ಟೀಂ ಇಂಡಿಯಾದ ಸ್ಟಾರ್ ಆಲ್‌ರೌಂಡರ್ ಆಟಗಾರ ಹಾರ್ದಿಕ್ ಪಾಂಡ್ಯ ವಿಶ್ವಕಪ್ ಟೂರ್ನಿಯಿಂದಲೇ ಹೊರಬಿದ್ದಿದ್ದಾರೆ.
ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ಬೌಲಿಂಗ್ ಮಾಡುವ ವೇಳೆ ಗಾಯಗೊಂಡಿದ್ದರು. ನಂತರ ನಡೆದ ನ್ಯೂಝಿಲ್ಯಾಂಡ್, ಇಂಗ್ಲೆಂಡ್ ಮತ್ತು ಶ್ರೀಲಂಕಾ ವಿರುದ್ಧದ ಪಂದ್ಯಗಳನ್ನು ಆಡಿರಲಿಲ್ಲ.
ಗಾಯದ ತೀವ್ರತೆಯಿಂದಾಗಿ ಇಡೀ ಟೂರ್ನಿಯಿಂದ ಹೊರಬಿದ್ದಿದ್ದಾರೆ ಎಂದು ಐಸಿಸಿ ತಿಳಿಸಿದೆ.
India's star all-rounder to miss the remainder of #CWC23.
Details 👇https://t.co/oE1Fh9e5hG
— ICC (@ICC) November 4, 2023
ಬಾಂಗ್ಲಾದೇಶ ವಿರುದ್ಧದ ವಿಶ್ವಕಪ್ ಟೂರ್ನಿಯ ಪಂದ್ಯದಲ್ಲಿ ಬೌಲ್ ಮಾಡುವ ವೇಳೆ ಟೀಮ್ ಇಂಡಿಯಾ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಪಾದದ ಗಾಯಕ್ಕೆ ತುತ್ತಾಗಿದ್ದರು. ಈ ಹಿನ್ನೆಲೆಯಲ್ಲಿ ಪಂದ್ಯದಲ್ಲಿ ಅವರು ಒಂದೇ ಒಂದು ಓವರ್ ಅನ್ನು ಪೂರ್ಣಗೊಳಿಸದೆ ಮೈದಾನ ತೊರೆದಿದ್ದರು.
Unfortunate that Hardik Pandya will be unavailable for the rest of #CWC23. Our heartfelt wishes for his speedy recovery. 🙏
Prasidh Krishna steps in as his replacement. 💪#PlayBold #CWC23 #MenInBlue pic.twitter.com/PALmFKoJus
— Royal Challengers Bangalore (@RCBTweets) November 4, 2023
ಪಂದ್ಯದ 9ನೇ ಓವರ್ ಮೂರನೇ ಎಸೆತದಲ್ಲಿ ಲಿಟನ್ ದಾಸ್ ಹೊಡೆದ ಚೆಂಡನ್ನು ಹಾರ್ದಿಕ್ ಪಾಂಡ್ಯ ತಮ್ಮ ಬಲಗಾಲಿನಿಂದ ತಡೆಯಲು ಪ್ರಯತ್ನಿಸಿದಾಗ, ನಿಯಂತ್ರಣ ತಪ್ಪಿ ನೆಲಕ್ಕೆ ಉರುಳಿದ್ದರು. ಈ ವೇಳೆ ಅವರ ಪಾದದಲ್ಲಿ ಭಾರೀ ನೋವು ಕಾಣಿಸಿಕೊಂಡಿದ್ದು, ಅವರು ಬೌಲ್ ಮಾಡಲಾಗದೆ ಸಹಾಯಕ ಸಿಬ್ಬಂದಿಯ ನೆರವಿನಿಂದ ಪೆವಿಲಿಯನ್‌ಗೆ ಮರಳಿಸಿದ್ದರು. ಮತ್ತೆ ಅವರು ಮೈದಾನಕ್ಕೆ ಮರಳಿರಲಿಲ್ಲ. ಹಾರ್ದಿಕ್ ಪಾಂಡ್ಯ ಅವರ ಓವರ್ ಅನ್ನು ವಿರಾಟ್ ಕೊಹ್ಲಿ ಮುಗಿಸಿದ್ದರು.
2019 World Cup – Shikhar Dhawan ruled out.
2023 World Cup – Hardik Pandya ruled out.
– Two unfortunate injuries for India at the wrong time in the tournament…!!! pic.twitter.com/ZUHBkVX6ua
— Mufaddal Vohra (@mufaddal_vohra) November 4, 2023
ಹಾರ್ದಿಕ್ ಬದಲಿಗೆ ಕನ್ನಡಿಗ ಪ್ರಸಿದ್ಧ್ ಕೃಷ್ಣ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. ದಕ್ಷಿಣ ಆಫ್ರಿಕಾ ವಿರುದ್ಧ ಕೊಲ್ಕತ್ತಾದಲ್ಲಿ ನಡೆಯಲಿರುವ ಪಂದ್ಯದಲ್ಲಿ ಪ್ರಸಿದ್ಧ್ ಕೃಷ್ಣ ಆಡುವ ಸಾಧ್ಯತೆ ಇದೆ.