ಬೆಂಗಳೂರು | ನೀರಿನ ಕೊರತೆ, ಬಿಸಿಗಾಳಿ ನಡುವೆ ಟೈಫಾಯಿಡ್, ಗ್ಯಾಸ್ಟ್ರೋಎಂಟರೈಟಿಸ್ ಪ್ರಕರಣಗಳಲ್ಲಿ ಏರಿಕೆ

Date:

Advertisements

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಸದ್ಯ ತಾಪಮಾನ ಹೆಚ್ಚಳವಾಗಿದ್ದು, ಬರೋಬ್ಬರಿ 38 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ಜನರು ಬಿಸಿಲಿನ ಬೇಗೆಗೆ ಕಂಗಾಲಾಗಿದ್ದಾರೆ. ನೀರಿನ ಸಮಸ್ಯೆಯ ನಡುವೆ ನಗರದಲ್ಲಿ ಸೋಂಕು ಹರಡುವಿಕೆ ಹೆಚ್ಚಳವಾಗುತ್ತಿದೆ. ಟೈಫಾಯಿಡ್, ತೀವ್ರವಾದ ಜಠರ ಕರುಳಿನ ಉರಿಯೂತ ಅಥವಾ ಗ್ಯಾಸ್ಟ್ರೋಎಂಟರೈಟಿಸ್ ಪ್ರಕರಣಗಳಲ್ಲಿ ಏರಿಕೆ ಕಂಡುಬಂದಿದೆ ಎಂದು ಖಾಸಗಿ ಆಸ್ಪತ್ರೆಗಳ ಮೂಲಗಳು ತಿಳಿಸಿವೆ.

ನೀರಿನಿಂದ ಟೈಫಾಯಿಡ್ ಹರಡುತ್ತದೆ. ಕಲುಷಿತ ನೀರು ಹಾಗೂ ಆಹಾರದಿಂದ ಜಠರ ಹಾಗೂ ಕರುಳು ಸಂಬಂಧಿತ ಸಮಸ್ಯೆಗಳು ಹರಡುತ್ತವೆ ಎಂದು ಆರೋಗ್ಯ ತಜ್ಞರು ಹೇಳಿದ್ದಾರೆ. ಜ್ವರ, ಹೊಟ್ಟೆ ನೋವು ಹಾಗೂ ಅತಿಸಾರ ಈ ಸೋಂಕುಗಳ ಸಾಮಾನ್ಯ ಲಕ್ಷಣಗಳಾಗಿವೆ.

ತಾಪಮಾನವು ಗರಿಷ್ಠ 38.5 ಡಿಗ್ರಿ ಸೆಲ್ಸಿಯಸ್‌ಗೆ ತಲುಪಿದೆ. ಬೆಂಗಳೂರಿನಲ್ಲಿ ಬಿಸಿಗಾಳಿ ಹೆಚ್ಚಳವಾಗಿದೆ. ಹಾಗೆಯೇ, ನೀರಿನ ಕೊರತೆಯನ್ನು ಎದುರಿಸುತ್ತಿದೆ. ನಗರದ ಖಾಸಗಿ ಆಸ್ಪತ್ರೆಗಳಲ್ಲಿ ಟೈಫಾಯಿಡ್ ಮತ್ತು ಗ್ಯಾಸ್ಟ್ರೋಎಂಟರೈಟಿಸ್ ಪ್ರಕರಣಗಳ ದಾಖಲೆ ಪ್ರಮಾಣದಲ್ಲಿ ಗಮನಾರ್ಹ ಏರಿಕೆ ಕಾಣುತ್ತಿವೆ.

Advertisements

“ಟೈಫಾಯಿಡ್ ಪ್ರಾಥಮಿಕವಾಗಿ ನೀರಿನಿಂದ ಹರಡುತ್ತದೆ. ಆದರೆ, ತೀವ್ರವಾದ ಜಠರದ ಉರಿತವು ಕಲುಷಿತ ನೀರು, ಆಹಾರದಿಂದ ಹರಡುತ್ತದೆ” ಎಂದು ಆರೋಗ್ಯ ತಜ್ಞರು ಹೇಳಿದ್ದಾರೆ.

