ತಾನು ನೀಡಿದ್ದ 200 ರನ್‌ಗಳ ಗುರಿಯನ್ನು ಬೆನ್ನತ್ತಿರುವ ಟೀಮ್ ಇಂಡಿಯಾಗೆ ಆರಂಭದಲ್ಲೇ ಆಘಾತ ನೀಡಿರುವ ಆಸಿಸ್ ಬೌಲರ್‌ಗಳು ಪ್ರಮುಖ ಮೂರು ವಿಕೆಟ್‌ಗಳನ್ನು ಕಿತ್ತಿದ್ದಾರೆ.
ಮೊದಲ ಓವರ್‌ನಲ್ಲಿ ಇಶಾನ್ ಕಿಶನ್ ಔಟಾದರೆ, ಎರಡನೇ ಓವರ್‌ನಲ್ಲಿ ನಾಯಕ ರೋಹಿತ್ ಶರ್ಮಾ ಎಲ್‌ಬಿಡಬ್ಲ್ಯೂ ಬಲೆಗೆ ಬಿದ್ದಿದ್ದು, ಬಳಿಕ ಕ್ರೀಸ್‌ಗೆ ಬಂದ ಶ್ರೇಯಸ್ ಅಯ್ಯರ್ ಕ್ಯಾಚಿತ್ತು ನಿರ್ಗಮಿಸಿದ್ದಾರೆ. ಮೂವರು ಕೂಡ ಶೂನ್ಯ ಸುತ್ತಿದ್ದಾರೆ.
Rohit Sharma dismissed for a duck in 6 balls.
India 2/2 now…!!! pic.twitter.com/HOlqcHFAb8
— Mufaddal Vohra (@mufaddal_vohra) October 8, 2023
ಭಾರತ ಮೂರು ಓವರ್ ಮುಕ್ತಾಯದ ವೇಳೆ 5 ರನ್ ಗಳಿಸುವಷ್ಟರಲ್ಲೇ ಪ್ರಮುಖ ಮೂರು ವಿಕೆಟ್ ಕಳೆದುಕೊಂಡಿದೆ.
ಮಿಚೆಲ್ ಸ್ಟಾರ್ಕ್ ಇಶಾನ್ ಕಿಶನ್ ವಿಕೆಟ್ ಪಡೆದರೆ, ಹ್ಯಾಝಲ್‌ವುಡ್ ಒಂದೇ ಓವರ್‌ನಲ್ಲಿ ರೋಹಿತ್ ಶರ್ಮಾ ಹಾಗೂ ಶ್ರೇಯಸ್ ಅಯ್ಯರ್ ವಿಕೆಟ್ ಕಿತ್ತು, ಆರಂಭಿಕ ಆಘಾತ ನೀಡಿದ್ದಾರೆ. ಸದ್ಯ ಕ್ರೀಸ್‌ನಲ್ಲಿ ವಿರಾಟ್ ಕೊಹ್ಲಿ ಹಾಗೂ ಕೆ ಎಲ್ ರಾಹುಲ್ ಬ್ಯಾಟಿಂಗ್ ನಡೆಸುತ್ತಿದ್ದಾರೆ.