ಭಾರತದ ಮಹಿಳಾ ಕುಸ್ತಿಪಟು ವಿನೇಶ್ ಫೋಗಟ್ ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಇತಿಹಾಸ ಸೃಷ್ಟಿಸಿದ್ದಾರೆ. ವಿಶ್ವದ ನಂ.1 ಆಟಗಾರ್ತಿ ಜಪಾನ್ನ ಜಪಾನಿನ ಯುಯಿ ಸುಸಾಕಿಯನ್ನು ಸೋಲಿಸಿ, ಸೆಮಿಫೈನಲ್ ಪ್ರವೇಶಿಸಿದ್ದ ಫೋಗಟ್, ಸೆಮಿಫೈನಲ್ನಲ್ಲೂ ಗೆಲುವು ಸಾಧಿಸುವ ಮೂಲಕ ಫೈನಲ್ ತಲುಪಿದ್ದಾರೆ.
ಆ ಮೂಲಕ ಒಲಿಂಪಿಕ್ಸ್ ಕುಸ್ತಿ ಫೈನಲ್ ತಲುಪಿದ ಮೊದಲ ಭಾರತೀಯ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
वाह विनेश फोगाट
— Ajit Anjum (@ajitanjum) August 6, 2024
पहुंच गई फाइनल में
मार किया मैदान @Phogat_Vinesh pic.twitter.com/V5XLlbtXx7
ಒಲಿಂಪಿಕ್ಸ್ 2024 ರಲ್ಲಿ ಭಾರತಕ್ಕೆ 4ನೇ ಪದಕ ಖಚಿತವಾಗಿದ್ದು, ಮಹಿಳೆಯರ 50 ಕೆಜಿ ಫ್ರೀಸ್ಟೈಲ್ ಕುಸ್ತಿಯಲ್ಲಿ ಕ್ಯೂಬಾದ ಯುಸ್ನಿಲಿಸ್ ಲೋಪೆಝ್ ಅವರನ್ನು ಸೋಲಿಸಿ, ಇತಿಹಾಸ ಸೃಷ್ಟಿಸಿದ್ದಾರೆ.
ಒಲಿಂಪಿಕ್ಸ್ ಕುಸ್ತಿ ಫೈನಲ್ ತಲುಪಿದ ಮೊದಲ ಭಾರತೀಯ ಮಹಿಳೆ ಹಾಗೂ ಕೇವಲ ಎರಡನೇ ಭಾರತೀಯ ಕುಸ್ತಿಪಟು ವೀನೇಶ್ ಆಗಿದ್ದು, ಚಿನ್ನಕ್ಕಾಗಿ ನಾಳೆ ಸೆಣಸಾಡಲಿದ್ದಾರೆ. ಈ ಹಿಂದೆ ಪುರುಷರ ಕುಸ್ತಿಯಲ್ಲಿ ಸುಶೀಲ್ ಕುಮಾರ್ ಫೈನಲ್ ತಲುಪಿದ್ದರು.
Glory is for those who endear and dare! 💪
— JioCinema (@JioCinema) August 6, 2024
Vinesh Phogat is on her way to the wrestling finals of #Paris2024! 😍
Keep watching the Olympic action LIVE on #Sports18 & stream for FREE on #JioCinema👈#OlympicsonJioCinema #OlympicsonSports18 #Olympics #Wrestling #VineshPhogat pic.twitter.com/paVvSFfOEm
ಆಗಸ್ಟ್ 7 ರಂದು ಫೈನಲ್ನಲ್ಲಿ ಒಟ್ಗೊಂಜಾರ್ಗಲ್ ಡೊಲ್ಗೊರ್ಜಾವ್ ಅಥವಾ ಸಾರಾ ಆನ್ ಹಿಲ್ಡೆಬ್ರಾಂಡ್ ಅವರನ್ನು ಎದುರಿಸಲಿದ್ದಾರೆ.