ಫೋರ್ಟಿಸ್ ಆಸ್ಪತ್ರೆಯ ಇಂಟರ್ನಲ್ ಮೆಡಿಸಿನ್ ನಿರ್ದೇಶಕಿ ಡಾ ಶೀಲಾ ಮುರಳಿ ಚಕ್ರವರ್ತಿ ಮಾತನಾಡಿ, “ಟೈಫಾಯಿಡ್ ಮತ್ತು ತೀವ್ರವಾದ ಗ್ಯಾಸ್ಟ್ರೋಎಂಟರೈಟಿಸ್‌ನಲ್ಲಿ ಈ ಗಮನಾರ್ಹ ಹೆಚ್ಚಳವು ನೀರಿನ ಕೊರತೆ ಅಥವಾ ಮಾಲಿನ್ಯದ ಕಾರಣದಿಂದಾಗಿರಬಹುದು. ಸಾಮಾನ್ಯ ರೋಗಲಕ್ಷಣಗಳಲ್ಲಿ ಜ್ವರ, ಹೊಟ್ಟೆ ನೋವು ಮತ್ತು ಅತಿಸಾರ ರೋಗದ ಲಕ್ಷಣಗಳಾಗಿವೆ. ಕಳೆದ ತಿಂಗಳಲ್ಲಿ ಸುಮಾರು 100 ರೋಗಿಗಳಿಗೆ ಚಿಕಿತ್ಸೆ ನೀಡಲಾಗಿದೆ. ಈ ಮೊದಲು ತಿಂಗಳಿಗೆ ಸರಾಸರಿ ಇಬ್ಬರು ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿತ್ತು” ಎಂದಿದ್ದಾರೆ.

“ಸೋಂಕು ಹರಡದಂತೆ ತಡೆಗಟ್ಟಲು, ರೋಗಪೀಡಿತ ಜನರಿರುವ ಪ್ರದೇಶಗಳಿಗೆ ಪ್ರಯಾಣಿಸುವ ಜನರು ಟೈಫಾಯಿಡ್ ಲಸಿಕೆಯನ್ನು ತೆಗೆದುಕೊಳ್ಳುವುದು ಉತ್ತಮ. ಶುದ್ಧ ಕುಡಿಯುವ ನೀರನ್ನೇ ಬಳಕೆ ಮಾಡಬೇಕು. ಉತ್ತಮ ನೈರ್ಮಲ್ಯವನ್ನು ಕಾಪಾಡಿಕೊಳ್ಳಬೇಕು. ಸೋಂಕುಗಳನ್ನು ತಡೆಗಟ್ಟಲು ಕಲುಷಿತ ಆಹಾರವನ್ನು ಸೇವಿಸುವುದನ್ನು ತಡೆಯಿರಿ” ಎಂದು ಡಾ ಶೀಲಾ ತಿಳಿಸಿದ್ದಾರೆ.

ನಾರಾಯಣ ಹೆಲ್ತ್ ಸಿಟಿಯ ಇಂಟರ್ನಲ್ ಮೆಡಿಸಿನ್‌ನ ಸಲಹೆಗಾರ ಡಾ ನಿಧಿನ್ ಮೋಹನ್ ಮಾತನಾಡಿ, “ವೈರಲ್ ಮತ್ತು ಬ್ಯಾಕ್ಟೀರಿಯಾದ ಸೋಂಕಿನಿಂದ ಜಠರಗರುಳಿನ ಪ್ರಕರಣಗಳು ಉಲ್ಬಣವಾಗಬಹುದು. ಆಸ್ಪತ್ರೆಯಲ್ಲಿ ವಾರಕ್ಕೊಮ್ಮೆ ಜಠರಗರುಳಿನ ಸೋಂಕಿನ 20 ಪ್ರಕರಣಗಳು ಬರುತ್ತಿವೆ. ಇದು ಡಿಸೆಂಬರ್‌ಗೆ ಹೋಲಿಸಿದರೆ ಕನಿಷ್ಠ 50% ಹೆಚ್ಚು. ಈ ಸಮಸ್ಯೆಗಳನ್ನು ಕಲುಷಿತ ನೀರು ಮತ್ತು ಬೇಯಿಸಿದ ಮಾಂಸಾಹಾರಿ ಆಹಾರದಿಂದ ಕಂಡುಹಿಡಿಯಬಹುದು. ವಿಶೇಷವಾಗಿ ಬಿಸಿ ವಾತಾವರಣದಲ್ಲಿ ದುರ್ಬಲವಾಗಿರುತ್ತದೆ. ಒಂದು ವಾರದಲ್ಲಿ ಕನಿಷ್ಠ ಎರಡು ಅಥವಾ ಮೂರು ಟೈಫಾಯಿಡ್ ಪ್ರಕರಣಗಳು ವರದಿಯಾಗುತ್ತವೆ” ಎಂದು ಹೇಳಿದ್ದಾರೆ.

