ಸೌದಿ ಅರೇಬಿಯಾದಲ್ಲಿ ಚಂದ್ರ ದರ್ಶನವಾಗಿರುವ ಹಿನ್ನೆಲೆಯಲ್ಲಿ ಮಾ.1(ಶನಿವಾರ)ರಂದು ಮುಸ್ಲಿಮರ ಪವಿತ್ರ ರಮಝಾನ್ ಉಪವಾಸ ಆರಂಭವಾಗಲಿದೆ ಎಂದು ಸೌದಿ ಅರೇಬಿಯಾದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
“ಚಂದ್ರ ದರ್ಶನವಾಗಿದೆ. ಹಾಗಾಗಿ, ಮಾ.1ರಿಂದ ರಮಝಾನ್ ಉಪವಾಸ ಆರಂಭವಾಗಲಿದೆ. ಶುಕ್ರವಾರ ರಾತ್ರಿ ಮೆಕ್ಕಾದ ಪವಿತ್ರ ಮಸೀದಿ ಹಾಗೂ ಮದೀನಾದ ಮಸೀದಿಗಳಲ್ಲಿ ರಮಝಾನ್ ತಿಂಗಳಲ್ಲಿ ನಡೆಸುವ ವಿಶೇಷ ತರಾವೀಹ್ ನಮಾಝ್ ಕೂಡ ನಡೆಯಲಿದೆ” ಎಂದು ಮೆಕ್ಕಾದ ಧಾರ್ಮಿಕ ಪಂಡಿತರು ಸೋಷಿಯಲ್ ಮೀಡಿಯಾದ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ.
ಕರ್ನಾಟಕ ಸೇರಿದಂತೆ ಭಾರತದಲ್ಲಿ ಮಾ.2ರಿಂದ ರಮಝಾನ್ ಉಪವಾಸ ಆರಂಭವಾಗಲಿದೆ.
