ವಿಚ್ಛೇದನ ಪಡೆಯದೆ ಬೇರೊಬ್ಬರೊಂದಿಗೆ ‘ಲಿವ್-ಇನ್’ ಸಂಬಂಧ ಕಾನೂನುಬಾಹಿರ: ಅಲಹಾಬಾದ್ ಹೈಕೋರ್ಟ್

Date:

ವಯಸ್ಕರು ತಮ್ಮ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳುವಾಗ ಗೋತ್ರ, ಜಾತಿ ಅಥವಾ ಧರ್ಮಕ್ಕೆ ಯಾವುದೇ ಸ್ಥಾನವಿಲ್ಲದಿರಬಹುದು. ಆದರೆ, ವೈಯಕ್ತಿಕ ಸ್ವಾತಂತ್ರ್ಯದ ಹೆಸರಿನಲ್ಲಿ ಈಗಾಗಲೇ ಅಸ್ತಿತ್ವದಲ್ಲಿರುವ ಸಂಗಾತಿಯ ಕಾನೂನುಬದ್ಧ ಹಕ್ಕುಗಳನ್ನು ಕಸಿದುಕೊಳ್ಳಲು ಸಾಧ್ಯವಿಲ್ಲ ಎಂದು ಅಲಹಾಬಾದ್ ಹೈಕೋರ್ಟ್ ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದೆ.

- Advertisement -

ಮೊದಲ ಪತಿಯಿಂದ ವಿಚ್ಛೇದನ ಪಡೆಯದೆಯೇ ಬೇರೊಬ್ಬ ಪುರುಷನೊಂದಿಗೆ ‘ಲಿವ್-ಇನ್’ ಸಂಬಂಧದಲ್ಲಿದ್ದ ಮಹಿಳೆ ಮತ್ತು ಆಕೆಯ ಸಂಗಾತಿ ತಮಗೆ ಪೊಲೀಸ್ ರಕ್ಷಣೆ ನೀಡುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ವಿವೇಕ್ ಕುಮಾರ್ ಸಿಂಗ್ ಅವರಿದ್ದ ಏಕಸದಸ್ಯ ಪೀಠ ವಜಾಗೊಳಿಸಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಬಸವಣ್ಣನವರಿಂದ ಗಾಂಧಿಯವರೆಗೆ: ಆಯ್ದ ಕಥನಗಳ ಮೂಲಕ ಇತಿಹಾಸವನ್ನು ತಿರುಚುವ...

ಇತಿಹಾಸವನ್ನು ವಿಮರ್ಶಿಸುವ ಹಕ್ಕು ಎಲ್ಲರಿಗೂ ಇದೆ; ಆದರೆ ಇತಿಹಾಸವನ್ನು ತಿರುಚುವ ಹಕ್ಕು ಯಾರಿಗೂ ಇಲ್ಲ. ಬಸವಣ್ಣನವರನ್ನು ವೈದಿಕ ಚೌಕಟ್ಟಿಗೆ ಸೀಮಿತಗೊಳಿಸುವುದಾಗಲಿ, ಗಾಂಧಿಯವರ ಹತ್ಯೆಯನ್ನು ಗೋಡ್ಸೆಯ ಸಮರ್ಥನೆಯ ಮೂಲಕ ನ್ಯಾಯೀಕರಿಸುವುದಾಗಲಿ ಇತಿಹಾಸದ ಸಮಗ್ರ ಅಧ್ಯಯನಕ್ಕೆ...

ಕೋಲಾರ ಕ್ಲಾಕ್ ಟವರ್ ವಿವಾದ: ಜಿಲ್ಲಾಡಳಿತದ ನಿರ್ಧಾರದತ್ತ ಜನರ...

ಕೋಲಾರ ನಗರದ ಇತಿಹಾಸ ಪ್ರಸಿದ್ಧ ಕ್ಲಾಕ್‌ ಟವರ್‌ನಲ್ಲಿ ಸಂಸದರ ಅನುದಾನದಲ್ಲಿ ಅಳವಡಿಸಲಾಗುತ್ತಿರುವ ಎಚ್‌ಎಂಟಿ ಗಡಿಯಾರದಲ್ಲಿ ಸಂಸದ ಮಲ್ಲೇಶ್‌ ಬಾಬು ಹೆಸರಿರಬೇಕೋ, ಬೇಡವೋ ಎಂದು ಕಳೆದ ಮೂರ್ನಾಲ್ಕು ದಿನಗಳಿಂದ ನಡೆಯುತ್ತಿರುವ ಚರ್ಚೆ ಈಗ ವಿವಾದದ...

