ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್‌ಸಿಬಿ) ತಂಡದ ಸ್ಟಾರ್ ಆಟಗಾರ, ಕಿಂಗ್ ಎಂದೇ ಖ್ಯಾತಿ ಪಡೆದಿರುವ ವಿರಾಟ್ ಕೊಹ್ಲಿ ಐಪಿಎಲ್ 2025ರ ಉದ್ಘಾಟನಾ ಪಂದ್ಯದಲ್ಲೇ ದಾಖಲೆ ನಿರ್ಮಿಸುವ ಮೂಲಕ ಸುದ್ದಿಯಾಗಿದ್ದಾರೆ.
ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ಕೆಕೆಆರ್ ವಿರುದ್ಧ ಶನಿವಾರ ನಡೆದ ಉದ್ಘಾಟನಾ ಪಂದ್ಯದಲ್ಲಿ ಕೆಕೆಆರ್ ತಂಡದ ವಿರುದ್ಧ 1,000 ರನ್ ಗಡಿ ದಾಟಿದ್ದಾರೆ. ಪಂದ್ಯದಲ್ಲಿ ಕೊಹ್ಲಿ 38 ರನ್ ಗಳಿಸುವುದರೊಂದಿಗೆ ಈ ದಾಖಲೆಯನ್ನು ನಿರ್ಮಿಸಿದ್ದಾರೆ.
ಈವರೆಗಿನ ಐಪಿಎಲ್ ಟೂರ್ನಿಯ ಇತಿಹಾಸದಲ್ಲಿ ಯಾವುದೇ ಬ್ಯಾಟ್ಸ್‌ಮನ್ ಎರಡಕ್ಕಿಂತ ಹೆಚ್ಚು ತಂಡಗಳ ವಿರುದ್ಧ 1,000ಕ್ಕೂ ಹೆಚ್ಚು ರನ್ ಗಳಿಸಿಲ್ಲ. ವಿರಾಟ್ ಕೊಹ್ಲಿ ಮಾತ್ರ ಕೆಕೆಆರ್ ವಿರುದ್ಧ ಈ ಸಾಧನೆ ಮಾಡಿ, ಒಟ್ಟು 4 ತಂಡಗಳ ವಿರುದ್ಧ 1000ಕ್ಕೂ ಹೆಚ್ಚು ರನ್ ಗಳಿಸಿದ ಸಾಧನೆ ಮಾಡಿದ್ದಾರೆ.
ಕೊಹ್ಲಿ ಈಗಾಗಲೇ ಡೆಲ್ಲಿ ಕ್ಯಾಪಿಟಲ್ಸ್, ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಪಂಜಾಬ್ ಕಿಂಗ್ಸ್ ವಿರುದ್ಧ 1,000 ಅಥವಾ ಅದಕ್ಕಿಂತ ಹೆಚ್ಚು ರನ್ ಗಳಿಸಿದ್ದಾರೆ. ಇದೀಗ ಕೆಕೆಆರ್ ಸೇರಿ ನಾಲ್ಕು ತಂಡಗಳ ವಿರುದ್ಧ ಈ ಸಾಧನೆ ತಲುಪಿದ್ದಾರೆ. ಒಟ್ಟಾರೆಯಾಗಿ ವಿರಾಟ್ ಕೊಹ್ಲಿ, ತಮ್ಮ 400ನೇ ಟಿ20 ಪಂದ್ಯದಲ್ಲಿ ಈ ಕೀರ್ತಿಯನ್ನು ಗಳಿಸಿದ್ದಾರೆ.
400 reasons to celebrate today! 🤩
— Royal Challengers Bengaluru (@RCBTweets) March 22, 2025
Congratulations to the King on his monumental 400th appearance in cricket's fastest lane – T20 cricket! 👑🫡#PlayBold #ನಮ್ಮRCB #IPL2025 #KKRvRCB pic.twitter.com/iMGf3kheVn
ಈ ಪಂದ್ಯಕ್ಕೂ ಮುನ್ನ ಕೆಕೆಆರ್ ವಿರುದ್ಧ ಕೊಹ್ಲಿ 31 ಇನ್ನಿಂಗ್ಸ್‌ಗಳಿಂದ 38.48 ಸರಾಸರಿಯಲ್ಲಿ 962 ರನ್ ಗಳಿಸಿದ್ದರು. ಇದರಲ್ಲಿ ಒಂದು ಶತಕ ಮತ್ತು ಆರು ಅರ್ಧಶತಕಗಳು ಸೇರಿದ್ದವು. ಶನಿವಾರ ನಡೆದ ಪಂದ್ಯದ 38 ರನ್ ಗಳಿಸುವ ಮೂಲಕ 1000 ರನ್ ಗಡಿ ದಾಟಿದ್ದಾರೆ. ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಮಾಡಿದ್ದ ಕಿಂಗ್ ಕೊಹ್ಲಿ, ಆಕರ್ಷಕ ಅರ್ಧಶತಕ ಗಳಿಸುವ ಮೂಲಕ ಮಿಂಚಿದ್ದರು. ಪಂದ್ಯದಲ್ಲಿ ವಿರಾಟ್ 36 ಎಸೆತಗಳಲ್ಲಿ 59 ರನ್ ಬಾರಿಸಿ, ಅಜೇಯರಾಗಿ ಉಳಿದರು. ಇದರಲ್ಲಿ 4 ಬೌಂಡರಿ ಹಾಗೂ 3 ಸ್ಫೋಟಕ ಸಿಕ್ಸರ್‌ಗಳಿದ್ದವು.
