ಮಂಡ್ಯ ಜಿಲ್ಲೆ, ಮದ್ದೂರಿನ ಕೊಲ್ಲಿ ವೃತ್ತದ ಬಳಿ ಹರಿಯುವ, ಜೀವನದಿಯೆಂದೇ ಕರೆಯಿಸಿಕೊಳ್ಳುವ ಶಿಂಷ ನದಿ ಶೌಚಾಲಯದ ಕೊಳಚೆ ನೀರಿನಿಂದ ಮಲಿನಗೊಳ್ಳುತ್ತಿದೆ.ಶಿಂಷಾ ನದಿ ಇಂದು ತನ್ನ ಅಸ್ತಿತ್ವಕ್ಕಾಗಿಯೇ ಹೋರಾಡುತ್ತಿದೆ. ಒಂದು ಕಾಲದಲ್ಲಿ ಈ ನದಿಯ ನೀರು ಕುಡಿಯಲು, ಸ್ನಾನ ಮಾಡಲು, ಕೃಷಿಗೆ ಬಳಸಲು ಯೋಗ್ಯವಾಗಿತ್ತು. ಆದರೆ ಇಂದು ಈ ನದಿಗೆ ಪಟ್ಟಣಗಳಿಂದ, ಹಳ್ಳಿಗಳಿಂದ ಬರುವ ಶೌಚಾಲಯದ ನೀರು, ಚರಂಡಿ ನೀರು, ಮನೆಗಳ ಕೊಳಕು ನೀರು ನೇರವಾಗಿ ಸೇರುತ್ತಿದ್ದು, ನದಿಯೇ ಕೊಳಚೆ ನೀರಿನ ಹಳ್ಳವಾಗಿ ಮಾರ್ಪಟ್ಟಿದೆ.
ತುಮಕೂರಿನ ದೇವರಾಯನದುರ್ಗದಲ್ಲಿ ಹುಟ್ಟಿ, ಕುಣಿಗಲ್, ಮದ್ದೂರು, ಮಳವಳ್ಳಿ ಮೂಲಕ 221 ಕಿ.ಮೀ. ಹರಿದು ಕಾವೇರಿಯನ್ನು ಸೇರುವ ಈ ನದಿ, ಲಕ್ಷಾಂತರ ರೈತರ, ಜನರ ಜೀವನಾಡಿ. ಆದರೆ ಇಂದು ಮದ್ದೂರು, ಕೊಪ್ಪ, ಭಾಗದಲ್ಲಿ ನದಿಗೆ ಹೋದರೆ ಮೂಗು ಮುಚ್ಚಿಕೊಂಡು ಹೋಗಬೇಕಾದ ಪರಿಸ್ಥಿತಿ ಬಂದಿದೆ. ನದಿಯ ನೀರು ಸಪ್ಪೆಯಾಗಿ , ದುರ್ವಾಸನೆ ಬೀರುತ್ತಿದೆ. ನದಿಯಲ್ಲಿ ಮೀನುಗಳು ಸಾಯುತ್ತಿವೆ. ದನಕರುಗಳು ಈ ನೀರು ಕುಡಿಯಲು ಆಗುತ್ತಿಲ್ಲ
“ಶಿಂಷಾ ನದಿಯು ನಮ್ಮ ಜೀವನಾಡಿ “
ಒಂದು ಹೊತ್ತು ಊಟ ವಿಲ್ಲದಿದ್ದರೂ ಇರಬಹುದು ಆದರೆ ನೀರಿಲ್ಲದೆ ಇರಲು ಸಾಧ್ಯವಿಲ್ಲ ಯಾವುದೇ ಜೀವಿಯು ಬದುಕಿ ತನ್ನ ಸಂತತಿಯನ್ನು ಅಭಿವೃದ್ಧಿಯಾಗಬೇಕಾದರೆ ನೀರಿನ ಪಾತ್ರ ಜನ್ಮನೀಡಿದ ತಾಯಿಗಿಂತಲೂ ಮಿಗಿಲಾದದ್ದು. ಮಣ್ಣಿನಲ್ಲಿ ಇರುವ ಸೂಕ್ಷ್ಮಣು ಜೀವಿಂದ ವಿಶ್ವದ ಅತೀ ದೊಡ್ಡ ಪ್ರಾಣಿ ಪಕ್ಷಿಗಳು ಯಾವುದೇ ಆದರೂ ಅದಕ್ಕೆ ನೀರಿನ ಅವಶ್ಯಕತೆ ಬಹಳ ಅವಶ್ಯಕ ವಿದೆ. ಹಲವಾರು ರೂಪದಲ್ಲಿ ನೀರನ್ನು ನಾವು ಬಳಕೆ ಮಾಡುತ್ತಿದೇವೆ ಆದರೆ ಮುಂದಿನ ಪೀಳಿಗೆಯ ಸಂತತಿಗೆ ನಾವು ನೀರನ್ನು ಸಂರಕ್ಷಿಸಬೇಕಾಗಿದೆ ನೀರಿಲ್ಲವಾದರೆ ಭೂಮಿಯು ಹಸಿರಿನಿಂದ ಕಂಗೊಳಿಸಲು ಸಾಧ್ಯವಿಲ್ಲ. ಹಾಗೆಯೇ ನಮ್ಮ ಶಿಂಷಾ ನದಿಯು ಇಲ್ಲಿಯ ಸುತ್ತಮುತ್ತಲಿನ ಜನಗಳಿಗೆ ಪ್ರಾಣಿ ಪಕ್ಷಿಗಳಿಗೆ ಬಹಳ ಅತ್ಯಮೂಲ್ಯವಾದ ನೈಸರ್ಗಿಕ ಕೊಡುಗೆಯಾಗಿದೆ. ಇದನ್ನು ಕಾಪಾಡಿಕೊಳ್ಳುವ ಹೊಣೆ ನಮ್ಮೆಲ್ಲರಾ ಜವಾಬ್ದಾರಿಯಾಗಿದೆ ನಾವು ನಮ್ಮ ದೇಹಕ್ಕೆ ಎಷ್ಟು ಕಾಳಜಿಯಿಂದ ಆರೋಗ್ಯವನ್ನು ಕಾಪಾಡಿತ್ತೇವೆಯೋ ಅದೇ ರೀತಿಯಾಗಿ ನೀರಿನ ಗುಣಮಟ್ಟವನ್ನು ಸ್ವಚ್ಛತೆಯನ್ನು ಕಾಪಾಡಬೇಕಾದುದ್ದು ನಮ್ಮ ಕರ್ತವ್ಯ. ನಾವು ಇದನ್ನು ಮಾತಿನಿಂದ ಅಥವಾ ಬರವಣಿಗೆ ಇಂದ ಹೆಚ್ಚರಿಸಬಹುದು ಆದರೆ ನಮ್ಮ ಪ್ರಜ್ಞೆಗೆ ತಿಳಿದ ನಂತರ ನೀರಿನ ಉಳಿವಿಗೆ ನಮ್ಮ ನಿರ್ಧಾರಗಳು ಬಹಳ ಅಮೂಲ್ಯವಾದ ಪಾತ್ರವಾಗಿ ಕಾರ್ಯ ನಿರ್ವಹಿಸುತ್ತವೆ. ಮೂಕ ಪ್ರಾಣಿ ಪಕ್ಷಿಗಳಿಂದ ಯಾವುದೇ ರೀತಿಯ ಪ್ರಕೃತಿ ನೈಸರ್ಗಿಕವಾಗಿ ಸಿಗುವ ಅಮೃತಕ್ಕೆ ಸಮಾನದ ಈ ನೀರನ್ನು ಕಲುಸಿತವಾಗಲು ಸಾಧ್ಯವಿಲ್ಲ ಆದರೆ ಈ ಮನುಷ್ಯ ತಾನು ಬೆಳವಣಿಗೆ ಬೆಳವಣಿಗೆ ಎಂಬ ಅಭಿವೃದ್ಧಿಯ ಕಡೆ ಹೆಜ್ಜೆ ಇಡುತ್ತಾ ತನ್ನ ಮೂಲಭೂತವಾದ ಪ್ರಕೃತಿಯ ಸೊಬಗನ್ನೇ ತನ್ನ ದುರಾಸೆಗೆ ಹಾಳು ಮಾಡುತ್ತಿದ್ದಾನೆ. ಇದು ಬಹಳ ನೋವಿನ ಸಂಗತಿಯಾಗಿದೆ .
