ದಕ್ಷಿಣ ಆಫ್ರಿಕಾದ ವಿರುದ್ಧ ಪಾರ್ಲ್‌ನಲ್ಲಿ ನಡೆದ ಮೂರನೇ ಹಾಗೂ ಕೊನೆಯ ಏಕದಿನ ಪಂದ್ಯದಲ್ಲಿ ಸಂಜು ಸ್ಯಾಮ್ಸನ್ ಅವರ ಶತಕ ಮತ್ತು ಅರ್ಷದೀಪ್ ಸಿಂಗ್ ಅವರ ಅಮೋಘ ಬೌಲಿಂಗ್‌ನ ನೆರವಿನಿಂದ ಟೀಮ್ ಇಂಡಿಯಾವು 78 ರನ್‌ಗಳ ಭರ್ಜರಿ ಗೆಲುವು ಸಾಧಿಸಿತು. ಆ ಮೂಲಕ ಸರಣಿಯನ್ನು 2-1 ಅಂತರದಿಂದ ಗೆದ್ದುಕೊಂಡಿದೆ.
𝙒𝙄𝙉𝙉𝙀𝙍𝙎 🏆
Congratulations to the @klrahul-led side on winning the #SAvIND ODI series 2-1 👏👏#TeamIndia pic.twitter.com/QlaAVLdh6P
— BCCI (@BCCI) December 21, 2023
ಟಾಸ್ ಗೆದ್ದ ಆತಿಥೇಯ ದಕ್ಷಿಣ ಆಫ್ರಿಕಾ ತಂಡವು, ಕೆ ಎಲ್ ರಾಹುಲ್ ನೇತೃತ್ವದ ಟೀಮ್ ಇಂಡಿಯಾವನ್ನು ಬ್ಯಾಟಿಂಗ್‌ಗೆ ಇಳಿಸಿತು.
ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಸಂಜು ಸ್ಯಾಮ್ಸನ್ ಅವರ ಚೊಚ್ಚಲ ಏಕದಿನ ಶತಕ (108) ಹಾಗೂ ತಿಲಕ್ ವರ್ಮಾ ಅವರ ಅರ್ಧ ಶತಕದ ನೆರವಿನಿಂದ ತಂಡವು ನಿಗದಿತ 50 ಓವರ್‌ಗಳಲ್ಲಿ 8 ವಿಕೆಟ್‌ಗಳಿಗೆ 296 ರನ್ ಗಳಿಸುವ ಮೂಲಕ ಸವಾಲಿನ ಗುರಿಯನ್ನು ನೀಡಿತ್ತು.
ಗುರಿ ಬೆನ್ನಟ್ಟಿದ ಆತಿಥೇಯ ತಂಡವು 45.5 ಓವರ್‌ಗಳಲ್ಲಿ 218 ರನ್ ಗಳಿಸಲಷ್ಟೇ ಸಾಧ್ಯವಾಯಿತು. ಆ ಮೂಲಕ 78 ರನ್‌ಗಳಿಂದ ಸೋಲೊಪ್ಪಿಕೊಂಡಿತು. ಟೀಮ್ ಇಂಡಿಯಾದ ಎಡಗೈ ವೇಗಿ ಅರ್ಷದೀಪ್ ಸಿಂಗ್ ಅವರು ಕೇವಲ 30ಕ್ಕೆ4 ವಿಕೆಟ್ ಕಬಳಿಸಿ ಮಿಂಚಿದರು. ಇವರಿಗೆ ಆವೇಶ್ ಖಾನ್ (45ಕ್ಕೆ2) ಮತ್ತು ವಾಷಿಂಗ್ಟನ್ ಸುಂದರ್ (38ಕ್ಕೆ2) ಉತ್ತಮ ಸಾಥ್ ನೀಡಿದರು.
ದಕ್ಷಿಣ ಆಫ್ರಿಕಾ ಪರವಾಗಿ ಟೋನಿ ಡಿ ಝಾರ್ಜಿ 81 ರನ್ ಹಾಗೂ ಮಾರ್ಕರಮ್ 36 ರನ್ ಗಳಿಸಿದರು.
ಸಂಕ್ಷಿಪ್ತ ಸ್ಕೋರ್ ವಿವರ:
ನಿಗದಿತ 50 ಓವರ್‌ಗಳಲ್ಲಿ 8 ವಿಕೆಟ್‌ಗಳಿಗೆ 296
ರಜತ್ ಪಾಟೀದಾರ್ 22
ಸಂಜು ಸ್ಯಾಮ್ಸನ್ 108
ಕೆ.ಎಲ್. ರಾಹುಲ್ 21
ತಿಲಕ್ ವರ್ಮಾ 52
ರಿಂಕು ಸಿಂಗ್ 38
ಆಫ್ರಿಕಾ ಬೌಲಿಂಗ್:
ನಾಂದ್ರೆ ಬರ್ಗರ್ 64ಕ್ಕೆ 2
ಬೆರನ್ ಹೆನ್ರಿಕ್ಸ್ 63ಕ್ಕೆ 3
ದಕ್ಷಿಣ ಆಫ್ರಿಕಾ:
45.5 ಓವರ್‌ಗಳಲ್ಲಿ 218
ಟೋನಿ ಡಿ ಝಾರ್ಜಿ 81
ಏಡನ್ ಮಾರ್ಕರಂ 36
ಹೆನ್ರಿಚ್ ಕ್ಲಾಸೆನ್ 21
ಟೀಮ್ ಇಂಡಿಯಾ ಬೌಲಿಂಗ್:
ಅರ್ಷದೀಪ್ ಸಿಂಗ್ 30ಕ್ಕೆ 4, ಆವೇಶ್ ಖಾನ್ 45ಕ್ಕೆ 2, ವಾಷಿಂಗ್ಟನ್ ಸುಂದರ್ 38ಕ್ಕೆ 2
ಫಲಿತಾಂಶ:
ಭಾರತಕ್ಕೆ 78 ರನ್‌ಗಳ ಜಯ 2-1ರಿಂದ ಸರಣಿ ಗೆಲುವು