ಸರ್ಕಾರದ 6 ತಿಂಗಳ ಸಾಧನೆಗೆ ವ್ಯತಿರಿಕ್ತ ಪಟ್ಟಿ ಬಿಡುಗಡೆಗೊಳಿಸಿ ಲೇವಡಿ ಮಾಡಿದ ಬಿಜೆಪಿ

Date:

  • ಕಾಂಗ್ರೆಸ್ ಸರ್ಕಾರ ರಾಜ್ಯದ ವಿದ್ಯಾರ್ಥಿಗಳ ಪಾಲಿಗೆ ಮರಣಶಾಸನವಾಗಿದೆ
  • ಆರು ತಿಂಗಳಿಗೆ ಇಷ್ಟೆಲ್ಲಾ ಆದರೆ, ಒಂದು ವರ್ಷಕ್ಕೆ ಪರಿಸ್ಥಿತಿ ಹೇಗಿರಬೇಡ?

ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದು ಆರು ತಿಂಗಳು ಪೂರೈಸಿದ್ದು, ತನ್ನ ಸಾಧನೆಗಳನ್ನು ಸರ್ಕಾರ ಒಂದು ಕಡೆ ಪಟ್ಟಿ ಮಾಡುತ್ತಿದ್ದರೆ, ಇದಕ್ಕೆ ವ್ಯತಿರಿಕ್ತವಾಗಿ ಬಿಜೆಪಿ ಕೂಡ ಸರ್ಕಾರದ ಸಾಧನೆಗಳ ಪಟ್ಟಿಯನ್ನು ಬಿಡುಗಡೆ ಮಾಡಿ ಟೀಕಿಸಿದೆ.

ಮೈಕ್ರೋ ಬ್ಲಾಗಿಂಗ್‌ ಎಕ್ಸ್‌ನಲ್ಲಿ ಪಟ್ಟಿ ಬಿಡುಗಡೆ ಮಾಡಿರುವ ಬಿಜೆಪಿ, “ರಾಜ್ಯದಲ್ಲಿ ಅಧಿಕಾರಕ್ಕೆ ಬಂದು ಕೇವಲ ಆರೇ ತಿಂಗಳಲ್ಲಿ ಸಿದ್ದರಾಮಯ್ಯ ಅವರ ಸರ್ಕಾರದಲ್ಲಿ ಬರಗಾಲ ನಿರ್ವಹಣೆ ವೈಫಲ್ಯ, ಕಲುಷಿತ ನೀರಿನಿಂದ ಅಪಾರ ಸಾವು-ನೋವು, ರೈತರ ಸರಣಿ ಆತ್ಮಹತ್ಯೆ” ಎಂದು ಕುಟುಕಿದೆ.

ಸರ್ಕಾರ ಮಾಡಿದ ಸಾಧನೆಗಳ ಪಟ್ಟಿ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

▪️ಶ್ಯಾಡೋ ಸಿಎಂ ಪ್ರಭಾವ
▪️ವರ್ಗಾವಣೆ ದಂಧೆ
▪️ಗುತ್ತಿಗೆದಾರರಿಂದ ಕಲೆಕ್ಷನ್
▪️₹100 ಕೋಟಿ ಅಕ್ರಮ ಹಣ ಮಂಚದಡಿ ಪತ್ತೆ
▪️ಹಿಂದೂಗಳ ಮೇಲೆ ಹಲ್ಲೆ -ಹತ್ಯೆ
▪️ಪಂಚ ರಾಜ್ಯ ಚುನಾವಣೆಗೆ ಹಣ ಸಾಗಾಟ
▪️ಕಾಸಿಗಾಗಿ ಪೋಸ್ಟಿಂಗ್‌
▪️ಅಕ್ರಮ ನೇಮಕಾತಿ ಪರೀಕ್ಷೆ
▪️ಶಾಸಕರಿಗಿಲ್ಲ ಅನುದಾನ
▪️ಕುರ್ಚಿಗಾಗಿ ಕಾದಾಟ
▪️ಸಿಎಂ ಡಿನ್ನರ್‌, ಬ್ರೇಕ್‌ಫಾಸ್ಟ್‌ ಪಾರ್ಟಿ
▪️ಕಳ್ಳತನದಿಂದ ಕಾವೇರಿ ಪೂರೈಕೆ
▪️ಕಲೆಕ್ಷನ್‌ ಏಜೆಂಟ್‌ ಸುರ್ಜೇವಾಲ ಅಧಿಕಾರ

