Live Updates | ಭಾರತೀಯ ಮಹಿಳಾ ತಂಡಕ್ಕೆ ಅಭಿನಂದನೆ ಸಲ್ಲಿಸುವಾಗ ಎಡವಿದ ಜಯ್ ಶಾ; ಟ್ವಿಟರ್‌ನಲ್ಲಿ ಟ್ರೋಲ್

Date:

28 Sep 2023, 03:45 PM

ಭಾರತೀಯ ಮಹಿಳಾ ತಂಡಕ್ಕೆ ಅಭಿನಂದನೆ ಸಲ್ಲಿಸುವಾಗ ಎಡವಿದ ಜಯ್ ಶಾ; ಟ್ವಿಟರ್‌ನಲ್ಲಿ ಟ್ರೋಲ್

ಚೀನಾದ ಹಾಂಗ್‌ಝೌನಲ್ಲಿ ನಡೆಯುತ್ತಿರುವ 2023ರ ಸಾಲಿನ ಏಷ್ಯನ್‌ ಗೇಮ್ಸ್ ಕ್ರೀಡಾಕೂಟದ ಕ್ರಿಕೆಟ್‌ನಲ್ಲಿ ಶ್ರೀಲಂಕಾವನ್ನು ಭಾರತೀಯ ಮಹಿಳಾ ತಂಡವು 19 ರನ್‌ಗಳಿಂದ ಸೋಲಿಸಿ, ಚಿನ್ನದ ಪದಕ ಗಳಿಸಿತ್ತು. ಹೀಗಾಗಿ, ಮಹಿಳಾ ತಂಡವನ್ನು ಬಿಸಿಸಿಐ ಕಾರ್ಯದರ್ಶಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಮಗ ಜಯ್ ಶಾ ಅಭಿನಂದನಾ ಭಾಷಣ ಮಾಡುವ ವೇಳೆ ಎಡವಿದ್ದು, ಈ ವಿಡಿಯೋ ಈಗ ಟ್ವಿಟರ್‌ನಲ್ಲಿ ಟ್ರೋಲ್‌ಗೆ ಕಾರಣವಾಗಿದೆ. ಸ್ಮೃತಿ ಮಂಧಾನಾ ಹೆಸರನ್ನು ಉಲ್ಲೇಖಿಸಿ ಅಭಿನಂದಿಸುವಾಗ ಎಡವಿದ್ದರು. ವಿಡಿಯೋ ಈಗ ವೈರಲಾಗಿದೆ.


28 Sep 2023, 03:00 PM

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಕರ್ನಾಟಕ ಬಂದ್ | ಸಾರಿಗೆ ನೌಕರರಿಗೆ ಕಡ್ಡಾಯ ಹಾಜರಾತಿಗೆ ಸೂಚನೆ

ತಮಿಳುನಾಡಿಗೆ ನೀರು ಬಿಡುವುದನ್ನು ವಿರೋಧಿಸಿ ನೂರಾರು ಕನ್ನಡಪರ ಸಂಘಟನೆಗಳು ಸೆ.29ರಂದು ಕರ್ನಾಟಕ ಬಂದ್​ಗೆ ಕರೆ ಕೊಟ್ಟಿವೆ. ಆದರೆ ಈ ನಡುವೆ ಕೆಎಸ್​ಆರ್​ಟಿಸಿ ಹಾಗೂ ಬಿಎಂಟಿಸಿ ಬಸ್​ಗಳ ಸಂಚಾರ ಇರಲಿದ್ದು, ನೌಕರರು ಕಡ್ಡಾಯವಾಗಿ ಹಾಜರಾಗಬೇಕು ಎಂದು ಸೂಚನೆ ನೀಡಿದೆ.