ಈ ಸುದ್ದಿ ಓದಿದ್ದೀರಾ? ತಾಪಮಾನ ಹೆಚ್ಚಳ | ಎಳನೀರು, ಹಣ್ಣಿನ ರಸಗಳಿಗೆ ಹೆಚ್ಚಿದ ಬೇಡಿಕೆ; ಬೆಲೆಯೂ ಏರಿಕೆ

“ನಿರ್ಜಲೀಕರಣ ಮತ್ತು ಆಲಸ್ಯದಂತಹ ರೋಗಲಕ್ಷಣಗಳಿಗೆ ತ್ವರಿತ ವೈದ್ಯಕೀಯ ಆರೈಕೆಯ ಅಗತ್ಯವಿರುತ್ತದೆ, ಅಪಾಯಗಳನ್ನು ಕಡಿಮೆ ಮಾಡಲು, ಜನರು ಮಾಂಸಾಹಾರಿ ಊಟವನ್ನು ಸಂಪೂರ್ಣವಾಗಿ ಬೇಯಿಸಬೇಕು. ಶುದ್ಧ ಕುಡಿಯುವ ನೀರಿನ ಬಳಕೆಗೆ ಆದ್ಯತೆ ನೀಡಬೇಕು” ಎಂದು ಡಾ ಮೋಹನ್ ಹೇಳಿದ್ದಾರೆ.

ಖಾಸಗಿ ಆಸ್ಪತ್ರೆಗಳಲ್ಲಿ ಸೋಂಕಿನ ಪ್ರಕರಣಗಳು ಏರಿಕೆ ಕಾಣುತ್ತಿವೆ. ಆದರೆ, ಕೆಲವು ಸರ್ಕಾರಿ ಆಸ್ಪತ್ರೆಗಳಲ್ಲಿ ಸೋಂಕಿನ ಪ್ರಕರಣಗಳ ಯಾವುದೇ ಗಮನಾರ್ಹ ಏರಿಕೆಯನ್ನು ವರದಿ ಮಾಡಿಲ್ಲ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಯಾದಗಿರಿ | ಅತಿವೃಷ್ಟಿಯಿಂದ ಬೆಳೆ ಹಾನಿ: ರೈತರಿಗೆ ಪರಿಹಾರ ನೀಡುವಂತೆ ಆಗ್ರಹ

ಯಾದಗಿರಿ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಬೆಳೆ ಹಾನಿದ ರೈತರಿಗೆ ಸಮೀಕ್ಷೆ ನಡೆಸಿ ಶೀಘ್ರದಲ್ಲಿ...

ಗುಬ್ಬಿ | ಜನಪದ ಸಾಹಿತ್ಯ ಎಂದೆಂದಿಗೂ ಜೀವಂತ : ಡಾ.ಮೂರ್ತಿ ತಿಮ್ಮನಹಳ್ಳಿ

ಕನ್ನಡ ಸಾಹಿತ್ಯ ಲೋಕದಲ್ಲಿ ಹಲವು ಪ್ರಕಾರಗಳ ಪೈಕಿ ಜನಪದ ಸಾಹಿತ್ಯ...

ಉಡುಪಿ | ಮಹೇಶ್‌ ಶೆಟ್ಟಿ ತಿಮರೋಡಿ ಬೆಂಬಲಿಗರ ಕಾರು ಪೊಲೀಸ್‌ ಅಧೀಕ್ಷರಕ ಕಾರಿಗೆ ಡಿಕ್ಕಿ !

ಬೆಳ್ತಂಗಡಿಯ ಸೌಜನ್ಯ ಪರ ಹೋರಾಟಗಾರ ಮಹೇಶ್‌ ಶೆಟ್ಟಿ ತಿಮರೋಡಿಯವರನ್ನು ಬ್ರಹ್ಮಾವರ ಪೊಲೀಸ್...

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

Download Eedina App Android / iOS

X