ಭಾರತ ತಂಡ ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಹರಿಣಗಳ ಬೌಲಿಂಗ್ ದಾಳಿಗೆ ತತ್ತರಿಸಿದ್ದು, ಮೊದಲ ಇನಿಂಗ್ಸ್‌ನಲ್ಲಿ 59 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 208 ರನ್ ಗಳಿಸಿದೆ. ಪಂದ್ಯಕ್ಕೆ ಮಳೆ ಅಡ್ಡಿಯಾದ ಕಾರಣ 59 ಓವರ್‌ಗಳಿಗೆ ದಿನದಾಟವನ್ನು ನಿಲ್ಲಿಸಲಾಗಿದೆ.
ದಕ್ಷಿಣ ಆಫ್ರಿಕಾದ ಸಂಚೂರಿಯನ್‌ನಲ್ಲಿ ನಡೆಯುತ್ತಿರುವ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದ ನಾಯಕ ತೆಂಬಾ ಬವುಮಾ ಭಾರತ ತಂಡವನ್ನು ಬ್ಯಾಟಿಂಗ್‌ಗೆ ಆಹ್ವಾನಿಸಿದರು.
12 ಓವರ್‌ಗಳಾಗುವಷ್ಟರಲ್ಲಿಯೇ ಟೀಂ ಇಂಡಿಯಾ ಯಶಸ್ವಿ ಜೈಸ್ವಾಲ್(17), ನಾಯಕ ರೋಹಿತ್ ಶರ್ಮಾ(5), ಶುಭಮನ್ ಗಿಲ್(2) ವಿಕೆಟ್‌ಗಳನ್ನು ಕಳೆದುಕೊಂಡಿತು. ನಂತರ ನಾಲ್ಕನೇ ವಿಕೆಟ್ ಜೊತೆಯಾಟಕ್ಕೆ ವಿರಾಟ್ ಕೊಹ್ಲಿ(38) ಹಾಗೂ ಶ್ರೇಯಸ್ ಅಯ್ಯರ್(31) 68 ರನ್ ಕಲೆ ಹಾಕಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಬಲಿಷ್ಠರೇ ಜಾತಿಗಣತಿಯನ್ನು ವಿರೋಧಿಸಿದರೆ ಬಾಯಿಲ್ಲದವರ ಪಾಡೇನು?
ನಂತರದಲ್ಲಿ ಬಂದ ರವಿಚಂದ್ರನ್ ಅಶ್ವಿನ್(8) ಹೆಚ್ಚು ಹೊತ್ತು ನಿಲ್ಲಲಿಲ್ಲ. ಶಾರ್ದೂಲ್ ಠಾಕೂರ್ 24 ರನ್ ಗಳಿಸಿ ಔಟಾದರೆ, ಬುಮ್ರಾ 1 ರನ್ನಿಗೆ ಪೆವಿಲಿಯನ್‌ಗೆ ತೆರಳಿದರು.
ಅರ್ಧ ಶತಕ ಗಳಿಸಿ ಅಜೇಯರಾಗಿ ಉಳಿದಿರುವ ವಿಕೆಟ್ ಕೀಪರ್ ಕೆ ಎಲ್ ರಾಹುಲ್ 70 ರನ್ ಗಳಿಸಿ ಆಡುತ್ತಿದ್ದಾರೆ. ರಾಹುಲ್‌ಗೆ ಜೊತೆಯಾಗಿರುವ ಮೊಹಮದ್ ಸಿರಾಜ್ ಇನ್ನು ಖಾತೆಯನ್ನು ತೆರದಿಲ್ಲ.
ದಕ್ಷಿಣ ಆಫ್ರಿಕಾ ಪರ ಕಗಿಸೊ ರಬಾಡ 17 ಓವರ್‌ಗಳಲ್ಲಿ 44/5, ನಾಂದ್ರೆ ಬರ್ಗರ್ 50/2 ಹಾಗೂ ಮಾರ್ಕೊ ಜಾನ್ಸೆನ್ 52/1 ವಿಕೆಟ್ ಕಬಳಿಸಿ ಭಾರತದ ಪತನಕ್ಕೆ ಕಾರಣವಾಗಿದ್ದಾರೆ.
Early stumps called ☁
Kagiso Rabada shines on a rain-truncated opening day in Centurion 💥
📝 #SAvIND: https://t.co/REqMWoHhqd | #WTC25 pic.twitter.com/hxWfYDJF0o
— ICC (@ICC) December 26, 2023