ಅಧಿಕೃತ ಕೆಲಸಕ್ಕೆ WHATSAPP ವೆಬ್ ಅಪಾಯಕಾರಿ ಏಕೆ? ಗೃಹ...

ಕಚೇರಿ, ಸಾರ್ವಜನಿಕ ಅಥವಾ ಹಲವರು ಹಂಚಿಕೊಂಡು ಬಳಸುವ ಕಂಪ್ಯೂಟರ್‌ಗಳಲ್ಲಿ WHATSAPP ವೆಬ್ ಬಳಸುವವರಿಗೆ ಕೇಂದ್ರ ಗೃಹ ಸಚಿವಾಲಯ ಮಹತ್ವದ ಭದ್ರತಾ ಎಚ್ಚರಿಕೆ ನೀಡಿದೆ. ಸಚಿವಾಲಯದ ಅಧೀನದ ಭಾರತೀಯ ಸೈಬರ್ ಅಪರಾಧ ಸಮನ್ವಯ ಕೇಂದ್ರದ...

 ದಾಂಪತ್ಯ ವಿರಸದ ಕಾರಣದಿಂದ ಮೊದಲ ಪತಿಯಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದ ಮಹಿಳೆಯೊಬ್ಬರು, ಕಾನೂನುಬದ್ಧವಾಗಿ ವಿಚ್ಛೇದನ ಪಡೆಯದೆಯೇ ಮತ್ತೊಬ್ಬ ವ್ಯಕ್ತಿಯೊಂದಿಗೆ ಸಹಜೀವನ ನಡೆಸುತ್ತಿದ್ದರು. ತಾವು ಗಂಡ-ಹೆಂಡತಿಯಂತೆ ಬದುಕುತ್ತಿದ್ದೇವೆ. ಆದರೆ, ತಮಗೆ ಇಬ್ಬರು ವ್ಯಕ್ತಿಗಳಿಂದ ಜೀವ ಬೆದರಿಕೆಯಿದೆ ಎಂದು ಆರೋಪಿಸಿದ್ದ ಈ ಜೋಡಿ, ತಮ್ಮ ಶಾಂತಿಯುತ ಜೀವನಕ್ಕೆ ಅಡ್ಡಿಪಡಿಸದಂತೆ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಮತ್ತು ಸೂಕ್ತ ಪೊಲೀಸ್ ರಕ್ಷಣೆ ಒದಗಿಸಬೇಕು ಎಂದು ಕೋರಿ ಹೈಕೋರ್ಟ್ ಮೆಟ್ಟಿಲೇರಿತ್ತು.

ನವೆಂಬರ್ 20ರಂದು ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ವಿವೇಕ್ ಕುಮಾರ್ ಸಿಂಗ್, ಭಾರತೀಯ ಸಂವಿಧಾನ ಮತ್ತು ಕೌಟುಂಬಿಕ ಕಾನೂನಿನ ಚೌಕಟ್ಟನ್ನು ಸ್ಪಷ್ಟಪಡಿಸಿದರು. 

“ಇಬ್ಬರು ವಯಸ್ಕರ ವೈಯಕ್ತಿಕ ಸ್ವಾತಂತ್ರ್ಯದಲ್ಲಿ ಹಸ್ತಕ್ಷೇಪ ಮಾಡುವ ಹಕ್ಕು ಯಾರಿಗೂ ಇಲ್ಲ, ಅವರ ಪೋಷಕರಿಗೂ ಆ ಅಧಿಕಾರವಿಲ್ಲ. ಆದರೆ, ಸ್ವಾತಂತ್ರ್ಯ ಅಥವಾ ವೈಯಕ್ತಿಕ ಸ್ವಾತಂತ್ರ್ಯದ ಹಕ್ಕು ಸಂಪೂರ್ಣ ಅಥವಾ ಅನಿಯಂತ್ರಿತವಲ್ಲ. ಅದಕ್ಕೂ ಕೆಲವು ಕಾನೂನುಬದ್ಧ ನಿರ್ಬಂಧಗಳಿವೆ” ಎಂದು ಪೀಠ ಹೇಳಿದೆ.

