ಹೊಳಲು | ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ

Date:

ಕರ್ನಾಟಕ ಸರ್ಕಾರ ಸಮಗ್ರ ಶಿಕ್ಷಣ ,ಕರ್ನಾಟಕ ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರಶಿಕ್ಷಣಾಧಿಕಾರಿಗಳು ಹಾಗೂ ಕ್ಷೇತ್ರ ಸಮನ್ವಯಾಧಿಕಾರಿಗಳ ಕಛೇರಿ, ಉತ್ತರ ವಲಯ ಮಂಡ್ಯ ಇವರ ಸಹಯೋಗದೊಂದಿಗೆ ಹೊಳಲು ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ 2026-27 ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಈ ದಿನ ಯಶಸ್ವಿಯಾಗಿ ಪ್ರತಿಭಾ ಕಾರಂಜಿ ನಡೆಯಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ಮೇಲುಕೋಟೆ ಶಾಸಕರಾದ ಶ್ರೀಯುತ ದರ್ಶನ್ ಪುಟ್ಟಣ್ಣಯ್ಯನವರು ಗಿಡಕ್ಕೆ ನೀರೆರೆಯುವುದರ ಮುಖಾಂತರ ಉದ್ಘಾಟಿಸಿದರು ಮಾತನಾಡಿ, “ಮಕ್ಕಳು ಇಂತಹ ಕಾರ್ಯಕ್ರಮದಲ್ಲಿ ಭಾಗವಹಿಸಿ ಎಲ್ಲರಲ್ಲೂ ಪ್ರತಿಭೆ ಇದೆ ಅದನ್ನು ಗುರುತಿಸಿಕೊಳ್ಳಬೇಕು ನಿಮಗೆ ಇಷ್ಟವಾದ ಸ್ಪರ್ಧೆಯಲ್ಲಿ ಭಾಗವಹಿಸಿ ಸೋಲು ಗೆಲುವು ಇದ್ದೇ ಇರುತ್ತದೆ ಅದನ್ನ ಸಮಾನವಾಗಿ ಸ್ವೀಕರಿಸಬೇಕು ಈ ಸ್ಪರ್ಧೆಯಿಂದ ನಿಮ್ಮ ಮನಸ್ಸಿಗೆ ಖುಷಿಯಾಗುತ್ತದೆ ಎಲ್ಲದಕ್ಕೂ ಹೆಚ್ಚಾಗಿ ನಿಮ್ಮ ಶಾಲೆಯಲ್ಲಿ ಇರುವಾಗ ಹೆಚ್ಚು ಹೆಚ್ಚು ಪ್ರಶ್ನೆಗಳನ್ನು ತರಗತಿಯ ಶಿಕ್ಷಕರುಗಳಿಗೆ ಕೇಳಿ ಬಗೆಹರಿಸಿಕೊಳ್ಳಬೇಕು ಹಾಗೂ ಪ್ರಕೃತಿಯ ಬಗ್ಗೆ, ವಾಹನಗಳ ಬಗ್ಗೆ, ವಿಜ್ಞಾನದ ಬಗ್ಗೆ ಪ್ರಶ್ನೆ ಕೇಳಿ ತಿಳಿದುಕೊಳ್ಳಬೇಕು” ಎಂದು ಹೇಳಿದರು.

