ಬೆಂಗಳೂರು | ನೀರಿನ ಕೊರತೆ, ಬಿಸಿಗಾಳಿ ನಡುವೆ ಟೈಫಾಯಿಡ್, ಗ್ಯಾಸ್ಟ್ರೋಎಂಟರೈಟಿಸ್ ಪ್ರಕರಣಗಳಲ್ಲಿ ಏರಿಕೆ

Date:

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಸದ್ಯ ತಾಪಮಾನ ಹೆಚ್ಚಳವಾಗಿದ್ದು, ಬರೋಬ್ಬರಿ 38 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ಜನರು ಬಿಸಿಲಿನ ಬೇಗೆಗೆ ಕಂಗಾಲಾಗಿದ್ದಾರೆ. ನೀರಿನ ಸಮಸ್ಯೆಯ ನಡುವೆ ನಗರದಲ್ಲಿ ಸೋಂಕು ಹರಡುವಿಕೆ ಹೆಚ್ಚಳವಾಗುತ್ತಿದೆ. ಟೈಫಾಯಿಡ್, ತೀವ್ರವಾದ ಜಠರ ಕರುಳಿನ ಉರಿಯೂತ ಅಥವಾ ಗ್ಯಾಸ್ಟ್ರೋಎಂಟರೈಟಿಸ್ ಪ್ರಕರಣಗಳಲ್ಲಿ ಏರಿಕೆ ಕಂಡುಬಂದಿದೆ ಎಂದು ಖಾಸಗಿ ಆಸ್ಪತ್ರೆಗಳ ಮೂಲಗಳು ತಿಳಿಸಿವೆ.

- Advertisement -

ನೀರಿನಿಂದ ಟೈಫಾಯಿಡ್ ಹರಡುತ್ತದೆ. ಕಲುಷಿತ ನೀರು ಹಾಗೂ ಆಹಾರದಿಂದ ಜಠರ ಹಾಗೂ ಕರುಳು ಸಂಬಂಧಿತ ಸಮಸ್ಯೆಗಳು ಹರಡುತ್ತವೆ ಎಂದು ಆರೋಗ್ಯ ತಜ್ಞರು ಹೇಳಿದ್ದಾರೆ. ಜ್ವರ, ಹೊಟ್ಟೆ ನೋವು ಹಾಗೂ ಅತಿಸಾರ ಈ ಸೋಂಕುಗಳ ಸಾಮಾನ್ಯ ಲಕ್ಷಣಗಳಾಗಿವೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ನ್ಯಾಯಕ್ಕಾಗಿ ಬಿಲ್ಕಿಸ್ ಬಾನೋ 22 ವರ್ಷಗಳ ಅಲೆದಾಟ: ಇಂದಿಗೂ...

2002ರ ಗುಜರಾತ್ ಗಲಭೆಯ ಕರಾಳ ನೆನಪುಗಳನ್ನು ಹೊತ್ತು, ತಮ್ಮವರನ್ನೆಲ್ಲಾ ಕಳೆದುಕೊಂಡು, ಅತ್ಯಾಚಾರದ ಘೋರ ಕ್ರೌರ್ಯಕ್ಕೆ ತುತ್ತಾದ ಬಿಲ್ಕಿಸ್ ಬಾನೋ ಬದುಕು ಇಂದಿಗೂ ನೆಮ್ಮದಿ ಕಂಡಿಲ್ಲ. ಇತ್ತೀಚೆಗೆ ಸುಪ್ರೀಂ ಕೋರ್ಟ್ ಇಬ್ಬರು ಅಪರಾಧಿಗಳ ಜೀವಾವಧಿ...

ಡಿಪಿಡಿಪಿ ಕಾಯ್ದೆ: ನಾಗರಿಕರ ಖಾಸಗಿತನದ ರಕ್ಷಣೆಯೋ, ಪತ್ರಿಕಾ ಸ್ವಾತಂತ್ರ್ಯದ...

