ಏಕದಿನ ವಿಶ್ವಕಪ್ ಟೂರ್ನಿಯ ಭಾಗವಾಗಿ ಲಕ್ನೋದ ಏಕಾನ ಕ್ರೀಡಾಂಗಣದಲ್ಲಿ ಇಂದು ನಡೆದ ನೆದರ್‌ಲ್ಯಾಂಡ್ಸ್ ವಿರುದ್ಧದ ಪಂದ್ಯದಲ್ಲಿ ಅಫ್ಘಾನಿಸ್ತಾನ ತಂಡ ಏಳು ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿದೆ. ಆ ಮೂಲಕ ಸೆಮಿಫೈನಲ್ ತಲುಪುವ ಆಸೆಯನ್ನೂ ಇನ್ನೂ ಜೀವಂತವಾಗಿರಿಸಿದೆ.
ಈ ಗೆಲುವಿನೊಂದಿಗೆ ಅಫ್ಘಾನಿಸ್ತಾನ ತಂಡ ವಿಶ್ವಕಪ್‌ನ ಅಂಕಪಟ್ಟಿಯಲ್ಲಿ 5ನೇ ಸ್ಥಾನವನ್ನು ಕಾಯ್ದುಕೊಂಡಿದೆ. ಈವರೆಗೆ ಆಡಿದ ಏಳು ಪಂದ್ಯಗಳ ಪೈಕಿ ನಾಲ್ಕನ್ನು ಗೆದ್ದು, ಮೂರರಲ್ಲಿ ಸೋಲುವ ಮೂಲಕ ಎಂಟು ಅಂಕಗಳನ್ನು ಗಳಿಸಿಕೊಂಡಿದೆ.
ಇಂದು ನಡೆದ ಟೂರ್ನಿಯ 34ನೇ ಪಂದ್ಯದಲ್ಲಿ ನೆದರ್‌ಲ್ಯಾಂಡ್ಸ್ ತಂಡ ಟಾಸ್ ಗೆದ್ದುಕೊಂಡು, ಮೊದಲಿಗೆ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತ್ತು. ಆದರೆ, ಅಫ್ಘಾನಿಸ್ತಾನ ತಂಡದ ಸರ್ವಾಂಗೀಣ ಆಟಕ್ಕೆ ಮಂಡಿಯೂರಿದ ನೆದರ್‌ಲ್ಯಾಂಡ್ಸ್ ಕೇವಲ 179 ರನ್ ಗಳಿಸಿ ಆಲೌಟ್ ಆಗಿತ್ತು.
𝐀𝐅𝐆𝐇𝐀𝐍𝐈𝐒𝐓𝐀𝐍 𝐖𝐈𝐍! 🙌#AfghanAtalan, led by half-centuries from the skipper @Hashmat_50 (56*) and @RahmatShah_08 (52), successfully chased down the target by 7 wickets to register 4th victory at the ICC #CWC23. 👍
Well done Atalano! 👏#AFGvNED | #WarzaMaidanGata pic.twitter.com/zNLiW1Fakx
— Afghanistan Cricket Board (@ACBofficials) November 3, 2023
180 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಅಫ್ಘಾನಿಸ್ತಾನ ತಂಡ, 31.3 ಓವರ್‌ಗಳಲ್ಲಿ ಮೂರು ವಿಕೆಟ್ ಕಳೆದುಕೊಂಡು ಗುರಿ ಮುಟ್ಟಿತು.
AFGHANISTAN HAVE REPLACED PAKISTAN AT NO.5 IN POINTS TABLE…!!!!
4th victory in this World Cup for Afghanistan, they’re a super team. pic.twitter.com/tyVCz5Canf
— Mufaddal Vohra (@mufaddal_vohra) November 3, 2023
ಅಫ್ಘಾನ್ ಪರ ರಹ್ಮತ್ ಶಾ 52(54 ಎಸೆತ, 8 ಬೌಂಡರಿ), ನಾಯಕ ಹಶ್ಮತುಲ್ಲಾ ಶಾಹಿದಿ ಔಟಾಗದೆ 56(64 ಎಸೆತ, 6 ಬೌಂಡರಿ) ಗಳಿಸುವ ಮೂಲಕ ಅರ್ಧಶತಕ ಬಾರಿಸಿ ಮಿಂಚಿದರು. ಉಳಿದಂತೆ ಅಝ್ಮತುಲ್ಲಾ ಒಮರ್ ಝಾಯ್ ಔಟಾಗದೆ 31(28 ಎಸೆತ, 3 ಬೌಂಡರಿ), ಝದ್ರಾನ್ 20 ಹಾಗೂ ಗುರ್ಬಾಝ್ 10 ರನ್ ಗಳಿಸಿದರು.
