ಧಾರವಾಡ | ಜೋಶಿ ಗೆಲುವಿಗೆ ಸವಾಲುಗಳ ಸಾಲು; ತಡೆಗೋಡೆಯಾಗಿರುವ ಲಿಂಗಾಯತ ಸ್ವಾಮೀಜಿ

Date:

ರಾಜ್ಯದಲ್ಲಿ ಒಂದು ಹಂತದ ಮತದಾನ ಮುಗಿದಿದ್ದು, ಇನ್ನುಳಿದ 14 ಸ್ಥಾನಗಳಿಗೆ ಮೇ 7ರಂದು ಮತದಾನ ನಡೆಯಲಿದೆ. ಉತ್ತರ ಕರ್ನಾಟಕದ ಉರಿ ಬಿಸಿಲಿನ ನಡುವೆ ಚುನಾವಣಾ ಪ್ರಚಾರಗಳು ನಡೆಯುತ್ತಿವೆ. ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ 5ನೇ ಗೆಲುವಿಗಾಗಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಭಾರೀ ಕಸರತ್ತು ನಡೆಸುತ್ತಿದ್ದಾರೆ. ಆದರೆ, ಅವರಿಗೆ ಅಧಿಕಾರ ವಿರೋಧಿ ಅಲೆ ಮತ್ತು ಕಾಂಗ್ರೆಸ್‌ನ ಗ್ಯಾರಂಟಿಗಳು ಸವಾಲಾಗಿ ನಿಂತಿವೆ. ಮಾತ್ರವಲ್ಲದೆ, ಲಿಂಗಾಯತರ ಮತಗಳೂ ಈ ಬಾರಿ ಬಿಜೆಪಿಗೆ ಅನಿಶ್ಚಿತವಾಗಿ ಉಳಿದಿವೆ.

ಜೋಶಿ ಅವರ ಗೆಲುವಿನ ಓಟಕ್ಕೆ ಬೇಕ್‌ ಹಾಕಲು ಕಾಂಗ್ರೆಸ್ ಒಬಿಸಿ (ಕುರುಬ) ಸಮುದಾಯದ ಪ್ರಮುಖ ಮುಖಂಡ ವಿನೋದ್ ಅಸೂಟಿ ಅವರನ್ನು ಕಣಕ್ಕಿಳಿಸಿದೆ. ನವಲಗುಂದ ಕ್ಷೇತ್ರದಲ್ಲಿ ತನ್ನದೇ ವರ್ಚಸ್ಸು ಹೊಂದಿರುವ ಅಸೂಟಿ ಅಹಿಂದ (ಅಲ್ಪಸಂಖ್ಯಾತರು, ಹಿಂದುಳಿದವರು ಮತ್ತು ದಲಿತರು) ಮತಗಳನ್ನು ಒಗ್ಗೂಡಿಸಿ ಜೋಶಿ ಪ್ರಾಬಲ್ಯಕ್ಕೆ ಸವಾಲು ಹಾಕುತ್ತಿದ್ದಾರೆ.

ಲಿಂಗಾಯತೇತರ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಮೂಲಕ ಬಿಜೆಪಿಯ ಗೆಲುವಿಗೆ ಕಾಂಗ್ರೆಸ್‌ ಸವಾಲು ಒಡ್ಡುತ್ತಿರುವುದು ಕಳೆದ 25 ವರ್ಷಗಳಲ್ಲಿ ಇದೇ ಮೊದಲು. ಇದು, ಬಿಜೆಪಿ ಪರವಾಗಿರುವ ಬ್ರಾಹ್ಮಣರು ಮತ್ತು ಲಿಂಗಾಯತರ ಭಾವನೆಗಳನ್ನು ಒಡೆಯುವಲ್ಲಿ ಪ್ರಮುಖ ಪ್ರಯತ್ನವಾಗಿದೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಬ್ರಾಹ್ಮಣ ಸಮುದಾಯಕ್ಕೆ ಸೇರಿದ್ದ ಜೋಶಿ ಅವರನ್ನು ಕಳೆದ 20 ವರ್ಷಗಳಿಂದ ಲಿಂಗಾಯತರು ಬೆಂಬಲಿಸಿದ್ದಾರೆ. ಆದರೆ, ಈಗ ಜೋಶಿ ಅವರಿಗೆ ಶಿರಹಟ್ಟಿಯ ಭಾವೈಕ್ಯತಾ ಪೀಠದ ಲಿಂಗಾಯತ ಧರ್ಮಗುರು ದಿಂಗಾಲೇಶ್ವರ ಸ್ವಾಮಿ ಅವರು ವಿರೋಧವಾಗಿ ನಿಂತಿದ್ದಾರೆ. ಅವರು ತಾವೇ ಸ್ವತಃ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಲು ನಾಮಪತ್ರ ಸಲ್ಲಿಸಿದ್ದರು. ಹಿರಿಯ ಸಾಹಿತಿಗಳ ಒತ್ತಡಕ್ಕೆ ಮಣಿದು ತಮ್ಮ ನಾಮತ್ರವನ್ನು ಹಿಂಪಡೆದಿದ್ದಾರೆ. ಆದರೂ, ಜೋಶಿ ವಿರುದ್ಧ ಪ್ರಚಾರ ನಡೆಸುತ್ತಿದ್ದಾರೆ.