ಡಿಪಿಡಿಪಿ ಕಾಯ್ದೆ ನಾಗರಿಕರ ಗೌಪ್ಯತೆಯನ್ನು ಕಾಪಾಡುವ ಭರವಸೆ ನೀಡುತ್ತಿದೆ. ಆದರೆ, ಇದೇ ಕಾಯ್ದೆಯು ಪತ್ರಕರ್ತರ ಮೂಲಭೂತ ಹಕ್ಕು ಮತ್ತು ತನಿಖಾ ಪತ್ರಿಕೋದ್ಯಮದ ಮೇಲೆ ಕರಿನೆರಳು ಬೀರಲಿದೆಯೇ? ಆರ್‌ಟಿಐ ದುರ್ಬಲಗೊಳ್ಳುತ್ತಿದೆಯೇ? ಒಂದೆಡೆ ವ್ಯಕ್ತಿಯ ಖಾಸಗಿತನದ...

ಉಳಿತಾಯದ ಪಾಠ ಹೇಳಿದ ಮೋದಿ: ಬೆಲೆ ಏರಿಕೆ, ನಿರುದ್ಯೋಗ;...

ಮಕ್ಕಳ ಶಿಕ್ಷಣ, ಮದುವೆ ಮತ್ತು ಮುಪ್ಪಿನ ಕಾಲಕ್ಕಾಗಿ ಹೊಟ್ಟೆಬಟ್ಟೆ ಕಟ್ಟಿ ಉಳಿತಾಯ ಮಾಡುವುದು ಭಾರತೀಯರ ಸಂಸ್ಕೃತಿಯಲ್ಲೇ ಬಂದಿದೆ. ಅವರಿಗೆ ಉಳಿತಾಯದ ಪಾಠ ಕಲಿಸುವ ಅಗತ್ಯವಿಲ್ಲ; ಬದಲಾಗಿ ಬಡತನದಿಂದ ಹೊರಬಂದ ಕುಟುಂಬಗಳು ಮತ್ತೆ ಸಂಕಷ್ಟಕ್ಕೆ...

ತಾಪಮಾನವು ಗರಿಷ್ಠ 38.5 ಡಿಗ್ರಿ ಸೆಲ್ಸಿಯಸ್‌ಗೆ ತಲುಪಿದೆ. ಬೆಂಗಳೂರಿನಲ್ಲಿ ಬಿಸಿಗಾಳಿ ಹೆಚ್ಚಳವಾಗಿದೆ. ಹಾಗೆಯೇ, ನೀರಿನ ಕೊರತೆಯನ್ನು ಎದುರಿಸುತ್ತಿದೆ. ನಗರದ ಖಾಸಗಿ ಆಸ್ಪತ್ರೆಗಳಲ್ಲಿ ಟೈಫಾಯಿಡ್ ಮತ್ತು ಗ್ಯಾಸ್ಟ್ರೋಎಂಟರೈಟಿಸ್ ಪ್ರಕರಣಗಳ ದಾಖಲೆ ಪ್ರಮಾಣದಲ್ಲಿ ಗಮನಾರ್ಹ ಏರಿಕೆ ಕಾಣುತ್ತಿವೆ.

“ಟೈಫಾಯಿಡ್ ಪ್ರಾಥಮಿಕವಾಗಿ ನೀರಿನಿಂದ ಹರಡುತ್ತದೆ. ಆದರೆ, ತೀವ್ರವಾದ ಜಠರದ ಉರಿತವು ಕಲುಷಿತ ನೀರು, ಆಹಾರದಿಂದ ಹರಡುತ್ತದೆ” ಎಂದು ಆರೋಗ್ಯ ತಜ್ಞರು ಹೇಳಿದ್ದಾರೆ.

ಫೋರ್ಟಿಸ್ ಆಸ್ಪತ್ರೆಯ ಇಂಟರ್ನಲ್ ಮೆಡಿಸಿನ್ ನಿರ್ದೇಶಕಿ ಡಾ ಶೀಲಾ ಮುರಳಿ ಚಕ್ರವರ್ತಿ ಮಾತನಾಡಿ, “ಟೈಫಾಯಿಡ್ ಮತ್ತು ತೀವ್ರವಾದ ಗ್ಯಾಸ್ಟ್ರೋಎಂಟರೈಟಿಸ್‌ನಲ್ಲಿ ಈ ಗಮನಾರ್ಹ ಹೆಚ್ಚಳವು ನೀರಿನ ಕೊರತೆ ಅಥವಾ ಮಾಲಿನ್ಯದ ಕಾರಣದಿಂದಾಗಿರಬಹುದು. ಸಾಮಾನ್ಯ ರೋಗಲಕ್ಷಣಗಳಲ್ಲಿ ಜ್ವರ, ಹೊಟ್ಟೆ ನೋವು ಮತ್ತು ಅತಿಸಾರ ರೋಗದ ಲಕ್ಷಣಗಳಾಗಿವೆ. ಕಳೆದ ತಿಂಗಳಲ್ಲಿ ಸುಮಾರು 100 ರೋಗಿಗಳಿಗೆ ಚಿಕಿತ್ಸೆ ನೀಡಲಾಗಿದೆ. ಈ ಮೊದಲು ತಿಂಗಳಿಗೆ ಸರಾಸರಿ ಇಬ್ಬರು ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿತ್ತು” ಎಂದಿದ್ದಾರೆ.

