ಸ್ವಿಟ್ಜರ್‌ಲ್ಯಾಂಡ್‌ನ ಜೆನಿವಾ ಮ್ಯಾನ್ಷನ್‌ನಲ್ಲಿ ಭಾರತೀಯ ಸಿಬ್ಬಂದಿಗಳಿಗೆ ಶೋಷಣೆ ಮಾಡಿದ ಆರೋಪದ ಮೇಲೆ ಇಂಗ್ಲೆಂಡಿನ ಶ್ರೀಮಂತ ಉದ್ಯಮಿ ಕುಟುಂಬ ಹಿಂದೂಜಾದ ನಾಲ್ವರು ಸದಸ್ಯರಿಗೆ ಸ್ವಿಸ್ ನ್ಯಾಯಾಲಯ 4 ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಿದೆ.
ತೀರ್ಪು ನಿಡುವ ಸಂದರ್ಭದಲ್ಲಿ ಹಿಂದೂಜಾ ಸಹೋದರರು ಕೋರ್ಟಿನಲ್ಲಿರಲಿಲ್ಲ. 47 ಬಿಲಿಯನ್ ಡಾಲರ್ ಆಸ್ತಿ ಹೊಂದಿರುವ ಹಿಂದೂಜಾ ಕುಟುಂಬದ ಸಹೋದರರಿಗೆ ಮಾನವ ಕಳ್ಳ ಸಾಗಣೆ ಆರೋಪದಿಂದ ಮುಕ್ತಗೊಳಿಸಲಾಗಿದ್ದು, ಇತರ ಆರೋಪಗಳಲ್ಲಿ ಶಿಕ್ಷೆ ನೀಡಲಾಗಿದೆ.
ಪ್ರಕಾಶ್ ಹಿಂದೂಜಾ ಹಾಗೂ ಆತನ ಪತ್ನಿ ಕಮಲಾ ಹಿಂದೂಜಾ ಅವರಿಗೆ 4 ವರ್ಷ 6 ತಿಂಗಳು, ಮತ್ತೊಬ್ಬ ಪುತ್ರ ಅಜಯ್ ಹಾಗೂ ಈತನ ಪತ್ನಿ ನಮ್ರತಾ ಅವರಿಗೆ ನಾಲ್ಕು ವರ್ಷಗಳ ಕಾಲ ಶಿಕ್ಷೆ ವಿಧಿಸಲಾಗಿದೆ.
ಈ ಸುದ್ದಿ ಓದಿದ್ದೀರಾ? ಅನುಮತಿ ನೀಡದ ಕೇಂದ್ರ ಗೃಹ ಇಲಾಖೆ: ಭಾರತ ತೊರೆದ ಫ್ರೆಂಚ್ ಪತ್ರಕರ್ತ
ಕೆಲಸಗಾರರನ್ನು ಭಾರತದಿಂದ ಕರೆತಂದಿದ್ದ ಹಿಂದೂಜಾ ಕುಟುಂಬ ಸ್ವಿಟ್ಜರ್‌ಲ್ಯಾಂಡ್‌ಗೆ ಆಗಮಿಸಿದ ನಂತರ ಅವರ ಪಾಸ್‌ಪೋರ್ಟ್‌ಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಎಂಬ ಆರೋಪ ಕೋರ್ಟಿನಲ್ಲಿ ಸಾಬೀತಾಗಿದೆ.
ಪ್ರಾಸಿಕ್ಯೂಷನ್ ಪರ ವಕೀಲರು ಹಿಂದೂಜಾ ಸಹೋದರರು ಸಿಬ್ಬಂದಿಗೆ ಅತ್ಯಲ್ಪ ವೇತನ ನೀಡಿದ್ದು, ಅವರು ತಮ್ಮ ಮನೆಗಳಿಗೆ ಹೋಗಲು ಹೆಚ್ಚು ಸ್ವಾತಂತ್ರ್ಯ ನೀಡಿರಲಿಲ್ಲ ಎಂದು ವಾದಿಸಿದರು.
ಪ್ರಾಸಿಕ್ಯೂಷನ್ ವಾದವನ್ನು ಹಿಂದೂಜಾ ಪರ ವಕೀಲರು ನಿರಾಕರಿಸಿದರೂ ಸಾಕ್ಷ್ಯಗಳ ಮೂಲಕ ಇದು ಸಾಬೀತಾಗಿತ್ತು.