28 Sep 2023, 03:00 PM

ಸುಮಲತಾರಿಗೆ 2 ಗಂಟೆಯಲ್ಲಿ ಪ್ರಧಾನಿ ಭೇಟಿ ಸಿಗುವ ಅವಕಾಶ ಸಿಎಂಗೆ ಯಾಕಿಲ್ಲ? ಕಾಂಗ್ರೆಸ್ ವಕ್ತಾರ ಲಕ್ಷ್ಮಣ್

ಕಾವೇರಿ ವಿಚಾರವಾಗಿ ಪ್ರಧಾನಿ ಭೇಟಿಗೆಂದು ರಾಜ್ಯದ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಸಹಿತ ಕ್ಯಾಬಿನೆಟ್ ಸಚಿವರು ದೆಹಲಿಗೆ ಹೋಗಿ ನಾಲ್ಕು ದಿವಸ ಕಾದರೂ ಅವಕಾಶ ನೀಡಿಲ್ಲ. ಆದರೆ ಪ್ರಧಾನಿಗೆ ಪತ್ರ ಬರೆದ ಎರಡು ಗಂಟೆಯಲ್ಲಿ ಮಂಡ್ಯ ಸಂಸದೆ ಸುಮಲತಾರಿಗೆ ಅವಕಾಶ ಸಿಗುತ್ತದೆ. 10 ಗಂಟೆಗೆ ಪತ್ರ ಬರೆದರೆ 12 ಗಂಟೆಗೆ ಭೇಟಿಯಾಗಲು ಅವಕಾಶ ಸಿಗುತ್ತದೆ. ಅದಕ್ಕೆ ನಮಗೆ ಹೊಟ್ಟಿಕಿಚ್ಚಿಲ್ಲ. ಓರ್ವ ಸಿಎಂ, ಡಿಸಿಎಂಗೆ ಅವಮಾನ ಮಾಡ್ತೀರಿ. ವಿಪಕ್ಷ ನಾಯಕರಿಗೂ ಬೆಲೆ ಇಲ್ಲವೇ? ಎಂದು ಬೆಂಗಳೂರಿನಲ್ಲಿ ಮಾತನಾಡಿದ ಕಾಂಗ್ರೆಸ್ ವಕ್ತಾರ ಎಂ. ಲಕ್ಷ್ಮಣ್ ಪ್ರಶ್ನಿಸಿದ್ದಾರೆ.

ಎಂ ಲಕ್ಷ್ಮಣ್‌

28 Sep 2023, 11:20 PM

ಕಲಬುರಗಿ | ಭಗತ್ ಸಿಂಗ್ ಜನ್ಮದಿನದಂದು ಗಾಂಧಿ ಹಂತಕ ಗೋಡ್ಸೆ ಫೋಟೊ ಮೆರವಣಿಗೆ

ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ಮಂದೇವಾಲ ಗ್ರಾಮದಲ್ಲಿ ನಡೆದ ಭಗತ್ ಸಿಂಗ್ ಜನ್ಮದಿನದ ಪ್ರಯುಕ್ತ ನಡೆದ ಮೆರವಣಿಗೆಯಲ್ಲಿ ಗಾಂಧೀಜಿ ಹಂತಕ ನಾಥೂರಾಮ್ ಗೋಡ್ಸೆಯ ಫೋಟೊವನ್ನು ಮೆರವಣಿಗೆ ಮಾಡಲಾಗಿದೆ. ವೈಜೂ ಸಾಹುಕಾರ ಮುರಗಾನೂರ ಇವರ ಮುಂದಾಳತ್ವದಲ್ಲಿ ನಡೆದ ಮೆರವಣಿಗೆಯಲ್ಲಿ, ಭಗತ್ ಸಿಂಗ್, ರಾಣಿ ಚೆನ್ನಮ್ಮ, ಸರ್ದಾರ್ ವಲ್ಲಭಭಾಯಿ ಪಟೇಲ್ ಮುಂತಾದ ರಾಷ್ಟ್ರ ನಾಯಕರ ಫೋಟೊ ಜೊತೆಗೆ ಸಾವರ್ಕರ್ ಮತ್ತು ಗಾಂಧಿ ಹಂತಕ ಗೋಡ್ಸೆಯ ಫೋಟೋವನ್ನೂ ಮೆರವಣಿಗೆ ಮಾಡಲಾಗಿದೆ.