“ಸೋಂಕು ಹರಡದಂತೆ ತಡೆಗಟ್ಟಲು, ರೋಗಪೀಡಿತ ಜನರಿರುವ ಪ್ರದೇಶಗಳಿಗೆ ಪ್ರಯಾಣಿಸುವ ಜನರು ಟೈಫಾಯಿಡ್ ಲಸಿಕೆಯನ್ನು ತೆಗೆದುಕೊಳ್ಳುವುದು ಉತ್ತಮ. ಶುದ್ಧ ಕುಡಿಯುವ ನೀರನ್ನೇ ಬಳಕೆ ಮಾಡಬೇಕು. ಉತ್ತಮ ನೈರ್ಮಲ್ಯವನ್ನು ಕಾಪಾಡಿಕೊಳ್ಳಬೇಕು. ಸೋಂಕುಗಳನ್ನು ತಡೆಗಟ್ಟಲು ಕಲುಷಿತ ಆಹಾರವನ್ನು ಸೇವಿಸುವುದನ್ನು ತಡೆಯಿರಿ” ಎಂದು ಡಾ ಶೀಲಾ ತಿಳಿಸಿದ್ದಾರೆ.

ನಾರಾಯಣ ಹೆಲ್ತ್ ಸಿಟಿಯ ಇಂಟರ್ನಲ್ ಮೆಡಿಸಿನ್‌ನ ಸಲಹೆಗಾರ ಡಾ ನಿಧಿನ್ ಮೋಹನ್ ಮಾತನಾಡಿ, “ವೈರಲ್ ಮತ್ತು ಬ್ಯಾಕ್ಟೀರಿಯಾದ ಸೋಂಕಿನಿಂದ ಜಠರಗರುಳಿನ ಪ್ರಕರಣಗಳು ಉಲ್ಬಣವಾಗಬಹುದು. ಆಸ್ಪತ್ರೆಯಲ್ಲಿ ವಾರಕ್ಕೊಮ್ಮೆ ಜಠರಗರುಳಿನ ಸೋಂಕಿನ 20 ಪ್ರಕರಣಗಳು ಬರುತ್ತಿವೆ. ಇದು ಡಿಸೆಂಬರ್‌ಗೆ ಹೋಲಿಸಿದರೆ ಕನಿಷ್ಠ 50% ಹೆಚ್ಚು. ಈ ಸಮಸ್ಯೆಗಳನ್ನು ಕಲುಷಿತ ನೀರು ಮತ್ತು ಬೇಯಿಸಿದ ಮಾಂಸಾಹಾರಿ ಆಹಾರದಿಂದ ಕಂಡುಹಿಡಿಯಬಹುದು. ವಿಶೇಷವಾಗಿ ಬಿಸಿ ವಾತಾವರಣದಲ್ಲಿ ದುರ್ಬಲವಾಗಿರುತ್ತದೆ. ಒಂದು ವಾರದಲ್ಲಿ ಕನಿಷ್ಠ ಎರಡು ಅಥವಾ ಮೂರು ಟೈಫಾಯಿಡ್ ಪ್ರಕರಣಗಳು ವರದಿಯಾಗುತ್ತವೆ” ಎಂದು ಹೇಳಿದ್ದಾರೆ.

