ತಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ದೇಶದ ಜನರ ನಡುವೆ ಸಂಪತ್ತಿನ ಹಂಚಿಕೆಯನ್ನು ಖಚಿತಪಡಿಸಿಕೊಳ್ಳಲು ದೇಶಾದ್ಯಂತ ಆರ್ಥಿಕ ಹಾಗೂ ಸಾಂಸ್ಥಿಕ ಸಮೀಕ್ಷೆಯನ್ನು ಹಮ್ಮಿಕೊಳ್ಳುವುದಾಗಿ ಕಾಂಗ್ರೆಸ್ ಹೇಳಿರುವುದನ್ನು ಬಿಜೆಪಿಯು ತಮಗೆ ಬೇಕಾದಂತೆ ತಿರುಚಿ ಹೇಳುತ್ತಿದೆ.
ಅಲ್ಲದೇ, ಇತ್ತೀಚೆಗೆ ರಾಜಸ್ಥಾನದಲ್ಲಿ ನಡೆದಿದ್ದ ಸಾರ್ವಜನಿಕ ಸಮಾವೇಶದಲ್ಲಿ ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿಯವರು, “ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಈ ದೇಶದ ಸಂಪತ್ತನ್ನು ಹೆಚ್ಚು ಮಕ್ಕಳನ್ನು ಹೆರುವ ಮುಸಲ್ಮಾನರಿಗೆ ಹಂಚಲಿದೆ” ಎಂದು ದ್ವೇಷ ಭಾಷಣಗೈದಿದ್ದರು.
ಈ ಎಲ್ಲ ಬೆಳವಣಿಗೆಗಳ ನಡುವೆ ‘ವಿಕ್‌ಸಿತ್ ಭಾರತ್’ ಹೆಸರಿನಲ್ಲಿ ಕೆಲ ಬಿಜೆಪಿ ಬೆಂಬಲಿತ ಯುವಕರ ಗುಂಪು ಇಂದು ದೆಹಲಿಯಲ್ಲಿರುವ ಕಾಂಗ್ರೆಸ್ ಪಕ್ಷದ ಮುಂಭಾಗ ಪ್ರತಿಭಟನೆ ಹಮ್ಮಿಕೊಂಡಿತ್ತು. ಈ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಹಲವು ಮಂದಿಗೆ ತಾವು ಬಂದಿದ್ದ ಉದ್ದೇಶವೇ ತಿಳಿದಿರಲಿಲ್ಲ ಎಂಬುದು ಪತ್ರಕರ್ತನೋರ್ವನು ಮಾತನಾಡಿಸಿದಾಗ ಕಂಡು ಬಂತು. ಈಗ ಇದರ ವಿಡಿಯೋ ಸದ್ಯ ಸೋಷಿಯಲ್ ಮೀಡಿಯಾಗಳಲ್ಲಿ ವೈರಲಾಗಿದೆ.
#Congress के खिलाफ वेल्थ डिस्ट्रीब्यूशन-कथित इन्हेरिटेंसी टैक्स के मुद्दे पर छात्रों का प्रदर्शन लेकिन ज्यादातर को न मुद्दे पता थे ना वजह। कुछ बैनर भी ठीक से नहीं पढ़ पाए। देखिए कांग्रेस मुख्यालय की ओर प्रदर्शन करने चले छात्रों के गजब जवाब।#ReporterDiary | (@JournoAshutosh) pic.twitter.com/ystudZDqYm
— AajTak (@aajtak) May 1, 2024
ಆಜ್‌ತಕ್‌ನ ಪ್ರತಿನಿಧಿ ಅಶುತೋಶ್ ಮಿಶ್ರಾ ಅವರು ಹಲವು ಬಿಜೆಪಿ ಬೆಂಬಲಿಗ ಯುವಕರ ಮುಂದೆ ಮೈಕ್ ಹಿಡಿದು ಪ್ರಶ್ನೆ ಕೇಳಿದಾಗ, ವಿಚಿತ್ರ ಉತ್ತರ ನೀಡಿದ್ದಾರೆ. ಹಲವು ಮಂದಿಗೆ ತಾವು ಬಂದಿದ್ದ ಉದ್ದೇಶವೇ ತಿಳಿದಿರಲಿಲ್ಲ. ಸದ್ಯ ಈ ವಿಡಿಯೋ ಸೋಷಿಯಲ್ ಮೀಡಿಯಾಗಳಲ್ಲಿ ವೈರಲಾಗಿದ್ದು, ಬಿಜೆಪಿಯವರನ್ನು ನೆಟ್ಟಿಗರು ಟ್ರೋಲ್ ಮಾಡುತ್ತಿದ್ದಾರೆ.
ಸಂಪತ್ತು ಹಂಚಿಕೆ ಬಗ್ಗೆ ನಿಮಗೆ ಏನು ಗೊತ್ತು ಎಂದು ಮೊದಲಿಗೆ ಒಬ್ಬ ಯುವಕನಲ್ಲಿ ಪತ್ರಕರ್ತ ಪ್ರಶ್ನಿಸಿದಾಗ, ‘ಸಂಪತ್ತು ಹಂಚಿಕೆ……ಅಂತ ಪ್ರಾರಂಭಿಸಿ, ಬಳಿಕ ನನಗೆ ಗೊತ್ತಿಲ್ಲ. ಬೇರೆಯವರನ್ನು ಕೇಳಿ’ ಎಂದು ಮುಂದೆ ಕಳುಹಿಸಿದ್ದಾನೆ.
