ಐಪಿಎಲ್ | ವಿಲ್ ಜಾಕ್ಸ್‌ ಸ್ಫೋಟಕ ಬ್ಯಾಟಿಂಗ್‌ಗೆ ಬೆದರಿದ ಗುಜರಾತ್: ಆರ್‌ಸಿಬಿಗೆ ಭರ್ಜರಿ ಗೆಲುವು

Date:

ಅಹ್ಮದಾಬಾದ್‌ನಲ್ಲಿರುವ ನರೇಂದ್ರ ಮೋದಿ ಇಂಟರ್​ ನ್ಯಾಷನಲ್​ ಕ್ರಿಕೆಟ್​ ಸ್ಟೇಡಿಯಂ​ನಲ್ಲಿ ನಡೆದ ಐಪಿಎಲ್‌ನ​ ಹೈವೋಲ್ಟೇಜ್​ ಪಂದ್ಯದಲ್ಲಿ ವಿಲ್ ಜಾಕ್ಸ್‌ ಅವರ ಸ್ಫೋಟಕ ಬ್ಯಾಟಿಂಗ್‌ನ ನೆರವಿನಿಂದ ಆರ್‌ಸಿಬಿ ತಂಡವು, ಗುಜರಾತ್ ಟೈಟನ್ಸ್‌ ವಿರುದ್ಧ 9 ವಿಕೆಟ್‌ಗಳ ಭರ್ಜರಿ ಗೆಲುವು ದಾಖಲಿಸಿದೆ.

ಗುಜರಾತ್​ ಟೈಟನ್ಸ್​​ ನೀಡಿದ ಬೃಹತ್​ ರನ್​ಗಳ ಗುರಿ ಬೆನ್ನತ್ತಿದ ರಾಯಲ್​ ಚಾಲೆಂಜರ್ಸ್​ ಬೆಂಗಳೂರು, ಕೇವಲ 16 ಓವರ್‌ಗಳಲ್ಲಿ ಗುರಿ ತಲುಪುವ ಮೂಲಕ ದಾಖಲೆ ಸೃಷ್ಟಿಸಿದೆ.

ಇನ್ನಿಂಗ್ಸ್​ ಉದ್ಧಕ್ಕೂ ಗುಜರಾತ್‌ನ ಬೌಲರ್‌ಗಳನ್ನು ಕಾಡಿದ ಇಂಗ್ಲೆಂಡ್ ಮೂಲದ ಬ್ಯಾಟರ್ ವಿಲ್​ ಜಾಕ್ಸ್​​, ಕೇವಲ 41 ಎಸೆತದಲ್ಲಿ 10 ಸಿಕ್ಸರ್​​, 5 ಬೌಂಡರಿಯ ನೆರವಿನಿಂದ ಶತಕ ಕೂಡ ಸಿಡಿಸಿದರು. ಆರ್​​ಸಿಬಿ ಕೇವಲ 16 ಓವರ್​ನಲ್ಲಿ ಕೇವಲ 1 ವಿಕೆಟ್​ ನಷ್ಟಕ್ಕೆ 206 ರನ್​ ಗಳಿಸುವ ಮೂಲಕ 9 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿತು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಆರ್‌ಸಿಬಿ ಪರ ಇನ್ನಿಂಗ್ಸ್ ಆರಂಭಿಸಿದ್ದ ನಾಯಕ ಫಾಫ್ ಡು ಪ್ಲೆಸಿ, 12 ಎಸೆತಗಳಲ್ಲಿ 24 ರನ್ ಗಳಿಸಿದ್ದಾಗ ಸಾಯಿ ಕಿಶೋರ್ ಎಸೆತದಲ್ಲಿ ಕ್ಯಾಚಿತ್ತು ನಿರ್ಗಮಿಸಿದರು. ಈ ವೇಳೆ ತಂಡ ಸ್ಕೋರ್ 41 ರನ್ ಆಗಿತ್ತು. ಈ ವೇಳೆ ಕ್ರೀಸ್‌ನಲ್ಲಿದ್ದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿಯವರಿಗೆ ಸಾಥ್ ನೀಡಿದ ವಿಲ್ ಜಾಕ್ಸ್‌, ಭರ್ಜರಿ ಹೊಡೆತಗಳ ಮೂಲಕ ರನ್ ಗಳಿಸಿದರು.

