ತಾಲ್ಲೂಕಿನ ಪರಗೋಡಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಪೂಲವಾರಪಲ್ಲಿ ಗ್ರಾಮದ ನಾಲ್ವರು ರೈತ ಕುಟುಂಬಗಳ ೧೫ ಎಕರೆ ೧೨ ಗುಂಟೆ ಜಮೀನನ್ನು ಕಂದಾಯ ಇಲಾಖೆ ಸಿಬ್ಬಂದಿ ಹೆಸರಿಗೆ ಅಕ್ರಮವಾಗಿ ಖಾತೆ ಮಾಡಿಕೊಂಡಿರುವ ತಹಶೀಲ್ದಾರ್ ಮತ್ತು ಸಿಬ್ಬಂದಿಯನ್ನು ಸೇವೆಯಿಂದ ವಜಾಗೊಳಿಸಿ ಕಾನೂನು ಕ್ರಮ ಜರುಗಿಸಿದಿದ್ದರೆ ಸರ್ಕಾರದ ವಿರುದ್ದ ಬೀದಿಗಿಳಿದು ಹೋರಾಟ ನಡೆಸಬೇಕಾಗುತ್ತದೆ ಎಂದು ಎನ್‌ಡಿಎ ಮುಖಂಡ ಹರಿನಾಥರೆಡ್ಡಿ ಜಿಲ್ಲಾಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ.
ಬಾಗೇಪಲ್ಲಿ ಪಟ್ಟಣ ಹೊರವಲಯದಲ್ಲಿರುವ ಹರಿನಾಥರೆಡ್ಡಿ ಚಾರಿಟಬಲ್ ಟ್ರಸ್ಟ್ ಕಚೇರಿಯಲ್ಲಿ ಎನ್‌ಡಿಎ ಮುಖಂಡ ಹರಿನಾಥರೆಡ್ಡಿ ಸುದ್ದಿಗೋಷ್ಠಿ ನಡೆಸಿ ಪೂಲವಾರಪಲ್ಲಿ ಗ್ರಾಮದ ೧೫ ಎಕರೆ ೧೨ ಗುಂಟೆ ಜಮೀನು ಅಕ್ರಮ ಖಾತೆ ಹಾಗೂ ಕೆಐಎಡಿಬಿ ಭೂ ಸ್ವಾಧೀನದಲ್ಲಿ ನಡೆದಿರುವ ಭೂ ಅಕ್ರಮಗಳನ್ನು ಸಮಗ್ರ ತನಿಖೆ ನಡೆಸಬೇಕು, ಪಾತಪಾಳ್ಯ ಬಳಿಯ ಘಂಟ್ಲಮಲ್ಲಮ್ಮ ಡ್ಯಾಂ ನಿರ್ಮಾಣಕ್ಕೆ ಜಮೀನು ಕಳೆದುಕೊಂಡಿರುವ ಸಂತ್ರಸ್ಥ ರೈತರಿಗೆ ನ್ಯಾಯಯುತ ಪರಿಹಾರ ಕಲ್ಪಿಸುವಂತೆ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಎನ್‌ಡಿಎ ಮುಖಂಡ ಹರಿನಾಥರೆಡ್ಡಿ ಮಾತನಾಡಿ, ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದ ಸಾವಿರಾರು ರೈತರು ಪಾರಂ ೫೩ ನಲ್ಲಿ ಅರ್ಜಿ ಸಲ್ಲಿಸಿದ್ದರೂ ೧೪ ವರ್ಷಗಳ ಶಾಸಕರ ಅಡಳಿತದಲ್ಲಿ ಒಬ್ಬರಿಗೂ ಜಮೀನು ಮಂಜೂರು ಮಾಡಿಲ್ಲ, ಆದರೇ ಬಾಗೇಪಲ್ಲಿ ತಾಲೂಕಿನ ಹೊಸಹುಡ್ಯ ಗ್ರಾಮದ ಸರ್ವೇ ನಂಬರನಲ್ಲಿ ಕೃಷ್ಣಾರೆಡ್ಡಿ ಎಂಬವರ ಹೆಸರಿನಲ್ಲಿ ನಕಲಿ ದಾಖಲೆ ಸೃಷ್ಟಿಸಿ ೨೦೧೮ ನೇ ಸಾಲಿನಲ್ಲಿ ನಾಲ್ಕು ಎಕರೆ ಜಮೀನನ್ನು ಪಾರಂ ೫೩ ರಲ್ಲಿ ಮಂಜೂರು ಮಾಡಿಸಿರುವ ಧರಖಾಸ್ತು ಸಮಿತಿ ಅಧ್ಯಕ್ಷರು ಹಾಗೂ ಶಾಸಕರಾದ ಎಸ್.ಎನ್.ಸುಬ್ಬಾರೆಡ್ಡಿ ತಮ್ಮ ಪುತ್ರಿ ಅಮೃತ ಹೆಸರಿಗೆ ನೊಂದಣಿ ಮಾಡಿಸಿಕೊಂಡು ಕೆಐಎಡಿಬಿಯಿಂದ ನಾಲ್ಕು ಎಕರೇ ಜಮೀನಿಗೆ ನಾಲ್ಕು ಕೋಟಿ ಪರಿಹಾರ ಪಡೆದುಕೊಂಡು ವ್ಯಾಪಕ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ, ಇಂತಹ ನೂರಾರು ದಾಖಲೆಗಳಿದ್ದು ಸಮಾಜ ಸೇವಕ ಸುಬ್ಬಾರೆಡ್ಡಿಯ ನಕಲಿ ಮುಖವಾಡವನ್ನು ಮುಂದಿನ ದಿನಗಳಲ್ಲಿ ಜನರ ಮುಂದೆ ಇಡಲಿದ್ದೇನೆ.
