ಪಂದ್ಯ 20 ಓವರ್‌ಗಳ ಟಿ20. ಗುರಿ ಇದ್ದದ್ದು 166 ರನ್. ಆದರೆ ಹೈದರಾಬಾದ್ ತಂಡ, ಈ ಗುರಿಯನ್ನು ಮುಗಿಸಿದ್ದು ಮಾತ್ರ 9.4 ಓವರ್‌ಗಳಲ್ಲಿ. ಹೌದು. ಇದನ್ನು ನೀವು ನಂಬಲೇಬೇಕು.
ಲಕ್ನೋ ವಿರುದ್ಧ ಇಂದು ನಡೆದ ಐಪಿಎಲ್ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡದ ಆರಂಭಿಕ ಆಟಗಾರರಾದ ಟ್ರಾವಿಸ್ ಹೆಡ್-ಅಭಿಷೇಕ್ ಶರ್ಮಾ ಜೋಡಿಯ ಸ್ಫೋಟಕ ಬ್ಯಾಟಿಂಗ್‌ನಿಂದಾಗಿ 20 ಓವರ್‌ಗಳ ಎರಡನೇ ಇನ್ನಿಂಗ್ಸ್ ಕೇವಲ 9.4 ಓವರ್‌ಗಳಲ್ಲಿ ಮುಗಿದಿದೆ.
WHAT. A. CHASE 🧡
A 🔟-wicket win for @SunRisers with more than 🔟 overs to spare!
Scorecard ▶️ https://t.co/46Rn0QwHfi#TATAIPL | #SRHvLSG pic.twitter.com/kOxzoKUpXK
— IndianPremierLeague (@IPL) May 8, 2024
ಹೈದರಾಬಾದ್‌ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಸ್ಟೇಡಿಯಂನಲ್ಲಿ ಇಂದು ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನ 57ನೇ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡವು 10 ವಿಕೆಟ್‌ಗಳ ಭರ್ಜರಿ ಜಯ ಗಳಿಸಿದೆ. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ್ದ ಕನ್ನಡಿಗೆ ಕೆ ಎಲ್ ರಾಹುಲ್ ನೇತೃತ್ವದ ಲಕ್ನೋ ಸೂಪರ್ ಜೈಂಟ್ಸ್ ತಂಡವು ಹೈದರಾಬಾದ್‌ಗೆ 166 ರನ್‌ಗಳ ಸಾಧಾರಣ ಮೊತ್ತದ ಗುರಿ ನೀಡಿತ್ತು.
ಹೈದರಾಬಾದ್ ಪರವಾಗಿ ಆರಂಭಿಕರಾಗಿ ಬಂದಿದ್ದ ಟ್ರಾವಿಸ್ ಹೆಡ್-ಅಭಿಷೇಕ್ ಶರ್ಮಾ ಅವರ ಸ್ಫೋಟಕ ಬ್ಯಾಟಿಂಗ್‌ನ ನೆರವಿನಿಂದ ಯಾವುದೇ ವಿಕೆಟ್ ಕಳೆದುಕೊಳ್ಳದೆ ಕೇವಲ 9.4 ಓವರ್‌ಗಳಲ್ಲಿ ಈ ಗುರಿಯನ್ನು ಮುಟ್ಟಿದೆ. ಈ ಭರ್ಜರಿ ಗೆಲುವಿನೊಂದಿಗೆ ಸನ್‌ರೈಸರ್ಸ್ ಹೈದರಾಬಾದ್ ತಂಡವು 2024ರ ಐಪಿಎಲ್ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೆ ಬಂದಿದ್ದು, ಪ್ಲೇ-ಆಫ್ ಕನಸನ್ನು ಇನ್ನೂ ಜೀವಂತವಾಗಿರಿಸಿದೆ.
Travis Head – 89* (30).
Abhishek – 75* (28).SRH CHASED DOWN 166 IN JUST 9.4 OVERS – THE CRAZIEST CHASE IN HISTORY. 🤯🔥 pic.twitter.com/XUJtmFXAwy
— Mufaddal Vohra (@mufaddal_vohra) May 8, 2024
ಇಂದಿನ ಪಂದ್ಯದಲ್ಲಿ ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿದ ಆಸ್ಟ್ರೇಲಿಯಾದ ಸ್ಫೋಟಕ ಬ್ಯಾಟರ್ ಟ್ರಾವಿಸ್ ಹೆಡ್ ಕೇವಲ 30 ಎಸೆತಗಳಲ್ಲಿ 8 ಬೌಂಡರಿ ಹಾಗೂ 8 ಭರ್ಜರಿ ಸಿಕ್ಸರ್‌ನೊಂದಿಗೆ 89 ರನ್ ಹಾಗೂ ಅಭಿಷೇಕ್ ಶರ್ಮಾ 28 ಎಸೆತಗಳಲ್ಲಿ 8 ಬೌಂಡರಿ ಹಾಗೂ 6 ಭರ್ಜರಿ ಸಿಕ್ಸರ್‌ನೊಂದಿಗೆ 75 ರನ್ ಗಳಿಸಿ, ಅಜೇಯರಾಗುಳಿದರು.
ಕೇವಲ 9.4 ಓವರ್‌ಗಳಲ್ಲಿ 166 ರನ್‌ಗಳ ಗುರಿಯನ್ನು ಬೆನ್ನಟ್ಟುವ ಮೂಲಕ ಸನ್‌ರೈಸರ್ಸ್ ಹೈದರಾಬಾದ್ ತಂಡವು ಐಪಿಎಲ್‌ನಲ್ಲಿ ಇತಿಹಾಸ ಸೃಷ್ಟಿಸಿದೆ.
SRH MOVES TO NO.3 IN THE POINTS TABLE. ⭐ pic.twitter.com/LSCwpdkjVL
— Mufaddal Vohra (@mufaddal_vohra) May 8, 2024
