ಸಚಿನ್, ದ್ರಾವಿಡ್, ಕೊಹ್ಲಿ ಸಾಲಿಗೆ ಕೆ ಎಲ್ ರಾಹುಲ್: ವೆಲ್ಲಿಂಗ್ಟನ್‌ನಲ್ಲಿ ಐತಿಹಾಸಿಕ ಶತಕ

Date:

ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್‌ನಲ್ಲಿ ತಾಳ್ಮೆಯ ಶತಕ ಬಾರಿಸಿದ ಭಾರತದ ಆರಂಭಿಕ ಬ್ಯಾಟರ್ ಕೆ.ಎಲ್. ರಾಹುಲ್ ಅಪರೂಪದ ದಾಖಲೆ ಬರೆದಿದ್ದಾರೆ. ಬೇಸಿನ್ ರಿಸರ್ವ್ ಮೈದಾನದಲ್ಲಿ 207 ಎಸೆತಗಳಲ್ಲಿ ಶತಕ ಪೂರೈಸಿದ ಅವರು, ಕಿವೀಸ್ ನೆಲದಲ್ಲಿ ಶತಕ ಗಳಿಸಿದ ಭಾರತದ ನಾಲ್ಕನೇ ಆರಂಭಿಕರಾದರು. ಈ ಹಿಂದೆ ಸುನಿಲ್ ಗಾವಸ್ಕರ್, ಗೌತಮ್ ಗಂಭೀರ್ ಹಾಗೂ ಶಿಖರ್ ಧವನ್ ಈ ಸಾಧನೆ ಮಾಡಿದ್ದರು.

- Advertisement -

​ಈ ಶತಕದೊಂದಿಗೆ ದಕ್ಷಿಣ ಆಫ್ರಿಕಾ, ಇಂಗ್ಲೆಂಡ್, ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾ (ಸೇನಾ) ದೇಶಗಳಲ್ಲಿ ಟೆಸ್ಟ್ ಶತಕ ಗಳಿಸಿದ ಭಾರತದ ಮೊದಲ ಆರಂಭಿಕ ಬ್ಯಾಟರ್ ಎಂಬ ಇತಿಹಾಸವನ್ನು ರಾಹುಲ್ ಸೃಷ್ಟಿಸಿದರು. ಒಟ್ಟಾರೆ ಈ ಗಣ್ಯ ಪಟ್ಟಿಗೆ ಸೇರಿದ ಐದನೇ ಭಾರತೀಯ ಇವರಾಗಿದ್ದಾರೆ. ಇದಕ್ಕೂ ಮುನ್ನ ಸಚಿನ್ ತೆಂಡೂಲ್ಕರ್, ವಿರಾಟ್ ಕೊಹ್ಲಿ, ರಾಹುಲ್ ದ್ರಾವಿಡ್ ಮತ್ತು ಮೊಹಮ್ಮದ್ ಅಜರುದ್ದೀನ್ ಈ ಮೈಲಿಗಲ್ಲು ತಲುಪಿದ್ದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಈ ದಿನ ಕವಿತೆ | ನಾನು, ರಸ್ತೆ ಹಾಗೂ...

ವಾರಕ್ಕೊಂದು ಅನುವಾದಿತ ಕವಿತೆ ಮಾಲಿಕೆಯಲ್ಲಿ ಈ ಬಾರಿ ಮರಾಠಿ ಕವಿ ವಸಂತ್ ಆಬಾಜಿ ದಹಾಕೆ ಅವರ "ನಾನು, ರಸ್ತೆ ಹಾಗೂ ಕಪ್ಪು ಹಕ್ಕಿ" ಕವಿತೆಯನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ ಹಿರಿಯ ಅನುವಾದಕಿ ಸಿ...

ಶಿವಮೊಗ್ಗ | 40 ವರ್ಷ ದುಡಿದರೂ ಗಜಾನನ ಸಂಸ್ಥೆ...

ಮಲೆನಾಡಿನ ಸಾರಿಗೆ ಕ್ಷೇತ್ರದಲ್ಲಿ ತನ್ನದೇ ಆದ ಗುರುತನ್ನು ಮೂಡಿಸಿದ್ದ ಸಾಗರ ತಾಲೂಕಿನ ಹೆಸರಾಂತ ಗಜಾನನ ಬಸ್ ಸಂಸ್ಥೆ ಒಂದು ಕಾಲದಲ್ಲಿ ಸುಮಾರು 150ಕ್ಕೂ ಹೆಚ್ಚು ಬಸ್‌ಗಳ ಮೂಲಕ ಜನಪ್ರಿಯತೆ ಗಳಿಸಿತ್ತು. ಸಂಸ್ಥೆಯ ಬೆಳವಣಿಗೆಯಲ್ಲಿ...

