ರಾಜರ ಆಳ್ವಿಕೆಯ ವಿರೋಧ ಕೇವಲ ಟ್ರಂಪ್‌ಗೆ ಮಾತ್ರ ಸೀಮಿತವಲ್ಲ

Date:

2026ರ ಪರಿಸ್ಥಿತಿ ಭಿನ್ನವಾಗಿದೆ. ಈಗ ಪರಮಾಣು ಅಸ್ತ್ರಗಳು ನಮ್ಮಿಂದ ಪ್ರಜಾಸತ್ತಾತ್ಮಕವಾಗಿ ಆಯ್ಕೆಯಾದ ಸರ್ಕಾರದ ಕೈಯಲ್ಲಿಲ್ಲ. ಬದಲಾಗಿ ಅವು ಲಾಕ್‌ಹೀಡ್, ಬೋಯಿಂಗ್, ಜನರಲ್ ಡೈನಾಮಿಕ್ಸ್‌ನಂತಹ ಖಾಸಗಿ ಕಂಪನಿಗಳ ಸಿಇಒಗಳ ಸಂಪೂರ್ಣ ನಿಯಂತ್ರಣದಲ್ಲಿವೆ...

ನಾನು ಬರವಣಿಗೆಯನ್ನೇ ವೃತ್ತಿಯಾಗಿಸಿಕೊಂಡವನು; ಆದರೂ ಕೃತಕ ಬುದ್ಧಿಮತ್ತೆಯ (AI) ಬಗ್ಗೆ ನಮ್ಮ ದೇಶ ಇಂದು ತಾಳಿರುವ ಹುಚ್ಚುತನದ ಧೋರಣೆಯನ್ನು ಪದಗಳಲ್ಲಿ ಹಿಡಿದಿಡಲು ನನಗೆ ಕಷ್ಟವಾಗುತ್ತಿದೆ.

- Advertisement -

AI ಉದ್ಯಮದಲ್ಲಿ ಕೆಲಸ ಮಾಡುತ್ತಿರುವವರು ಒಬ್ಬರಾದ ಮೇಲೊಬ್ಬರು, “ನಾವು ಸೃಷ್ಟಿಸುತ್ತಿರುವ ಈ ತಂತ್ರಜ್ಞಾನವೇ ಮನುಕುಲದ ನಾಗರಿಕತೆಗೆ ನೇರವಾಗಿ ಕುತ್ತಾಗಲಿದೆ” ಎಂದು ಗಂಟಲು ಹರಿಯುವಂತೆ ಕೂಗುತ್ತಿದ್ದಾರೆ. ಆದನ್ನು ಕೇಳಿದರೆ ನಿಜಕ್ಕೂ ಆತಂಕವಾಗುತ್ತದೆ. ಹೌದು, ಈ ತಂತ್ರಜ್ಞಾನದಿಂದ ಅದ್ಭುತವಾದ ಸಾಧನೆ ಸಾಧ್ಯ. ಆದರೆ ಇದರಿಂದ ಅಷ್ಟೇ ಅಪಾಯಕಾರಿಯಾದ ಅಪಾಯವೂ ಆಗಬಹುದು. ಎಐ ಕ್ಯಾನ್ಸರ್‌ಗೆ ಹೊಸ ಚಿಕಿತ್ಸೆ ಕಂಡುಹಿಡಿಯಬಹುದು. ಆದರೆ ಅದರ ಅಪಾಯದಿಂದ ಬದುಕುಳಿಯುವ ಅಲ್ಪಸ್ವಲ್ಪ ಮನುಷ್ಯರೆಲ್ಲಾ AI ಸೃಷ್ಟಿಸಿದ ಸ್ಮಶಾನದಂತಿರುವ ಭೂಮಿಯಲ್ಲಿ ಬದುಕುವ ಪರಿಸ್ಥಿತಿ ನಿರ್ಮಾಣವಾಗುವುದಾದರೆ, ಅದು ಏನು ಮಾಡಿದರೇನು ಲಾಭ?

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಬಸವಣ್ಣನವರಿಂದ ಗಾಂಧಿಯವರೆಗೆ: ಆಯ್ದ ಕಥನಗಳ ಮೂಲಕ ಇತಿಹಾಸವನ್ನು ತಿರುಚುವ...

ಇತಿಹಾಸವನ್ನು ವಿಮರ್ಶಿಸುವ ಹಕ್ಕು ಎಲ್ಲರಿಗೂ ಇದೆ; ಆದರೆ ಇತಿಹಾಸವನ್ನು ತಿರುಚುವ ಹಕ್ಕು ಯಾರಿಗೂ ಇಲ್ಲ. ಬಸವಣ್ಣನವರನ್ನು ವೈದಿಕ ಚೌಕಟ್ಟಿಗೆ ಸೀಮಿತಗೊಳಿಸುವುದಾಗಲಿ, ಗಾಂಧಿಯವರ ಹತ್ಯೆಯನ್ನು ಗೋಡ್ಸೆಯ ಸಮರ್ಥನೆಯ ಮೂಲಕ ನ್ಯಾಯೀಕರಿಸುವುದಾಗಲಿ ಇತಿಹಾಸದ ಸಮಗ್ರ ಅಧ್ಯಯನಕ್ಕೆ...

ಕೋಲಾರ ಕ್ಲಾಕ್ ಟವರ್ ವಿವಾದ: ಜಿಲ್ಲಾಡಳಿತದ ನಿರ್ಧಾರದತ್ತ ಜನರ...