ಗುಜರಾತ್‌ನ ಬೌಲರ್ ರಶೀದ್ ಖಾನ್ ಎಸೆದ 16ನೇ ಓವರ್‌ನಲ್ಲಿ ಮನಬಂದಂತೆ ದಂಡಿಸಿದ ಜಾಕ್ಸ್, ಒಂದೇ ಓವರ್‌ನಲ್ಲಿ ಒಂದು ಬೌಂಡರಿ ಹಾಗೂ ನಾಲ್ಕು ಸಿಕ್ಸರ್‌ನ ನೆರವನಿಂದ 28 ರನ್ ಗಳಿಸಿದ್ದಲ್ಲದೇ, ತನ್ನ ಶತಕವನ್ನೂ ಕೂಡ ಪೂರೈಸಿದರು. ಭರ್ಜರಿ ಸಿಕ್ಸ್, ಬೌಂಡರಿಗಳ ಮೂಲಕ ಅಭಿಮಾನಿಗಳನ್ನು ಮಾತ್ರವಲ್ಲದೇ, ಕ್ರೀಸ್‌ನ ಇನ್ನೊಂದು ಬದಿಯಲ್ಲಿದ್ದ ವಿರಾಟ್ ಕೊಹ್ಲಿಯವರು ಕೂಡ ದಂಗಾಗುವಂತೆ ವಿಲ್ ಜಾಕ್ಸ್ ಅಚ್ಚರಿಗೀಡು ಮಾಡಿದರು.

ವಿರಾಟ್ ಕೊಹ್ಲಿ ಹಾಗೂ ವಿಲ್ ಜಾಕ್ಸ್‌ ಜೋಡಿಯು ಮುರಿಯದ ಎರಡನೇ ವಿಕೆಟ್‌ಗೆ 166 ರನ್‌ಗಳ ಜೊತೆಯಾಟ ನಡೆಸಿದರು. ಈ ನಡುವೆ ಕೇವಲ 44 ಬಾಲ್​ನಲ್ಲಿ ವಿರಾಟ್ ಕೊಹ್ಲಿ 3 ಸಿಕ್ಸರ್​​, 6 ಬೌಂಡರಿಗಳ ನೆರವನಿಂದ 70 ರನ್​ ಸಿಡಿಸುವ ಮೂಲಕ ಮಿಂಚಿದರು. ಅಲ್ಲದೇ, ಕೊಹ್ಲಿ ಈ ಬಾರಿಯ ಐಪಿಎಲ್‌ನಲ್ಲಿ 500ಕ್ಕೂ ಹೆಚ್ಚು ರನ್ ದಾಖಲಿಸಿಕೊಳ್ಳುವ ಮೂಲಕ ಆರೆಂಜ್ ಕ್ಯಾಪ್ ಅನ್ನು ತನ್ನಲ್ಲಿಯೇ ಇನ್ನೂ ಕೂಡ ಉಳಿಸಿಕೊಂಡಿದ್ದಾರೆ.

ಆರ್​​ಸಿಬಿ ಇಂದಿನ ಪಂದ್ಯದಲ್ಲಿ ಕೇವಲ 16 ಓವರ್​ನಲ್ಲಿ ಕೇವಲ 1 ವಿಕೆಟ್​ ನಷ್ಟಕ್ಕೆ 206 ರನ್​ ಗಳಿಸುವ ಮೂಲಕ ಗೆಲುವು ಸಾಧಿಸಿದೆ. ಈವರೆಗೆ ಆರ್‌ಸಿಬಿ ಒಟ್ಟು 10 ಪಂದ್ಯಗಳನ್ನಾಡಿದ್ದು, ಮೂರು ಗೆಲುವು ಹಾಗೂ ಏಳು ಸೋಲಿನೊಂದಿಗೆ ಅಂಕಪಟ್ಟಿಯಲ್ಲಿ ಆರು ಅಂಕಗಳನ್ನು ಗಳಿಸಿದ್ದರೂ, ಪಟ್ಟಿಯಲ್ಲಿ 10ನೇ ಸ್ಥಾನದಲ್ಲಿಯೇ ಇದೆ.