“ಒಬ್ಬ ವ್ಯಕ್ತಿಯ ಸ್ವಾತಂತ್ರ್ಯವು ಎಲ್ಲಿ ಮತ್ತೊಬ್ಬ ವ್ಯಕ್ತಿಯ ಶಾಸನಬದ್ಧ ಹಕ್ಕು ಪ್ರಾರಂಭವಾಗುತ್ತದೆಯೋ ಅಲ್ಲಿ ಕೊನೆಗೊಳ್ಳುತ್ತದೆ. ವಿವಾಹಿತ ಸಂಗಾತಿಯು ತನ್ನ ಸಂಗಾತಿಯ ಒಡನಾಟವನ್ನು ಪಡೆಯುವ ಕಾನೂನುಬದ್ಧ ಹಕ್ಕನ್ನು ಹೊಂದಿರುತ್ತಾನೆ. ಇನ್ನೊಬ್ಬರ ವೈಯಕ್ತಿಕ ಸ್ವಾತಂತ್ರ್ಯದ ಹೆಸರಿನಲ್ಲಿ ಆ ಹಕ್ಕನ್ನು ಕಸಿದುಕೊಳ್ಳಲು ಸಾಧ್ಯವಿಲ್ಲ” ಎಂದು ನ್ಯಾಯಾಲಯ ತಿಳಿಸಿದೆ.

ಯಾವುದೇ ಸಂಬಂಧವನ್ನು ‘ಮದುವೆಯ ಸ್ವರೂಪದ ಸಂಬಂಧ’ ಎಂದು ಪರಿಗಣಿಸಬೇಕಾದರೆ, ಇಬ್ಬರೂ ಸಂಗಾತಿಗಳು ಕಾನೂನುಬದ್ಧವಾಗಿ ಮದುವೆಯಾಗಲು ಅರ್ಹರಾಗಿರಬೇಕು. ಅಂದರೆ, ಇಬ್ಬರೂ ಅವಿವಾಹಿತರಾಗಿರಬೇಕು ಅಥವಾ ಹಿಂದಿನ ಮದುವೆಯಿಂದ ಕಾನೂನುಬದ್ಧ ವಿಚ್ಛೇದನ ಪಡೆದಿರಬೇಕು.

ಅರ್ಜಿದಾರರು ತಾವು ಗಂಡ-ಹೆಂಡತಿಯಂತೆ ಬದುಕುತ್ತಿದ್ದೇವೆ ಎಂದು ಸಾಬೀತುಪಡಿಸಲು ಜಂಟಿ ಬ್ಯಾಂಕ್ ಖಾತೆ, ಜಂಟಿ ಆಸ್ತಿ ಅಥವಾ ಜಂಟಿ ವೆಚ್ಚಗಳಿಗೆ ಸಂಬಂಧಿಸಿದ ಯಾವುದೇ ದಾಖಲೆಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿರಲಿಲ್ಲ.

ಇದೇ ವೇಳೆ, ಬಹುಪತ್ನಿತ್ವ, ದ್ವಿಪತ್ನಿತ್ವ ಮತ್ತು ವಿವಾಹ ಬಾಹಿರ ಸಂಬಂಧಗಳನ್ನು ಕಾನೂನು ಮಾನ್ಯ ಮಾಡುವುದಿಲ್ಲ ಎಂದು ಕೋರ್ಟ್ ಎಚ್ಚರಿಸಿದೆ. ಅಲ್ಲದೆ, ಮತಾಂತರಗೊಳ್ಳುವುದರಿಂದ ಮೊದಲ ಮದುವೆ ರದ್ದಾಗುವುದಿಲ್ಲ ಮತ್ತು ದ್ವಿಪತ್ನಿತ್ವದ ಅಪರಾಧದಿಂದ (ಭಾರತೀಯ ದಂಡ ಸಂಹಿತೆಯ ಸೆಕ್ಷನ್ 494, 495 ಹಾಗೂ ಪ್ರಸ್ತುತ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 82(1) ಮತ್ತು 82(2)) ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಪೀಠ ಸ್ಪಷ್ಟಪಡಿಸಿದೆ.