“ಯಾಕೆ ಹಾಳಾಗುತ್ತಿದೆ ಶಿಂಷಾ”
ಸಂಸ್ಕರಿಸದ ಚರಂಡಿ ನೀರು ಪಟ್ಟಣ ಪಂಚಾಯತ್ ಪುರಸಭೆಗಳಿಂದ ಬರುವ ಚರಂಡಿ ನೀರನ್ನು ಸಂಸ್ಕರಿಸದೆ ನೇರವಾಗಿ ನದಿಗೆ ಬಿಡಲಾಗುತ್ತಿದೆ. ಶೌಚಾಲಯದ ಮಲಿನ ನೀರು ಕೂಡ ಇದರಲ್ಲಿ ಸೇರಿದೆ.ತ್ಯಾಜ್ಯ ಎಸೆಯುವುದುಪ್ಲಾಸ್ಟಿಕ್, ಹೂವು, ಬಟ್ಟೆ, ಆಸ್ಪತ್ರೆ ತ್ಯಾಜ್ಯ ಎಲ್ಲವನ್ನೂ ಜನರು ನದಿಗೆ ಎಸೆಯುತ್ತಿದ್ದಾರೆ.ಸಕ್ಕರೆ ಕಾರ್ಖಾನೆ ತ್ಯಾಜ್ಯ ಹಿಂದೆ ಎನ್.ಎಸ್.ಎಲ್ ಸಕ್ಕರೆ ಕಾರ್ಖಾನೆಯಿಂದ ವಿಷಕಾರಿ ನೀರು ನದಿಗೆ ಸೇರಿ, ನದಿ ನೀರು ಕುಡಿಯಲು ಯೋಗ್ಯವಲ್ಲ ಎಂದು ಮಾಲಿನ್ಯ ನಿಯಂತ್ರಣ ಮಂಡಳಿಯೇ ವರದಿ ಕೊಟ್ಟಿತ್ತು. ಇಂದಿಗೂ ಆ ಭಯ ಜನರಲ್ಲಿ ಹಾಗೆಯೇ ಇದೆ.ಮರಳು ಗಣಿಗಾರಿಕೆ ಮತ್ತು ಒತ್ತುವರಿ ನದಿ ಪಾತ್ರ ಒತ್ತುವರಿಯಾಗಿ, ನದಿಯ ಸ್ವಾಭಾವಿಕ ಹರಿವು ನಿಂತುಹೋಗಿದೆ. ನೀರು ಒಂದೇ ಕಡೆ ನಿಂತು ಕೊಳೆಯುತ್ತಿದೆ.ಜನರಿಗೆ ಆಗುತ್ತಿರುವ ತೊಂದರೆ ಶಿಂಷಾ ನದಿ ದಂಡೆಯ ಹಳ್ಳಿಗಳ ಜನರು ಈ ನೀರನ್ನೇ ಕುಡಿಯುವ ನೀರಿಗೆ, ಕೃಷಿಗೆ ಅವಲಂಬಿಸಿದ್ದಾರೆ. ಕಲುಷಿತ ನೀರಿನಿಂದಾಗಿ ಆರೋಗ್ಯದ ಮೇಲೆ ಪರಿಣಾಮ ಚರ್ಮರೋಗ, ಹೊಟ್ಟೆನೋವು, ಈ ನೀರಿನಿಂದ ಬೆಳೆದ ಬೆಳೆಗೂ ರೋಗ ಬರುತ್ತಿದೆ. ನಮ್ಮ ಜಮೀನಿನ ಮಣ್ಣೇ ಹಾಳಾಗುತ್ತಿದೆ.”