ಕೋಲಾರ ನಗರದ ಇತಿಹಾಸ ಪ್ರಸಿದ್ಧ ಕ್ಲಾಕ್‌ ಟವರ್‌ನಲ್ಲಿ ಸಂಸದರ ಅನುದಾನದಲ್ಲಿ ಅಳವಡಿಸಲಾಗುತ್ತಿರುವ ಎಚ್‌ಎಂಟಿ ಗಡಿಯಾರದಲ್ಲಿ ಸಂಸದ ಮಲ್ಲೇಶ್‌ ಬಾಬು ಹೆಸರಿರಬೇಕೋ, ಬೇಡವೋ ಎಂದು ಕಳೆದ ಮೂರ್ನಾಲ್ಕು ದಿನಗಳಿಂದ ನಡೆಯುತ್ತಿರುವ ಚರ್ಚೆ ಈಗ ವಿವಾದದ...

ಅಧಿಕೃತ ಕೆಲಸಕ್ಕೆ WHATSAPP ವೆಬ್ ಅಪಾಯಕಾರಿ ಏಕೆ? ಗೃಹ...

ಕಚೇರಿ, ಸಾರ್ವಜನಿಕ ಅಥವಾ ಹಲವರು ಹಂಚಿಕೊಂಡು ಬಳಸುವ ಕಂಪ್ಯೂಟರ್‌ಗಳಲ್ಲಿ WHATSAPP ವೆಬ್ ಬಳಸುವವರಿಗೆ ಕೇಂದ್ರ ಗೃಹ ಸಚಿವಾಲಯ ಮಹತ್ವದ ಭದ್ರತಾ ಎಚ್ಚರಿಕೆ ನೀಡಿದೆ. ಸಚಿವಾಲಯದ ಅಧೀನದ ಭಾರತೀಯ ಸೈಬರ್ ಅಪರಾಧ ಸಮನ್ವಯ ಕೇಂದ್ರದ...

ಮನುಕುಲದ ವಿನಾಶದ ಭೀತಿ ನನ್ನಂತಹ ‘ಜೆನ್ ಎಕ್ಸ್’ (Gen X) ಪೀಳಿಗೆಯವರಿಗೆ ಹೊಸದಲ್ಲ. ಕ್ಷಣಾರ್ಧದಲ್ಲಿ ಇಡೀ ಜಗತ್ತೇ ಪರಮಾಣು ಬಾಂಬ್‌ಗೆ ಬಲಿಯಾಗಬಹುದು ಎಂಬ ನೆರಳಿನಲ್ಲೇ ನಾವು ಬೆಳೆದವರು. ಶೀತಲ ಸಮರದ ಉತ್ತುಂಗದಲ್ಲಿದ್ದಾಗ, ಅಮೆರಿಕ ಮತ್ತು ಸೋವಿಯತ್ ಒಕ್ಕೂಟಗಳ ಬಳಿ ಹತ್ತಾರು ಸಾವಿರ ಪರಮಾಣು ಸಿಡಿತಲೆಗಳಿದ್ದವು. ದಾಳಿಯ ಸಣ್ಣ ಮುನ್ಸೂಚನೆ ಸಿಕ್ಕರೂ ಸಾಕು, ಅವುಗಳನ್ನು ಉಡಾಯಿಸಲು ಸಿದ್ಧವಾಗಿ ಇಡಲಾಗಿತ್ತು. 1945ರ ಆಗಸ್ಟ್‌ನಲ್ಲಿ ಹಿರೋಷಿಮಾ ಮತ್ತು ನಾಗಸಾಕಿಯನ್ನು ನಾಶಪಡಿಸಿದ ಬಾಂಬ್‌ಗಳಿಗಿಂತಲೂ ನೂರು ಪಟ್ಟು ಶಕ್ತಿಶಾಲಿಯಾದ ಪರಮಾಣು ಬಾಂಬ್‌ಗಳನ್ನು ಹೊತ್ತ ಯುದ್ಧವಿಮಾನಗಳು ಸದಾ ಆಕಾಶದಲ್ಲಿ ಹಾರಾಡುತ್ತಿದ್ದವು.

ಆ ದಿನಗಳ ಆತಂಕ ಮತ್ತು ಅಪಾಯವನ್ನು ನಾನು ಕಡಿಮೆ ಮಾಡಿ ಹೇಳಲು ಬಯಸುವುದಿಲ್ಲ. ಪ್ರತಿ ದಶಕಕ್ಕೊಮ್ಮೆಯಾದರೂ ಎರಡೂ ಮಹಾಶಕ್ತಿಗಳು ನೇರ ಯುದ್ಧದ ಅಂಚಿಗೆ ಬಂದು ನಿಲ್ಲುತ್ತಿದ್ದವು. ಶಾಲೆಗಳಲ್ಲಿ ಬಾಂಬ್ ದಾಳಿಯಿಂದ ತಪ್ಪಿಸಿಕೊಳ್ಳುವ ತಾಲೀಮುಗಳನ್ನು ಮಾಡುತ್ತಿದ್ದರು. ಜನ ‘ದಿ ಡೇ ಆಫ್ಟರ್’ನಂತಹ ಸಿನಿಮಾಗಳನ್ನು ನೋಡುತ್ತಿದ್ದರು. ಮತ್ತು 1983ರಲ್ಲಿ ಸೋವಿಯತ್ ಯುದ್ಧವಿಮಾನವೊಂದು ಕೊರಿಯನ್ ಏರ್‌ಲೈನ್ಸ್ ವಿಮಾನವನ್ನು ಹೊಡೆದುರುಳಿಸಿದಾಗ ನನ್ನ ಪೋಷಕರ ಬಳಿ ಹೋಗಿ “ನಾವೆಲ್ಲಾ ಸುರಕ್ಷಿತವಾಗಿರುತ್ತೇವೆಯೇ?” ಎಂದು ಕೇಳಿದ್ದೆ. ಇವೆಲ್ಲಾ ನನಗಿನ್ನೂ ಸ್ಪಷ್ಟವಾಗಿ ನೆನಪಿದೆ.