ರಾಜಕೀಯ ಪಕ್ಷಗಳಿಗೆ ಪ್ರವೇಶವಿಲ್ಲ: ಚುನಾವಣೆ ಬಹಿಷ್ಕರಿಸಿದ ಹೊನ್ನಗುಂಡಿ ಗ್ರಾಮಸ್ಥರು!

ಅದೆಷ್ಟೋ ಚುನಾವಣೆ ನಡೆದು ಹೋದವು, ಆದರೆ ನಮ್ಮೂರಿಗೆ ಮೂಲಭೂತ ಸೌಕರ್ಯಗಳಿಲ್ಲ. ಕನಿಷ್ಠ ಸೌಲಭ್ಯವಾದ ಡಾಂಬರ್ ರಸ್ತೆ ಕಾಣದೆ ಅದೆಷ್ಟೋ ವರ್ಷ ಕಳೆದಿದೆ. ನಮ್ಮ ಗ್ರಾಮದಲ್ಲಿ ಮೂಲಭೂತ ಸೌಕರ್ಯಗಳ ಕೊರತೆಯಿದೆ ಯಾವ ರಾಜಕೀಯ ಪಕ್ಷಗಳು...

​ಎಲ್ಲ ನಾಲ್ಕು ‘ಸೇನಾ’ ರಾಷ್ಟ್ರಗಳಲ್ಲಿ ಟೆಸ್ಟ್ ಶತಕ ಬಾರಿಸಿದ ಏಷ್ಯಾದ ಎಂಟನೇ ಆಟಗಾರ ಎಂಬ ಹೆಗ್ಗಳಿಕೆಗೂ ರಾಹುಲ್ ಪಾತ್ರರಾದರು. ಭಾರತೀಯ ದಿಗ್ಗಜರೊಂದಿಗೆ ಪಾಕಿಸ್ತಾನದ ಸಯೀದ್ ಅನ್ವರ್, ಯೂನಿಸ್ ಖಾನ್ ಹಾಗೂ ಶ್ರೀಲಂಕಾದ ಕುಮಾರ ಸಂಗಕ್ಕಾರ ಈ ಪಟ್ಟಿಯಲ್ಲಿದ್ದಾರೆ. ಆರಂಭಿಕರಾಗಿ ಈ ವಿಶಿಷ್ಟ ಸಾಧನೆ ಮಾಡಿದ ಏಷ್ಯಾದ ಎರಡನೇ ಆಟಗಾರ ರಾಹುಲ್ ಆಗಿದ್ದು, ಹಿಂದೆ ಅನ್ವರ್ ಮಾತ್ರ ಈ ದಾಖಲೆ ಬರೆದಿದ್ದರು.

​ದೊಡ್ಡ ಹೊಡೆತಗಳಿಗೆ ಕೈಹಾಕದೆ ಶಾಂತಚಿತ್ತದಿಂದ ಆಡಿದ ರಾಹುಲ್, ನ್ಯೂಜಿಲೆಂಡ್ ವೇಗಿಗಳನ್ನು ಸಮರ್ಥವಾಗಿ ಎದುರಿಸಿದರು. ಸರಣಿಗೂ ಮುನ್ನ ನ್ಯೂಜಿಲೆಂಡ್ ‘ಎ’ ವಿರುದ್ಧದ ಅಭ್ಯಾಸ ಪಂದ್ಯಗಳಲ್ಲಿ ಆಡಿದ್ದು ನೆರವಾಯಿತು. ರಾಹುಲ್ ಒಂದು ಹಾಗೂ ಯಶಸ್ವಿ ಜೈಸ್ವಾಲ್ ಮೂರೂ ಅನಧಿಕೃತ ಟೆಸ್ಟ್‌ಗಳಲ್ಲಿ ಆಡಿದ್ದರಿಂದ ಸ್ಥಳೀಯ ಪಿಚ್ ಸ್ವರೂಪಕ್ಕೆ ಹೊಂದಿಕೊಳ್ಳಲು ಸಾಧ್ಯವಾಯಿತು.

​ಆತಿಥೇಯರ ಮೊದಲ ಇನಿಂಗ್ಸ್‌ನ 368 ರನ್‌ಗಳಿಗೆ ಉತ್ತರವಾಗಿ ರಾಹುಲ್ ಮತ್ತು ಜೈಸ್ವಾಲ್ ಮೊದಲ ವಿಕೆಟ್‌ಗೆ 130 ರನ್ ಸೇರಿಸಿದರು. ಇದು 32 ವರ್ಷಗಳ ಬಳಿಕ ನ್ಯೂಜಿಲೆಂಡ್‌ನಲ್ಲಿ ಭಾರತ ದಾಖಲಿಸಿದ ಮೊದಲ ಶತಕದ ಆರಂಭಿಕ ಜತೆಯಾಟವಾಗಿದೆ. ಬಿರುಸಿನ ಆಟವಾಡಿದ ಜೈಸ್ವಾಲ್ 89 ಎಸೆತಗಳಲ್ಲಿ 85 ರನ್ ಗಳಿಸಿ ಕೀಪರ್‌ಗೆ ಕ್ಯಾಚಿತ್ತು ಔಟಾದರು.

