ಈ ದಿನ ಸಂಪಾದಕೀಯ | ಕಾಂತರಾಜ್‌ ವರದಿಗೆ ಬಲಿಷ್ಠರ ವಿರೋಧ ಸಾಮಾಜಿಕ ನ್ಯಾಯದ ವಿರೋಧ

Date:

ನಾಡಿನ ಸಂಪತ್ತು, ಸಂಪನ್ಮೂಲ, ಅಧಿಕಾರ, ಅವಕಾಶಗಳ ಸಿಂಹಪಾಲನ್ನು ಇಲ್ಲಿಯವರೆಗೆ ನಿರಂತರ ಅನುಭವಿಸಿಕೊಂಡು ಬಂದಿರುವ ಬಲಿಷ್ಠ ಸಮುದಾಯಗಳಿಗೆ ಸಾಮಾಜಿಕ ಶೈಕ್ಷಣಿಕ ಸಮೀಕ್ಷೆ ಅಭದ್ರತೆ ಹುಟ್ಟಿಸಿರಬಹುದು. ಅಧಿಕಾರದ ಮೇಲಿನ ಹಿಡಿತ ಸಡಿಲವಾದೀತು ಎಂಬ ಅಳುಕು ಕಾಡಿರಬಹುದು

 

- Advertisement -

ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಅಧ್ಯಕ್ಷರಾಗಿದ್ದ ಎಸ್‌ ಕಾಂತರಾಜ್‌ ನೇತೃತ್ವದ ಸಮಿತಿ  ಜಾತಿ ಜನಗಣತಿ– ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ನಡೆಸಿತ್ತು. ಈ ವರದಿ ಮಂಡನೆಗೆ ಮುಂಚೆಯೇ ಅಂದಿನ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಅವಧಿ ಪೂರ್ಣಗೊಂಡಿತ್ತು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಮೋದಿ ಆಡಳಿತದಲ್ಲಿ ಮಾಹಿತಿ ಹಕ್ಕು ಕಾಯ್ದೆಯ ‘ಸ್ಥಿತಿ’ ಹೇಗಿದೆ?...

ಯಾವುದೇ ಸರ್ಕಾರ ಆಡಳಿತದಲ್ಲಿರಲಿ ಪ್ರಜಾಸತ್ತಾತ್ಮಕ ವ್ಯವಸ್ಥೆಯನ್ನು ಕಾಪಾಡಬೇಕಾದ ಸಂಸ್ಥೆಗಳ ಸ್ವಾಯತ್ತತೆ ಉಳಿಯಬೇಕು. ಅವು ಪಾರದರ್ಶಕವಾಗಿರಬೇಕು. ಪ್ರಜಾಸತ್ತೆಯ ಕಾರ್ಯವೈಖರಿಯನ್ನು ಕುರಿತಂತೆ ಮುಕ್ತ ಚರ್ಚೆ ನಡೆಯುತ್ತಿರಬೇಕು. ಇದು ಸಕ್ರಿಯ, ಅರ್ಥಪೂರ್ಣ ಪ್ರಜಾಸತ್ತೆಯ ಕನಿಷ್ಠ ಅವಶ್ಯಕತೆ. ಹಾಗಾಗಿ...

ಬಂಗಾಳ ವಿಭಜನೆ | ವಿಭಜನೆಯ ವಿಷಬೀಜದಿಂದ ಒಗ್ಗಟ್ಟಿನ ಜ್ಯೋತಿ...

ಬ್ರಿಟಿಷರ 'ಒಡೆದು ಆಳುವ ನೀತಿ'ಯ ಭಾಗವಾಗಿ 1905ರ ಅಕ್ಟೋಬರ್‌ನಲ್ಲಿ ಜಾರಿಗೆ ಬಂದ ಬಂಗಾಳ ವಿಭಜನೆಯು ಭಾರತೀಯರ ರಾಷ್ಟ್ರೀಯತೆಯನ್ನು ಒಡೆಯುವ ಕುತಂತ್ರವಾಗಿತ್ತು. ಇದಕ್ಕೆ ಪ್ರತಿಯಾಗಿ ಭಾರತೀಯರು 'ರಾಷ್ಟ್ರೀಯ ಶೋಕ ದಿನ' ಆಚರಿಸಿ, ಪರಸ್ಪರ ರಾಖಿ...

ನಟ ಇಮ್ರಾನ್ ಖಾನ್ ಪ್ರತಿಭಟಿಸಿದರೆ ಗಡಿಪಾರು; ಟ್ರಂಪ್ ಪರ...