ಇದನ್ನು ಓದಿದ್ದೀರಾ?: ನವ-ಉದಾರವಾದದ ಬಿಕ್ಕಟ್ಟು ಮತ್ತು ಫ್ಯಾಸಿಸ್ಟ್-ವಿರೋಧಿ ಅರ್ಥಶಾಸ್ತ್ರ: ಡಾ. ಇಸಬೆಲ್ಲಾ ವೆಬರ್ ಒಳನೋಟಗಳು

ಆದರೆ, 2026ರ ಈ ಪರಿಸ್ಥಿತಿ ಅದಕ್ಕಿಂತಲೂ ಭಿನ್ನವಾಗಿದೆ. ಅದು ಏಕೆಂದು ಅರ್ಥಮಾಡಿಕೊಳ್ಳಲು ನನಗೆ ಸ್ವಲ್ಪ ಸಮಯ ಬೇಕಾಯಿತು. ಇತ್ತೀಚೆಗೆ ನನ್ನ ಸಹೋದ್ಯೋಗಿಯೊಬ್ಬರು ಹೇಳಿದಂತೆ ಊಹಿಸಿಕೊಳ್ಳಿ: ಶೀತಲ ಸಮರ ಶುರುವಾಗಿದೆ; ಆದರೆ ಈಗ ಪರಮಾಣು ಅಸ್ತ್ರಗಳು ನಮ್ಮಿಂದ ಪ್ರಜಾಸತ್ತಾತ್ಮಕವಾಗಿ ಆಯ್ಕೆಯಾದ ಸರ್ಕಾರದ ಕೈಯಲ್ಲಿಲ್ಲ. ಬದಲಾಗಿ ಅವು ಲಾಕ್‌ಹೀಡ್, ಬೋಯಿಂಗ್, ಜನರಲ್ ಡೈನಾಮಿಕ್ಸ್‌ನಂತಹ ಖಾಸಗಿ ಕಂಪನಿಗಳ ಸಿಇಒಗಳ ಸಂಪೂರ್ಣ ನಿಯಂತ್ರಣದಲ್ಲಿವೆ ಎಂದುಕೊಳ್ಳಿ.

ಇಷ್ಟು ಸಾಲದೆ, ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸಲು ಹೀಗೆ ಊಹಿಸಿ: ಆ ಸಿಇಒಗಳು ಅತ್ಯಂತ ಬುದ್ಧಿವಂತರಾಗಿದ್ದರೂ, ವಿಚಿತ್ರ ಮನಸ್ಥಿತಿಯವರು, ಅಹಂಕಾರದ (Megalomania) ಸ್ವಭಾವದವರು, ಸಾಮಾನ್ಯ ನೈತಿಕತೆಯ ಗಂಧಗಾಳಿಯೇ ಇಲ್ಲದವರು ಮತ್ತು ತೀರಾ ವಿಲಕ್ಷಣ ವ್ಯಕ್ತಿಗಳು ಅಂತಾದರೆ ಹೇಗಿರುತ್ತದೆ?

ಉದಾಹರಣೆಗೆ, ಎನ್‌ವಿಡಿಯಾದ (Nvidia) ಮರುನೇಮಕಗೊಂಡ ಸಿಇಒ ಜೆನ್ಸನ್ ಹುವಾಂಗ್ ಬಗ್ಗೆ ಕಳೆದ ಕೆಲವು ವಾರಗಳಲ್ಲಿ ನಮಗೆ ತಿಳಿದು ಬಂದ ಮಾಹಿತಿಯನ್ನೇ ನೋಡಿ. ಪ್ರಭಾವಿ ವ್ಯಕ್ತಿಗಳಿಗೆ ವಿವಾಹೇತರ ಸಂಬಂಧಗಳಿರುವುದು ಹೊಸದೇನಲ್ಲ. ಆದರೆ ಹುವಾಂಗ್ ಅವರು ಚೀನಾದ ಗುಪ್ತಚರ ಸಂಸ್ಥೆಯ ಏಜೆಂಟ್ ಆಗಿರಬಹುದಾದ ಮಹಿಳೆಯೊಂದಿಗೆ ಸಂಬಂಧ ಹೊಂದಿದ್ದರು. ಅಷ್ಟೇ ಅಲ್ಲದೆ, ಚೀನಾದ ಸೇನೆಯೊಂದಿಗೆ ನಿಕಟ ಸಂಪರ್ಕ ಹೊಂದಿರುವ ಕಂಪನಿಯೊಂದಕ್ಕೆ ಬಿಲಿಯನ್‌ಗಟ್ಟಲೆ ಡಾಲರ್ ಮೌಲ್ಯದ ಜಗತ್ತಿನ ಅತ್ಯಾಧುನಿಕ ಚಿಪ್ ತಂತ್ರಜ್ಞಾನವನ್ನು ಮಾರಾಟ ಮಾಡಿದ್ದಾರೆ. ತಮ್ಮ ಕೈಕೆಳಗೆ ಕೆಲಸ ಮಾಡುತ್ತಿದ್ದ ಮಹಿಳಾ ಅಧಿಕಾರಿಯೊಂದಿಗೆ ಸಂಬಂಧ ಇಟ್ಟುಕೊಂಡು, ಕಂಪನಿಯ ನಿಯಮಗಳನ್ನೂ ಉಲ್ಲಂಘಿಸಿದ್ದಾರೆ ಮತ್ತು ಕಂಪನಿಯಲ್ಲಿ ಆಡಳಿತ ನಡೆಸುವಾಗಲೂ ತೀರಾ ದಬ್ಬಾಳಿಕೆಯ ಪ್ರವೃತ್ತಿ ತೋರಿದ್ದಾರೆ. ಉದ್ಯೋಗಿಗಳನ್ನು ಅವಮಾನಿಸುತ್ತಿದ್ದರು ಎಂಬ ವರದಿಗಳಿವೆ. ಆದರೂ ಈಗ ಅವರನ್ನು ಮರಳಿ ಕರೆತರಲಾಗಿದೆ!

