ಸಾಮಾಜಿಕ ಮಾಧ್ಯಮದಲ್ಲಿ ಪ್ರಬಲ ಮಾಧ್ಯಮಗಳಲ್ಲಿ ಒಂದಾದ ವಾಟ್ಸಾಪ್ ಹಾಗೂ ಗೂಗಲ್ ಸರ್ಚ್ ಬಗ್ಗೆ ಸಾರ್ವಜನಿಕರು ಒಂದಿಷ್ಟು ತಿಳಿದುಕೊಳ್ಳಬೇಕಾದ ಮುಖ್ಯವಾದ ಸಂಗತಿಗಳಿವೆ.
ವಾಟ್ಸಾಪ್ ಮಾಧ್ಯಮ ಬಳಕೆದಾರರಿಗೆ ಸುರಕ್ಷಿತ ಮತ್ತು ವಿಶಿಷ್ಟಪೂರ್ಣ ಅನುಭವಕ್ಕಾಗಿ ಆಗಾಗ ಹೊಸ ನವೀಕರಣಗಳು ಹಾಗೂ ಅಪ್‌ಡೇಟ್‌ಗಳನ್ನು ಪರಿಚಯಿಸುತ್ತಲೇ ಇರುತ್ತದೆ. ಸದ್ಯ ಅಪರಿಚಿತ ಸಂಖ್ಯೆಗಳು ಸ್ಕ್ಯಾಮರ್‌ಗಳು, ವಂಚಕರಿಂದ ಕರೆಗಳನ್ನು ಸ್ವೀಕರಿಸಬಾರದೆಂದು ಪ್ರೈವಸಿ ಸೆಟ್ಟಿಂಗ್‌ನಲ್ಲಿ ‘ಸೈಲೆನ್ಸ್ ಅನ್‌ನೌನ್ ಕಾಲರ್ಸ್’ ಎಂಬ ಆಯ್ಕೆಯಿದೆ. ಆದರೂ ವಂಚಕರು ಹಣ ಹಾಗೂ ಮಾಹಿತಿಗಳನ್ನು ದೋಚಲು ವಿದೇಶಿ ಸಂಖ್ಯೆಗಳ ಮೂಲಕ ‘ಲಿಂಕ್‌ಗಳನ್ನು ಕ್ಲಿಕ್ ಮಾಡಿ’ ಎಂಬ ಸಂದೇಶಗಳನ್ನು ಕಳಿಸುತ್ತಿರುತ್ತಾರೆ. ವಂಚನೆಯನ್ನು ಅರಿಯದ ಅಮಾಯಕ ಜನರು ಹಣದ ಅಥವಾ ಮತ್ಯಾವುದೋ ಮೋಹಕ್ಕೆ ಮರುಳಾಗಿ ತಮ್ಮ ಖಾತೆಯಲ್ಲಿರುವ ಹಣವನ್ನು ಕಳೆದುಕೊಳ್ಳುವುದುಂಟು.