ಕಾನೂನು ಮತ್ತು ರಾಜತಾಂತ್ರಿಕ ನಿಯಮಗಳು ಎಲ್ಲರಿಗೂ ಒಂದೇ ಆಗಿರಬೇಕು ಹೊರತು ಪ್ರಧಾನಿ ಮೋದಿಯವರ ರಾಜಕೀಯ ಅನುಕೂಲಕ್ಕೆ ತಕ್ಕಂತೆ ಬದಲಾಗಬಾರದು. ವಿದೇಶಿ ಪ್ರಜೆಯೊಬ್ಬ ಭಾರತದ ನೆಲದಲ್ಲಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವುದು ತಪ್ಪು ಎನ್ನುವುದಾದರೆ, ಭಾರತದ ಪ್ರಧಾನಿಯೊಬ್ಬರು...

ಆ ನಂತರ ಅಧಿಕಾರ ಹಿಡಿದ ಕಾಂಗ್ರೆಸ್–ಜೆಡಿಎಸ್‌ ಸಮ್ಮಿಶ್ರ ಸರ್ಕಾರ 14 ತಿಂಗಳಲ್ಲೇ ಉರುಳಿ ಬಿತ್ತು. ಉಳಿದ ಅವಧಿಯನ್ನು ಪೂರೈಸಿದ್ದು ಬಿಜೆಪಿ ಸರ್ಕಾರ. ಈ ಎರಡೂ ಸರ್ಕಾರಗಳು ಜಾತಿಜನಗಣತಿಯ ವರದಿಯನ್ನು ಪಡೆಯುವ ಗೋಜಿಗೆ ಹೋಗಿರಲಿಲ್ಲ.

ಇದೀಗ ಪುನಃ ಅಧಿಕಾರಕ್ಕೆ ಬಂದಿರುವ ಸಿದ್ದರಾಮಯ್ಯ ಸರ್ಕಾರ ಕಾಂತರಾಜ್‌ ವರದಿಯನ್ನು ಅಂಗೀಕರಿಸುವುದಾಗಿ ಸಾರಿದೆ. ಆಯೋಗದ ಅಧ್ಯಕ್ಷ ಜಯಪ್ರಕಾಶ್‌ ಹೆಗ್ಡೆ ನವೆಂಬರ್‌ ಅಂತ್ಯದೊಳಗೆ ಪರಿಷ್ಕೃತ ವರದಿಯನ್ನು ಸರ್ಕಾರಕ್ಕೆ ಸಲ್ಲಿಸುವುದಾಗಿ ಪ್ರಕಟಿಸಿದ್ದಾರೆ. ಈ ಮಧ್ಯೆ ಬಿಹಾರದಲ್ಲಿ ಎರಡೇ ವರ್ಷಗಳಲ್ಲಿ ಜಾತಿ ಜನಗಣತಿಯನ್ನು ಪೂರ್ಣಗೊಳಿಸಿ ನಿತೀಶ್ ಕುಮಾರ್ ಸರ್ಕಾರ ಆ ವರದಿಯನ್ನು ಸ್ವೀಕರಿಸಿದ ನಂತರ ಜಾತಿ ಜನಗಣತಿಯ ಕೂಗಿಗೆ ಹೆಚ್ಚಿನ ಬಲ ಸಿಕ್ಕಿದೆ. ಖರ್ಗೆ–ರಾಹುಲ್–ಸೋನಿಯಾ ನೇತೃತ್ವದ ಕಾಂಗ್ರೆಸ್ ಪಕ್ಷ ಜಾತಿ ಜನಗಣತಿಯನ್ನು ದೊಡ್ಡ ರೀತಿಯಲ್ಲಿ ಬೆಂಬಲಿಸಿದೆ. ಕರ್ನಾಟಕದಲ್ಲಿಯೂ ಕಾಂತರಾಜ್‌ ವರದಿ ಜಾರಿಗೆ ಒತ್ತಡ ಹೆಚ್ಚಿದೆ. ಆದರೆ, ಕಾಂಗ್ರೆಸ್‌ ಸರ್ಕಾರದಲ್ಲಿರುವ ಬಲಿಷ್ಠ ಸಮುದಾಯಗಳ ನಾಯಕರೇ ವರದಿ ಬಿಡುಗಡೆಗೆ ವಿರೋಧ ವ್ಯಕ್ತಪಡಿಸುತ್ತಿರುವುದು ಆತಂಕಕಾರಿ ಬೆಳವಣಿಗೆ. ಲಿಂಗಾಯತ, ಒಕ್ಕಲಿಗ ಸಮುದಾದಯಗಳಿಗೆ ಈ ವರದಿ ಬಹಿರಂಗವಾಗುವುದು ಇಷ್ಟವಿಲ್ಲ.

