28 Sep 2023, 03:45 PM
ಭಾರತೀಯ ಮಹಿಳಾ ತಂಡಕ್ಕೆ ಅಭಿನಂದನೆ ಸಲ್ಲಿಸುವಾಗ ಎಡವಿದ ಜಯ್ ಶಾ; ಟ್ವಿಟರ್‌ನಲ್ಲಿ ಟ್ರೋಲ್
ಚೀನಾದ ಹಾಂಗ್‌ಝೌನಲ್ಲಿ ನಡೆಯುತ್ತಿರುವ 2023ರ ಸಾಲಿನ ಏಷ್ಯನ್ ಗೇಮ್ಸ್ ಕ್ರೀಡಾಕೂಟದ ಕ್ರಿಕೆಟ್‌ನಲ್ಲಿ ಶ್ರೀಲಂಕಾವನ್ನು ಭಾರತೀಯ ಮಹಿಳಾ ತಂಡವು 19 ರನ್‌ಗಳಿಂದ ಸೋಲಿಸಿ, ಚಿನ್ನದ ಪದಕ ಗಳಿಸಿತ್ತು. ಹೀಗಾಗಿ, ಮಹಿಳಾ ತಂಡವನ್ನು ಬಿಸಿಸಿಐ ಕಾರ್ಯದರ್ಶಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಮಗ ಜಯ್ ಶಾ ಅಭಿನಂದನಾ ಭಾಷಣ ಮಾಡುವ ವೇಳೆ ಎಡವಿದ್ದು, ಈ ವಿಡಿಯೋ ಈಗ ಟ್ವಿಟರ್‌ನಲ್ಲಿ ಟ್ರೋಲ್‌ಗೆ ಕಾರಣವಾಗಿದೆ. ಸ್ಮೃತಿ ಮಂಧಾನಾ ಹೆಸರನ್ನು ಉಲ್ಲೇಖಿಸಿ ಅಭಿನಂದಿಸುವಾಗ ಎಡವಿದ್ದರು. ವಿಡಿಯೋ ಈಗ ವೈರಲಾಗಿದೆ.
O Mere Papa The Great 🤣🤣🤣
— Invincible (@i_me_my5elf) September 28, 2023
Kyun bhai Chacha, haan Bhatija 😀😀#JayShah #Nepotism #BJP pic.twitter.com/H5wz31Wcj8
Saved from selling pakoras, at least this man was given a job of BCCI Secretary by the non-dynastic BJPee! pic.twitter.com/p410jGbWTD
— Prashant Bhushan (@pbhushan1) September 28, 2023
28 Sep 2023, 03:00 PM
ಕರ್ನಾಟಕ ಬಂದ್ | ಸಾರಿಗೆ ನೌಕರರಿಗೆ ಕಡ್ಡಾಯ ಹಾಜರಾತಿಗೆ ಸೂಚನೆ
ತಮಿಳುನಾಡಿಗೆ ನೀರು ಬಿಡುವುದನ್ನು ವಿರೋಧಿಸಿ ನೂರಾರು ಕನ್ನಡಪರ ಸಂಘಟನೆಗಳು ಸೆ.29ರಂದು ಕರ್ನಾಟಕ ಬಂದ್‌ಗೆ ಕರೆ ಕೊಟ್ಟಿವೆ. ಆದರೆ ಈ ನಡುವೆ ಕೆಎಸ್ಆರ್ಟಿಸಿ ಹಾಗೂ ಬಿಎಂಟಿಸಿ ಬಸ್ಗಳ ಸಂಚಾರ ಇರಲಿದ್ದು, ನೌಕರರು ಕಡ್ಡಾಯವಾಗಿ ಹಾಜರಾಗಬೇಕು ಎಂದು ಸೂಚನೆ ನೀಡಿದೆ.

