ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಎಂಎಸ್ ಧೋನಿ ಫೇಸ್‌ಬುಕ್‌ನಲ್ಲಿ ಹೊಸದಾಗಿ ಪೋಸ್ಟ್ ಒಂದನ್ನು ಮಾಡಿದ್ದು ಇದು ಧೋನಿ ಅಭಿಮಾನಿಗಳಲ್ಲಿ ಕುತೂಹಲ ಕೆರಳಿಸಿದೆ. 2024ರ ಐಪಿಎಲ್ ಟೂರ್ನಿ ಆರಂಭವಾಗಲು ಇನ್ನು ಕೆಲವೇ ವಾರಗಳು ಬಾಕಿ ಇರುವಾಗ ಧೋನಿ ಒಂದು ಸಣ್ಣ ಪೋಸ್ಟ್ ಹಾಕಿದ್ದಾರೆ.
ಇಂಡಿಯನ್ ಪ್ರೀಮಿಯರ್ ಲೀಗ್ ಹೊಸ ಸೀಸನ್ ಇನ್ನು ಎರಡು ವಾರದಲ್ಲಿ ಆರಂಭವಾಗಲಿದ್ದು, ಮಾರ್ಚ್ 4 ರ ಸೋಮವಾರದಂದು ಎಂಎಸ್ ಧೋನಿ ಫೇಸ್‌ಬುಕ್‌ನಲ್ಲಿ ಪೋಸ್ಟ್ ಅನ್ನು ಮಾಡಿದ್ದಾರೆ.
ಹೊಸ ಸೀಸನ್‌ಗೆ ಮತ್ತು ನನ್ನ ಹೊಸ ‘ರೋಲ್’ಗೆ ಕಾಯಲಾಗುತ್ತಿಲ್ಲ. ನೀವು ಕಾಯುತ್ತಿರಿ! (“Can’t wait for the new season and the new ‘role’. Stay tuned!”) ಎಂದು ಎಂಎಸ್ ಧೋನಿ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ.
ಆದರೆ ಐಪಿಎಲ್ 2024ರ ಸೀಸನ್ ಅನ್ನೇ ಧೋನಿ ಹೊಸ ಸೀಸನ್ ಎಂದು ಉಲ್ಲೇಖಿಸಿದ್ದಾರಾ ಎಂಬುವುದು ಸ್ಪಷ್ಟವಾಗಿಲ್ಲ. ಆದರೂ ಧೋನಿ ‘ಹೊಸ ರೋಲ್’ ಎಂದು ಬರೆದುಕೊಂಡಿರುವುದರಿಂದಾಗಿ ಈ ಪೋಸ್ಟ್ ವೈರಲ್ ಆಗುತ್ತಿದೆ.
ನೆಟ್ಟಿಗರು ಮಾತ್ರ ಕುತೂಹಲಗೊಂಡಿದ್ದಾರೆ. ಕೆಲವರು ಏನೇ ಆದರೂ ಒಳ್ಳೆಯದಾಗಲಿ ಮಹಿ ಎಂದು ಕಾಮೆಂಟ್ ಮಾಡಿದರೆ, ಇನ್ನು ಕೆಲವರು ನಿಮ್ಮನ್ನು ನಾವು 2025 ರ ಐಪಿಎಲ್‌ನಲ್ಲಿ ಭೇಟಿಯಾಗುತ್ತೇವೆ ಎಂದು ಬರೆದುಕೊಂಡಿದ್ದಾರೆ. ಏನೇ ಆದರೂ ನಾವು ನಿಮ್ಮ ಪರವಾಗಿಯೇ ಇರುತ್ತೇವೆ ಎಂದು ಕೆಲವು ಅಭಿಮಾನಿಗಳು ಹೇಳಿದ್ದು, ಬಹುತೇಕ ಅಭಿಮಾನಿಗಳು ಶುಭಾಶಯ ತಿಳಿಸಿದ್ದಾರೆ. ನಿಮ್ಮ ಹೆಲಿಕಾಪ್ಟರ್ ಶಾಟ್ ನೋಡಲು ಕಾಯುತ್ತಿದ್ದೇವೆ ಎಂದೂ ಅಭಿಮಾನಿಗಳು ಕಾಮೆಂಟ್ ಮಾಡಿದ್ದಾರೆ.
2023 ರ ಐಪಿಎಲ್ ಬಳಿಕ ಧೋನಿ ಬಳಿಕ ಐಪಿಎಲ್ ಟ್ರೋಫಿ ಗೆದ್ದು ನಿವೃತ್ತಿಯಾಗುತ್ತೀರಾ ಎಂದು ಕೇಳಲಾಗಿತ್ತು. ಆ ಸಂದರ್ಭದಲ್ಲಿ ಧೋನಿ ನಿವೃತ್ತಿಯಾದರೆ ಉತ್ತಮವಾಗುತ್ತದೆ ಎಂದು ಹೇಳಿದ್ದರು. ಆದರೆ ನನ್ನ ದೇಹ ಬೆಂಬಲ ನೀಡಿದರೆ ತಾನು ಮುಂದಿನ ಸೀಸನ್‌ನಲ್ಲಿ ಸಿಎಸ್‌ಕೆ ನಾಯಕನ ಸಾಮರ್ಥ್ಯದಲ್ಲಿ ಮತ್ತೆ ಆಗಮಿಸುತ್ತೇನೆ ಎಂದು ಹೇಳಿದ್ದರು.

ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್ ಸುದ್ದಿಗಳಲ್ಲಿ ಆಸಕ್ತಿ.