ಒಬ್ಬ ಹಿರಿಯ ರೈತ ನೋವಿನಿಂದ ಹೇಳಿದ ಮಾತು ಒಂದು ಕಾಲದಲ್ಲಿ ಶಿಂಷಾ ತಾಯಿ ಎನ್ನುತ್ತಿದ್ದೆವು. ಇವತ್ತು ಶಿಂಷಾ ತಾಯಿಯನ್ನು ನಾವೇ ಕೊಳಕು ಮಾಡಿದ್ದೇವೆ.
ಶಿಂಷಾ ನದಿಯನ್ನು ಉಳಿಸಲು ಸರ್ಕಾರ ಮತ್ತು ಜನರು ಒಟ್ಟಾಗಿ ಕೆಲಸ ಮಾಡಬೇಕಾಗಿದೆ.
ನೀರಿನ ಮಹತ್ವ ತಿಳಿಯದ ಮಾನವ
ಒಂದು ಕಾಲದಲ್ಲಿ ನಮ್ಮ ಹಿರಿಯರು ನೀರನ್ನು ದೇವರು ಎಂದು ಪೂಜಿಸುತ್ತಿದ್ದರು. ಕೆರೆಗೆ, ಬಾವಿಗೆ, ನದಿಗೆ ಹೋದರೆ ಚಪ್ಪಲಿ ಬಿಚ್ಚಿ ಹೋಗುತ್ತಿದ್ದರು. “ಗಂಗೆ, ಯಮುನೆ, ಕಾವೇರಿ” ಎಂದು ನೀರಿಗೆ ದೇವರ ಹೆಸರು ಇಟ್ಟಿದ್ದರು. ಆದರೆ ಇಂದು ಅದೇ ಮಾನವ ನೀರನ್ನು ದೇವರು ಎಂದು ಪೂಜುವುದನ್ನು ಬಿಟ್ಟು, ನೀರನ್ನು ಕೊಳಕು ಮಾಡುವ ಕೆಲಸ ಮಾಡುತ್ತಿದ್ದಾನೆ. ನೀರಿಲ್ಲದಿದ್ದರೆ ಅನ್ನವಿಲ್ಲ. ಅನ್ನವಿಲ್ಲದಿದ್ದರೆ ಜೀವವಿಲ್ಲ. ವೈದ್ಯರು ಹೇಳುತ್ತಾರೆ – ಮನುಷ್ಯನ ದೇಹದಲ್ಲಿ ಶೇಕಡಾ 70 ಭಾಗ ನೀರೇ ಇದೆ. ನೀರು ಕಡಿಮೆಯಾದರೆ ಮನುಷ್ಯ ಸಾಯುತ್ತಾನೆ. ಹಾಗಿದ್ದರೂ ಮಾನವ ನೀರನ್ನು ನಿರ್ಲಕ್ಷ್ಯ ಮಾಡುತ್ತಾನೆ.ಇಂದು ಜಗತ್ತಿನಲ್ಲಿ ಮೂರನೇ ಮಹಾಯುದ್ಧವಾದರೆ ಅದು ನೀರಿಗಾಗಿಯೇ ಆಗುತ್ತದೆ ಎಂದು ವಿಜ್ಞಾನಿಗಳು ಹೇಳುತ್ತಾರೆ. ಈ ಮಾತು ಸುಳ್ಳಲ್ಲ. ಈಗಾಗಲೇ ಹಳ್ಳಿ ಹಳ್ಳಿಗಳಲ್ಲಿ, ರಾಜ್ಯ ರಾಜ್ಯಗಳಲ್ಲಿ ನೀರಿಗಾಗಿ ಜಗಳ ಶುರುವಾಗಿದೆ.
