ಮುಂದಿನ ಜುಲೈ 26ರಿಂದ ಪ್ಯಾರಿಸ್‌ನಲ್ಲಿ ನಡೆಯಲಿರುವ ಒಲಿಂಪಿಕ್ಸ್‌ಗೆ ಕಿರ್ಗಿಸ್ತಾನದ ಬಿಷ್ಕೆಕ್‌ನಲ್ಲಿ ಏಷ್ಯನ್ ಅರ್ಹತಾ ಸುತ್ತಿನ ಪಂದ್ಯಾವಳಿಗಳು ನಡೆಯುತ್ತಿದ್ದು, ಮಹಿಳೆಯರ ಕುಸ್ತಿಯ ವಿಭಾಗದಲ್ಲಿ ಭಾರತೀಯ ಕುಸ್ತಿಪಟುಗಳಾದ ವಿನೇಶ್ ಪೊಗಾಟ್ ಸೇರಿದಂತೆ ನಾಲ್ವರು ಅರ್ಹತೆಯ ಹಾದಿಯಲ್ಲಿದ್ದಾರೆ.
ಭಾರತದ ಮಹಿಳಾ ಕುಸ್ತಿಪಟುಗಳಾದ ವಿನೇಶ್ ಪೊಗಾಟ್, ಅಂಶು ಮಲಿಕ್, ರೀತಿಕಾ ಮತ್ತು ಮಾನ್ಸಿ ಅವರು ಕಿರ್ಗಿಸ್ತಾನ್‌ನ ಬಿಶ್ಕೆಕ್‌ನಲ್ಲಿ ಇಂದು ನಡೆದ ಏಷ್ಯನ್ ಒಲಿಂಪಿಕ್ ಗೇಮ್ ಕ್ವಾಲಿಫೈಯರ್‌ನ ಸೆಮಿಫೈನಲ್‌ಗೆ ತಲುಪಿದ್ದಾರೆ.
ವಿನೇಶ್ ಪೊಗಾಟ್ ತನ್ನ ಕಾಂಬೋಡಿಯಾದ ಪ್ರತಿಸ್ಪರ್ಧಿ ಸ್ಮಾನಂಗ್ ಡಿಟ್ ಅನ್ನು ಸುಲಭವಾಗಿ ಸೋಲಿಸಿದರೆ, 2021 ರ ವಿಶ್ವ ಚಾಂಪಿಯನ್‌ಶಿಪ್ ಬೆಳ್ಳಿ ಪದಕ ವಿಜೇತೆ ಅಂಶು ಮಲಿಕ್ ಕಿರ್ಗಿಸ್ತಾನ್‌ನ ಕಲ್ಮಿರಾ ಬಿಲಿಂಬೆಕೋವಾ ಅವರನ್ನು ‘ಟೆಕ್ನಿಕಲ್ ಸುಪೀರಿಯಾರಿಟಿ’ ಆಧಾರದ ಮೇಲೆ ಸೋಲಿಸಿದರು.
Indian women wrestlers Vinesh Phogat, Anshu Malik, Reetika, and Mansi have advanced to the semifinals of the Asian Olympic Game Qualifier at #Bishkek in #Kyrgyzstan.
Vinesh easily defeated her Cambodian rival Smanang Dit, while the 2021 World Championship silver medalist, Anshu… pic.twitter.com/ohmdkoheVn
— IndSamachar News (@Indsamachar) April 20, 2024
23 ವರ್ಷದೊಳಗಿನವರ ಕುಸ್ತಿಯಲ್ಲಿ U23 ವಿಶ್ವ ಚಾಂಪಿಯನ್ ರೀತಿಕಾ ತಮ್ಮ ಎದುರಾಳಿ ಚೀನಾದ ಜುವಾಂಗ್ ವಾಂಗ್ ಅವರನ್ನು ಸೋಲಿಸಿದರು. ಕಜಕಿಸ್ತಾನದ ಐರಿನಾ ಕುಜ್ನೆಟ್ಸೊವಾ ವಿರುದ್ಧ ಗೆಲ್ಲುವ ಮೂಲಕ ಮಾನ್ಸಿಯವರು ಕೊನೆಯ ನಾಲ್ಕರಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದರು.
68 ಕೆಜಿ ವಿಭಾಗದಲ್ಲಿ ಸ್ಪರ್ಧಿಸಿದ್ದ ಏಕೈಕ ಭಾರತೀಯ ಕುಸ್ತಿಪಟು ನಿಶಾ ದಹಿಯಾ, ಸೆಮಿಫೈನಲ್ ತಲುಪಲು ಸಾಧ್ಯವಾಗಲಿಲ್ಲ. ಗೆಲ್ಲಲೇಬೇಕಾಗಿದ್ದ ಮೂರನೇ ಸುತ್ತಿನಲ್ಲಿ ನಿಶಾ, ಕಝಾಕಿಸ್ತಾನ್‌ನ ಯೆಲೆನಾ ಶಾಲಿಗಿನಾ ಅವರನ್ನು ಸೋಲಿಸಿದರು. ಆದರೆ ಅಗ್ರ-ನಾಲ್ಕರಲ್ಲಿ ಉಳಿಯಲು ಸಾಕಷ್ಟು ಅಂಕಗಳನ್ನು ಹೊಂದಿರಲಿಲ್ಲ.