28 Sep 2023, 11:00 PM

ಕರ್ನಾಟಕ ಬಂದ್: ಸಿನಿಮಾ ಬಿಡುಗಡೆ ಮುಂದೂಡಲು ನಿರ್ಮಾಪಕರ ಸಂಘ ಮನವಿ

ಕಾವೇರಿ ನೀರಿನ ವಿಚಾರವಾಗಿ ಕನ್ನಡಪರ ಸಂಘಟನೆಗಳು ನಾಳೆ(ಸೆ.29) ಕರ್ನಾಟಕ ಬಂದ್‌ಗೆ ಕರೆ ನೀಡಿರುವ ಹಿನ್ನೆಲೆಯಲ್ಲಿ ಈ ವಾರ ಸಿನಿಮಾಗಳನ್ನು ಬಿಡುಗಡೆ ಮಾಡದಂತೆ ಕರ್ನಾಟಕ ನಿರ್ಮಾಪಕರ ಸಂಘದ ಅಧ್ಯಕ್ಷರಾದ ಉಮೇಶ್ ಬಣಕಾರ್ ತಿಳಿಸಿದ್ದಾರೆ. ಈಗಾಗಲೇ ಸಂಬಂಧಪಟ್ಟ ನಿರ್ಮಾಪಕರ ಜೊತೆ ಮಾತನಾಡಲಾಗಿದೆ. ಅವರು ಕೂಡ ಬೆಂಬಲ ಸೂಚಿಸಿದ್ದಾರೆ ಎಂದು ಅವರು ಹೇಳಿದರು.

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಲೋಕಪಾಲ್‌ ಮುಖ್ಯಸ್ಥರಾಗಿ ಸುಪ್ರೀಂ ಕೋರ್ಟ್‌ನ ಮಾಜಿ ನ್ಯಾಯಮೂರ್ತಿ ಎ ಎಂ ಖಾನ್ವಿಲ್ಕರ್ ನೇಮಕ

ಸುಪ್ರೀಂ ಕೋರ್ಟ್‌ನ ಮಾಜಿ ನ್ಯಾಯಮೂರ್ತಿ ಅಜಯ್ ಮಾಣಿಕ್‌ ರಾವ್ ಖಾನ್ವಿಲ್ಕರ್ ಅವರನ್ನು...

ಉತ್ತರ ಪ್ರದೇಶ | ದೇಶದ ಹಿರಿಯ ಎಸ್‌ಪಿ ಸಂಸದ ಶಫೀಕುರ್ ರೆಹಮಾನ್ ಬರ್ಕ್ ನಿಧನ

ದೇಶದ ಹಿರಿಯ ಸಂಸದರಾಗಿದ್ದ ಉತ್ತರ ಪ್ರದೇಶದ ಸಮಾಜವಾದಿ ಪಕ್ಷದ ಸಂಸದ ಶಫೀಕುರ್...

ಬಾಬಾ ರಾಮ್‌ದೇವ್‌ ಮಾಲೀಕತ್ವದ ಪತಂಜಲಿಯ ಜಾಹೀರಾತಿಗೆ ನಿಷೇಧ ಹೇರಿದ ಸುಪ್ರೀಂ ಕೋರ್ಟ್

ಕೇಂದ್ರ ಸರ್ಕಾರ ಕಣ್ಮುಚ್ಚಿ ಕುಳಿತಿದೆಯೇ? ಸುಪ್ರೀಂ ಕೋರ್ಟ್‌ ಗರಂ ಸುಪ್ರೀಂ...

ಮಧ್ಯ ಪ್ರದೇಶ | ಕೆಲಸ ಕಳೆದುಕೊಳ್ಳುವ ಭಯ: ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಉದ್ಯೋಗಿ ಆತ್ಮಹತ್ಯೆ

ಮಧ್ಯಪ್ರದೇಶದ ಇಂದೋರ್‌ನಲ್ಲಿ ಉದ್ಯೋಗ ಕಳೆದುಕೊಳ್ಳುವ ಭೀತಿಯಿಂದ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಲಿಮಿಟೆಡ್‌ನ...