ಆದರೂ, ಲಿಂಗಾಯತ ಮತದಾರರು ಈ ಚುನಾವಣೆಯಲ್ಲಿ ತಮ್ಮ ನಿಷ್ಠೆಯನ್ನು ಯಾರಿಗೆ ತೋರುತ್ತಾರೆ ಎಂಬುದು ಇನ್ನೂ ಖಾತ್ರಿಯಾಗಿಲ್ಲ. 2023ರ ವಿಧಾನಸಭಾ ಚುನಾವಣೆಯಲ್ಲಿ ಧಾರವಾಡ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿರುವ ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಮತ್ತು ಬಿಜೆಪಿ ತಲಾ 4 ಸ್ಥಾನಗಳನ್ನು ಗೆದ್ದಿವೆ. ಈ ಗೆಲುವಿಗೆ ಉಭಯ ಪಕ್ಷಗಳ ಒಳ ಒಪ್ಪಂದವೂ ಕಾರಣವೆಂದು ಹೇಳಲಾಗುತ್ತಿದೆ.

ಅದಾಗ್ಯೂ, ಲೋಕಸಭಾ ಕ್ಷೇತ್ರದ ನಗರ ಪ್ರದೇಶಗಳಲ್ಲಿ ಎರಡೂ ಪಕ್ಷಗಳು 41%ಗಿಂತ ಹೆಚ್ಚಿನ ಮತದಾರರ ಬೆಂಬಲವನ್ನು ಹೊಂದಿವೆ. ತಮ್ಮ ಮತ ಪಾಲನ್ನು ಹೆಚ್ಚಿಸಿಕೊಳ್ಳಲು ಯತ್ನಿಸುತ್ತಿವೆ. ಜೊತೆಗೆ, ತಮ್ಮ ಪ್ರತಿಪಕ್ಷದ ಪ್ರಾಬಲ್ಯವಿರುವ ಕ್ಷೇತ್ರಗಳಲ್ಲಿ ಅದರ ಪ್ರಭಾವನ್ನು ಕಡಿಮೆ ಮಾಡಲು ಉಭಯ ಪಕ್ಷಗಳು ಕಸರತ್ತು ನಡೆಸುತ್ತಿವೆ.

ಬಿಜೆಪಿ ಶಾಸಕರಾದ ಮಹೇಶ್ ಟೆಂಗಿನಕಾಯಿ (ಹುಬ್ಬಳ್ಳಿ-ಧಾರವಾಡ ಸೆಂಟ್ರಲ್) ಮತ್ತು ಅರವಿಂದ್ ಬೆಲ್ಲದ್ (ಹುಬ್ಬಳ್ಳಿ ಧಾರವಾಡ ಪಶ್ಚಿಮ) ಅವರು ಜೋಶಿ ಅವರ ಗೆಲುವಿಗೆ ಶ್ರಮಿಸುತ್ತಿದ್ದಾರೆ. ಇತ್ತ, ಹುಬ್ಬಳ್ಳಿ-ಧಾರವಾಡ ಪೂರ್ವದ ಕಾಂಗ್ರೆಸ್ ಶಾಸಕ ಪ್ರಸಾದ್ ಅಬ್ಬಯ್ಯ ಕೂಡ ಅಸೂತಿ ಗೆಲುವಿಗೆ ಹೋರಾಡುತ್ತಿದ್ದಾರೆ.