ಗುರುವಾರ‌ (ನವೆಂಬರ್2 ) ರಾಜ್ಯ ಒಕ್ಕಲಿಗರ ಸಂಘ ಆದಿಚುಂಚನಗಿರಿ ಮಠದಲ್ಲಿ ಈ ಕುರಿತು ಸಭೆ ನಡೆಯಿತು. ಮೂರೂ ಮುಖ್ಯ ರಾಜಕೀಯ ಪಕ್ಷಗಳ ಒಕ್ಕಲಿಗ ಶಾಸಕರು ಸೇರಿ ಈ ವರದಿಯನ್ನು ವಿರೋಧಿಸುವ ತೀರ್ಮಾನ ಮಾಡಿದ್ದಾರೆ. ಸಭೆಯಲ್ಲಿ ನಿರ್ಮಲಾನಂದ ಸ್ವಾಮೀಜಿ, ಪಟ್ಟ ನಾಯಕನಹಳ್ಳಿ ಮಠದ ನಂಜಾವಧೂತ ಸ್ವಾಮೀಜಿ, ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಕುಮಾರ ಚಂದ್ರಶೇಖರನಾಥ ಸ್ವಾಮೀಜಿ ಜೊತೆ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್‌ ಮತ್ತು ಸಚಿವ ಚಲುವರಾಯ ಸ್ವಾಮಿ ಕೂಡಾ ಹಾಜರಿದ್ದು ಒಪ್ಪಿಗೆ ನೀಡಿರುವುದು ದುರದೃಷ್ಟಕರ ನಡವಳಿಕೆ.

ರಾಜ್ಯದಲ್ಲಿ ಕಾಂಗ್ರೆಸ್‌ ಪಕ್ಷ ಅಧಿಕಾರಕ್ಕೆ ಬರಲು ಒಕ್ಕಲಿಗರ ಮತವಷ್ಟೇ ಕಾರಣವೇ? ಉಳಿದ ಸಮುದಾಯಗಳು ಕಾಂಗ್ರೆಸ್‌ಗೆ ಮತ ಹಾಕಿಲ್ಲವೇ?  ರಾಜಕೀಯವಾಗಿ ಮತ್ತು ಸಾಮಾಜಿಕವಾಗಿ ಬಲಿಷ್ಠವಾಗಿರುವ ಜನಾಂಗಗಳ ಒತ್ತಡಕ್ಕೆ ಮಣಿದು ರಾಜ್ಯ ಸರ್ಕಾರ ಒಂದು ವೇಳೆ ಕಾಂತರಾಜ್‌ ವರದಿಯನ್ನು ತಿರಸ್ಕರಿಸುವ ತೀರ್ಮಾನಕ್ಕೆ ಬಂದರೆ ಅದು ‘ಅಹಿಂದ’ ಜನವರ್ಗಗಳಿಗೆ ಬಗೆಯುವ ಘೋರ ಅನ್ಯಾಯವಾಗಲಿದೆ.

“ವರದಿ ಸಿದ್ದಪಡಿಸುವಲ್ಲಿ ಲೋಪವಾಗಿದೆ” ಎಂದು ಸ್ವಾಮೀಜಿಗಳು ಹೇಳಿದ್ದಾರೆ. ವರದಿ ಬಿಡುಗಡೆಯಾಗದೇ ಅದರಲ್ಲಿರುವ ಲೋಪಗಳು ಯಾರಿಗಾದರೂ ಹೇಗೆ ತಿಳಿಯುತ್ತದೆ? ಅಷ್ಟೇ ಅಲ್ಲ “ಜಾತಿ ಜನಗಣತಿ ವರದಿಯನ್ನು ಅನುಷ್ಠಾನ ಮಾಡುವ ಮುನ್ನ ನಮ್ಮ ಅಭಿಪ್ರಾಯ ಕೇಳಬೇಕು” ಎಂದು ನಂಜಾವಧೂತ ಸ್ವಾಮಿಗಳು ಹೇಳಿದ್ದಾರೆ. ಅಷ್ಟಕ್ಕೂ ಸರ್ಕಾರದ ಆಡಳಿತದಲ್ಲಿ ಮೂಗು ತೂರಿಸಲು ಇವರೆಲ್ಲ ಯಾರು? ತಾವು ಧಾರ್ಮಿಕ ಮುಖಂಡರೋ ಅಥವಾ ರಾಜಕೀಯ ಮುಖಂಡರೋ ಎಂಬುದನ್ನು ಸ್ಪಷ್ಟಪಡಿಸಬೇಕು.

