ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ಇಂದು ನಡೆದ ಐಪಿಎಲ್ನ 49ನೇ ಪಂದ್ಯದಲ್ಲಿ ಆತಿಥೇಯ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಪಂಜಾಬ್ ಕಿಂಗ್ಸ್ ತಂಡವು ಏಳು ವಿಕೆಟ್ಗಳಿಂದ ಭರ್ಜರಿಯಾಗಿ ಮಣಿಸುವ ಮೂಲಕ ತವರಲ್ಲೇ ಮುಖಭಂಗ ಅನುಭವಿಸುವಂತೆ ಮಾಡಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ್ದ ಚೆನ್ನೈ ಸೂಪರ್ ಕಿಂಗ್ಸ್ ತಂಡ ರುತುರಾಜ್ ಗಾಯಕ್ವಾಡ್ ಅವರ ಅರ್ಧಶತಕದ ನೆರವಿನಿಂದ ನಿಗದಿತ 20 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 162 ರನ್ ಗಳಿಸಿ, ಪಂಜಾಬ್ ಕಿಂಗ್ಸ್ ತಂಡಕ್ಕೆ 163 ರನ್ಗಳ ಸಾಧಾರಣ ಗುರಿ ನೀಡಿತ್ತು.
ಈ ಗುರಿಯನ್ನು ಬೆನ್ನತ್ತಿದ ಪಂಜಾಬ್ ಕಿಂಗ್ಸ್ ತಂಡ 17.5 ಓವರ್ಗಳಲ್ಲಿ ಮೂರು ವಿಕೆಟ್ ಕಳೆದುಕೊಂಡು 163 ರನ್ ದಾಖಲಿಸುವ ಮೂಲಕ ಭರ್ಜರಿ ಗೆಲುವು ತನ್ನದಾಗಿಸಿಕೊಂಡಿತು. ಈ ಬಾರಿ ಕೂಡ ಚೆನ್ನೈಯನ್ನು ಸೋಲಿಸುವ ಮೂಲಕ ಪಂಜಾಬ್ ಸತತ ಐದು ಬಾರಿ ಸೋಲಿಸಿದಂತಾಯಿತು.
CSK Vs PBKS in the last 5 IPL matches:
PBKS won by 7 wickets.
PBKS won by 4 wickets.
PBKS won by 11 runs.
PBKS won by 54 runs.
PBKS won by 6 wickets. pic.twitter.com/dA9yfkfmIM— Mufaddal Vohra (@mufaddal_vohra) May 1, 2024
ಪಂಜಾಬ್ ಪರ ಬ್ಯಾಟಿಂಗ್ನಲ್ಲಿ ಜಾನಿ ಬೈರ್ಸ್ಟೋವ್ 46 ರನ್(30 ಎಸೆತ, 7 ಬೌಂಡರಿ, 1 ಸಿಕ್ಸ್) ಮತ್ತು ಬೌಲಿಂಗ್ನಲ್ಲಿ ರಾಹುಲ್ ಚಹಾರ್ (16ಕ್ಕೆ 2 ವಿಕೆಟ್), ಹರ್ಪ್ರೀತ್ ಬ್ರಾರ್ (17 ರನ್ ನೀಡಿ 2) ವಿಕೆಟ್ ಪಂಜಾಬ್ ಗೆಲುವಿನ ಪ್ರಮುಖ ರೂವಾರಿಗಳಾಗಿ ಮೂಡಿಬಂದರು.
ಚೆನ್ನೈ ನೀಡಿದ್ದ 163 ರನ್ಗಳ ಗುರಿ ಬೆನ್ನಟ್ಟುವಾಗ ಕಳೆದ ಪಂದ್ಯದ ಶತಕ ವೀರ ಜಾನಿ ಜಾನಿ ಬೈರ್ಸ್ಟೋವ್ 46 ರನ್ ಬಾರಿಸಿ ಈ ಪಂದ್ಯದಲ್ಲಿಯೂ ತಮ್ಮ ಬ್ಯಾಟಿಂಗ್ ಪ್ರತಾಪ ತೋರಿದರು. ಆರಂಭದಿಂದಲೇ ಬಿರುಸಿನ ಬ್ಯಾಟಿಂಗ್ಗೆ ಒತ್ತು ಕೊಟ್ಟ ಅವರು ಪ್ರತಿ ಓವರ್ನಲ್ಲಿಯೂ ಕನಿಷ್ಠ ಒಂದು ಬೌಂಡರಿ ಅಥವಾ ಸಿಕ್ಸರ್ ಬಾರಿಸುತ್ತಲೇ ಮುನ್ನುಗಿದರು.