201 ರನ್‌ಗಳ ಗುರಿ ನೀಡಿದ್ದ ಗುಜರಾತ್

ಸಾಯಿ ಸುದರ್ಶನ್ ಮತ್ತು ಶಾರುಖ್ ಖಾನ್ ಅವರ ಉತ್ತಮ ಬ್ಯಾಟಿಂಗ್‌ ಪ್ರದರ್ಶನದಿಂದ ಗುಜರಾತ್ ತಂಡವು 201 ರನ್‌ಗಳ ಗುರಿಯನ್ನು ಆರ್‌ಸಿಬಿಗೆ ನೀಡಿತ್ತು. ನಿಗದಿತ 20 ಓವರ್‌ಗಳಲ್ಲಿ ಗುಜರಾತ್‌ 3 ನಷ್ಟಕ್ಕೆ 200 ರನ್‌ ಗಳಿಸಿತ್ತು.

ಶಾರುಖ್‌ ಖಾನ್ ಕೇವಲ 30 ಎಸೆತಗಳಲ್ಲಿ 5 ಸಿಕ್ಸರ್‌ ಹಾಗು 3 ಬೌಂಡರಿಗಳೊಂದಿಗೆ 58 ರನ್‌ ಗಳಿಸಿದರೆ, ಮೂರನೇ ಕ್ರಮಾಂಕದ ಬ್ಯಾಟರ್‌ ಸಾಯಿ ಸುದರ್ಶನ್‌ ಭರ್ಜರಿ ಬ್ಯಾಟಿಂಗ್‌ ನಡೆಸಿ 49 ಎಸೆತಗಳಲ್ಲಿ 8 ಬೌಂಡರಿ ಮತ್ತು 4 ಸಿಕ್ಸರ್‌ ಸಿಡಿಸಿ ಅಜೇಯ 84 ರನ್‌ ಗಳಿಸಿದ್ದರು. ಮತ್ತೊಂದೆಡೆ ಡೇವಿಡ್‌ ಮಿಲ್ಲರ್‌ ಅಜೇಯ 26 ರನ್‌ ಬಾರಿಸುವ ಮೂಲಕ ಗುಜರಾತ್‌ ಬೃಹತ್‌ ರನ್‌ ಗಳಿಸಿಲು ನೆರವಾಗಿದ್ದರು.

ಆರ್‌ಸಿಬಿ ಪರ ಸ್ವಪ್ನಿಲ್ ಸಿಂಗ್, ಗ್ಲೆನ್‌ ಮ್ಯಾಕ್ಸ್‌ವೆಲ್‌ ಮತ್ತು ಮೊಹಮ್ಮದ್‌ ಸಿರಾಜ್‌ ತಲಾ ಒಂದು ವಿಕೆಟ್‌ ಪಡೆದುಕೊಂಡಿದ್ದರು.

ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಅಣ್ಣ ಯೂಸುಫ್ ಪರ ಪ್ರಚಾರದಲ್ಲಿ ಭಾಗಿಯಾದ ಇರ್ಫಾನ್ ಪಠಾಣ್

ತೃಣಮೂಲ ಕಾಂಗ್ರೆಸ್‌ನಿಂದ ಪಶ್ಚಿಮ ಬಂಗಾಳದ ಬಹರಾಮ್‌ಪುರ್‌ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿರುವ ಟೀಂ...

ಕೆ ಎಲ್ ರಾಹುಲ್ ವಿರುದ್ಧ ಲಖನೌ ತಂಡದ ಮಾಲೀಕರ ಆಕ್ರೋಶ ? ವಿಡಿಯೋ ವೈರಲ್

ಹೈದರಾಬಾದ್‌ನಲ್ಲಿ ನಿನ್ನೆ ನಡೆದ 2024ನೇ ಸಾಲಿನ ಐಪಿಎಲ್ ಟೂರ್ನಿಯ ಪಂದ್ಯದಲ್ಲಿ ಎಸ್‌ಆರ್‌ಹೆಚ್‌...

ಐಪಿಎಲ್ | ಸೂರ್ಯ ಕುಮಾರ್ ಶತಕದಾಟ: ಮುಂಬೈ ವಿರುದ್ಧ ಹೈದರಾಬಾದ್‌ಗೆ ಸೋಲು: ಪ್ಲೇ-ಆಫ್ ಕನಸು ಭಗ್ನ?

ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಸೋಮವಾರ ನಡೆದ ಐಪಿಎಲ್‌ನ 55ನೇ ಪಂದ್ಯದಲ್ಲಿ ಸನ್‌ರೈಸರ್ಸ್...