ಗುಬ್ಬಿ | ಅಧಿಕೃತ ಸಾಮಾಜಿಕ ಜಾಲ ತಾಣ ಖಾತೆ ನನ್ನದಿಲ್ಲ : ಶಾಸಕ ಎಸ್.ಆರ್.ಶ್ರೀನಿವಾಸ್ ಸ್ಪಷ್ಟನೆ

Date:

ಸಚಿವ ರಾಜಣ್ಣ ರಾಜೀನಾಮೆ ಎಂಬ ಸಾಮಾಜಿಕ ಜಾಲತಾಣಗಳ ಪೋಸ್ಟ್ ಮಾಡುವುದು ಯಾರು ಎಂಬುದು ಗೊತ್ತಿಲ್ಲ. ನನ್ನದು ಯಾವುದೇ ಅಧಿಕೃತ ಖಾತೆ ಅದರಲ್ಲಿಲ್ಲ. ಯಾರು ಬೇಕಾದರೂ ಫೇಕ್ ಅಕೌಂಟ್ ತೆರೆದು ಟೀಕೆ ಟಿಪ್ಪಣಿ ಹಾಕಬಹುದು. ಡೈರಿ ಚುನಾವಣೆ ಮುಗಿದ ಹಳೆ ವಿಚಾರ. ಈ ಬಗ್ಗೆ ಮಾತನಾಡುವ ಅಗತ್ಯವಿಲ್ಲ. ಪಕ್ಷದಲ್ಲಿ ಯಾರ ಬಗ್ಗೆಯೂ ನನಗೆ ಭಿನ್ನಾಭಿಪ್ರಾಯವಿಲ್ಲ. ಸಾಮಾಜಿಕ ಜಾಲತಾಣ ಪೋಸ್ಟ್ ವಿಚಾರ ನನಗೆ ತಿಳಿದಿಲ್ಲ ಎಂದು ಶಾಸಕ ಹಾಗೂ ಕರ್ನಾಟಕ ಸಾರಿಗೆ ನಿಗಮದ ಅಧ್ಯಕ್ಷ ಎಸ್.ಆರ್.ಶ್ರೀನಿವಾಸ್ ಮತ್ತೊಮ್ಮೆ ಸ್ಪಷ್ಟ ಪಡಿಸಿದರು.

- Advertisement -

ಗುಬ್ಬಿ ತಾಲ್ಲೂಕಿನ ಚೇಳೂರು ಹೋಬಳಿ ಇರಕಸಂದ್ರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪಟ್ರಾವತನಹಳ್ಳಿ ಗ್ರಾಮದಲ್ಲಿ 25 ಲಕ್ಷ ರೂಗಳ ಸಿಸಿ ರಸ್ತೆ ಕಾಮಗಾರಿ ಹಾಗೂ ಅಂಕಸಂದ್ರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಕ್ಕ ಹೆಡೀಗೆಹಳ್ಳಿ ಗ್ರಾಮದಲ್ಲಿ 1.60 ಕೋಟಿ ರೂಗಳ ಚೆಕ್ ಡ್ಯಾಂ ನಿರ್ಮಾಣ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಿ ಮಾತನಾಡಿದ ಅವರು ಇಶಾ ಫೌಂಡೇಶನ್ ಧಾರ್ಮಿಕ ಕಾರ್ಯಕ್ರಮದಲ್ಲಿ ಅಮಿತ್ ಷಾ ಹಾಗೂ ಡಿಕೆಶಿ ಒಟ್ಟಿಗೆ ಕಾಣಿಸಿಕೊಂಡ ಬಗ್ಗೆ ರಾಜಕಾರಣ ಲೇಪನ ಬೇಕಿಲ್ಲ. ಕಾರ್ಯಕ್ರಮಗಳಿಗೆ ಆಹ್ವಾನ ನೀಡಿದಾಗ ಎಲ್ಲಾ ಪಕ್ಷದವರು ವೇದಿಕೆ ಹಂಚಿಕೊಳ್ಳುವುದು ಸಾಮಾನ್ಯ. ಈ ಬಗ್ಗೆ ವಿಶೇಷ ಟಿಪ್ಪಣಿ ಬೇಕಿಲ್ಲ ಎಂದು ಪ್ರತಿಕ್ರಿಯೆ ನೀಡಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಕತೆ | ಪೌರಶ್ರೀ – ಐಸಾಕ್‌ ಅಸಿಮೋವ್

ಪೌರಶ್ರೀ ಓದುವುದಕ್ಕೂ ಮುನ್ನ- ಒಂದು ಪುಟ್ಟ ಟಿಪ್ಪಣಿ ಈ ಸಹಸ್ರಮಾನದ ಅತ್ಯದ್ಭುತ ವೈಜ್ಞಾನಿಕ ಲೇಖಕ ರಲ್ಲಿ ಒಬ್ಬರು ಅಮೆರಿಕ ಬೋಸ್ಟನ್ ವಿಶ್ವ ವಿದ್ಯಾಲಯ ದಲ್ಲಿ ರಸಾಯನ ಶಾಸ್ತ್ರದ ಪ್ರಾಧ್ಯಾಪಕರಾಗಿದ್ದ ಐಸಾಕ್ ಅಸಿಮೋವ್. ವಿಶ್ವ...