ಬಾಗೇಪಲ್ಲಿ ತಾಲೂಕಿನ ಪೂಲವಾರಪಲ್ಲಿ ಗ್ರಾಮದ ನಾಲ್ವರು ರೈತ ಕುಟುಂಬಗಳಿಗೆ ಸೇರಿರುವ ೧೫ ಎಕರೆ ೧೨ ಗುಂಟೆ ಜಮೀನನ್ನು ಫವತಿ ಖಾತೆ ಮೂಲಕ ಕಂದಾಯ ಇಲಾಖೆ ಸಿಬ್ಬಂದಿ ಹೆಸರಿಗೆ ಖಾತೆ ಮಾಡಿ ಭೂ ಅಕ್ರಮ ಮಾಡಿರುವ ತಹಶೀಲ್ದಾರ್ ಮನೀಷಾಪತ್ರಿ ಹಾಗೂ ಸಿಬ್ಬಂದಿ ವರ್ಗದವರನ್ನು ಈ ಕೂಡಲೆ ಸೇವೆಯಿಂದ ವಜಾಗೊಳಿಸಬೇಕು, ಇಲ್ಲದಿದ್ದರೆ ಎನ್‌ಡಿಎ ವತಿಯಿಂದ ಸರ್ಕಾರದ ವಿರುದ್ದ ಬೀದಿಗಿಳಿದು ಹೋರಾಟ ನಡೆಸಬೇಕಾತ್ತೆ ಎಂದು ಜಿಲ್ಲಾಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ನೂರಾರು ಬಾರ್‌ಗಳ ಮಾಲೀಕರಾಗಿರುವ ಶಾಸಕ ಸುಬ್ಬಾರೆಡ್ಡಿಗೆ ಎಂಎಸ್‌ಐಎಲ್ ಅಧ್ಯಕ್ಷ ಸ್ಥಾನ ನೀಡಿರುವ ಕಾಂಗ್ರೆಸ್ ಸರ್ಕಾರದ ಧೋರಣೆ ಹೇಗಿದೆ ಎಂದರೆ ಕಳ್ಳನ ಕೈಗೆ ಮನೆ ಬೀಗ ಕೊಟ್ಟಂತಿದೆ, ಕ್ಷೇತ್ರದ ಅಭಿವೃದ್ದಿಗೆ ಶಕ್ತಿ ತುಂಬುವಂತಹ ನಿಗಮ ಮಂಡಳಿ ತೆಗೆದುಕೊಟ್ಟರೆ ನಮಗೆ ಯಾವುದೇ ಆಕ್ಷೇಪ ಇಲ್ಲ, ಆದರೆ ಬಾರ್‌ಗಳ ಮಾಲೀಕನಿಗೆ ಇಂತಹ ಅಧ್ಯಕ್ಷ ಸ್ಥಾನ ಕೊಟ್ಟರೆ ಕ್ಷೇತ್ರ ಏನು ಅಭಿವೃದ್ದಿ ಆಗಲಿದೆ ಎಂದು ಕ್ಷೇತ್ರದ ಜನ ಒಮ್ಮೆ ಯೋಚಿಸಬೇಕಾಗಿದೆ ಎಂದು ವಾಗ್ದಾಳಿ ನಡೆಸಿದರು.
ಇದನ್ನು ಓದಿದ್ದೀರಾ..?ಕೋಲಾರ | ಅಂಬೇಡ್ಕರ್ ಪುತ್ಥಳಿ ನಿರ್ಮಾಣದಲ್ಲಿ ಪ್ರತಿಷ್ಠೆಗಿಂತ ಗೌರವ, ರಕ್ಷಣೆಗೆ ಆದ್ಯತೆ: ಕೊತ್ತೂರು ಮಂಜುನಾಥ್
ಈ ಸಂದರ್ಭದಲ್ಲಿ ಮುಖಂಡರಾದ ಜೆ.ಪಿ.ಚಂದ್ರಶೇಖರರೆಡ್ಡಿ, ಆ.ನ.ಮೂರ್ತಿ, ಗುಡಿಬಂಡೆ ಇಸ್ಕೂಲಪ್ಪ, ನರಂಸಿಹಪ್ಪ, ಮುಂಜುನಾಥರೆಡ್ಡಿ, ಕಡೇಹಳ್ಳಿ ಬಾಬುರೆಡ್ಡಿ, ಸುದರ್ಶನ್ ನಾಯ್ಡು, ಕೆ.ಟಿ.ವೀರಾಂಜನೇಯ, ಅಮರಪ್ಪ, ಸುನೀಲ್ ರೆಡ್ಡಿ, ಶ್ರೀನಿವಾಸರೆಡ್ಡಿ, ಎವಿಟಿ ನಾರಾಯುಣಸ್ವಾಮಿ, ಸುಬ್ರಮಣಿ, ಭರತ್‌ರೆಡ್ಡಿ ಮತ್ತಿತರರು ಹಾಜರಿದ್ದರು.



