ಪ್ಲೇ-ಆಫ್ ಪ್ರವೇಶ ಕಾರಣಕ್ಕೆ ಕೊನೆ ಕ್ಷಣದವರೆಗೂ ರೋಚಕತೆಯಿಂದ ಕೂಡಿದ್ದ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಗೆದ್ದು ಬೀಗಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು, ರಾಯಲ್ ಆಗಿ ಪ್ಲೇ-ಆಫ್ಗೆ ಎಂಟ್ರಿ ಕೊಟ್ಟಿದೆ. ಈ ಸಲ ಕಪ್ ನಮ್ದು ಎಂದು ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ.
Aaarrr Ceeee Beeee ❤️👏
6️⃣ in a row for Royal Challengers Bengaluru ❤️
They make a thumping entry into the #TATAIPL 2024 Playoffs 👊
Scorecard ▶️ https://t.co/7RQR7B2jpC#RCBvCSK | @RCBTweets pic.twitter.com/otq5KjUMXy
— IndianPremierLeague (@IPL) May 18, 2024
ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ ಪದ್ಯದಲ್ಲಿ ಚೆನ್ನೈ ವಿರುದ್ಧ ಆರ್ಸಿಬಿ 27 ರನ್ಗಳ ಗೆಲುವು ದಾಖಲಿಸಿತು. ಒಂದು ವೇಳೆ ಪಂದ್ಯ ಸೋತು 201 ರನ್ ಗಳಿಸಿದ್ದರೂ ಚೆನ್ನೈ ಪ್ಲೇ-ಆಫ್ ಪ್ರವೇಶಿಸಲು ಸಾಧ್ಯವಾಗುತ್ತಿತ್ತು. ಆದರೆ ಆರ್ಸಿಬಿ ಬೌಲರ್ಗಳ ಉತ್ತಮ ಪ್ರದರ್ಶನದಿಂದ ಚೆನ್ನೈ ಪ್ಲೇ-ಆಫ್ ಕನಸಿಗೂ ತಣ್ಣೀರು ಬಿದ್ದಿತು. ಕೇವಲ 10 ರನ್ಗಳ ಅಂತರದಲ್ಲಿ ಗಾಯಕ್ವಾಡ್ ಪಡೆ ಪ್ಲೇ-ಆಫ್ನಿಂದ ಮುಗ್ಗರಿಸಿತು.
RCB fans wild celebrations in Bengaluru
Crazy celebrations post midnight including women joining in huge numbers. Early Deepavali 🎇 🎆 #RCBvsCSK pic.twitter.com/O7C9PlgWv0
— Karnataka Weather (@Bnglrweatherman) May 18, 2024
ಆರ್ಸಿಬಿ ಪ್ಲೇ ಆಫ್ ಪ್ರವೇಶಿಸುತ್ತಿದ್ದಂತೆಯೇ ರಸ್ತೆಗಿಳಿದಿರುವ ಅಭಿಮಾನಿಗಳು, ಪಟಾಕಿಗಳನ್ನು ಸಿಡಿಸುವ ಮೂಲಕ ಕಪ್ ಗೆದ್ದಷ್ಟೇ ಸಂಭ್ರಮಾಚರಣೆ ನಡೆಸುತ್ತಿದ್ದಾರೆ.
ಬೆಂಗಳೂರು, ಮಂಗಳೂರು ಸೇರಿದಂತೆ ದೇಶ ಹಾಗೂ ಕರ್ನಾಟಕದ ಹಲವೆಡೆ ಅಭಿಮಾನಿಗಳು ರಸ್ತೆಗೆ ಇಳಿದು, ಖುಷಿಯಿಂದ ನೃತ್ಯ ಮಾಡಿ, ಸಂಭ್ರಮಿಸಿದರು. ಒಂದು ಕಡೆ ಆರ್ಸಿಬಿ ಅಭಿಮಾನಿಗಳು ಕುಣಿದು ಕುಪ್ಪಳಿಸುತ್ತಿದ್ದರೆ, ಚೆನ್ನೈ ಹಾಗೂ ಧೋನಿ ಅಭಿಮಾನಿಗಳು ಕಣ್ಣೀರು ಹಾಕುತ್ತಿದ್ದಾರೆ.
ಇದನ್ನು ಓದಿದ್ದೀರಾ? ಫೀನಿಕ್ಸ್ನಂತೆ ಎದ್ದು ಬಂದ ಆರ್ಸಿಬಿ ಪ್ಲೇ-ಆಫ್ಗೆ; ಸಿಎಸ್ಕೆ ಮನೆಗೆ
ಕೆಲವು ಮಂದಿ ಸಂಭ್ರಮಾಚರಣೆಯ ವಿಡಿಯೋಗಳನ್ನು ಪೋಸ್ಟ್ ಮಾಡಿ, ಆರ್ಸಿಬಿಯ ಅಭಿಮಾನಿಗಳು ಪ್ಲೇ ಆಫ್ಗೆ ಹೋದದ್ದನ್ನು ಇಷ್ಟೊಂದು ಸಂಭ್ರಮಾಚರಣೆ ಮಾಡುತ್ತಿರುವುದನ್ನು ನೋಡಿದರೆ, ಒಂದು ವೇಳೆ ಫೈನಲ್ ಪ್ರವೇಶಿಸಿ, ಕಪ್ ಗೆದ್ದರೆ ಹೇಗಿರಬಹುದು” ಎಂದು ಆಶ್ಚರ್ಯ ವ್ಯಕ್ತಪಡಿಸುತ್ತಿದ್ದಾರೆ.
Celebrations in Coorg for RCB’s entry in Playoffs. 🔥pic.twitter.com/qjuPwegNeX
— Mufaddal Vohra (@mufaddal_vohra) May 18, 2024
Storm Alert in Bangalore🚨🚨🚨 pic.twitter.com/60lDMPImQ2
— 82* (@WhiteDevil18_) May 18, 2024
ಆರ್ಸಿಬಿಗೆ ಅಭಿನಂದನೆ ಸಲ್ಲಿಸಿದ ಸಿಎಂ ಸಿದ್ದರಾಮಯ್ಯ
ಸಿಎಂ ಸಿದ್ದರಾಮಯ್ಯ ಇಂದಿನ ಪಂದ್ಯವನ್ನು ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ತೆರಳಿ, ವೀಕ್ಷಿಸಿದ್ದರು. ಆರ್ಸಿಬಿ ಗೆದ್ದು, ಪ್ಲೇ ಆಫ್ ಪ್ರವೇಶಿಸುತ್ತಿದ್ದಂತೆಯೇ ಅಭಿನಂದನೆ ಸಲ್ಲಿಸಿದರಲ್ಲದೇ, ‘ಇದು ಆರ್ಸಿಬಿಯ ಹೊಸ ಅಧ್ಯಾಯ’ ಎಂದು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
@RCBTweets Craze Every where..
Video From Mangaluru pic.twitter.com/jF9tRTV8Xa
— Irshad Venur ಇರ್ಷಾದ್ ವೇಣೂರು (@muhammadirshad6) May 18, 2024