ಶಿವಮೊಗ್ಗ | ದಾಖಲೆಗಳಲ್ಲಿ ಪೂರ್ಣ, ವಾಸ್ತವದಲ್ಲಿ ನೆನೆಗುದಿಗೆ...

ಶಿವಮೊಗ್ಗ ತಾಲೂಕಿನ ಕಾಚಿನಕಟ್ಟೆ ಗ್ರಾಮದಲ್ಲಿ ಸಮುದಾಯ ಭವನದ ಅಪೂರ್ಣ ಕಾಮಗಾರಿ ಆದರೆ ಶಿವಮೊಗ್ಗ ನಿರ್ಮಿತಿ ಕೇಂದ್ರ ದಾಖಲೆ ಪ್ರಕಾರ ಕಾಮಗಾರಿ ಸಂಪೂರ್ಣವಾಗಿದೆ ಎಂದು ದಾಖಲೆಗಳಲ್ಲಿ. ಈ ಸಂಬಂಧ ಲಂಚಮುಕ್ತ ಕರ್ನಾಟಕ ಮತ್ತು KRS ಪಕ್ಷದ...

ವಿಜಯಪುರ | ಹೆಚ್ಚುತ್ತಿರುವ ಬೀದಿ ನಾಯಿಗಳ ಹಾವಳಿ: 9...

ಬೀದಿ ನಾಯಿ ನಿಯಂತ್ರಣಕ್ಕೆ ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿಗಳು ಪರಸ್ಪರ ಸಮನ್ವಯದಿಂದ ಕಾರ್ಯನಿರ್ವಹಿಸಿ, ಬೀದಿ ನಾಯಿಗಳ ಹಾವಳಿ ಹೆಚ್ಚಿರುವ ಪ್ರದೇಶಗಳನ್ನು ಗುರುತಿಸಿ ನಿಯಂತ್ರಣ ಕ್ರಮ ಕೈಗೊಳ್ಳಬೇಕು. ಶಾಲೆ, ಆಸ್ಪತ್ರೆ,...

ವಿರೋಧ ಪಕ್ಷದ ನಾಯಕ ಆರ್.ಅಶೋಕ್ ನವಂಬರ್ ಭವಿಷ್ಯ ಹೇಳುತ್ತಾರೆ. ಯಾವಾಗ ಜ್ಯೋತಿಷ್ಯ ಹೇಳೋದು ಕಲಿತರು ತಿಳಿದಿಲ್ಲ. ನಾನು ನನ್ನ ಭವಿಷ್ಯ ಬಗ್ಗೆ ಕೇಳಬೇಕಿದೆ ಎಂದು ವ್ಯಂಗ್ಯ ಮಾಡಿದ ಅವರು ವಿರೋಧ ಪಕ್ಷದ ಕೆಲಸ ಇದೇ ಆಗಿದೆ. ಸಲ್ಲದ ಟೀಕೆ ಮಾಡುವುದು. ಅರ್ಥವಿಲ್ಲದ ಹೇಳಿಕೆ ನೀಡುವುದು. ಸುಳ್ಳು ಹೇಳುವುದು ವಿರೋಧ ಲಕ್ಷ ಸರ್ವೇ ಸಾಮಾನ್ಯ ಕೆಲಸ ಎಂದು ಟೀಕಿಸಿದರು.

1001113836

ಮಹಾರಾಷ್ಟ್ರದಲ್ಲಿ ನಮ್ಮ ರಾಜ್ಯ ಸಾರಿಗೆ ಸಿಬ್ಬಂದಿ ಮೇಲೆ ಹಲ್ಲೆ ಹಾಗೂ ಕನ್ನಡ ಭಾಷೆಯ ಮೇಲಿನ ಪುಂಡಾಟ ಬಗ್ಗೆ ನಮ್ಮ ಬೋರ್ಡ್ ಸಭೆ ಕರೆದು ಮಹಾರಾಷ್ಟ್ರ ರಾಜ್ಯದ ಸಾರಿಗೆ ಸಚಿವರ ಜೊತೆ ಚರ್ಚಿಸಿ ಅಲ್ಲಿನ ಸರ್ಕಾರದ ಜೊತೆ ಮಾತುಕತೆ ನಡೆಸಿ ಬಸ್ಸುಗಳು ಎಂದಿನಂತೆ ಸಂಚರಿಸಲು ಅನುವು ಮಾಡಲಾಗಿದೆ. ಸುಳ್ಳು ಫೋಕ್ಸೋ ಕೇಸು ವಾಪಸ್ ಪಡೆಯಲು ತಿಳಿಸಿ ಸದ್ಯ ಪರಿಸ್ಥಿತಿ ತಿಳಿಗೊಳಿಸಿ ಸಾರಿಗೆ ಬಸ್ಸುಗಳ ಸಂಚಾರ ನಡೆದಿದೆ ಎಂದರು.