36 ವರ್ಷದ ಕೊಹ್ಲಿ, ವಾರ್ನರ್, ರೋಹಿತ್ ಮತ್ತು ಸುರೇಶ್ ರೈನಾ ನಂತರ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಅತಿ ಹೆಚ್ಚು ರನ್ ಗಳಿಸಿದ ನಾಲ್ಕನೇ ಆಟಗಾರನಾಗಿದ್ದಾರೆ. ಆರಂಭಿಕ ಪಂದ್ಯದಲ್ಲೇ ಈ ಮೈಲಿಗಲ್ಲು ತಲುಪುವ ಮೂಲಕ ವಿರಾಟ್ ಕೊಹ್ಲಿ ಈ ಬಾರಿಯ ಸೀಸನ್‌ನಲ್ಲಿ ಮತ್ತೊಮ್ಮೆ ಮಿಂಚಲು ತಯಾರಾಗಿದ್ದಾರೆ. ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ 8,004 ರನ್ (252 ಪಂದ್ಯ) ಗಳಿಸುವ ಮೂಲಕ, ಇತಿಹಾಸದಲ್ಲಿ ಇದುವರೆಗೆ ಅತಿಹೆಚ್ಚು ರನ್ ಗಳಿಸಿದ ಆಟಗಾರ ಎನ್ನುವ ಖ್ಯಾತಿಯನ್ನೂ ಕೂಡ ಪಡೆದುಕೊಂಡಿದ್ದಾರೆ.
First game of season 18 for number 18, and he enters the chat with another milestone! 👑
— Royal Challengers Bengaluru (@RCBTweets) March 22, 2025
1️⃣0️⃣0️⃣0️⃣ runs against 4️⃣th IPL team, the most by any! ❤️🔥#PlayBold #ನಮ್ಮRCB #IPL2025 #KKRvRCB pic.twitter.com/NQEfUYKnak
ಕೆಕೆಆರ್ ವಿರುದ್ಧ 28 ಇನ್ನಿಂಗ್ಸ್‌ಗಳಲ್ಲಿ 43.72ರ ಸರಾಸರಿಯಲ್ಲಿ 1,093 ರನ್ ಗಳಿಸಿರುವ ಡೇವಿಡ್ ವಾರ್ನರ್ ಅಗ್ರಸ್ಥಾನದಲ್ಲಿದ್ದಾರೆ. ವಾರ್ನರ್ ಎರಡು ಶತಕ ಮತ್ತು ಆರು ಅರ್ಧಶತಕಗಳನ್ನು ಸಿಡಿಸಿದ್ದಾರೆ.
ಡೇವಿಡ್ ವಾರ್ನರ್ ಕೆಕೆಆರ್ ಜೊತೆಗೆ ಪಂಜಾಬ್ ಕಿಂಗ್ಸ್ ವಿರುದ್ಧ ಈ ಸಾಧನೆ ಮಾಡಿದ್ದಾರೆ. ರೋಹಿತ್ ಶರ್ಮಾ ಕೆಕೆಆರ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಈ ಸಾಧನೆ ಮಾಡಿದ್ದಾರೆ.
1,000+ RUNS AGAINST AN IPL TEAM:
— Mufaddal Vohra (@mufaddal_vohra) March 22, 2025
-CSK.
– DC.
– PBKS.
– KKR.
VIRAT KOHLI BECOMES THE FIRST BATTER IN HISTORY TO ACHIEVE THIS. 🤯 pic.twitter.com/0GrQx4Knt8
ಮುಂಬೈ ಇಂಡಿಯನ್ಸ್ ತಂಡದ ರೋಹಿತ್ ಶರ್ಮಾ 34 ಇನ್ನಿಂಗ್ಸ್‌ಗಳಿಂದ 39.62ರ ಸರಾಸರಿಯಲ್ಲಿ 1,070 ರನ್ ಗಳಿಸಿದ್ದಾರೆ. ಇದರಲ್ಲಿ ಒಂದು ಶತಕ ಮತ್ತು ಆರು ಅರ್ಧಶತಕಗಳು ಸೇರಿವೆ.