28 Sep 2023, 03:00 PM
ಸುಮಲತಾರಿಗೆ 2 ಗಂಟೆಯಲ್ಲಿ ಪ್ರಧಾನಿ ಭೇಟಿ ಸಿಗುವ ಅವಕಾಶ ಸಿಎಂಗೆ ಯಾಕಿಲ್ಲ? ಕಾಂಗ್ರೆಸ್ ವಕ್ತಾರ ಲಕ್ಷ್ಮಣ್
ಕಾವೇರಿ ವಿಚಾರವಾಗಿ ಪ್ರಧಾನಿ ಭೇಟಿಗೆಂದು ರಾಜ್ಯದ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಸಹಿತ ಕ್ಯಾಬಿನೆಟ್ ಸಚಿವರು ದೆಹಲಿಗೆ ಹೋಗಿ ನಾಲ್ಕು ದಿವಸ ಕಾದರೂ ಅವಕಾಶ ನೀಡಿಲ್ಲ. ಆದರೆ ಪ್ರಧಾನಿಗೆ ಪತ್ರ ಬರೆದ ಎರಡು ಗಂಟೆಯಲ್ಲಿ ಮಂಡ್ಯ ಸಂಸದೆ ಸುಮಲತಾರಿಗೆ ಅವಕಾಶ ಸಿಗುತ್ತದೆ. 10 ಗಂಟೆಗೆ ಪತ್ರ ಬರೆದರೆ 12 ಗಂಟೆಗೆ ಭೇಟಿಯಾಗಲು ಅವಕಾಶ ಸಿಗುತ್ತದೆ. ಅದಕ್ಕೆ ನಮಗೆ ಹೊಟ್ಟಿಕಿಚ್ಚಿಲ್ಲ. ಓರ್ವ ಸಿಎಂ, ಡಿಸಿಎಂಗೆ ಅವಮಾನ ಮಾಡ್ತೀರಿ. ವಿಪಕ್ಷ ನಾಯಕರಿಗೂ ಬೆಲೆ ಇಲ್ಲವೇ? ಎಂದು ಬೆಂಗಳೂರಿನಲ್ಲಿ ಮಾತನಾಡಿದ ಕಾಂಗ್ರೆಸ್ ವಕ್ತಾರ ಎಂ. ಲಕ್ಷ್ಮಣ್ ಪ್ರಶ್ನಿಸಿದ್ದಾರೆ.

28 Sep 2023, 11:20 PM
ಕಲಬುರಗಿ | ಭಗತ್ ಸಿಂಗ್ ಜನ್ಮದಿನದಂದು ಗಾಂಧಿ ಹಂತಕ ಗೋಡ್ಸೆ ಫೋಟೊ ಮೆರವಣಿಗೆ
ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ಮಂದೇವಾಲ ಗ್ರಾಮದಲ್ಲಿ ನಡೆದ ಭಗತ್ ಸಿಂಗ್ ಜನ್ಮದಿನದ ಪ್ರಯುಕ್ತ ನಡೆದ ಮೆರವಣಿಗೆಯಲ್ಲಿ ಗಾಂಧೀಜಿ ಹಂತಕ ನಾಥೂರಾಮ್ ಗೋಡ್ಸೆಯ ಫೋಟೊವನ್ನು ಮೆರವಣಿಗೆ ಮಾಡಲಾಗಿದೆ. ವೈಜೂ ಸಾಹುಕಾರ ಮುರಗಾನೂರ ಇವರ ಮುಂದಾಳತ್ವದಲ್ಲಿ ನಡೆದ ಮೆರವಣಿಗೆಯಲ್ಲಿ, ಭಗತ್ ಸಿಂಗ್, ರಾಣಿ ಚೆನ್ನಮ್ಮ, ಸರ್ದಾರ್ ವಲ್ಲಭಭಾಯಿ ಪಟೇಲ್ ಮುಂತಾದ ರಾಷ್ಟ್ರ ನಾಯಕರ ಫೋಟೊ ಜೊತೆಗೆ ಸಾವರ್ಕರ್ ಮತ್ತು ಗಾಂಧಿ ಹಂತಕ ಗೋಡ್ಸೆಯ ಫೋಟೋವನ್ನೂ ಮೆರವಣಿಗೆ ಮಾಡಲಾಗಿದೆ.

28 Sep 2023, 11:00 PM
ಕರ್ನಾಟಕ ಬಂದ್: ಸಿನಿಮಾ ಬಿಡುಗಡೆ ಮುಂದೂಡಲು ನಿರ್ಮಾಪಕರ ಸಂಘ ಮನವಿ
ಕಾವೇರಿ ನೀರಿನ ವಿಚಾರವಾಗಿ ಕನ್ನಡಪರ ಸಂಘಟನೆಗಳು ನಾಳೆ(ಸೆ.29) ಕರ್ನಾಟಕ ಬಂದ್‌ಗೆ ಕರೆ ನೀಡಿರುವ ಹಿನ್ನೆಲೆಯಲ್ಲಿ ಈ ವಾರ ಸಿನಿಮಾಗಳನ್ನು ಬಿಡುಗಡೆ ಮಾಡದಂತೆ ಕರ್ನಾಟಕ ನಿರ್ಮಾಪಕರ ಸಂಘದ ಅಧ್ಯಕ್ಷರಾದ ಉಮೇಶ್ ಬಣಕಾರ್ ತಿಳಿಸಿದ್ದಾರೆ. ಈಗಾಗಲೇ ಸಂಬಂಧಪಟ್ಟ ನಿರ್ಮಾಪಕರ ಜೊತೆ ಮಾತನಾಡಲಾಗಿದೆ. ಅವರು ಕೂಡ ಬೆಂಬಲ ಸೂಚಿಸಿದ್ದಾರೆ ಎಂದು ಅವರು ಹೇಳಿದರು.
