ನೇಪಾಳ | ಭೀಕರ ಭೂಕಂಪಕ್ಕೆ 128 ಮಂದಿ ಬಲಿ; ನೇಪಾಳಿಗರೊಂದಿಗೆ ಭಾರತವಿದೆ ಎಂದ ಮೋದಿ

Date:

ಶುಕ್ರವಾರ ತಡರಾತ್ರಿ ನೇಪಾಳದಲ್ಲಿ 6.4 ತೀವ್ರತೆಯ ಭೂಕಂಪ ಸಂಭವಿಸಿದ್ದು, ಕನಿಷ್ಠ 128 ಮಂದಿ ಸಾವನ್ನಪ್ಪಿದ್ದಾರೆ. 140ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ.

ಭೂಕಂಪದಿಂದಾಗಿ ಮನೆಗಳು ಮತ್ತು ಕಟ್ಟಡಗಳು ಕುಸಿದು ಬದ್ದಿವೆ. ಅವಶೇಷಗಳ ಅಡಿಯಲ್ಲಿ ಸಿಲುಕಿಕೊಂಡಿರುವ ಬದುಕುಳಿದವರನ್ನು ರಕ್ಷಣಾ ತಂಡಗಳು ಹುಡುಕುತ್ತಿದ್ದಾರೆ. ಭೂಕಂಪದಿಂದ ನೇಪಾಳದ ರುಕುಮ್ ವೆಸ್ಟ್‌ನಲ್ಲಿ ಕನಿಷ್ಠ 36 ಜನರು ಮತ್ತು ಜಾಜರ್‌ಕೋಟ್‌ನಲ್ಲಿ 34 ಜನರು ಸಾವನ್ನಪ್ಪಿದ್ದಾರೆ ಎಂದು ಅಲ್ಲಿನ ಅಧಿಕಾರಿಗಳು ತಿಳಿಸಿದ್ದಾರೆ.

“ರುಕುಮ್ ವೆಸ್ಟ್‌ನಲ್ಲಿ ಕನಿಷ್ಠ 36 ಜನರು ಸಾವನ್ನಪ್ಪಿದ್ದಾರೆ ಎಂದು ದೃಢಪಡಿಸಲಾಗಿದೆ. ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಛಾಗುವ ಸಾಧ್ಯತೆ ಇದೆ. ಬೆಳಿಗ್ಗೆ 5 ಗಂಟೆಯವರೆಗೆ ನಡೆದ ಕಾರ್ಯಾಚರಣೆಯಲ್ಲಿ 36 ಮಂದಿಯ ಮೃತದೇಹಗಳು ಸಿಕ್ಕವೆ” ಎಂದು ರುಕುಮ್‌ನ ಮುಖ್ಯ ಜಿಲ್ಲಾಧಿಕಾರಿ ಹರಿ ಪ್ರಸಾದ್ ಪಂತ್ ತಿಳಿಸಿದ್ದಾರೆ.

“ಭೂಕಂಪದಿಂದ ಉಂಟಾದ ಪ್ರಾಣ ಹಾನಿಯಿಂದ ದುಃಖವಾಗಿದೆ. ರಕ್ಷಣಾ ಪಡೆಗಳು ರಕ್ಷಣಾ ಕಾರ್ಯದಲ್ಲಿ ನಿರತವಾಗಿವೆ. ಜನರ ರಕ್ಷಣೆ ಮತ್ತು ಪರಿಹಾರ ಒದಗಿಸಲು ಎಲ್ಲ ಮೂರು ಭದ್ರತಾ ಏಜೆನ್ಸಿಗಳನ್ನು ಕಳುಹಿಸಲಾಗಿದೆ” ಎಂದು ನೇಪಾಳದ ಪ್ರಧಾನಿ ಪುಷ್ಪ ಕಮಲ್ ದಹಲ್ ಅವರು ತಿಳಿಸಿದ್ದಾರೆ.