ಈಗ ಅಪರಿಚಿತ ಸಂಖ್ಯೆಗಳಿಂದ ಬರುವ ಸಂದೇಶಗಳಿಗೆ ಕಡಿವಾಣ ಹಾಕಲು ಬಳಕೆದಾರರಿಗೆ ಶೀಘ್ರದಲ್ಲಿ ಪರಿಹಾರ ಒದಗಿಸಲು ವಾಟ್ಸಾಪ್ ಮುಂದಾಗಿದೆ. ಶೀಘ್ರದಲ್ಲಿಯೇ ಅಪರಿಚಿತರ ಸಂದೇಶಗಳನ್ನು ಬ್ಲಾಕ್ ಮಾಡುವ ಸೌಲಭ್ಯ ಕಲ್ಪಿಸಲಿದೆ. ಬಳಕೆದಾರರ ಹಿತದೃಷ್ಟಿ, ಸುರಕ್ಷೆಯ ಉದ್ದೇಶದಿಂದ ಅಪರಿಚಿತ ಸಂಖ್ಯೆಗಳಿಂದ ನಿರ್ದಿಷ್ಟ ಪ್ರಮಾಣ ಮೀರಿ ಸಂದೇಶಗಳು ಬರಲಾರಂಭಿಸಿದರೆ ಆ ಸಂದೇಶಗಳನ್ನು ಸ್ವಯಂಚಾಲಿತವಾಗಿ ವಾಟ್ಸಾಪ್ ಬ್ಲಾಕ್ ಮಾಡಲಿದೆ. ಬಳಕೆದಾರರು ವಾಟ್ಸಾಪ್ ಪ್ರೈವೆಸಿ ಸೆಟ್ಟಿಂಗ್‌ನಲ್ಲಿ ”ಬ್ಲಾಕ್ ಅನ್‌ನೌನ್ ಅಕೌಂಟ್ ಮೆಸೇಜಸ್” ಎಂಬ ಈ ಫೀಚರ್ ಕೆಲವು ದಿನಗಳಲ್ಲಿ ಬಳಕೆದಾರರಿಗೆ ಲಭ್ಯವಾಗಲಿದೆ. ವಾಟ್ಸಾಪ್ ಈ ಕಾರ್ಯದಲ್ಲಿ ನಿರತರಾಗಿದ್ದು, ಅಪರಿಚಿತ ಸಂದೇಶ ಮಾತ್ರವಲ್ಲದೆ ಪರಿಚಿತರ ಕಿರಿಕಿರಿ ತಪ್ಪಿಸುವ ಸಂದೇಶಗಳನ್ನು ಬ್ಲಾಕ್ ಮಾಡಬಹುದು.
ಸ್ಟೇಟಸ್ ಲೈಕ್ ಆಯ್ಕೆ
ಇದರ ಆಯ್ಕೆ ಜೊತೆಗೆ ಬಳಕೆದಾರರು ತಮ್ಮ ಪ್ರೀತಿಪಾತ್ರರು ವಾಟ್ಸಾಪ್ ನಲ್ಲಿ ಹಂಚಿಕೊಳ್ಳುವ ಸ್ಟೇಟಸ್‌ಗಳಿಗೆ ಲೈಕ್ ಒತ್ತುವ ಅವಕಾಶವನ್ನೂ ಒದಗಿಸಲಿದೆ ಎನ್ನಲಾಗಿದೆ. ಇನ್‌ಸ್ಟಾಗ್ರಾಂ ಮತ್ತು ಫೇಸ್‌ಬುಕ್ ಬಳಕೆದಾರರಿಗೆ ಲಭ್ಯವಿರುವ ಸ್ಟೋರಿ ಲೈಕ್ ಆಯ್ಕೆಯಂತೆಯೆ ವಾಟ್ಸಾಪ್ ನಲ್ಲಿಯೂ ಬರಹ, ಚಿತ್ರ, ವಿಡಿಯೋ ಅಥವಾ ಆಡಿಯೋಗಳ ರೂಪದಲ್ಲಿ ಹಂಚಿಕೊಳ್ಳಲಾಗುವ ಸ್ಟೇಟಸ್‌ಗಳಿಗೆ ಇನ್ನು ಮುಂದೆ ಲೈಕ್ ಒತ್ತುವ ಅವಕಾಶ ಕಲ್ಪಿಸಲಿದೆ. ಸ್ಟೇಟಸ್‌ಗೆ ಲೈಕ್ ಒತ್ತಿರುವವರ ಹೆಸರುಗಳು ಕೂಡ ಸ್ಟೇಟಸ್ ವೀವರ್ಸ್ ಪಟ್ಟಿಯಲ್ಲಿ ಪರಿಶೀಲಿಸಬಹುದಾಗಿದೆ. ಸದ್ಯ ಈ ಆಯ್ಕೆ ವಾಟ್ಸಾಪ್‌ನ ಬೀಟಾ ಆವೃತ್ತಿಯ ಬಳಕೆದಾರರಿಗೆ ಮಾತ್ರ ಲಭ್ಯವಿದ್ದು, ಶೀಘ್ರದಲ್ಲೇ ಸಾಮಾನ್ಯ ಬಳಕೆದಾರರಿಗೂ ಸಿಗುವ ಪ್ರಯತ್ನವನ್ನು ಸಾಮಾಜಿಕ ಮಾಧ್ಯಮ ಸಂಸ್ಥೆ ಮಾಡಲಿದೆ.