ಇನ್ನು ಎಲಾನ್ ಮಸ್ಕ್ ಅವರನ್ನೇ ತೆಗೆದುಕೊಳ್ಳಿ. ಅವರ ಬುದ್ಧಿವಂತಿಕೆಯನ್ನು ಯಾರೂ ಅಲ್ಲಗಳೆಯುವಂತಿಲ್ಲ. ಟೆಸ್ಲಾ ಮತ್ತು ಸ್ಪೇಸ್‌ಎಕ್ಸ್‌ನಂತಹ ಜಗತ್ತಿನ ಅತ್ಯಂತ ಮೌಲ್ಯಯುತ ಕಂಪನಿಗಳನ್ನು ಅವರು ಕಟ್ಟಿದ್ದಾರೆ. ಆದರೆ ಅವರಿಗೂ ಸಾಮಾನ್ಯ ನೈತಿಕತೆಯ ಬಗ್ಗೆ ಯಾವುದೇ ಬದ್ಧತೆಯಿಲ್ಲ. ಮದುವೆಯ ಹೊರಗೆ ಹತ್ತಾರು ಮಕ್ಕಳಿಗೆ ತಂದೆಯಾಗುತ್ತಾ, ಅವರನ್ನು ವಿಚಿತ್ರವಾಗಿ “ಸೈನ್ಯ” (Legion) ಎಂದು ಕರೆಯುತ್ತಾರೆ; ಎಲ್‌ಎಸ್‌ಡಿ, ಕೊಕೇನ್, ಕೆಟಮೈನ್‌ನಂತಹ ಮಾದಕ ದ್ರವ್ಯಗಳನ್ನು ಬಳಸಿದ್ದಾರೆ ಎನ್ನುವ ವರದಿಗಳೂ ಇವೆ. ಇನ್ನು ಅವರ ‘ಎಕ್ಸ್’ (X) ಖಾತೆಯನ್ನು ನೋಡಿದರೆ, ಬಲಪಂಥೀಯ ಪಿತೂರಿ ಸಿದ್ಧಾಂತಗಳನ್ನು ಕುರುಡಾಗಿ ನಂಬುತ್ತಾರೆ. ಅಷ್ಟೇ ಅಲ್ಲ, ತಮ್ಮ ಅಪಾರ ಅಧಿಕಾರವನ್ನು ಬಳಸಿಕೊಂಡು ಭೌಗೋಳಿಕ ರಾಜಕೀಯದಲ್ಲೂ ಹಸ್ತಕ್ಷೇಪ ಮಾಡುತ್ತಾರೆ- ರಷ್ಯಾದ ದಾಳಿಯ ವಿರುದ್ಧ ಉಕ್ರೇನ್ ಹೋರಾಡುತ್ತಿರುವಾಗ, ‘ಸ್ಟಾರ್‌ಲಿಂಕ್’ ಇಂಟರ್‌ನೆಟ್ ಸೇವೆಯನ್ನು ಬೇಕೆಂದಾಗ ಆನ್ ಮಾಡುವುದು, ಬೇಡವೆಂದಾಗ ಆಫ್ ಮಾಡುವ ಮೂಲಕ ಉಕ್ರೇನ್‌ನ ರಕ್ಷಣಾ ಸಾಮರ್ಥ್ಯಕ್ಕೆ ಅಡ್ಡಿಪಡಿಸಿದ್ದಾರೆ.

ಕೆಲವೊಮ್ಮೆ ಅವರು ತೀರಾ ಅಪ್ರಬುದ್ಧರಂತೆ ವರ್ತಿಸುತ್ತಾರೆ. ರಿಪಬ್ಲಿಕನ್ ಪಕ್ಷವನ್ನು ಗೆಲ್ಲಿಸಲು ಸುಮಾರು ಅರ್ಧ ಬಿಲಿಯನ್ ಡಾಲರ್ ಖರ್ಚು ಮಾಡಿ, ತನ್ನನ್ನು ತಾನು “ಡಾರ್ಕ್, ಗೋಥಿಕ್ MAGA” ಎಂದು ಕರೆದುಕೊಂಡಿದ್ದ ಮಸ್ಕ್, ಈಗ ಉಲ್ಟಾ ಹೊಡೆಯುತ್ತಿದ್ದಾರೆ. ಕಳೆದ ವಾರ ನ್ಯೂಯಾರ್ಕ್ ಟೈಮ್ಸ್‌ನ ಆಂಡ್ರ್ಯೂ ರಾಸ್ ಸೊರ್ಕಿನ್ ಜೊತೆ ಮಾತನಾಡುತ್ತಾ, “ನಾನು ಮಾಗಾ (MAGA) ಬೆಂಬಲಿಗನೇ ಅಲ್ಲ, ನಾನೊಬ್ಬ ಸೌಮ್ಯವಾದಿ (Moderate)” ಎಂದು ಹೇಳಿದ್ದಾರೆ.