‘ನನ್ನನ್ನು ಡೋಪಿಂಗ್ ಪ್ರಕರಣದಲ್ಲಿ ಸಿಲುಕಿಸಲು ಯತ್ನ ನಡೆದಿದೆ’ ಎಂದು ಆರೋಪಿಸಿದ್ದ ವಿನೇಶ್ ಪೊಗಾಟ್
ಭಾರತೀಯ ಕುಸ್ತಿ ಫೆಡರೇಶನ್ ಅಧ್ಯಕ್ಷ ಸಂಜಯ್ ಸಿಂಗ್ ಅವರು ಒಲಿಂಪಿಕ್ಸ್‌ನಲ್ಲಿ ಆಡುವುದನ್ನು ತಡೆಯಲು ಬಯಸುತ್ತಿದ್ದಾರೆ. ಅಲ್ಲದೆ ಅವರು ತನ್ನ ವಿರುದ್ಧ ಡೋಪಿಂಗ್ ಪಿತೂರಿ ಮಾಡುವ ಸಾಧ್ಯತೆಗಳಿವೆ ಎಂದು ವಿಶ್ವ ಚಾಂಪಿಯನ್‌ಶಿಪ್ ಪದಕ ವಿಜೇತೆ ವಿನೇಶ್ ಪೊಗಾಟ್ ಗಂಭೀರ ಆರೋಪ ಮಾಡಿದ್ದರು.
19th अप्रैल को एशियन ओलम्पिक क्वालीफाई टूर्नामेंट शुरू होने जा रहा है। मेरे द्वारा लगातार एक महीने से भारत सरकार (SAI,TOPS) सभी से मेरे कोच और फिजियो की ACCREDITATION (मान्यता) के लिए रिक्वेस्ट की जा रही है। ACCREDITATION के बिना मेरे कोच और फिजियो का मेरे साथ कम्पटीशन ARENA में…
— Vinesh Phogat (@Phogat_Vinesh) April 12, 2024
29ರ ಹರೆಯದ ವಿನೇಶ್ 2019 ಮತ್ತು 2022ರ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ 53 ಕೆಜಿ ವಿಭಾಗದಲ್ಲಿ ಕಂಚು ಮತ್ತು 2018ರ ಏಷ್ಯನ್ ಗೇಮ್ಸ್‌ನಲ್ಲಿ 50 ಕೆಜಿ ವಿಭಾಗದಲ್ಲಿ ಚಿನ್ನದ ಪದಕ ಗೆದ್ದಿದ್ದರು.
“ಭಾರತೀಯ ಕುಸ್ತಿ ಫೆಡರೇಶನ್ ಮಾಜಿ ಅಧ್ಯಕ್ಷ ಬ್ರಿಜ್ ಭೂಷಣ್ ಅವರ ಆಪ್ತ ಸಂಜಯ್ ಸಿಂಗ್ ಅವರು ನನ್ನನ್ನು ಒಲಿಂಪಿಕ್ಸ್‌ನಲ್ಲಿ ಆಡದಂತೆ ತಡೆಯಲು ಸಾಧ್ಯವಿರುವ ಎಲ್ಲ ರೀತಿಯ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ತಂಡದೊಂದಿಗೆ ನೇಮಕಗೊಂಡಿರುವ ತರಬೇತುದಾರರು ಬ್ರಿಜ್ ಭೂಷಣ್ ಮತ್ತು ಅವರ ತಂಡಕ್ಕೆ ಅಚ್ಚುಮೆಚ್ಚಿನವರು, ಆದ್ದರಿಂದ ಅವರು ನನ್ನ ನೀರಿನಲ್ಲಿ ಏನನ್ನಾದರೂ ಬೆರೆಸಿ ನನ್ನ ಪಂದ್ಯದ ಸಮಯದಲ್ಲಿ ಅದನ್ನು ಕುಡಿಯುವಂತೆ ಮಾಡುತ್ತಾರೆ ಎಂಬುದನ್ನು ಅಲ್ಲಗಳೆಯುವಂತಿಲ್ಲ. ನನ್ನನ್ನು ಡೋಪ್‌ನಲ್ಲಿ ಸಿಲುಕಿಸಲು ಸಂಚು ನಡೆದಿರಬಹುದು ಎಂದು ನಾನು ಹೇಳಿದರೆ ಅದು ತಪ್ಪಾಗುವುದಿಲ್ಲ. ನಮ್ಮನ್ನು ಮಾನಸಿಕವಾಗಿ ಹಿಂಸಿಸಲು ಯಾವುದೇ ದಾರಿಯನ್ನು ಬಿಡುತ್ತಿಲ್ಲ. ಇಂತಹ ಮಹತ್ವದ ಸ್ಪರ್ಧೆಗೆ ಮುನ್ನ ನಮ್ಮ ವಿರುದ್ಧದ ಇಂತಹ ಮಾನಸಿಕ ಕಿರುಕುಳ ಎಷ್ಟರ ಮಟ್ಟಿಗೆ ಸರಿ?” ಎಂದು ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದರು.