ಧಾರವಾಡ ಶಾಸಕ ವಿನಯ್ ಕುಲಕರ್ಣಿ ಜಿಲ್ಲೆ ಪ್ರವೇಶಿಸದಂತೆ ನಿರ್ಬಂಧ ಹೇರಿರುವ ಹಿನ್ನೆಲೆಯಲ್ಲಿ ಅವರ ಪತ್ನಿ ಶಿವಲೀಲಾ ಕುಲಕರ್ಣಿ ಅವರು ಅಸೂಟಿ ಪರವಾಗಿ ಪ್ರಚಾರ ನಡೆಸುತ್ತಿದ್ದಾರೆ. ಅಲ್ಲದೆ, ವಿನಯ್ ಅವರು ಧಾರವಾಡ ಕ್ಷೇತ್ರದ ವ್ಯಾಪ್ತಿಗೆ ಬರುವ ಹಾವೇರಿ ಜಿಲ್ಲೆಯ ಶಿಗ್ಗಾಂವಿಯಲ್ಲಿ ತಮ್ಮ ಶಕ್ತಿ ತೋರಿಸಲು ಮುಂದಾಗಿದ್ದಾರೆ. ಅಲ್ಲಿ, ಅಸೂಟಿ ಪರವಾಗಿ ಭಾರೀ ಪ್ರಚಾರ ನಡೆಸುತ್ತಿದ್ದಾರೆ. ಶಿಗ್ಗಾಂವಿ ಬಿಜೆಪಿ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರ ತವರೂರು.

ಕಲಘಟಗಿ ಮತ್ತು ನವಲಗುಂದ ವಿಧಾನಸಭಾ ಕ್ಷೇತ್ರಗಳಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ಮತ್ತು ಎನ್.ಎಚ್ ಕೋನರಡ್ಡಿ ಅವರ ಹಿಡಿತವಿದ್ದು, ಕಾಂಗ್ರೆಸ್‌ಗೆ ಭದ್ರ ನೆಲೆ ಇದೆ. ಅದಾಗ್ಯೂ, ಶಿಗ್ಗಾಂವಿ ಮತ್ತು ಬಿಜೆಪಿ ಶಾಸಕ ಇರುವ ಕುಂದಗೋಳದಲ್ಲಿ ಹೆಚ್ಚಿನ ಮತಗಳು ಜೋಶಿ ಪರವಾಗಿ ಇರಲಿವೆ ಎಂದು ಬಿಜೆಪಿ ವಿಶ್ವಾಸದಲ್ಲಿದೆ.

ಈ ವರದಿ ಓದಿದ್ದೀರಾ?: ವಿಶ್ಲೇಷಣೆ | ಆರ್‌ಎಸ್‌ಎಸ್‌ ಮೀಸಲಾತಿ ವಿರುದ್ಧ ಇಲ್ಲವೇ?

ರಾಜ್ಯದಲ್ಲಿ ಈ ಬಾರಿ ಮೋದಿ ಅಲೆ ಇಲ್ಲ. ಹೀಗಾಗಿ, ಮೋದಿ ಹೆಸರಿನಲ್ಲಿ ಮತ ಕೇಳುವುದರಿಂದ ಜೋಶಿಗೆ ಹೆಚ್ಚಿನ ಲಾಭವೇನೂ ಇಲ್ಲ. ಅದರೆ, ಹುಬ್ಬಳ್ಳಿಯ ನೇಹಾ ಹಿರೇಮಠ್ ಹತ್ಯೆ ಪ್ರಕರಣವನ್ನು ರಾಜಕೀಯವಾಗಿ ಬಿಜೆಪಿ ಬಳಸಿಕೊಳ್ಳುತ್ತಿದ್ದು, ಕಾಂಗ್ರೆಸ್‌ ವಿರುದ್ಧ ಓಲೈಕೆ ರಾಜಕಾರಣದ ಆರೋಪ ಮಾಡುತ್ತಿದೆ. ಅದನ್ನೂ ಚುನಾವಣಾ ದಾಳವಾಗಿ ಬಳಸುತ್ತಿದೆ.