ನೆದರ್‌ಲ್ಯಾಂಡ್ಸ್ ಪರ ಬೌಲಿಂಗ್‌ನಲ್ಲಿ ಸಾಕಿಬ್, ವ್ಯಾನ್ ಬೀಕ್, ವ್ಯಾನ್ ಡರ್ವ್ ಮರ್ವೆ ತಲಾ ಒಂದೊಂದು ವಿಕೆಟ್ ಪಡೆದುಕೊಂಡರು.
ಟಾಸ್ ಗೆದ್ದಿದ್ದ ನೆದರ್‌ಲ್ಯಾಂಡ್ಸ್
ಪಂದ್ಯದಲ್ಲಿ ಅಫ್ಘಾನ್ ವಿರುದ್ಧ ಟಾಸ್ ಗೆದ್ದಿದ್ದ ನೆದರ್‌ಲ್ಯಾಂಡ್ಸ್ ಬ್ಯಾಟಿಂಗ್ ಆಯ್ದುಕೊಂಡಿತ್ತು. ಕಠಿಣ ಗುರಿ ನೀಡಬೇಕು ಎಂಬ ಉದ್ದೇಶದಿಂದ ಬ್ಯಾಟಿಂಗ್ ಆಯ್ದುಕೊಂಡಿದ್ದ ಡಚ್ ಪಡೆ, ಅಫ್ಘಾನ್ ನ ಅದ್ಭುತ ಫೀಲ್ಡಿಂಗ್ ಗೆ ಪೆವಿಲಿಯನ್ ಸೇರಿಕೊಂಡಿತು.
ತಂಡ ನೂರೈವತ್ತು ದಾಟುವಲ್ಲಿ ಏಕಾಂಗಿ ಬ್ಯಾಟಿಂಗ್ ಪ್ರದರ್ಶಿಸಿದ್ದ ಸೈಬ್ರಾಂಡ್ ಎಂಗಲ್ ಬ್ರೆಕ್ಟ್ 6 ಬೌಂಡರಿ ಸಹಿತ 58 ರನ್ ಬಾರಿಸಿ ತಂಡದ ಪರ ಅರ್ಧಶತಕ ದಾಖಲಿಸಿದರು. ಕೊನೆಯಲ್ಲಿ 46.3 ಓವರ್‌ಗಳಲ್ಲಿ ನೆದರ್‌ಲ್ಯಾಂಡ್ಸ್ ಕೇವಲ 179 ರನ್ ಗಳಿಸಿ ಆಲೌಟ್ ಆಗಿತ್ತು.
ಅಫ್ಘಾನಿಸ್ತಾನ ಪರ ಬೌಲಿಂಗ್‌ನಲ್ಲಿ ಮುಹಮ್ಮದ್ ನಬಿ 3 ವಿಕೆಟ್ ಪಡೆದರೆ, ನೂರ್ ಅಹ್ಮದ್ 2 ಹಾಗೂ ಮುಜೀಬ್ ಉರ್ ರಹ್ಮಾನ್ 1 ಒಂದು ವಿಕೆಟ್ ಪಡೆದರು. ನಾಲ್ವರು ನೆದರ್‌ಲ್ಯಾಂಡ್ಸ್ ಆಟಗಾರರು ರನೌಟ್‌ಗೆ ಬಲಿಯಾಗಿದ್ದರು.
28 ರನ್ ನೀಡಿ ಮೂರು ವಿಕೆಟ್ ಗಳಿಸಿದ್ದ ಅಫ್ಘಾನಿಸ್ತಾನದ ಮುಹಮ್ಮದ್ ನಬಿ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
Mohammad Nabi’s economical three-wicket haul garners him the @aramco #POTM against the Netherlands 🎉#CWC23 | #NEDvAFG pic.twitter.com/fYuXkDb7nV
— ICC (@ICC) November 3, 2023