ಅದಕ್ಕಿಂದ ಗಂಭೀರವಾದ ಸಂಗತಿಯೆಂದರೆ, ಅಮೆರಿಕದ ಅಧ್ಯಕ್ಷರೇ ಎನ್‌ವಿಡಿಯಾ ಷೇರುಗಳಲ್ಲಿ ಅಪಾರ ಬಂಡವಾಳ ಹೂಡಿದ್ದಾರೆ. ವಾಷಿಂಗ್ಟನ್ ಪೋಸ್ಟ್ ವರದಿಯ ಪ್ರಕಾರ, 2024ರ ಅಂತ್ಯಕ್ಕೆ 6.15 ಲಕ್ಷದಿಂದ 1.3 ಮಿಲಿಯನ್ ಡಾಲರ್‌ನಷ್ಟಿದ್ದ ಅಧ್ಯಕ್ಷ ಟ್ರಂಪ್ ಅವರ ಎನ್‌ವಿಡಿಯಾ ಷೇರುಗಳ ಮೌಲ್ಯ, 2026ರಲ್ಲಿ 13 ಮಿಲಿಯನ್‌ನಿಂದ 62 ಮಿಲಿಯನ್ ಡಾಲರ್‌ಗೆ ಏರಿಕೆಯಾಗಿದೆ.

ಹಾಗಾಗಿ ಈಗಿರುವ ಪರಿಸ್ಥಿತಿ ಅಂದರೆ: ನಮ್ಮ AI ಧಣಿಗಳು “ನಮ್ಮ ಉತ್ಪನ್ನವೇ ನಿಮ್ಮನ್ನೆಲ್ಲಾ ಕೊಲ್ಲಬಹುದು” ಎಂದು ಹೇಳುತ್ತಾರೆ. ಜೊತೆಗೆ, “ನಾವು ಈ ವೇಗವನ್ನು ಕಡಿಮೆ ಮಾಡುವಂತಿಲ್ಲ, ಏಕೆಂದರೆ ನಾವೇನಾದರೂ ನಿಧಾನ ಮಾಡಿದರೆ ನಮ್ಮ ಶತ್ರು ಚೀನಾ ನಮ್ಮನ್ನು ಮೊದಲು ಕೊಲ್ಲಬಹುದು” ಎಂದೂ ವಾದಿಸುತ್ತಾರೆ. ಸೆನೆಟರ್ ಟೆಡ್ ಕ್ರೂಜ್ ಸೆಪ್ಟೆಂಬರ್‌ನಲ್ಲಿ ಹೇಳಿದಂತೆ, “ಕೊಲ್ಲುವ ರೋಬೋಟ್‌ಗಳು (Killer robots) ಬರುವುದೇ ಆದರೆ, ಅವು ಚೀನಾದ ರೋಬೋಟ್‌ಗಳಿಗಿಂತ ಅಮೆರಿಕದ ರೋಬೋಟ್‌ಗಳಾಗಿರುವುದೇ ಲೇಸು” ಎಂಬಂತಾಗಿದೆ.

ಅದೇ ಸಮಯದಲ್ಲಿ, ಎನ್‌ವಿಡಿಯಾದ ಬಾಸ್, ಬಿಲಿಯನ್‌ಗಟ್ಟಲೆ ಡಾಲರ್ ಚಿಪ್ ಖರೀದಿಸಿ ಚೀನಾಕ್ಕೆ ರಹಸ್ಯವಾಗಿ ತಲುಪಿಸಿರಬಹುದಾದ ಕಂಪನಿಯ ಕಾರ್ಯನಿರ್ವಾಹಕಿಯೊಂದಿಗೆ ಮಲಗುತ್ತಾರೆ. ಮತ್ತು ಈ ಸಂಬಂಧದಿಂದ ಟ್ರಂಪ್ ಕುಟುಂಬಕ್ಕೆ ನೇರ ಆರ್ಥಿಕ ಲಾಭವಾಗುತ್ತದೆ. ಇಷ್ಟೆಲ್ಲಾ ಆದರೂ, ಇವರ ಟೆಕ್ ಗೆಳೆಯರೆಲ್ಲಾ ಇದನ್ನು ಕಂಡೂ ಕಾಣದಂತೆ ಕಣ್ಣುಮುಚ್ಚಿಕೊಳ್ಳುತ್ತಾರೆ. ಏಕೆಂದರೆ ಪ್ರಾಮಾಣಿಕತೆ ಮತ್ತು ಉತ್ತರದಾಯಿತ್ವದಂತಹ ಹಳೆಯ ಕಾಲದ ನಿಯಮಗಳು ತಮಗೆ ಅನ್ವಯಿಸುವುದಿಲ್ಲ ಎಂಬ ಅಹಂ ಅವರಲ್ಲಿದೆ.