ನೇಪಾಳ ಭೂಕಂಪನ ಬಗ್ಗೆ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ದುಃಖ ವ್ಯಕ್ತಪಡಿಸಿದ್ದಾರೆ. “ನೇಪಾಳದಲ್ಲಿ ಸಂಭವಿಸಿದ ಭೂಕಂಪದಿಂದ ಪ್ರಾಣಹಾನಿ ಮತ್ತು ನಷ್ಟದಿಂದ ತೀವ್ರ ದುಃಖವಾಗಿದೆ. ಭಾರತವು ನೇಪಾಳದ ಜನರೊಂದಿಗಿದೆ. ಸಾಧ್ಯವಿರುವ ಎಲ್ಲ ನೆರವನ್ನು ನೀಡಲು ಸಿದ್ಧವಾಗಿದೆ. ದುಃಖಿತ ಕುಟುಂಬಗಳು ಮತ್ತು ಗಾಯಾಳುಗಳು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ನಾವು ಆಶಿಸುತ್ತೆವೆ” ಎಂದು ಟ್ವೀಟ್ ಮಾಡಿದ್ದಾರೆ.

2015ರಲ್ಲಿ ನೇಪಾಳದಲ್ಲಿ 7.8 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿತ್ತು. ಆ ಭೂಕಂಪವು ಸುಮಾರು 9,000 ಜನರನ್ನು ಬಲಿಪಡೆದಿತ್ತು. 22,000ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. 5,00,000ಕ್ಕೂ ಹೆಚ್ಚು ಮನೆಗಳನ್ನು ಹಾನಿಯಾಗಿದ್ದವು.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

Advertisements

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಹಳಸಿಕೊಂಡ ಟ್ರಂಪ್-ಮಸ್ಕ್ ದೋಸ್ತಿ: ಅಮೆರಿಕ ರಾಜಕಾರಣ ಅತಂತ್ರ

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಬಿಲಿಯನೇರ್ ಉದ್ಯಮಿ ಎಲಾನ್ ಮಸ್ಕ್-...

ಟಿಕ್‌ಟಾಕ್‌ನಲ್ಲಿ ಜನಾಂಗೀಯ ನಿಂದನೆ: ಭಾರತೀಯ ಮೂಲದ ಸಿಂಗಾಪುರದ ಬ್ಲಾಗರ್‌ಗೆ ದಂಡ

ಸಿಂಗಾಪುರದ ವಿವಿಧ ಜನಾಂಗೀಯ ಗುಂಪುಗಳ ನಡುವೆ ಸಾಮರಸ್ಯ ಕದಡುವ ರೀತಿಯಲ್ಲಿ...

74 ವರ್ಷದ ವೃದ್ಧೆ ಮೇಲೆ ನಿರಂತರ ಅತ್ಯಾಚಾರ: ಆರೋಪಿಗೆ 394 ವರ್ಷ ಜೈಲು ಶಿಕ್ಷೆ

ಎಪ್ಪತ್ನಾಲ್ಕು ವರ್ಷ ವಯಸ್ಸಿನ ವೃದ್ಧೆಯೊಬ್ಬರನ್ನು ಅಪಹರಿಸಿ ಹೋಟೆಲ್​ನಲ್ಲಿ ಬಂಧಿಯಾಗಿಸಿ 2 ವರ್ಷಗಳ...

5 ರೂ. ಪಾರ್ಲೆ ಜಿ ಬಿಸ್ಕತ್ತು ಗಾಜಾದಲ್ಲಿ 2400 ರೂ.ಗಳಿಗೆ ಮಾರಾಟ

ಭಾರತೀಯರಿಗೆ ಹಲವು ದಶಕಗಳಿಂದಲೂ ಪಾರ್ಲೆ ಜಿ ಹೆಸರು ಚಿರಪರಿಚಿತವಾದ ಹೆಸರು. ಕಡಿಮೆ...

Download Eedina App Android / iOS

X