ವಾಟ್ಸಪ್ ಬಳಕೆದಾರರಿಗೆ ಇದು ಗುಡ್ ನ್ಯೂಸ್. ವಾಟ್ಸಪ್ ಸ್ಟೇಟಸ್ ಅವಧಿ ಇದೀಗ ಒಂದು ನಿಮಿಷಕ್ಕೆ ಏರಿಕೆಯಾಗಿದೆ. ವಿಶ್ವಾದ್ಯಂತ ಎಲ್ಲರ ನೆಚ್ಚಿನ ಮೆಸೇಜಿಂಗ್ ಅಪ್ಲಿಕೇಷನ್ ವಾಟ್ಸಪ್‌ನಲ್ಲಿ ದಿನಕ್ಕೊಂದು ಹೊಸ ಹೊಸ ಫೀಚರ್‌ಗಳು ಸೇರಿಕೊಳ್ಳುತ್ತಿದೆ. ವಾಟ್ಸಪ್ ಸಂಸ್ಥೆಯು, ಇದೀಗ ‘ವಾಟ್ಸಪ್ ಸ್ಟೇಟಸ್’ನಲ್ಲಿ ಈ ಪ್ರಮುಖ ಬದಲಾವಣೆ ತಂದಿದೆ.
ಅತ್ಯಂತ ಹೆಚ್ಚಿನ ಬಳಕೆದಾರರನ್ನು ಹೊಂದಿರುವ ಜನಪ್ರಿಯ ಆ್ಯಪ್ ವಾಟ್ಸಪ್, ಈಗ ಮತ್ತೆ ಸ್ಟೇಟಸ್ ವಿಡಿಯೋ ಮಿತಿಯನ್ನು ಏರಿಕೆ ಮಾಡಿದೆ. ಇದರಿಂದಾಗಿ ವಾಟ್ಸಪ್ ಬಳಕೆದಾರರು ಒಂದು ನಿಮಿಷ (60 ಸೆಕೆಂಡ್) ಅವಧಿಯ ವಿಡಿಯೋಗಳನ್ನು ಸ್ಟೇಟಸ್‌ನಲ್ಲಿ ಪೋಸ್ಟ್ ಮಾಡಬಹುದಾಗಿದೆ. ಪ್ರಸ್ತುತ 30 ಸೆಕೆಂಡ್‌ಗಳ ವಿಡಿಯೋವನ್ನು ವಾಟ್ಸಪ್ ಸ್ಟೇಟಸ್‌ನಲ್ಲಿ ಹಾಕುವ ಮಿತಿ ನಿಗದಿ ಮಾಡಲಾಗಿತ್ತು.
ಆಂಡ್ರಾಯ್ಡ್ ಆವೃತ್ತಿ 2.24.7.6 ವರ್ಷನ್ ಅಪ್‌ಡೇಟ್‌ಗಾಗಿ ವಾಟ್ಸಪ್ ಸಂಸ್ಥೆಯು, ಬೀಟಾ ಸ್ಥಿತಿ ನವೀಕರಣಗಳ ಮೂಲಕ ಒಂದು ನಿಮಿಷದವರೆಗಿನ ವೀಡಿಯೊಗಳನ್ನು ಸ್ಟೇಟಸ್‌ನಲ್ಲಿ ಹಂಚಿಕೊಳ್ಳುವ ಸೌಲಭ್ಯವನ್ನು ಪರಿಚಯಿಸಿದೆ. ವಾಟ್ಸಪ್ ಸಂಸ್ಥೆಯು, ತನ್ನ ಬೀಟಾ ಕಾರ್ಯಕ್ರಮದ ಭಾಗವಾಗಿ ಸ್ಟೇಟಸ್ ಕಾರ್ಯಕ್ಕಾಗಿ ಈ ಹೊಸ ಫೀಚರ್ ಒದಗಿಸಿದೆ.
ಒಂದು ನಿಮಿಷದ ವಿಡಿಯೋ ಹಂಚಿಕೊಳ್ಳಿ ಐಫೋನ್ ಮೊಬೈಲ್ ಬಳಕೆದಾರರಿಗೆ ಕಂಪನಿಯು, iOS 24.10.10.74 ಅಪ್‌ಡೇಟ್‌ಗಾಗಿ ವಾಟ್ಸಪ್ ಬೀಟಾದೊಂದಿಗೆ ಫೀಚರ್ ಅನ್ನು ಲಾಂಚ್ ಮಾಡುತ್ತಿದೆ. ಇಲ್ಲಿಯವರೆಗೆ, ವಾಟ್ಸಪ್ ಬಳಕೆದಾರರು ತಮ್ಮ ಸ್ಟೇಟಸ್‌ನಲ್ಲಿ ಕೇವಲ 30 ಸೆಕೆಂಡ್‌ಗಳ ವರೆಗಿನ ವೀಡಿಯೊಗಳನ್ನು ಮಾತ್ರ ಹಂಚಿಕೊಳ್ಳಬಹುದಿತ್ತು. ಇದೀಗ, ವಾಟ್ಸಪ್ ಬಳಕೆದಾರರಿಗೆ ಒಂದು ನಿಮಿಷದ ವಿಡಿಯೋಗಳನ್ನು ಸ್ಟೇಟಸ್‌ನಲ್ಲಿ ಹಂಚಿಕೊಳ್ಳಲು ಅವಕಾಶ ನೀಡುವ ಗುರಿಯನ್ನು ಹೊಂದಿದೆ.
