಲಿ 42 ರನ್(4 ಬೌಂಡರಿ, 3 ಸಿಕ್ಸ್) ಗಳಿಸಿದ್ದ ಯಶಸ್ವಿ ಜೈಸ್ವಾಲ್, ಶಾಬಾಝ್ ಎಸೆತದಲ್ಲಿ ಸಮದ್‌ಗೆ ಕ್ಯಾಚಿತ್ತು ನಿರ್ಗಮಿಸಿದರು.
Pure 🔥 from Shahbaz 🥵#PlayWithFire #SRHvRR pic.twitter.com/VaHYNKM0ho
— SunRisers Hyderabad (@SunRisers) May 24, 2024
ನಾಯಕ ಸಂಜು ಸ್ಯಾಮ್ಸನ್ 10 ರನ್ ಗಳಿಸಿದ್ದ ವೇಳೆ, ಸ್ಪಿನ್ನರ್ ಅಭಿಷೇಕ್ ಶರ್ಮಾ ಎಸೆತದಲ್ಲಿ ದೊಡ್ಡ ಹೊಡೆತಕ್ಕೆ ಯತ್ನಿಸಿ ವಿಫಲರಾಗಿ, ಮಾರ್ಕರಮ್‌ಗೆ ಕ್ಯಾಚಿತ್ತು ಔಟಾದರು. ಬಳಿಕ ಕ್ರೀಸ್‌ಗೆ ಬಂದ ರಿಯಾನ್ ಪರಾಗ್ ಹಾಗೂ ಆರ್ ಅಶ್ವಿನ್ ಶಾಬಾಝ್‌ಗೆ ವಿಕೆಟ್ ಒಪ್ಪಿಸಿದರು. ಇಂಪ್ಯಾಕ್ಟ್ ಪ್ಲೇಯರ್ ಆಗಿ ಬಂದಿದ್ದ ಹೆಟ್ಮಾಯರ್ ಕೂಡ ವಿಫಲರಾದರು.
ಸ್ಪಿನ್ನರ್‌ಗಳಾದ ಶಾಬಾಝ್ ಹಾಗೂ ಅಭಿಷೇಕ್ ಶರ್ಮಾ ರಾಜಸ್ಥಾನದ ಬ್ಯಾಟಿಂಗ್‌ನ ಬೆನ್ನುಮೂಳೆ ಮುರಿದರು. ಶಾಬಾಝ್ ಮೂರು ವಿಕೆಟ್ ಪಡೆದರೆ, ಅಭಿಷೇಕ್ ಶರ್ಮಾ ಎರಡು ವಿಕೆಟ್ ಗಳಿಸಿ ಮಿಂಚಿದರು.
ಕೊನೆಯಲ್ಲಿ ಧ್ರುವ್ ಜುರೆಲ್ ಏಕಾಂಗಿ ಹೋರಾಟ ನಡೆಸಿದರಾದರೂ ತಂಡವನ್ನು ಗೆಲ್ಲಿಸಿ, ಫೈನಲ್‌ಗೆ ಕೊಂಡೊಯ್ಯಲು ವಿಫಲರಾದರು. ಧ್ರುವ್ ಜುರೆಲ್ 35 ಎಸೆತಗಳಲ್ಲಿ 7 ಬೌಂಡರಿ ಹಾಗೂ 2 ಸಿಕ್ಸರ್‌ನ ನೆರವಿನಿಂದ 56 ರನ್ ಗಳಿಸಿದರು. ಕೊನೆಯಲ್ಲಿ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು 139 ರನ್ ಗಳಿಸಲಷ್ಟೇ ರಾಜಸ್ಥಾನ ಶಕ್ತವಾಯಿತು. 36 ರನ್‌ಗಳಿಂದ ಸೋಲೊಪ್ಪಿಕೊಂಡಿತು.
26th May.
Chepauk Stadium.
KKR VS SRH.
7.30pm.THE FINAL IS ALL SET… A SUPER SUNDAY. pic.twitter.com/ZOLuvAWPAV
— Mufaddal Vohra (@mufaddal_vohra) May 24, 2024