ಈ ಸುದ್ದಿ ಓದಿದ್ದೀರಾ?: ಜಗತ್ತಿನ ದೃಶ್ಯ ಮಾಧ್ಯಮವನ್ನು ಸಂಪೂರ್ಣವಾಗಿ ಆವರಿಸಿಕೊಂಡ ಯೂಟ್ಯೂಬ್
ಗೂಗಲ್ ಸರ್ಚ್‌ನಿಂದ ಡೀಪ್‌ಫೇಕ್ ವಿಡಿಯೋ ತೆಗೆದು ಹಾಕುವ ಆಯ್ಕೆ
ಎಐ(ಆರ್ಟಿಫಿಶಿಯಲ್ ಇಂಟೆಲಿಜೆನ್ಸ್) ಅಥವಾ ಕೃತಕ ಬುದ್ಧಿಮತ್ತೆ ಬಂದ ನಂತರ ಡೀಪ್‌ಫೇಕ್ ವಿಡಿಯೊ ತುಂಬಾ ಗಂಭೀರ ಸಮಸ್ಯೆಯಾಗಿದೆ. ಯಾರದೋ ಮುಖಕ್ಕೆ ಇನ್ಯಾರದ್ದೋ ದೇಹವನ್ನು ಸೇರಿಸಿ ನಕಲಿ ಚಿತ್ರಗಳು ಮತ್ತು ವಿಡಿಯೊಗಳ ತಯಾರಿಸುವವರ ಸಂಖ್ಯೆ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿದೆ. ಕಳೆದ ಐದು ವರ್ಷಗಳಲ್ಲಿ ಡೀಪ್‌ಫೇಕ್ ವಿಡಿಯೋಗಳ ಸಂಖ್ಯೆ ನೂರಾರು ಪಟ್ಟು ಹೆಚ್ಚಾಗಿದೆ. ಇದನ್ನು ನಿಯಂತ್ರಿಸಲು ಗೂಗಲ್ ಕೂಡ ಮುಂದಾಗಿದೆ. ಗೂಗಲ್ ಹುಡುಕಾಟದಿಂದ ಒಪ್ಪಿಗೆಯಿಲ್ಲದ ಡೀಪ್‌ಫೇಕ್ ವಿಷಯವನ್ನು ತೆಗೆದುಹಾಕಲು ಹೊಸ ಟೂಲ್ಸ್ ಪರಿಚಯಿಸಲಾಗಿದೆ.

ಈ ಟೂಲ್ಸ್‌ಅನ್ನು ಹೇಗೆ ಬಳಸಬಹುದು ಎಂಬುದರ ಬಗ್ಗೆ ಇಲ್ಲಿದೆ ಮಾಹಿತಿ
- ಬಳಕೆದಾರರ ನಗ್ನ ಚಿತ್ರಗಳು ಅಥವಾ ವಿಡಿಯೊಗಳು ಗೂಗಲ್ ಹುಡುಕಾಟ ಅಥವಾ ವೆಬ್‌ಪುಟದಲ್ಲಿ ಗೋಚರಿಸುತ್ತಿದ್ದರೆ, ಕೆಳಗಿನ ವೆಬ್‌ಫಾರ್ಮ್ ಅನ್ನು ಭರ್ತಿ ಮಾಡುವ ಮೂಲಕ ಗೂಗಲ್‌ಗೆ ವಿನಂತಿಸಬಹುದು.