status update: new fonts and colors are rolling out now 🙂↕️ pic.twitter.com/PegjYSoefZ
— WhatsApp (@WhatsApp) May 17, 2024
2017ರಲ್ಲಿ ವಾಟ್ಸಪ್ ಸಂಸ್ಥೆ ಮೊದಲ ಬಾರಿಗೆ ಸ್ಟೇಟಸ್ ಆಯ್ಕೆ ಪರಿಚಯಿಸಿದ್ದು, ಫೋಟೋ, ವಿಡಿಯೋ ಮತ್ತು ಜಿಫ್ ಫೈಲ್‌ಗಳನ್ನು ಅಪ್‌ಲೋಡ್ ಮಾಡಲು ಅವಕಾಶ ಕಲ್ಪಿಸಿತ್ತು. ಅಪ್ಲೋಡ್ ಮಾಡಿದ ಫೈಲ್‌ಗಳು 24 ಗಂಟೆಗಳ ನಂತರ ತನ್ನಷ್ಟಕ್ಕೆ ತಾನೇ ಮರೆಯಾಗುತ್ತವೆ. ಅಲ್ಲಿಯವರೆಗೆ ಬಳಕೆದಾರನ ಸಂಪರ್ಕದಲ್ಲಿರುವರಿಗೆ ಮಾತ್ರ ಸ್ಟೇಟಸ್ ಕಾಣಿಸುತ್ತದೆ. ಇತ್ತೀಚಿಗೆ ವಾಟ್ಸಪ್ ‘ಸ್ಟೇಟಸ್’ ಫೀಚರ್‌ನಲ್ಲಿ ಬದಲಾವಣೆ ತಂದಿದ್ದು, ವಾಟ್ಸಪ್ ಸ್ಟೇಟಸ್ ಅನ್ನು ನೇರವಾಗಿ ಫೇಸ್‌ಬುಕ್ ಒಡೆತನದ ಯಾವುದೇ ಸಾಮಾಜಿಕ ಆಪ್ ಖಾತೆಗೆ ಶೇರ್ ಮಾಡಬಹುದಾಗಿದೆ.
90 ಸೆಕೆಂಡ್‌ನಿಂದ 30 ಸೆಕೆಂಡ್‌ಗೆ ಕಡಿತ ಈ ಫೀಚರ್ ಪರಿಚಯಿಸಿದ ಪ್ರಾರಂಭದ ದಿನಗಳಲ್ಲಿ ಮೂರು ನಿಮಿಷದ ವಿಡಿಯೋಗಳಿಗೆ 90 ಸೆಕೆಂಡ್ ಅವಧಿ ನೀಡಲಾಗಿತ್ತು. ಅಲ್ಲದೇ, ಅಪ್ಲೋಡ್ ಮಾಡುವ ಫೈಲ್ 16 ಎಂಬಿಗಿಂತ ಜಾಸ್ತಿ ಇದ್ದರೆ, ಅದನ್ನು ಎಡಿಟ್ ಮಾಡಿ ಸ್ಟೇಟಸ್‌ಗೆ ಕಳುಹಿಸುವ ಅವಕಾಶ ನೀಡಲಾಗಿತ್ತು. ಆ ಬಳಿಕ ಸ್ಟೇಟಸ್ ಅನ್ನು 30 ಸೆಕೆಂಡ್‌ಗೆ ಇಳಿಸಲಾಗಿತ್ತು. ಇದೀಗ ಮತ್ತೆ ಈ ಅವಧಿಯನ್ನು 60 ಸೆಕೆಂಡ್‌ಗಳಿಗೆ ವಿಸ್ತರಿಸಿ, ಬಳಕೆದಾರರಿಗೆ ಸಿಹಿ ಸುದ್ದಿ ನೀಡಿದೆ. ಈಗಲೇ ನಿಮ್ಮ ವಾಟ್ಸಪ್ ಅಪ್ಡೇಟ್ ಮಾಡಿ ವಾಟ್ಸಪ್‌ನಲ್ಲಿ ವಿಡಿಯೋ ಸ್ಟೇಟಸ್ ಹಂಚಿಕೊಳ್ಳಬಹುದು.
ಇದರ ಜೊತೆಗೆ ವಾಯ್ಸ್ ನೋಟನ್ನು ಕೂಡ ಒಂದು ನಿಮಿಷಕ್ಕೆ ವಿಸ್ತರಿಸುವ ಬಗ್ಗೆಯೂ ವಾಟ್ಸಪ್ ಯೋಚಿಸಿದೆ ಎಂದು ತಿಳಿದುಬಂದಿದೆ.