ಟೆಕ್ ಜಗತ್ತಿನ ಹುಚ್ಚಾಟಗಳು ಇಷ್ಟಕ್ಕೇ ಮುಗಿಯಿತು ಎಂದು ಭಾವಿಸಬೇಡಿ. ಸಿಲಿಕಾನ್ ವ್ಯಾಲಿಯಲ್ಲಿ ನಡೆಯುತ್ತಿರುವ ಮಾದಕ ದ್ರವ್ಯ ಸೇವನೆ, ಅನೈತಿಕ ಕೂಟಗಳು ಮತ್ತು ವಿಚಿತ್ರ ಧಾರ್ಮಿಕ ನಂಬಿಕೆಗಳ ಬಗ್ಗೆ ನಾನು 10,000 ಪದಗಳ ಲೇಖನವನ್ನೇ ಬರೆಯಬಲ್ಲೆ (ಪೀಟರ್ ಥೀಲ್ ಅವರು ‘ಆಂಟಿಕ್ರೈಸ್ಟ್’ ಬಗ್ಗೆ ನೀಡುವ ಉಪನ್ಯಾಸಕ್ಕೆ ನನ್ನ ಜೊತೆ ಯಾರಾದರೂ ಬರುತ್ತೀರಾ?). ಇಡೀ ಜಗತ್ತನ್ನೇ ನಿಯಂತ್ರಿಸಲು ಹೊರಟಿರುವ AI ತಂತ್ರಜ್ಞಾನ ಮತ್ತು ಅದರ ಧಣಿಗಳು ಜನಸಾಮಾನ್ಯರ ಕೈಗೆ ಸಿಗುವುದಿಲ್ಲ; ಆದರೆ ಜನರ ಕಣ್ಣಮುಂದೆ ಕಾಣುವಂತೆ ಸಿಗುವುದು ಈ ಬೃಹತ್ ಡೇಟಾ ಸೆಂಟರ್‌ಗಳು (ಮಾಹಿತಿ ಕೇಂದ್ರಗಳು) ಮಾತ್ರ. ಹೀಗಾಗಿ, ಅವುಗಳ ವಿರುದ್ಧ ಜನರಲ್ಲಿ ‘ಫ್ರೆಂಚ್ ಕ್ರಾಂತಿ’ಯಂತಹ ಆಕ್ರೋಶ ಮಡುಗಟ್ಟುತ್ತಿರುವುದರಲ್ಲಿ ಯಾವ ಆಶ್ಚರ್ಯವೂ ಇಲ್ಲ.

Elon Musk೧
ಜೆನ್ಸನ್‌ ಹುವಾಂಗ್‌, ಎಲಾನ್‌ ಮಸ್ಕ್‌ ಮತ್ತು ಟ್ರಂಪ್

ಟೆಕ್ ವಲಯದಲ್ಲಿ ಒಳ್ಳೆಯ ಮತ್ತು ವಿವೇಕಯುತವಾಗಿ ಯೋಚಿಸುವ ಜನರೂ ಇದ್ದಾರೆ ಎಂಬುದು ನನಗೆ ಗೊತ್ತು. AI ತಂತ್ರಜ್ಞಾನವು ಒಳ್ಳೆಯ ಕೆಲಸಗಳಿಗೆ ಬಳಕೆಯಾಗುವಂತೆ ನೋಡಿಕೊಳ್ಳಲು ಅವರು ಶ್ರಮಿಸುತ್ತಿದ್ದಾರೆ. ಅವರಿಗೆ ನಾನು ಕೃತಜ್ಞನಾಗಿದ್ದೇನೆ.

ಆದರೂ, ನನ್ನಲ್ಲೂ ಈಗ ಒಂದು ರೀತಿಯ ಕ್ರಾಂತಿಕಾರಿ ಭಾವನೆ ಮೂಡುತ್ತಿದೆ- ವ್ಯವಸ್ಥೆಯನ್ನು ಕೆಡವಲು ಅಲ್ಲ, ಬದಲಾಗಿ ಹೊಸದಾಗಿ ಕಟ್ಟಲು. ಮನುಕುಲವನ್ನು ನಾಶಮಾಡಬಲ್ಲ ಇಂತಹ ಸಾಧನಗಳನ್ನು ಪ್ರಜಾಪ್ರಭುತ್ವದ ನಿಯಂತ್ರಣಕ್ಕೆ ತರುವ ಕಾನೂನು ಮತ್ತು ರಾಜಕೀಯ ವ್ಯವಸ್ಥೆಯನ್ನು ನಾವು ಕಟ್ಟಬೇಕಾಗಿದೆ. ಅಧಿಕಾರ ಮತ್ತು ಬುದ್ಧಿವಂತಿಕೆಗಿಂತ ವಿವೇಕ ಮತ್ತು ನೈತಿಕತೆಗೆ ಬೆಲೆ ಕೊಡುವ ಸಾಂಸ್ಕೃತಿಕ ವ್ಯವಸ್ಥೆಯನ್ನು ನಾವು ಮರುನಿರ್ಮಿಸಬೇಕಾಗಿದೆ.