ನಾಡಿನ ಸಂಪತ್ತು, ಸಂಪನ್ಮೂಲ, ಅಧಿಕಾರ, ಅವಕಾಶಗಳ ಸಿಂಹಪಾಲನ್ನು ಇಲ್ಲಿಯವರೆಗೆ ನಿರಂತರ ಅನುಭವಿಸಿಕೊಂಡು ಬಂದಿರುವ ಬಲಿಷ್ಠ ಸಮುದಾಯಗಳಿಗೆ ಸಾಮಾಜಿಕ ಶೈಕ್ಷಣಿಕ ಸಮೀಕ್ಷೆ ಅಭದ್ರತೆ ಹುಟ್ಟಿಸಿರಬಹುದು. ಅಧಿಕಾರದ ಮೇಲಿನ ಹಿಡಿತ ಸಡಿಲವಾದೀತು ಎಂಬ ಅಳುಕು ಕಾಡಿರಬಹುದು. ಆದರೆ ಅಹಿಂದ ವರ್ಗಗಳು ಶತಮಾನಗಳಿಂದ ಎಲ್ಲ ಅವಕಾಶಗಳಿಂದ ವಂಚಿತರಾಗಿರುವವರು. ಬಾಯಿ ಸತ್ತ ಈ ಬಡ ಸಮುದಾಯಗಳಿಗೆ ತಮ್ಮ ಜನಸಂಖ್ಯೆಗೆ ಅನುಗುಣವಾಗಿ ಸಾಮಾಜಿಕ ರಾಜಕೀಯ ಆರ್ಥಿಕ ನ್ಯಾಯ ಸಿಗುವುದು ಯಾವ ಕಾಲಕ್ಕೆ?

ದೇಶದ ಅಹಿಂದ ವರ್ಗಗಳು ಈಗಾಗಲೇ ಮನುವಾದಿ ಫ್ಯಾಸಿಸ್ಟರ ಅಟ್ಟಹಾಸದಲ್ಲಿ ನಲುಗಿ ಹೋಗಿವೆ. ಆಳುವವರ ಕುಮ್ಮಕ್ಕಿನಿಂದ ಮೀಸಲಾತಿ ವಿರೋಧಿಗಳ ಪಡೆ ನೂರ್ಮಡಿ ಬೆಳೆಯುತ್ತಿದೆ. ಸಂವಿಧಾನವನ್ನು ಬದಲಾಯಿಸುವ ಬೆದರಿಕೆ ಬಾಗಿಲು ಬಡಿಯುತ್ತಿದೆ. ಈ ತಬ್ಬಲಿ ವರ್ಗಗಳು ದಿಕ್ಕೇ ತೋಚದ ಅಸಹಾಯಕ ಸ್ಥಿತಿ ತಲುಪಿವೆ. ಇಂತಹ ಅಂಧಕಾರದ ಸ್ಥಿತಿಯಲ್ಲಿ ಜಾತಿ ಜನಗಣತಿ ಎಂಬ ಅರೆತೆರೆದ ಆಶಾವಾದದ ಬೆಳಕಿಂಡಿಯನ್ನೂ ಮುಚ್ಚಿಹಾಕುವುದು ಪರಮ ಅನ್ಯಾಯ.

ಕಾಂಗ್ರೆಸ್‌ ಹೈ ಕಮಾಂಡ್‌ ದೇಶದಲ್ಲೆಡೆ ಜಾತಿ ಜನಗಣತಿ ಮಾಡಬೇಕು ಎಂಬ ವಾದವನ್ನು ಬಲವಾಗಿ ಮಂಡಿಸಿದೆ. ಅಧಿಕಾರಕ್ಕೆ ಬಂದರೆ ಈ ಆಶ್ವಾಸನೆಯನ್ನು ಜಾರಿಗೆ ತರುವುದಾಗಿ ರಾಹುಲ್ ಗಾಂಧಿ ವಚನ ನೀಡಿದ್ದಾರೆ. ಕಾಂತರಾಜ್ ವರದಿಯನ್ನು ಅಂಗೀಕರಿಸುವ ಸಿದ್ದರಾಮಯ್ಯ ಧೈರ್ಯದ ಮೂಲ ಇದೇ ಆಗಿದೆ. ಈ ಹಿನ್ನೆಲೆಯಲ್ಲಿ ಆದಿಚುಂಚನಗಿರಿ ಮಠದಲ್ಲಿ ನಡೆದ ಸಭೆಯ ನಿರ್ಧಾರವನ್ನು ಸಾಮಾಜಿಕ ನ್ಯಾಯಪರರು ಒಪ್ಪುವುದು ಸಾಧ್ಯವಿಲ್ಲ. ಕಾಂಗ್ರೆಸ್ ಪಕ್ಷದ ಒಕ್ಕಲಿಗ ಸಚಿವರು ಶಾಸಕರು ತಮ್ಮದೇ ಪಕ್ಷದ ಹೈಕಮಾಂಡ್ ವಿರುದ್ಧ ಬಹಿರಂಗ ಬಂಡಾಯ ಸಾರಿರುವುದು ಮಾತ್ರವಲ್ಲ, ಸಾಮಾಜಿಕ ನ್ಯಾಯವನ್ನೂ ಧಿಕ್ಕರಿಸಿದ್ದಾರೆ.