ಈ ಪ್ರಕರಣದ ಸುತ್ತ ವ್ಯಕ್ತವಾಗುತ್ತಿರುವ ಆಕ್ರೋಶು ಜೋಶಿಗೆ ಲಾಭ ಕೊಡಬಹುದು ಎಂಬ ಲೆಕ್ಕಾಚಾರಗಳು ಇವೆ. ಆದರೂ, ಜೋಶಿಗೆ ಅಸೂಟಿ ತೀವ್ರ ಸ್ಪರ್ಧೆ ನೀಡುತ್ತಿದ್ದಾರೆ. ಜೊತೆಗೆ, ದಿಂಗಾಲೇಶ್ವರ ಸ್ವಾಮೀಜಿ ಅವರು ಅಸೂಟಿಗೆ ಬೆಂಬಲ ನೀಡುತ್ತಿದ್ದಾರೆ. ಲಿಂಗಾಯತರ ಮತಗಳನ್ನು ಅಸೂಟಿ ಎಡೆಗೆ ತಿರುಗಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತಿದ್ದಾರೆ. ಅಹಿಂದ ಮತಗಳು ಅಸೂಟಿಗೆ ಬಲವಾಗಿ ನಿಂತಿವೆ. ಲಿಂಗಾಯತ ಮತ್ತು ಅಹಿಂದ ಮತಗಳು ಅಸೂಟಿ ಪರವಾದರೆ, ಶೋಷಿ ಗೆಲುವಿಗೆ ತಡೆ ಬೀಳಲಿದೆ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ನಮ್ಮನ್ನು ಬೆಂಬಲಿಸಿ

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿತ್ರದುರ್ಗ | ಇಸ್ರೋ ಮಹತ್ವದ ಸಾಧನೆ; ವಿಆರ್‌ಎಲ್‌ ಪುಷ್ಪಕ್ ಮೂರನೇ ಬಾರಿಗೆ ಯಶಸ್ವಿ ಲ್ಯಾಂಡಿಂಗ್

ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ಬಳಿ ಕುದಾಪುರದಲ್ಲಿರುವ ಭಾರತೀಯ ಬಾಹ್ಯಾಕಾಶ ಸಂಸ್ಥೆ(ಇಸ್ರೋ) ಮರುಬಳಕೆ...

ಚನ್ನಪಟ್ಟಣ ಉಪಚುನಾಚಣೆ | ಊಹೆಗಳಾಚೆಗೂ ನಡೆಯುತ್ತಿದೆ ಡಿಕೆಶಿ-ಹೆಚ್‌ಡಿಕೆ ಆಟ

ಚನ್ನಪಟ್ಟಣ ವಿಧಾನಸಭಾ ಕ್ಷೇತ್ರಕ್ಕೆ ಶೀಘ್ರದಲ್ಲೇ ಉಪಚುನಾವಣೆ ನಡೆಯಲಿದ್ದು, ಕಾಂಗ್ರೆಸ್‌ ಹುರಿಯಾಳು ಯಾರು?...

ಅಂಗನವಾಡಿ ಕೇಂದ್ರಗಳ ಉನ್ನತೀಕರಣ; LKG, UKG ಆರಂಭಿಸಲು ಸಿಎಂ ಸಮ್ಮತಿ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌

"ರಾಜ್ಯದ ಎಲ್ಲ ಅಂಗನವಾಡಿ ಕೇಂದ್ರಗಳನ್ನು ಉನ್ನತೀಕರಣಕರಿಸಲು ಹಾಗೂ ಎಲ್‌ಕೆಜಿ, ಯುಕೆಜಿ ಪ್ರಾರಂಭಿಸಲು...

ವಾಲ್ಮೀಕಿ ನಿಗಮ ಅಕ್ರಮ | ಜಾರಿ ನಿರ್ದೇಶನಾಲಯದಿಂದ ಪ್ರತ್ಯೇಕ ತನಿಖೆ ಆರಂಭ

ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಬಹುಕೋಟಿ ಹಗರಣವನ್ನು ಜಾರಿ...