ಈ ಸುದ್ದಿ ಓದಿದ್ದೀರಾ? ತಾಪಮಾನ ಹೆಚ್ಚಳ | ಎಳನೀರು, ಹಣ್ಣಿನ ರಸಗಳಿಗೆ ಹೆಚ್ಚಿದ ಬೇಡಿಕೆ; ಬೆಲೆಯೂ ಏರಿಕೆ

“ನಿರ್ಜಲೀಕರಣ ಮತ್ತು ಆಲಸ್ಯದಂತಹ ರೋಗಲಕ್ಷಣಗಳಿಗೆ ತ್ವರಿತ ವೈದ್ಯಕೀಯ ಆರೈಕೆಯ ಅಗತ್ಯವಿರುತ್ತದೆ, ಅಪಾಯಗಳನ್ನು ಕಡಿಮೆ ಮಾಡಲು, ಜನರು ಮಾಂಸಾಹಾರಿ ಊಟವನ್ನು ಸಂಪೂರ್ಣವಾಗಿ ಬೇಯಿಸಬೇಕು. ಶುದ್ಧ ಕುಡಿಯುವ ನೀರಿನ ಬಳಕೆಗೆ ಆದ್ಯತೆ ನೀಡಬೇಕು” ಎಂದು ಡಾ ಮೋಹನ್ ಹೇಳಿದ್ದಾರೆ.

ಖಾಸಗಿ ಆಸ್ಪತ್ರೆಗಳಲ್ಲಿ ಸೋಂಕಿನ ಪ್ರಕರಣಗಳು ಏರಿಕೆ ಕಾಣುತ್ತಿವೆ. ಆದರೆ, ಕೆಲವು ಸರ್ಕಾರಿ ಆಸ್ಪತ್ರೆಗಳಲ್ಲಿ ಸೋಂಕಿನ ಪ್ರಕರಣಗಳ ಯಾವುದೇ ಗಮನಾರ್ಹ ಏರಿಕೆಯನ್ನು ವರದಿ ಮಾಡಿಲ್ಲ.

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ರಾಯಚೂರು | ಹದಗೆಟ್ಟ ರಸ್ತೆ, ಕೆಟ್ಟ ಬಸ್‌ಗಳಿಂದ ಪ್ರಯಾಣಿಕರಿಗೆ ತೊಂದರೆ: ರಸ್ತೆ ದುರಸ್ತಿ, 50 ಹೊಸ ಬಸ್‌ಗಳಿಗಾಗಿ ಸಿಪಿಐಎಂ ಆಗ್ರಹ

ಲಿಂಗಸುಗೂರು ತಾಲ್ಲೂಕಿನ ಹಟ್ಟಿ ಪಟ್ಟಣ ಹಾಗೂ ಸುತ್ತಮುತ್ತಲಿನ ಗ್ರಾಮಗಳಿಗೆ ಸುಗಮ ಸಾರಿಗೆ...

ಉಡುಪಿ | ನಂಬಿಕೆ, ವಿಶ್ವಾಸದಿಂದ ಸಹಕಾರ ರಂಗ ಸುದೃಢ: ಕಾರ್ತಿಕ್ ಕುಮಾರ್

ರಾಷ್ಟ್ರೀಕೃತ ಬ್ಯಾಂಕುಗಳೊಂದಿಗೆ ಸ್ಪರ್ಧೆ ನೀಡುತ್ತಿರುವ ಸಹಕಾರಿ ರಂಗವು ಜನರ ನಂಬಿಕೆ ಮತ್ತು...

ದಾಂಡೇಲಿ, ಜೋಯಿಡಾ ತಾಲೂಕಿನ ಹಲವು ಭಾಗಗಳಲ್ಲಿ ನವೆಂಬರ್.20ರಂದು ವಿದ್ಯುತ್ ವ್ಯತ್ಯಯ

ದಾಂಡೇಲಿ ಹಾಗೂ ಜೋಯಿಡಾ ತಾಲೂಕಿನ ವಿವಿಧೆಡೆ 11 ಕೆ.ವಿ ವಿದ್ಯುತ್ ಮಾರ್ಗ...

ಕೋಲಾರ | ಶಾಹಿ ಗಾರ್ಮೆಂಟ್ಸ್ ವೇತನ ತಾರತಮ್ಯ ಸಲ್ಲದು; ಮೂಲಸೌಕರ್ಯ ಕಲ್ಪಿಸದಿದ್ದರೆ ಕಠಿಣ ಕ್ರಮ : ಡಿಸಿ ರವಿಕುಮಾರ್

ಕೋಲಾರದ ಶಾಹಿ ಗಾರ್ಮೆಂಟ್ಸ್ ಕಾರ್ಖಾನೆಯಲ್ಲಿ ಕಾರ್ಯನಿರ್ವಹಿಸುವ ಮಹಿಳಾ ಕಾರ್ಮಿಕರ ವೇತನ ತಾರತಮ್ಯ...