ಈ ಎಲ್ಲಾ ಅಡತಡೆಗಳನ್ನು ಮೀರಿ ಈಗಾಗಲೆ ಸಾರಿರುವ ತಮ್ಮ ನಿಲುವಿಗೆ ಬದ್ಧರಾಗಿ ವರದಿ ಅಂಗೀಕರಿಸಿ ಸಾಮಾಜಿಕ ನ್ಯಾಯ ನೀಡಿಕೆಯ ದಾರಿಯಲ್ಲಿ ಸಾಗುವ ದಿಟ್ಟತನವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ತೋರಬೇಕು. ಮುಂದೆ ಚುನಾವಣಾ ರಾಜಕೀಯದಿಂದ ವಿಮುಖರಾಗುವ ಬಗ್ಗೆ ಈಗಾಗಲೇ ನಿರ್ಧಾರ ಮಾಡಿರುವ ಅಹಿಂದ ನಾಯಕ ಈ ಐತಿಹಾಸಿಕ ಅವಕಾಶಕ್ಕೆ ಬೆನ್ನು ತಿರುಗಿಸಕೂಡದು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ | ಪ್ರಧಾನಿಗೂ ಸಿಗದ ʼಬಾರಾಖೂನ್ ಮಾಫಿʼ ಗ್ಯಾನೇಶ್ ಕುಮಾರ್‌ಗೆ ಯಾಕೆ? ಕೊಡಿಸಿದವರು ಯಾರು?

ಚುನಾವಣೆಯ ಕಾವಲುಗಾರನಿಗೆ ಕಾನೂನಿನ ಕವಚ ಕುಂಡಲಗಳನ್ನು ನೀಡಿ, ಕಾನೂನಿನ ಕೈಗಳು ಮುಟ್ಟದಂತೆ,...

ಈ ದಿನ ಸಂಪಾದಕೀಯ | ಎದ್ದು ನಿಂತ ಯುವಜನತೆ, ಹೊಸ ಬೆಳವಣಿಗೆಯತ್ತ ಭಾರತ

ಪ್ರಜಾಪ್ರಭುತ್ವವೆಂದರೆ ಕೇವಲ ಚುನಾವಣೆ, ಸರ್ಕಾರ ರಚನೆ, ಆಡಳಿತ ನಡೆಸುವುದಷ್ಟೇ ಅಲ್ಲ, ದನಿ...

ಈ ದಿನ ಸಂಪಾದಕೀಯ | ಗ್ಯಾನೇಶ್ ರಕ್ಷಣೆಗಾಗಿ ಯುವತಿಯರನ್ನು ಪೀಡಿಸುವ ಕೀಚಕರಾಗುತ್ತಿದ್ದಾರೆಯೇ ದೆಹಲಿ ಪೊಲೀಸರು?

ರಕ್ಷಕರೇ ಭಕ್ಷಕರಾಗುವ ಅದೇ ಹಳೆಯ ನಿರಾಶಾಜನಕ ಕತೆಯಿದು. ದೆಹಲಿ ಪ್ರತಿಭಟನೆಯಲ್ಲಿ ಪೊಲೀಸರ...

ಈ ದಿನ ಸಂಪಾದಕೀಯ | ಸಂಸದೀಯ ಸಮಿತಿ ಸಭೆಯಿಂದ ಸುಪ್ರೀಂ ಕೋರ್ಟ್‌ ಹಿಂದೆ ಸರಿದದ್ದು ಸ್ವಾಗತಾರ್ಹ!

ಸಂವಿಧಾನದ 143ನೇ ವಿಧಿಯಡಿ ಸಂಸದೀಯ ಸಮಿತಿಯು ಮಹತ್ವದ ಕಾನೂನು ರೂಪಿಸುವಾಗ, ಸುಪ್ರೀಂ...