ಸಂವಿಧಾನದ 226ನೇ ವಿಧಿಯ ಅಡಿಯಲ್ಲಿ ‘ಮ್ಯಾಂಡಮಸ್’ ರಿಟ್ ಹೊರಡಿಸಲು ಅರ್ಜಿದಾರರಿಗೆ ಕಾನೂನುಬದ್ಧ ಹಕ್ಕು ಇರಬೇಕು. ವಿಚ್ಛೇದನ ಪಡೆಯದೆ ಬೇರೊಬ್ಬರೊಂದಿಗೆ ವಾಸಿಸುವುದು ಕಾನೂನಿನ ಆಶಯಕ್ಕೆ ವಿರುದ್ಧವಾಗಿರುವುದರಿಂದ, ಅಂತಹ ಸಂಬಂಧಕ್ಕೆ ನ್ಯಾಯಾಲಯ ರಕ್ಷಣೆ ನೀಡಿದರೆ ಅದು ಅಪರಾಧಕ್ಕೆ ಬೆಂಬಲ ನೀಡಿದಂತಾಗುತ್ತದೆ ಎಂದು ನ್ಯಾಯಪೀಠ ಅಭಿಪ್ರಾಯ ಪಟ್ಟು ರಕ್ಷಣೆ ನೀಡಲು ನಿರಾಕರಿಸಿತು.

ಆದಾಗ್ಯೂ, ಅರ್ಜಿದಾರರಿಗೆ ನಿಜವಾಗಿಯೂ ಹಿಂಸೆ ಅಥವಾ ದೈಹಿಕ ಹಲ್ಲೆಯ ಭೀತಿ ಎದುರಾದರೆ, ಸಂಬಂಧಪಟ್ಟ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ವಿವರವಾದ ಮನವಿ ಸಲ್ಲಿಸಬಹುದು. ಪೊಲೀಸರು ಅದನ್ನು ಪರಿಶೀಲಿಸಿ, ಅವರ ಜೀವ ಮತ್ತು ಅಂಗರಕ್ಷಣೆಗಾಗಿ ಕಾನೂನು ಪ್ರಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ನ್ಯಾಯಾಲಯ ನಿರ್ದೇಶನ ನೀಡಿದೆ.

ಈ ತೀರ್ಪು ಭಾರತದಲ್ಲಿ ಲಿವ್-ಇನ್ ಸಂಬಂಧಗಳ ಕುರಿತ ಕಾನೂನು ಚರ್ಚೆಗೆ ಮತ್ತಷ್ಟು ಸ್ಪಷ್ಟತೆ ನೀಡಿದೆ. 2010ರ ಡಿ. ವೇಲುಸಾಮಿ ವಿರುದ್ಧ ಡಿ. ಪಚ್ಚೈಯಮ್ಮಾಳ್ ಮತ್ತು 2013ರ ಇಂದ್ರ ಶರ್ಮಾ ವಿರುದ್ಧ ವಿ.ಕೆ.ವಿ. ಶರ್ಮಾ ಪ್ರಕರಣಗಳಲ್ಲಿ ಸುಪ್ರೀಂ ಕೋರ್ಟ್ ಈಗಾಗಲೇ ಲಿವ್-ಇನ್ ಸಂಬಂಧಗಳಿಗೆ ಸ್ಪಷ್ಟ ಮಾನದಂಡಗಳನ್ನು ನಿಗದಿಪಡಿಸಿದೆ. ಸುಪ್ರೀಂ ಕೋರ್ಟ್ ಪ್ರಕಾರ, ಒಂದು ಸಹಜೀವನಕ್ಕೆ ಕಾನೂನಿನ ಮಾನ್ಯತೆ ಸಿಗಬೇಕಾದರೆ, ಇಬ್ಬರೂ ಕಾನೂನುಬದ್ಧ ವಯಸ್ಸಿನವರಾಗಿರಬೇಕು ಮತ್ತು ಮದುವೆಯಾಗಲು ಅರ್ಹರಾಗಿರಬೇಕು. ಸಮಾಜದ ದೃಷ್ಟಿಯಲ್ಲಿ ಗಂಡ-ಹೆಂಡತಿಯಂತೆ ದೀರ್ಘಕಾಲ ಒಟ್ಟಿಗೆ ವಾಸಿಸಿರಬೇಕು. ಹಣಕಾಸಿನ ವ್ಯವಹಾರಗಳು ಮತ್ತು ಜವಾಬ್ದಾರಿಗಳನ್ನು ಹಂಚಿಕೊಂಡಿರಬೇಕು.