ಗೂಗಲ್ ವೆಬ್‌ಫಾರ್ಮ್: https://support.google.com/websearch/contact/content_removal_form
2. ಮಕ್ಕಳ ಲೈಂಗಿಕ ಕಿರುಕುಳ/ನಿಂದನೆ ವಿಷಯವಾಗಿದ್ದರೆ ಅದನ್ನು ತೆಗೆದು ಹಾಕಲು ವಿನಂತಿ ವಿಷಯಕ್ಕಾಗಿ ಪ್ರತ್ಯೇಕ ಫಾರ್ಮ್ ಇದೆ. ಆದ್ದರಿಂದ ನೀವು ಡೀಪ್‌ಫೇಕ್ ವಿಷಯಕ್ಕಾಗಿ ಸರಿಯಾದ ಫಾರ್ಮ್ ಬಳಸುತ್ತಿರುವಿರಿ ಎಂದು ಖಚಿತಪಡಿಸಿಕೊಳ್ಳಿ.
3. ಫಾರ್ಮ್‌ನಲ್ಲಿ, ”ವಿಷಯವು ನನ್ನನ್ನು ಲೈಂಗಿಕ ಕ್ರಿಯೆಯಲ್ಲಿ ತೊಡಗಿರುವಂತೆ ತಪ್ಪಾಗಿ ಚಿತ್ರಿಸುತ್ತದೆ ಎಂದು ಹೇಳುವ ಆಯ್ಕೆಯನ್ನು ಆರಿಸಿ. (ಇದನ್ನು ಕೆಲವೊಮ್ಮೆ ‘ಡೀಪ್ ಫೇಕ್’ ಅಥವಾ ‘ಫೇಕ್ ಪೋರ್ನೋಗ್ರಫಿ’ ಎಂದು ಕರೆಯಲಾಗುತ್ತದೆ).”
4. ಫಾರ್ಮ್‌ನಲ್ಲಿ ನಿಮ್ಮ ಹೆಸರು, ವಾಸಿಸುವ ದೇಶ ಮತ್ತು ಸಂಪರ್ಕ ಇಮೇಲ್ ಅನ್ನು ಭರ್ತಿ ಮಾಡಿ. ನೀವು ಅಥವಾ ಬೇರೆಯವರನ್ನು ಕಂಟೆಂಟ್‌ನಲ್ಲಿ ಚಿತ್ರಿಸಲಾಗಿದೆಯೇ ಎಂಬುದನ್ನು ಸಹ ನೀವು ನಿರ್ದಿಷ್ಟಪಡಿಸಬೇಕಾಗುತ್ತದೆ. ನೀವು ಇನ್ನೊಬ್ಬರ ಪರವಾಗಿ ವಿನಂತಿ ಸಲ್ಲಿಸುವುದಾದರೆ, ವಿನಂತಿಸಲು ನಿಮಗೆ ಹೇಗೆ ಅಧಿಕಾರವಿದೆ ಎಂಬುದನ್ನು ವಿವರಿಸಿ.