ಭೂಮಿ ಹಸಿರಿನಿಂದ ಕಂಗೊಳಿಸಬೇಕಾದರೆ. ಮನುಷ್ಯ ಪ್ರಾಣಿ ಪಕ್ಷಿಗಳು ಮಣ್ಣಿನ ಸೂಕ್ಷ್ಮಣು ಜೀವಿಗಳು ವಾಸಿಸಬೇಕಾದರೆ. ಪ್ರಕೃತಿಯ ತನ್ನ ರೂಪವನ್ನು ಬದಲಿಸಬೇಕಾದರೆ ನೀರಿನ ಪಾತ್ರ ಬಹಳ ಬಹಳ ಅವಶ್ಯಕವಾಗಿದೆ ಇಂತಹ ಪರಿಸ್ಥಿಯಲ್ಲಿ ಶುದ್ಧವಾದ ನೀರನ್ನು ನಾವು ಸರಿಯಾಗಿ ಕಾಪಾಡಿಕೊಳ್ಳದಿದ್ದರೆ ಇವತ್ತಿನ ಮತ್ತು ಮುಂದಿನ ತಲೆಮಾರಿನ ಪರಿಸ್ಥಿಯು ಅಂತ್ಯವಾಗಲೂ ಸಂದೇಹವಿಲ್ಲ
“ತುಂಬಿ ಹರಿಯುವ ನದಿ ಇಂದು ಚರಂಡಿ ರೂಪ ಕಂಡಿತು”
ವಿಶಾಲವಾಗಿ ತನ್ನದೆಯಾದ ಸೌಂದರ್ಯವನ್ನು ಕಂಡುಕೊಂಡಿದ್ದ ನದಿ ಇಂದು ನೀರು ಕಲುಸಿತವಾಗಿರುವುದರ ಜೊತೆಗೆ ಅಲ್ಲಿ ನೀರನ್ನು ಇಡದಿಟ್ಟಿಕೊಳ್ಳುವ ಮರಳು ಕೂಡ ಕಾಣಿಯಾಗಿದೆ ಅದೇ ರೀತಿ ದೊಡ್ಡ ಮಟ್ಟದ ಪ್ಲಾಸ್ಟಿಕ್ ಕಸದ ರಾಶಿಯನ್ನು ಸುರಿದಿರುವು ಕಾಣಬಹುದು ಸುತ್ತಮುತ್ತಲಿನ ನದಿಯ ಜಾಗವು ಕೂಡ ಹೊತ್ತುವರಿಯಾಗಿ ತನ್ನ ವಿಶಾಲವಾದ ಊದ್ದ ಸುತ್ತಳತೆಯನ್ನು ಕಳೆದುಕೊಳ್ಳುತ್ತಾ ಬಂದಿದ್ದೇ ಇದು ಜನರ ನಿರ್ಲಕ್ಷತನೋ ಅಥವಾ ಅಲ್ಲಿಯ ಅಭಿವೃದ್ಧಿಯ ಅಧಿಕಾರಿಗಳ ವ್ಯವಸ್ಥೆಯೋ ಒಂದು ತಿಳಿಯುತ್ತಿಲ್ಲ ನದಿಯ ನೀರಿನ ಮೇಲೆ ಅಲ್ಲಲ್ಲಿ ಬೆಳೆದು ಮುಚ್ಚಿಕೊಳ್ಳುತ್ತಿರುವ ಹಸಿರುಸೊಪ್ಪಿನ ಕಳೆ.