ವಿಚ್ಛೇದನ ಪಡೆಯದೆ ಬೇರೊಬ್ಬರೊಂದಿಗೆ ವಾಸಿಸುವುದನ್ನು ಸುಪ್ರೀಂ ಕೋರ್ಟ್ ಕೂಡ “ವಿವಾಹದ ಸ್ವರೂಪದ ಸಂಬಂಧ” ಎಂದು ಪರಿಗಣಿಸಿಲ್ಲ. ಅಲಹಾಬಾದ್ ಹೈಕೋರ್ಟ್‌ನ ಈ ತೀರ್ಪು, ವೈಯಕ್ತಿಕ ಸ್ವಾತಂತ್ರ್ಯ ಮತ್ತು ಕೌಟುಂಬಿಕ ಕಾನೂನಿನ ನಡುವಿನ ಸಮತೋಲನವನ್ನು ಎತ್ತಿ ಹಿಡಿದಿದೆ.

eedina
ಈ ದಿನ ಡೆಸ್ಕ್‌
Website | + posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬಾಬಾಗಳ ಕದನ | ರಾಮ್‌ದೇವ್ vs ಬಾಗೇಶ್ವರ ಸಂಘರ್ಷವೇನು?

ಉತ್ತರ ಪ್ರದೇಶದ ಕುಂದಾದಲ್ಲಿ ನಡೆದ ರಾಮಕಥಾ ಕಾರ್ಯಕ್ರಮದಲ್ಲಿ ಒಂದೇ ವೇದಿಕೆ ಹಂಚಿಕೊಂಡು...

ಇರಾನ್ ಯುದ್ಧದ ಬಿಸಿ: 2030ರ ವೇಳೆಗೆ ಗಲ್ಫ್ ರಾಷ್ಟ್ರಗಳಿಗೆ 475 ಬಿಲಿಯನ್ ಡಾಲರ್ ಬಜೆಟ್ ಕೊರತೆ ಭೀತಿ

ಪಶ್ಚಿಮ ಏಷ್ಯಾದಲ್ಲಿ ಮುಂದುವರಿದಿರುವ ಇರಾನ್-ಅಮೆರಿಕ ಸಂಘರ್ಷವು ಗಲ್ಫ್ ಸಹಕಾರ ಮಂಡಳಿಯ (GCC)...

ಶಿವಮೊಗ್ಗ | ಆಶಾ ಕಾರ್ಯಕರ್ತೆಯರ ಬೇಡಿಕೆ ಈಡೇರಿಸಿ : ರಾಜ್ಯ ಅಸಂಘಟಿತ ಕಾರ್ಮಿಕರ ಸಂಘ ಒತ್ತಾಯ

ರಾಜ್ಯದಲ್ಲಿ ಆರೋಗ್ಯ ಸೇವೆಗಳ ಬೆನ್ನೆಲುಬಾಗಿ ಕಾರ್ಯನಿರ್ವಹಿಸುತ್ತಿರುವ ಆಶಾ ಕಾರ್ಯಕರ್ತೆಯರಿಗೆ ಮಾಸಿಕ ₹15,000...

ಶಿವಮೊಗ್ಗ | ಪರಿಷ್ಕೃತ ವೇತನ ಜಾರಿಗೆ ಆಗ್ರಹ : ಮೆಗ್ಗಾನ್ ಆಸ್ಪತ್ರೆ ಸಫಾಯಿ ಕರ್ಮಚಾರಿಗಳಿಂದ ಪ್ರತಿಭಟನೆ

ರಾಜ್ಯ ಸರ್ಕಾರದ ಪರಿಷ್ಕೃತ ವೇತನ ಸುತ್ತೋಲೆಯನ್ನು ತಕ್ಷಣ ಜಾರಿಗೊಳಿಸಿ, ಸರ್ಕಾರಿ...