ಭಾರತೀಯ ಸಿಬ್ಬಂದಿಗಳಿಗೆ ಶೋಷಣೆ: ಬ್ರಿಟನ್ ಉದ್ಯಮಿಗಳಾದ ಹಿಂದೂಜಾ ಸಹೋದರರಿಗೆ 4 ವರ್ಷ ಜೈಲು

Date:

ಸ್ವಿಟ್ಜರ್‌ಲ್ಯಾಂಡ್‌ನ ಜೆನಿವಾ ಮ್ಯಾನ್ಷನ್‌ನಲ್ಲಿ ಭಾರತೀಯ ಸಿಬ್ಬಂದಿಗಳಿಗೆ ಶೋಷಣೆ ಮಾಡಿದ ಆರೋಪದ ಮೇಲೆ ಇಂಗ್ಲೆಂಡಿನ ಶ್ರೀಮಂತ ಉದ್ಯಮಿ ಕುಟುಂಬ ಹಿಂದೂಜಾದ ನಾಲ್ವರು ಸದಸ್ಯರಿಗೆ ಸ್ವಿಸ್‌ ನ್ಯಾಯಾಲಯ 4 ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಿದೆ.

ತೀರ್ಪು ನಿಡುವ ಸಂದರ್ಭದಲ್ಲಿ ಹಿಂದೂಜಾ ಸಹೋದರರು ಕೋರ್ಟಿನಲ್ಲಿರಲಿಲ್ಲ. 47 ಬಿಲಿಯನ್‌ ಡಾಲರ್‌ ಆಸ್ತಿ ಹೊಂದಿರುವ ಹಿಂದೂಜಾ ಕುಟುಂಬದ ಸಹೋದರರಿಗೆ ಮಾನವ ಕಳ್ಳ ಸಾಗಣೆ ಆರೋಪದಿಂದ ಮುಕ್ತಗೊಳಿಸಲಾಗಿದ್ದು, ಇತರ ಆರೋಪಗಳಲ್ಲಿ ಶಿಕ್ಷೆ ನೀಡಲಾಗಿದೆ.

ಪ್ರಕಾಶ್ ಹಿಂದೂಜಾ ಹಾಗೂ ಆತನ ಪತ್ನಿ ಕಮಲಾ ಹಿಂದೂಜಾ ಅವರಿಗೆ 4 ವರ್ಷ 6 ತಿಂಗಳು, ಮತ್ತೊಬ್ಬ ಪುತ್ರ ಅಜಯ್‌ ಹಾಗೂ ಈತನ ಪತ್ನಿ ನಮ್ರತಾ ಅವರಿಗೆ ನಾಲ್ಕು ವರ್ಷಗಳ ಕಾಲ ಶಿಕ್ಷೆ ವಿಧಿಸಲಾಗಿದೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಈ ಸುದ್ದಿ ಓದಿದ್ದೀರಾ? ಅನುಮತಿ ನೀಡದ ಕೇಂದ್ರ ಗೃಹ ಇಲಾಖೆ: ಭಾರತ ತೊರೆದ ಫ್ರೆಂಚ್ ಪತ್ರಕರ್ತ

ಕೆಲಸಗಾರರನ್ನು ಭಾರತದಿಂದ ಕರೆತಂದಿದ್ದ ಹಿಂದೂಜಾ ಕುಟುಂಬ ಸ್ವಿಟ್ಜರ್‌ಲ್ಯಾಂಡ್‌ಗೆ ಆಗಮಿಸಿದ ನಂತರ ಅವರ ಪಾಸ್‌ಪೋರ್ಟ್‌ಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಎಂಬ ಆರೋಪ ಕೋರ್ಟಿನಲ್ಲಿ ಸಾಬೀತಾಗಿದೆ.

ಪ್ರಾಸಿಕ್ಯೂಷನ್ ಪರ ವಕೀಲರು ಹಿಂದೂಜಾ ಸಹೋದರರು ಸಿಬ್ಬಂದಿಗೆ ಅತ್ಯಲ್ಪ ವೇತನ ನೀಡಿದ್ದು, ಅವರು ತಮ್ಮ ಮನೆಗಳಿಗೆ ಹೋಗಲು ಹೆಚ್ಚು ಸ್ವಾತಂತ್ರ್ಯ ನೀಡಿರಲಿಲ್ಲ ಎಂದು ವಾದಿಸಿದರು.

ಪ್ರಾಸಿಕ್ಯೂಷನ್ ವಾದವನ್ನು ಹಿಂದೂಜಾ ಪರ ವಕೀಲರು ನಿರಾಕರಿಸಿದರೂ ಸಾಕ್ಷ್ಯಗಳ ಮೂಲಕ ಇದು ಸಾಬೀತಾಗಿತ್ತು.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ನಮ್ಮನ್ನು ಬೆಂಬಲಿಸಿ

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಪ್ರಧಾನಿಗೆ ರಷ್ಯಾದ ಪ್ರತಿಷ್ಠಿತ ಪ್ರಶಸ್ತಿ: ಮೋದಿ ಮಾಡಿದ ಘನಕಾರ್ಯವಾದರೂ ಏನು?

ಪ್ರಧಾನಿ ನರೇಂದ್ರ ಮೋದಿ ಅವರು ರಷ್ಯಾಕ್ಕೆ ಭೇಟಿ ನೀಡಿದ್ದ ಸಮಯದಲ್ಲಿ ಅವರಿಗೆ...

ಶಾಲಾ ಮಿನಿಬಸ್ ಅಪಘಾತ; 12 ಮಕ್ಕಳು ದಾರುಣ ಸಾವು

ಶಾಲಾ ಮಕ್ಕಳನ್ನು ಕರೆದೊಯ್ಯುತ್ತಿದ್ದ ಬಸ್‌ವೊಂದು ಅಪಘಾತಕ್ಕೀಡಾಗಿದ್ದು, 12 ಮಕ್ಕಳು ಸಾವನ್ನಪ್ಪಿರುವ ದುರ್ಘಟನೆ...

ಜೈಲಿನಲ್ಲೇ ಹೋರಾಟಗಾರ ಸ್ಟ್ಯಾನ್‌ ಸ್ವಾಮಿ ಸಾವು ಪ್ರಕರಣ; ತನಿಖೆ ನಡೆಸುವಂತೆ ಭಾರತಕ್ಕೆ ಅಮೆರಿಕ ಒತ್ತಾಯ

ಜೈಲಿನಲ್ಲಿದ್ದಾಗಲೇ 2021ರ ಜುಲೈ 5ರಂದು ಸಾವನ್ನಪ್ಪಿದ ಮಾನವ ಹಕ್ಕುಗಳ ಹೋರಾಟಗಾರ ಫಾದರ್...