‘Urban maxwell’ 😭
pic.twitter.com/NGrNmDHivb— Rohini Singh (@rohini_sgh) May 1, 2024
ಇನ್ನೊಬ್ಬಾತ, “ನಾವು ಗ್ರೇಟರ್ ನೊಯ್ಡಾದ ಗಲ್‌ಗೋಟಿ ವಿವಿಯಿಂದ ಬಂದವರು. ಕಾಂಗ್ರೆಸ್ ಪ್ರಣಾಳಿಕೆ ವಿರೋಧಿಸಲು ಬಂದಿದ್ದೇವೆ. ಅದರಲ್ಲಿ ಏನಿದೆ ಎಂಬುದು ಗೊತ್ತಿಲ್ಲ” ಎಂದು ಉತ್ತರಿಸಿದ್ದಾನೆ.
‘ಅರ್ಬನ್ ನಕ್ಸಲ್’ ಪದವನ್ನು ‘ಮ್ಯಾಕ್ಸ್‌ವೆಲ್’ ಎಂದು ಓದಿದ ಯುವಕ!
ಈ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಯುವಕನೋರ್ವ, “NO PLACE FOR URBAN NAXALS IN VIKSIT BHARAT” ಎಂಬ ಪ್ಲೆಕಾರ್ಡ್ ಇಟ್ಟುಕೊಂಡಿದ್ದ. ಇದನ್ನು ಒಮ್ಮೆ ಓದಿ ಎಂದು ಪತ್ರಕರ್ತ ಹೇಳಿದಾಗ, ‘ಅರ್ಬನ್ ನಕ್ಸಲ್’ ಎಂಬ ಪದವನ್ನು ‘ಮ್ಯಾಕ್ಸ್‌ವೆಲ್’ ಎಂದು ಓದಿ, ಪೇಚಿಗೆ ಸಿಲುಕಿದ್ದಲ್ಲದೇ, ಇದರ ಅರ್ಥ ತನಗೆ ಗೊತ್ತಿಲ್ಲ ಎಂದೂ ಕೂಡ ಹೇಳಿದ್ದಾನೆ. ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಸುಮಾರು 6 ನಿಮಿಷದ ಈ ವಿಡಿಯೋ ವೈರಲಾಗಿದೆ.
This is how educated youth are brainwashed via WhatsApp University. Thanks to @BJP4India. pic.twitter.com/Q0m0sHL17t
— Mohammed Zubair (@zoo_bear) May 1, 2024
ಈ ವಿಡಿಯೋವನ್ನು ಖ್ಯಾತ ಯೂಟ್ಯೂಬರ್ ಧ್ರುವ್ ರಾಠಿ, ಬಹುಭಾಷಾ ನಟ ಪ್ರಕಾಶ್ ರೈ, ಪತ್ರಕರ್ತ ರಾಜ್‌ದೀಪ್ ಸರ್ದೇಸಾಯಿ, ಆಲ್ಟ್‌ನ್ಯೂಸ್‌ನ ಮುಹಮ್ಮದ್ ಝುಬೈರ್ ಸೇರಿದಂತೆ ಹಲವು ಮಂದಿ ಹಂಚಿಕೊಂಡಿದ್ದು, ‘ವಾಟ್ಸಾಪ್ ವಿಶ್ವವಿದ್ಯಾಲಯದ ಮೂಲಕ ವಿದ್ಯಾವಂತ ಯುವಕರನ್ನು ಬ್ರೈನ್‌ವಾಶ್ ಮಾಡಲಾಗಿದೆ. ಬಿಜೆಪಿಯವರಿಗೆ ಧನ್ಯವಾದಗಳು” ಎಂದು ವ್ಯಂಗ್ಯವಾಡಿದ್ದಾರೆ.
This is so funny, these so-called students were protesting against inheritance tax, but it seems like none of them knows anything. 🤣🤣 pic.twitter.com/pdPQQ3CHOq
— Narundar (@NarundarM) May 1, 2024
“ಬಿಜೆಪಿಯವರೇ, ನೀವು ಪ್ರತಿಭಟನೆಗೆ ಕರೆದುಕೊಂಡು ಬರುವ ಮಂದಿಗೆ ನೀವು ಯಾಕೆ? ಯಾವ ವಿಚಾರದಲ್ಲಿ ಎಲ್ಲಿಗೆ ಕರೆದುಕೊಂಡು ಹೋಗುತ್ತಿದ್ದೀರಾ ಎಂಬುದರ ಬಗ್ಗೆ ಸ್ವಲ್ಪನಾದರೂ ಮಾಹಿತಿ ಕೊಟ್ಟು ಕಳುಹಿಸಿ. ಸುಮ್ಮನೆ ಮಾಧ್ಯಮದವರು ಹೀಗೆ ಮೈಕ್ ಹಿಡಿದಾಗ ಉತ್ತರಿಸಲಾಗದೆ ಪೇಚಿಗೆ ಸಿಲುಕಿಸಬೇಡಿ. ಇವರೆಲ್ಲರೂ ವಾಟ್ಸಪ್ ಯುನಿವರ್ಸಿಟಿಯ ವಿದ್ಯಾರ್ಥಿಗಳೇ?” ಎಂದು ನೆಟ್ಟಿಗರು ಕಾಲೆಳೆದಿದ್ದಾರೆ.
This super story by my fine young colleague @JournoAshutosh exposes the WhatsApp university (and state of higher education!)! Next time when students want to protest at least find out what the protest is all about!😊 https://t.co/Us6w40Nnue
— Rajdeep Sardesai (@sardesairajdeep) May 1, 2024