“ಆರು ತಿಂಗಳಿಗೆ ಇಷ್ಟೆಲ್ಲಾ ಹಳವಂಡಗಳಾದರೆ, ಒಂದು ವರ್ಷಕ್ಕೆ ಕರ್ನಾಟಕದ ಪರಿಸ್ಥಿತಿ ಹೇಗಿರಬೇಡ ಯೋಚಿಸಿ!” ಎಂದು ಹೇಳಿದೆ.

ವಿದ್ಯಾರ್ಥಿಗಳ ಪಾಲಿಗೆ ಮರಣಶಾಸನ

ರಾಜ್ಯದ ಕಾಂಗ್ರೆಸ್ ಸರ್ಕಾರ ರಾಜ್ಯದ ವಿದ್ಯಾರ್ಥಿಗಳ ಪಾಲಿಗೆ ಮರಣಶಾಸನವಾಗಿದೆ.‌ ಅರ್ಧ ಶೈಕ್ಷಣಿಕ ವರ್ಷ ಮುಗಿದರೂ, ಪಠ್ಯಪುಸ್ತಕ, ಶೂ, ಸಮವಸ್ತ್ರ ವಿತರಿಸಿಲ್ಲ, ಈಗ ಮಕ್ಕಳ ಶೈಕ್ಷಣಿಕ ಪ್ರವಾಸವನ್ನೂ ಸಹ ಮೊಟಕುಗೊಳಿಸಿದೆ ಎಂದು ವಾಗ್ದಾಳಿ ನಡೆಸಿದೆ.

“ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರೇ, ಎನ್‌ಇಪಿ ಬದಲು ಎಸ್‌ಇಪಿ ಅಳವಡಿಸಿಕೊಳ್ಳುತ್ತೆವೆಂಬ ವಿತಂಡವಾದವನ್ನು ದೂರವಿಟ್ಟು, ಮೊದಲು ಇತ್ತ ಕಡೆ ಗಮನಹರಿಸಿ” ಎಂದು ಛೇಡಿಸಿದೆ.

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

‘ಪ್ರಧಾನಿ ಮೋದಿಗೆ ಗುಜರಾತ್‌ನಲ್ಲಿ ಮುಸ್ಲಿಂ ಒಬಿಸಿ ಮೀಸಲಾತಿ ಓಕೆ, ಇತರೆಡೆ ಮಾತ್ರ ಬೇಡ’

ಲೋಕಸಭೆ ಚುನಾವಣೆ ಹೊಸ್ತಿಲಲ್ಲಿ ಮುಸ್ಲಿಂ ಒಬಿಸಿ ಮೀಸಲಾತಿ ಬಗ್ಗೆ ಭಾರೀ ಚರ್ಚೆಯಾಗುತ್ತಿದೆ....

ಬಿಜೆಪಿ ನಾಯಕರು ಖಿನ್ನತೆಗೆ ಒಳಗಾಗಿದ್ದಾರೆ ಎಂದ ತೇಜಸ್ವಿ ಯಾದವ್!

ಬಿಹಾರದ ಎರಡನೇ ಹಂತದ ಲೋಕಸಭಾ ಚುನಾವಣೆಯ ನಂತರ ಬಿಜೆಪಿ ನಾಯಕರು ಖಿನ್ನತೆಗೆ...

ಹಾಸನ ಪೆನ್‌ಡ್ರೈವ್ ಪ್ರಕರಣ: ಜರ್ಮನಿಗೆ ತೆರಳಿರುವ ಸಂಸದ ಪ್ರಜ್ವಲ್ ರೇವಣ್ಣ?

ಹಾಸನದ ಅಶ್ಲೀಲ ವೀಡಿಯೊ ತುಣುಕು ಪ್ರಕರಣ ತನಿಖೆಗಾಗಿ ರಾಜ್ಯ ಸರ್ಕಾರ ಶನಿವಾರ...