5. ನೀವು ತೆಗೆದುಹಾಕಲು ಬಯಸುವ ಡೀಪ್‌ಫೇಕ್ ವಿಷಯದ URL ಗಳನ್ನು ನಮೂದಿಸಿ (1,000 ಯುಆರ್‌ಎಲ್ (URL) ಗಳವರೆಗೆ ಯುಆರ್‌ಎಲ್‌ಗಳನ್ನು ಸಲ್ಲಿಸಬಹುದು). ಈ ಡೀಪ್‌ಫೇಕ್‌ಗಳು ಗೋಚರಿಸುವ ಗೂಗಲ್ ಹುಡುಕಾಟ ಫಲಿತಾಂಶಗಳ ಯುಆರ್‌ಎಲ್‌ಗಳನ್ನು ಮತ್ತು ಅವುಗಳಿಗೆ ಕಾರಣವಾಗುವ ಹುಡುಕಾಟ ಪದಗಳನ್ನು ಸಹ ನೀವು ಒದಗಿಸಬೇಕಾಗುತ್ತದೆ. ವಿಷಯಕ್ಕೆ ಸಂಬಂಧಿಸಿದ ಸ್ಕ್ರೀನ್‌ಶಾಟ್‌ಗಳನ್ನು ಅಪ್‌ಲೋಡ್ ಮಾಡಿ. ಜೊತೆಗೆ ನಿಮ್ಮ ವಿನಂತಿಯನ್ನು ವಿವರಿಸಲು ಸಹಾಯ ಮಾಡುವ ಯಾವುದೇ ಹೆಚ್ಚುವರಿ ವಿವರಗಳನ್ನು ನೀಡಬಹುದು.
6. ಈ ರೀತಿ ನಿಮ್ಮ ವಿನಂತಿಯನ್ನು ಸಲ್ಲಿಸಿದ ನಂತರ ದೃಢೀಕರಿಸುವ ಸ್ವಯಂಚಾಲಿತ ಇಮೇಲ್ ಅನ್ನು ನೀವು ಸ್ವೀಕರಿಸುವಿರಿ.
7. ನಂತರದಲ್ಲಿ ಗೂಗಲ್ ನಿಮ್ಮ ವಿನಂತಿಯನ್ನು ಪರಿಶೀಲಿಸುತ್ತದೆ. ಅಗತ್ಯವಿದ್ದರೆ ಹೆಚ್ಚಿನ ಮಾಹಿತಿಯನ್ನು ನಿಮ್ಮಿಂದ ಕೇಳಬಹುದು. ತೆಗೆದುಕೊಂಡ ಯಾವುದೇ ಕ್ರಮಗಳ ಬಗ್ಗೆ ಅಥವಾ ನಿಮ್ಮ ವಿನಂತಿಯು ಅವಶ್ಯಕತೆಗಳನ್ನು ಪೂರೈಸದಿದ್ದರೆ ವಿವರಣೆಯೊಂದಿಗೆ ನಿಮಗೆ ಸೂಚಿಸಲಾಗುತ್ತದೆ.
8. ಒಂದು ವೇಳೆ ನಿಮ್ಮ ವಿನಂತಿಯನ್ನು ನಿರಾಕರಿಸಿದರೆ, ನೀವು ಅದನ್ನು ಹೆಚ್ಚುವರಿ ವಿಷಯಗಳನ್ನು ಲಗತ್ತಿಸಿ ಪುನಃ ಸಲ್ಲಿಸಬಹುದು. ನಿಮ್ಮ ವಿನಂತಿ ಯಶಸ್ವಿಯಾಗಿ ಸಲ್ಲಿಕೆಯಾದರೆ, ನಿಮ್ಮ ಬಗ್ಗೆ ಭವಿಷ್ಯದ ಹುಡುಕಾಟಗಳಲ್ಲಿ ಇದೇ ರೀತಿಯ ಸ್ಪಷ್ಟ ಫಲಿತಾಂಶಗಳನ್ನು ಫಿಲ್ಟರ್ ಮಾಡಲು ನಮ್ಮ ಸಿಸ್ಟಮ್‌ಗಳು ಪ್ರಯತ್ನಿಸುತ್ತವೆ ಎಂದು ಗೂಗಲ್ ಹೇಳುತ್ತದೆ. ಅನಂತರದಲ್ಲಿ ಗೂಗಲ್ ಚಿತ್ರ/ದೃಶ್ಯದ ಯಾವುದೇ ನಕಲುಗಳನ್ನು ಸಹ ಹುಡುಕಿ ತೆಗೆದುಹಾಕುತ್ತದೆ.

amarguttedar96@gmail.com 9606564976 WhatsApp problem