​ಜೈಸ್ವಾಲ್ ನಿರ್ಗಮನದ ಬಳಿಕ 99 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ರಾಹುಲ್ ಜವಾಬ್ದಾರಿಯುತವಾಗಿ ಇನಿಂಗ್ಸ್ ಕಟ್ಟಿದರು. ಅವರಿಗೆ ಸಾಥ್ ನೀಡಿದ ದೇವದತ್ತ ಪಡಿಕ್ಕಲ್ ಎರಡನೇ ದಿನದಿಂದ ಮೂರನೇ ದಿನಕ್ಕೂ ಆಟ ಮುಂದುವರಿಸಿ ತಂಡಕ್ಕೆ ಭದ್ರ ಬುನಾದಿ ಹಾಕಿದರು. ಕೆಟ್ಟ ಎಸೆತಗಳಿಗಾಗಿ ಕಾದು ರನ್ ಕಲೆಹಾಕಿದ ಈ ಜೋಡಿ ಕಿವೀಸ್ ಬೌಲರ್‌ಗಳನ್ನು ಹೈರಾಣಾಗಿಸಿತು.

​ಇತ್ತೀಚಿನ ಮಾಹಿತಿಯಂತೆ, ಮೂರನೇ ದಿನದ ಮೂರನೇ ಅವಧಿಯಲ್ಲಿ ಭಾರತ 97 ಓವರ್‌ಗಳಲ್ಲಿ 2 ವಿಕೆಟ್‌ಗೆ 355 ರನ್ ಗಳಿಸಿದ್ದು, ಕೇವಲ 13 ರನ್ ಹಿನ್ನಡೆಯಲ್ಲಿದೆ. 80 ರನ್ (175 ಎಸೆತ, 10 ಬೌಂಡರಿ) ಗಳಿಸಿದ ಪಡಿಕ್ಕಲ್, ಕೈಲ್ ಜೆಮಿಸನ್ ಎಸೆತದಲ್ಲಿ ಬೌಲ್ಡ್ ಆದರು. ರಾಹುಲ್ ಅಜೇಯ 125 ರನ್ (275 ಎಸೆತ, 9 ಬೌಂಡರಿ, 1 ಸಿಕ್ಸರ್) ಹಾಗೂ ನಾಯಕ ಶುಭಮನ್ ಗಿಲ್ ಅಜೇಯ 45 ರನ್ (55 ಎಸೆತ, 5 ಬೌಂಡರಿ) ಗಳಿಸಿ ಕ್ರೀಸ್‌ನಲ್ಲಿದ್ದಾರೆ.

eedina
ಈ ದಿನ ಡೆಸ್ಕ್‌
Website | + posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ವಿಜಯಪುರ |ವಿದ್ಯುತ್ ಅವಘಡ ;92 ಫೀಡರ್‌ಗಳ ದುರಸ್ತಿ

ವಿದ್ಯುತ್ ಅವಘಡಗಳಿಗೆ ಕಡಿವಾಣ ಹಾಕುವ ಹಾಗೂ ನಿರಂತರ ವಿದ್ಯುತ್ ಪೂರೈಕೆ ಖಚಿತಪಡಿಸುವ...

ವಿಜಯಪುರ |ಬಾಕಿ ಪ್ರಕರಣಗಳ ತ್ವರಿತ ವಿಲೇವಾರಿಗೆ ಅಧಿಕಾರಿಗಳಿಗೆ ಸೂಚನೆ

ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಲೋಕಾಯುಕ್ತ...

ಬಾಗಲಕೋಟೆ |ಪಟ್ಟದಕಲ್ಲಿನಲ್ಲಿ ಎರಡು ದಿನಗಳ ‘ಕಲಾಧಾರ’ ಸಂಗೀತೋತ್ಸವ

ವಿಶ್ವ ಪರಂಪರೆ ಸಪ್ತಾಹದ ಅಂಗವಾಗಿ ಐತಿಹಾಸಿಕ ಪಟ್ಟದಕಲ್ಲಿನಲ್ಲಿ ಇಂದು ಮತ್ತು ನಾಳೆ...

ಬಾಗಲಕೋಟೆ |ಗ್ರಾಮೀಣ ಆಸ್ತಿ ಮಾಲೀಕರಿಗೆ ಭೂ ಗ್ಯಾರಂಟಿ ಅಭಿಯಾನ: ನ. 2ರಿಂದ ಜಾರಿ

ಗ್ರಾಮೀಣ ಪ್ರದೇಶದ ಆಸ್ತಿ ಮಾಲೀಕರಿಗೆ ಅಧಿಕೃತ ದಾಖಲೆ ಒದಗಿಸಿ ಆಸ್ತಿ ಹಕ್ಕುಗಳನ್ನು...