ಉಕ್ರೇನ್‌ನ ಯುದ್ಧದ ಭವಿಷ್ಯವನ್ನೂ ಮತ್ತು ಇಡೀ ಜಗತ್ತಿನ ಬಲಾಬಲವನ್ನೂ ನಿರ್ಧರಿಸುವಷ್ಟು ದೊಡ್ಡ ಅಧಿಕಾರವನ್ನು ಎಲಾನ್ ಮಸ್ಕ್‌ರಂತಹ ಒಬ್ಬ ವ್ಯಕ್ತಿಯ ಕೈಗೆ ಕೊಟ್ಟಿರುವುದು ಕ್ಷಮಿಸಲಾಗದ ತಪ್ಪು. ಇಂತಹವರನ್ನು ನಮ್ಮ ಗುರುಗಳಂತೆ ಅಥವಾ ಮಾರ್ಗದರ್ಶಕರಂತೆ ನೋಡುವುದರಲ್ಲಿ ಯಾವುದೇ ಅರ್ಥವಿಲ್ಲ. ಇವರು ಹೊಸ ತಂತ್ರಜ್ಞಾನಗಳನ್ನು ಕಂಡುಹಿಡಿಯುವ ಮೂಲಕ ಭವಿಷ್ಯವನ್ನು ಸೃಷ್ಟಿಸಬಲ್ಲರು; ಆದರೆ ಆ ಭವಿಷ್ಯದಲ್ಲಿ ನಮ್ಮನ್ನು ಮುನ್ನಡೆಸುವ ಯೋಗ್ಯತೆ ಇವರಿಗಿಲ್ಲ.

ಸೆಪ್ಟೆಂಬರ್‌ನಲ್ಲಿ ವಾಷಿಂಗ್ಟನ್‌ನಲ್ಲಿ ಧಾರ್ಮಿಕ ಮುಖಂಡರು, AI ಸಂಶೋಧಕರು ಮತ್ತು ಜನಪ್ರತಿನಿಧಿಗಳು ಸೇರಿ “ಮಾನವ-ಕೇಂದ್ರಿತ ಭವಿಷ್ಯ”ಕ್ಕಾಗಿ ಸಮಾವೇಶ ನಡೆಸಿದ್ದರು. ಅಲ್ಲಿ ಐದು ಮುಖ್ಯ ತತ್ವಗಳನ್ನು ಪ್ರತಿಪಾದಿಸಲಾಯಿತು: “ತಂತ್ರಜ್ಞಾನದ ನಿಯಂತ್ರಣದ ಲಗಾಮು ಸದಾ ಮನುಕುಲದ ಕೈಯಲ್ಲೇ ಇರಬೇಕು; ಅಧಿಕಾರದ ಕೇಂದ್ರೀಕರಣಕ್ಕೆ ಎಂದಿಗೂ ಅವಕಾಶವಿರಬಾರದು; ಮಾನವೀಯ ಸಂವೇದನೆ ಮತ್ತು ಬದುಕಿನ ಅನುಭವಗಳು ಉಳಿಯಬೇಕು; ಮನುಷ್ಯನ ಸ್ವಂತಿಕೆ ಮತ್ತು ಸ್ವಾತಂತ್ರ್ಯವು ಅಕ್ಷುಣ್ಣವಾಗಿ ಉಳಿಯಲಿ; ಹಾಗೂ AI ಕಂಪನಿಗಳಿಗೆ ನೈತಿಕ ಮತ್ತು ಕಾನೂನಾತ್ಮಕ ಹೊಣೆಗಾರಿಕೆ ನಿಗದಿಯಾಗಲಿ. ‌

ಇದನ್ನು ಓದಿದ್ದೀರಾ?: ಷೇರುದಾರರ ಇಂದಿನ ಜಾಗತಿಕ ಮಂತ್ರ- ‘ಅಮೆರಿಕವನ್ನು ನಂಬಿ ಹಣ ಹೂಡಿ’

ನಾನು ಈ ಐದೂ ತತ್ವಗಳನ್ನು ಸ್ವಾಗತಿಸುತ್ತೇನೆ. ಇದಕ್ಕೆ ನನ್ನದೊಂದು ಅಮೆರಿಕನ್ ನಿಯಮವನ್ನು ಸೇರಿಸಲು ಬಯಸುತ್ತೇನೆ. ಫ್ರಾಂಕ್ ಹರ್ಬರ್ಟ್ ಅವರ ಪ್ರಸಿದ್ಧ ವೈಜ್ಞಾನಿಕ ಕಾದಂಬರಿ ‘ಡ್ಯೂನ್’ನಲ್ಲಿ (Dune), ಮನುಷ್ಯರು ಕೃತಕ ಬುದ್ಧಿಮತ್ತೆಯ ವಿರುದ್ಧ ದಂಗೆ ಎದ್ದು “ಮನುಷ್ಯನ ಮನಸ್ಸನ್ನು ಹೋಲುವ ಯಂತ್ರವನ್ನು ನೀನು ಸೃಷ್ಟಿಸಬಾರದು” ಎಂಬ ನಿಯಮ ಮಾಡಿಕೊಳ್ಳುತ್ತಾರೆ.