Third away win of the season for #PBKS as they ease past #CSK by 7 wickets 👏
The comprehensive win keeps their hopes alive for a spot in the 🔝4️⃣
Scorecard ▶️ https://t.co/EOUzgkMFN8 #TATAIPL | #CSKvPBKS pic.twitter.com/OUIEajRVgO
— IndianPremierLeague (@IPL) May 1, 2024
ಇವರಿಗೆ 2ನೇ ಕ್ರಮಾಂಕದಲ್ಲಿ ಆಡಲಿಳಿದ ದಕ್ಷಿಣ ಆಫ್ರಿಕಾದ ಹಾರ್ಡ್ ಹಿಟ್ಟರ್ ರೀಲಿ ರೂಸೊ ಉತ್ತಮ ಸಾಥ್ ನೀಡಿದರು. ಬೈರ್ಸ್ಟೋವ್ ವಿಕೆಟ್ ಪತನದ ಬಳಿಕ ಇವರು ತಂಡವನ್ನು ಆಧರಿಸಿದರು. 23 ಎಸೆತ ಎದುರಿಸಿ 43(5 ಬೌಂಡರಿ, 2 ಸಿಕ್ಸರ್) ರನ್ ಬಾರಿಸಿದರು.
Harpreet Brar’s controlled & economical spell wins him the Player of the Match Award 🏆 👏
Scorecard ▶️ https://t.co/EOUzgkM7XA #TATAIPL | #CSKvPBKS pic.twitter.com/7yrO8tlf3D
— IndianPremierLeague (@IPL) May 1, 2024
ಅಂತಿಮವಾಗಿ ಶಶಾಂಕ್ ಸಿಂಗ್(25 ರನ್) ಮತ್ತು ಹಂಗಾಮಿ ನಾಯಕ ಸ್ಯಾಮ್ ಕರನ್(26) ಅಜೇಯರಾಗಿ ಉಳಿದು ತಂಡವನ್ನು ಗೆಲುವಿನ ದಡ ಸೇರಿಸಿದರು. ಇದೇ ವೇಳೆ ಶಶಾಂಕ್ ಟಿ20 ಕ್ರಿಕೆಟ್ನಲ್ಲಿ 2 ಸಾವಿರ ರನ್ಗಳ ಗಡಿ ದಾಡಿದರು.
ಚೆನ್ನೈ ಪರ ಬೌಲಿಂಗ್ನಲ್ಲಿ ಶಿವಂ ದುಬೆ, ರಿಚರ್ಡ್ ಗ್ಲೀಸನ್ ಹಾಗೂ ಶಾರ್ದುಲ್ ಠಾಕೂರ್ ತಲಾ ಒಂದೊಂದು ವಿಕೆಟ್ ಗಳಿಸಿದರು.
— TATA IPL 2024 Commentary #IPL2024 (@TATAIPL2024Club) May 1, 2024
ಪ್ಲೇ ಆಫ್ ಆಸೆ ಜೀವಂತ
ಚೆನ್ನೈ ವಿರುದ್ಧದ ಪಂದ್ಯದಲ್ಲಿ 7 ವಿಕೆಟ್ಗಳ ಗೆಲುವಿನೊಂದಿಗೆ ಪಂಜಾಬ್ ಕಿಂಗ್ಸ್ ಪ್ಲೇ ಆಫ್ ಆಸೆ ಜೀವಂತವಾಗಿರಿಸಿದೆ. ಪಂಜಾಬ್ ಈವರೆಗೆ ಆಡಿರುವ 10 ಪಂದ್ಯಗಳಲ್ಲಿ 4 ಗೆಲುವು, 6 ಸೋಲಿನನೊಂದಿಗೆ 8 ಅಂಕ ಗಳಿಸಿಕೊಂಡಿದೆ. -0.06 ಸರಾಸರಿ ಅಂಕದೊಂದಿಗೆ ಅಂಕಪಟ್ಟಿಯಲ್ಲಿ 7ನೇ ಸ್ಥಾನದಲ್ಲಿದ್ದರೂ ಮುಂದಿನ ಎಲ್ಲ ಪಂದ್ಯಗಳನ್ನು ಗೆಲ್ಲಲೇಬೇಕಾದ ಒತ್ತಡದಲ್ಲಿದೆ.
ಚೆನ್ನೈ ಸೂಪರ್ ಕಿಂಗ್ಸ್ ತಂಡವು 10 ಪಂದ್ಯಗಳಲ್ಲಿ 5 ರಲ್ಲಿ ಸೋಲು ಹಾಗೂ 5ರಲ್ಲಿ ಗೆಲುವಿನೊಂದಿಗೆ ನಾಲ್ಕನೇ ಸ್ಥಾನದಲ್ಲಿದೆ.