ಈ ಕಾರ್ಯಕ್ರಮದಲ್ಲಿ ಡೈರಿ ಅಧ್ಯಕ್ಷರಾದ ಅನುರಾಧ, ಗ್ರಾಮದ ಮುಖಂಡರಾದ ಪಟೇಲ್ ರಾಮ್, ಚೇತನ್ , ಚಂದನ್, ಎಚ್ .ಡಿ.ರವಿ, ನಾರಾಯಣಪ್ಪ, ಹಾಗೂ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ, ಮಂಡ್ಯ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಎ. ಚಿಕ್ಕೇಗೌಡ, ಮಂಡ್ಯ ಉತ್ತರ ವಲಯ ಅಧ್ಯಕ್ಷರಾದ ಕೆ.ಸಿ. ರವಿಶಂಕರ್, ಕಾರ್ಯದರ್ಶಿ ಎಚ್. ಕೆ. ಕುಮಾರ್ ಜಿಲ್ಲಾ ಉಪಾಧ್ಯಕ್ಷರಾದ ಎಂ.ಡಿ. ಕುಮಾರ್ ,ಶಾಲೆಯ ಮುಖ್ಯ ಶಿಕ್ಷಕರಾದ ಬಸವರಾಜು, ಎಸ್ ಡಿ ಎಮ್ ಸಿ ಅಧ್ಯಕ್ಷರಾದ ದೊಡ್ಡ ಮಾದಯ್ಯ, ಹಾಗೂ ಕಾವೇರಿ ಮಹಿಳಾ ಸಂಘದ ನಿಂಗರಾಜಮ್ಮ, ವಿನುತಾ ಹಾಗೂ ಸ್ಥಳೀಯ ಸಂಘ ಸಂಸ್ಥೆಯ ಪದಾಧಿಕಾರಿಗಳು ಶಾಲೆಯ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

ವಿವಿಧ ಶಾಲೆಯ ಮಕ್ಕಳು ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಭಾಗವಹಿಸಿ ಬಹುಮಾನ ಪಡೆದರು. ಕಾರ್ಯಕ್ರಮಕ್ಕೂ ಮೊದಲು ಸ್ಥಳೀಯ ಶಾಸಕರನ್ನು ಅದ್ಧೂರಿಯಾಗಿ ಕುಂಭಮೇಳದ ಸ್ವಾಗತದೊಂದಿಗೆ ಬರಮಾಡಿಕೊಂಡರು

eedina
ಈ ದಿನ ಡೆಸ್ಕ್‌
Website | + posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು | ಸಚಿವ ಯತೀಂದ್ರ ಸಿದ್ದರಾಮಯ್ಯ ರಾಜಮನೆತನಕ್ಕೆ ಅವಹೇಳನಕಾರಿ ಹೇಳಿಕೆ; ಅರಸು ಸಂಘ ಖಂಡನೆ 

ಮೈಸೂರಿನ ಉಸ್ತುವಾರಿ ಸಚಿವರಾದ ಶ್ರೀ ಯತೀಂದ್ರ ಸಿದ್ದರಾಮಯ್ಯ ನವರು ಮೈಸೂರಿನ ರಾಜಮನೆತನದ...

ಚಿಕ್ಕಮಗಳೂರು | ಅಪಘಾತದಲ್ಲಿ ಮೃತ: ಸರ್ಕಾರದಿಂದ ಪರಿಹಾರ; ಶಾಸಕ ಹೆಚ್.ಡಿ ತಮ್ಮಯ್ಯ

ಬಿಳೇಕಲ್ಲು ಗ್ರಾಮದಲ್ಲಿ ಡಾ. ಬಿ.ಆರ್. ಅಂಬೇಡ್ಕ‌ರ್ ಜಯಂತಿ ಮೆರವಣಿಗೆಯ ಸಂದರ್ಭದಲ್ಲಿ ಏಕಾಏಕಿ...

ಉಡುಪಿ | ‘ನವೋನ್ಮೇಶ್ 2026’: ಕೆನರಾ ವಿಕಾಸ್ ಪಿಯು ಕಾಲೇಜಿಗೆ ಸಮಗ್ರ ಚಾಂಪಿಯನ್ ಪ್ರಶಸ್ತಿ

ಮೂಡ್ಲಕಟ್ಟೆಯ ಐಎಂಜೆ ಶಿಕ್ಷಣ ಸಂಸ್ಥೆಗಳ ಆವರಣದಲ್ಲಿ ಪಿಯುಸಿ ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾದ ರಾಜ್ಯಮಟ್ಟದ...