ನಮಗೀಗ ಅಂತಹ ಯುದ್ಧದ ಅಗತ್ಯವಿಲ್ಲದಿರಬಹುದು. ಆದರೆ, ನಮ್ಮನ್ನು ನಾಶಮಾಡಬಲ್ಲ ಸಾಧನಗಳು ನಾವು ಆಯ್ಕೆ ಮಾಡದ ಮತ್ತು ನಾವು ನಂಬಲು ಸಾಧ್ಯವಿಲ್ಲದ ವ್ಯಕ್ತಿಗಳ ಕೈಯಲ್ಲಿರುವುದು ಸಹಿಸಲಾಗದ ಸಂಗತಿ. ನಮ್ಮನ್ನು ಆಳುವವರನ್ನು ನಾವೇ ಆಯ್ಕೆ ಮಾಡಬೇಕು ಎಂಬುದು ಅಮೆರಿಕದ ಪ್ರಜಾಪ್ರಭುತ್ವದ ಮೂಲ ತತ್ವ. ಹಿಂದಿನ ಕಾಲದ ರಾಜರುಗಳೂ ಅಸೂಯೆಪಡುವಷ್ಟು ಮತ್ತು ಹಳೆಯ ಕಾಲದ ದರೋಡೆಕೋರ ಬಂಡವಾಳಶಾಹಿಗಳನ್ನೂ ಮೀರಿಸುವಷ್ಟು ನಿಯಂತ್ರಣವನ್ನು AI ಈ ಟೆಕ್ ದೈತ್ಯರಿಗೆ ನೀಡಲಿದೆ. ಜಗತ್ತಿನ ಅತ್ಯಂತ ಶಕ್ತಿಶಾಲಿ ಪರಮಾಣು ಬಾಂಬ್‌ಗಳನ್ನು ತಯಾರಿಸಿದ ವಿಜ್ಞಾನಿಗಳಿಗೂ ಅವುಗಳನ್ನು ಜಗತ್ತಿನ ಮೇಲೆ ಪ್ರಯೋಗಿಸುವ ಅಧಿಕಾರವಿರಲಿಲ್ಲ; ಆದರೆ ಇಂದು ಎಲಾನ್ ಮಸ್ಕ್ ಮತ್ತು ಅವರಂತಹವರಿಗೆ ಆ ಅಧಿಕಾರವಿದೆ.

ನಮ್ಮ ಜೀವ ಮತ್ತು ಭವಿಷ್ಯವೇ ತೂಗುಯ್ಯಾಲೆಯಲ್ಲಿರುವ ಈ ಸಮಯದಲ್ಲಿ, ನಮಗೆ ದಾರಿದೀಪವಾಗಬೇಕಾದ ಒಂದೇ ಒಂದು ಅಮೆರಿಕನ್ ಆಜ್ಞೆ ಇದಾಗಿರಬೇಕು: ಮನುಕುಲವನ್ನೇ ಮುಗಿಸಬಲ್ಲ ಅಸ್ತ್ರಗಳು ಎಂದಿಗೂ ಪ್ರಜಾಪ್ರಭುತ್ವದ ಕೈತಪ್ಪಿ ಹೋಗಬಾರದು.

ಕೃಪೆ: ನ್ಯೂಯಾರ್ಕ್ ಟೈಮ್ಸ್, ಮೂಲ: ಡೇವಿಡ್ ಫ್ರೆಂಚ್, ಕನ್ನಡಕ್ಕೆ: ಟಿ.ಎಸ್.‌ ವೇಣುಗೋಪಾಲ್

eedina
ಈ ದಿನ ಡೆಸ್ಕ್‌
Website | + posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಪ್ರಶ್ನೆಪತ್ರಿಕೆ ಸೋರಿಕೆ ತಡೆಗೆ ಕಠಿಣ ಕಾನೂನು: ತಪ್ಪಿತಸ್ಥರಿಗೆ 10 ವರ್ಷ ಜೈಲು, 10 ಕೋಟಿ ರೂ. ದಂಡಕ್ಕೆ ಶಿಫಾರಸು!

ಮಹಾರಾಷ್ಟ್ರ ಲೋಕಸೇವಾ ಆಯೋಗದ (MPSC) ನೇಮಕಾತಿ ಪರೀಕ್ಷೆಗಳಲ್ಲಿ ಪದೇ ಪದೇ ಕೇಳಿಬರುತ್ತಿರುವ...

ಈ ದಿನ ಸಂಪಾದಕೀಯ | ಹಳಿ ತಪ್ಪಿದ ಕೇಂದ್ರದ ಉದ್ಯಮ ನೀತಿ

ಕೇಂದ್ರ ಸರ್ಕಾರಕ್ಕೆ ಹನ್ನೆರಡು ವರ್ಷದ ಸುದೀರ್ಘ ಅವಧಿಯ ಆಡಳಿತದ ನಂತರ ತನ್ನ...

ಯಾದಗಿರಿ | ಉದ್ಯೋಗ ಖಾತ್ರಿ ಕೆಲಸದ ಸ್ಥಳದಲ್ಲಿ ಮಹಿಳೆ ಸಾವು: ಪರಿಹಾರಕ್ಕೆ ಆಗ್ರಹ

ಯಾದಗಿರಿ ಜಿಲ್ಲೆಯ ಗುರುಮಠಕಲ್ ತಾಲೂಕಿನ ಕಾಕಲವಾರ ಗ್ರಾಮದ ಮಹೇಶ್ವರಿ (38) ಎಂಬ...

ಬಾಬಾಗಳ ಕದನ | ರಾಮ್‌ದೇವ್ vs ಬಾಗೇಶ್ವರ ಸಂಘರ್ಷವೇನು?

ಉತ್ತರ ಪ್ರದೇಶದ ಕುಂದಾದಲ್ಲಿ ನಡೆದ ರಾಮಕಥಾ ಕಾರ್ಯಕ್ರಮದಲ್ಲಿ ಒಂದೇ ವೇದಿಕೆ ಹಂಚಿಕೊಂಡು...