ಸ್ಥಳೀಯರ ಅಭಿಪ್ರಾಯ
ಮದ್ದೂರು ನಗರ ಪ್ರದೇಶದ ಸ್ಥಳೀಯರಾದ ಸ್ವಾಮಿ .ನಾರಾಯಣ ನಿವೃತ್ತ ಶಿಕ್ಷಕರು. ಹಾಗೂ ಚೆನ್ನಪ್ಪ ನಿವೃತ್ತ ಶಿಕ್ಷಕರು .ರೈತ ಮಹಿಳೆ ತಿಮ್ಮಮ್ಮ. ಶಿಂಷಾ ನದಿಯ ನೀರು ತುಂಬಾ ಪವಿತ್ರತೆಯಿಂದ ಸ್ವಚವಾದ ನೀರಾಗಿತ್ತು ಆದರೆ ನಮ್ಮ ಮದ್ದೂರಿನ ತಾಲೋಕು ಬೆಳವಣಿಗೆ ಹೊಂದಿದಂತೆ ಜನಸಂಖೆ ಬೆಳೆದಂತೆ ನೀರಿಗೆ ಶೌಚಾಲಯದ ಹೊಳಚಂಡಿಯ ನೀರನ್ನು ಬಿಟ್ಟು ತುಂಬಾ ಕಲುಸಿತ ಮಾಡಿದ್ದಾರೆ ದಯವಿಟ್ಟು ಯುಜಿಡಿ ನೀರಿಗೆ ಬೇರೆ ಪರಿಯಾಯವನ್ನು ಮಾಡಿ ನೀರನ್ನು ಸ್ವಚ್ಛ ಗೊಳಿಸಬೇಕು ಮತ್ತು ನಮ್ಮ ರೈತರಿಗೆ ಅನುಕೂಲವಾಗುವಂತೆ ಮಾಡಿಕೊಡಬೇಕು ಎಂದು ಹೇಳಿದರು
ಪ್ರತಿ ಪಟ್ಟಣದಲ್ಲಿ ತ್ಯಾಜ್ಯ ನೀರು ಸಂಸ್ಕರಣಾ ಘಟಕ (STP) ಕಡ್ಡಾಯವಾಗಿ ನಿರ್ಮಿಸಿ, ಸಂಸ್ಕರಿಸಿದ ನೀರನ್ನು ಮಾತ್ರ ನದಿಗೆ ಬಿಡಬೇಕು.ನದಿಗೆ ಚರಂಡಿ ನೀರು ಬಿಡುವವರ ಮೇಲೆ ಕಠಿಣ ದಂಡ ವಿಧಿಸಬೇಕು.ನದಿ ದಂಡೆಯಲ್ಲಿ ಜನಜಾಗೃತಿ ಮೂಡಿಸಬೇಕು. ನದಿಗೆ ಕಸ ಹಾಕಬೇಡಿ ಎಂದು ಪ್ರತಿ ಹಳ್ಳಿಯಲ್ಲಿ ಅಭಿಯಾನ ಮಾಡಬೇಕು. ನದಿ ಪಾತ್ರದ ಒತ್ತುವರಿ ತೆರವು ಮಾಡಿ, ನದಿಗೆ ಮತ್ತೆ ಜೀವ ತುಂಬಬೇಕು.ಶಾಲಾ-ಕಾಲೇಜು ವಿದ್ಯಾರ್ಥಿಗಳು, NSS, ಯುವಕ ಸಂಘಗಳು ಸೇರಿ ಶಿಂಷಾ ಸ್ವಚ್ಛತಾ ಅಭಿಯಾನ ಮಾಡಬೇಕು. ನದಿ ಇಲ್ಲದೆ ಮನುಷ್ಯನಿಲ್ಲ. ಶಿಂಷಾ ಹಾಳಾದರೆ ಮದ್ದೂರು, ಮಳವಳ್ಳಿ ಹಾಳಾದಂತೆ. ನಾವು ಇಂದು ಎಚ್ಚೆತ್ತುಕೊಳ್ಳದಿದ್ದರೆ, ಮುಂದಿನ ಪೀಳಿಗೆಗೆ ಕುಡಿಯಲು ಒಂದು ಲೋಟ ಶುದ್ಧ ನೀರು ಕೂಡ ಸಿಗುವುದಿಲ್ಲ.