ತಾಲ್ಲೂಕಿನಲ್ಲಿ ಕರೆಂಟ್ ಸಮಸ್ಯೆ ಹೆಚ್ಚಾಗಿದೆ. ರಾತ್ರಿ ವೇಳೆ 10 ವ್ಯಾಮ್ಸ್ ವಿದ್ಯುತ್ ಬರುತ್ತದೆ. ಒಂದು ಕಡೆ ಕಂಡೆನ್ಸರ್ ಹಾಕಿದರೆ ಟ್ರಿಪ್ ಹಾಕುತ್ತದೆ. ಅತೀ ಹೆಚ್ಚು ಪಂಪ್ ಮೋಟಾರ್ ಇರುವ ನಮ್ಮ ತಾಲ್ಲೂಕಿನಲ್ಲಿ ಓವರ್ ಲೋಡ್ ಸಮಸ್ಯೆ ಬೇಸಿಗೆಯಲ್ಲಿ ಹೆಚ್ಚಾಗುತ್ತಿದೆ. ಈಗಾಗಲೇ 4 ಸಾವಿರ ಟಿಸಿ ಇರಿಸಲಾಗಿದೆ. ಈ ಸಮಸ್ಯೆ ಬಗೆಹರಿಸಲು ಈಗಾಗಲೇ ಹತ್ತು ಉಪಸ್ಥಾವರ ಆರಂಭಿಸಲಾಗುವುದು. ಗಂಗಾಕ್ಷೇತ್ರ ಹೊರತಾಗಿ ಜಿ.ಹೊಸಹಳ್ಳಿ, ಭೋಗಸಂದ್ರ, ತೊಳೆಕೊಪ್ಪ, ತೊರೆಹಳ್ಳಿ, ಎಂಎಂಎ ಕಾವಲ್ ಈ ಭಾಗದಲ್ಲಿ ಕೆಲಸ ನಡೆದಿದೆ. ಶೀಘ್ರದಲ್ಲಿ ಕರೆಂಟ್ ಸಮಸ್ಯೆ ಬಗೆಹರಿಸಲು ಸೂಕ್ತ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇವೆ ಎಂದರು.

ಇರಕಸಂದ್ರ ಗ್ರಾಪಂ ಅಧ್ಯಕ್ಷ ಪುಟ್ಟರಾಜು, ಅಂಕಸಂದ್ರ ಗ್ರಾಪಂ ಅಧ್ಯಕ್ಷ ದೊಡ್ಡ ಈರಪ್ಪ, ಸದಸ್ಯರಾದ ಲಿಂಗಪ್ಪ, ಮಂಜುನಾಥ್, ಮಂಜುಳಾ, ಬಸವರಾಜು, ಸಿದ್ದಪ್ಪ, ದೊಡ್ಡಯ್ಯ, ಸಿದ್ದರಾಜು, ಮಹಾಲಕ್ಷ್ಮಿ, ಮಂಜುಳಾ, ಗಂಗಾಧರ್, ಸುನೀತಾ, ವಸಂತ್, ರಮೇಶ್, ಕೊದಂಡಯ್ಯ, ದಯಾನಂದ್, ಸಿದ್ಧಲಿಂಗಪ್ಪ, ಗುರುವಣ್ಣ, ಶಾಂತಾ, ಕಾಂತಣ್ಣ, ಮುಖಂಡರಾದ ಶಿವರಾಜಕುಮಾರ್, ಸುರೇಶ್, ಶಿವಣ್ಣ, ಕಾಂತರಾಜು, ಸಣ್ಣರಂಗಯ್ಯ, ರಂಗಧಾಮಯ್ಯ, ದೇವರಾಜ್, ಕೆ.ಆರ್.ಗೌಡ, ಪಿಡಿಓ ಶ್ಯಾಮಲ, ಸಣ್ಣ ನೀರಾವರಿ ಇಲಾಖೆಯ ವಿನಯ್, ಗುತ್ತಿಗೆದಾರ ಉಮೇಶ್ ಇತರರು ಇದ್ದರು.

ವರದಿ – ಎಸ್. ಕೆ. ರಾಘವೇಂದ್ರ

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಹಾಸನ | ಪ್ರತಿಭಟನೆ ಹತ್ತಿಕ್ಕುವ ಪ್ರಜಾಪ್ರಭುತ್ವ ವಿರೋಧಿ ಕ್ರಮ ಖಂಡಿಸಿ ಜನಪರ ಒಕ್ಕೂಟ ಪ್ರತಿಭಟನೆ 

ಪ್ರತಿಭಟನೆಯನ್ನು ಹತ್ತಿಕ್ಕುವ ಪ್ರಜಾಪ್ರಭುತ್ವ ವಿರೋಧಿ ಕ್ರಮವನ್ನು ಖಂಡಿಸಿ ಹಾಸನದ ಹೇಮಾವತಿ ಪ್ರತಿಮೆಯ...

ಚಿಕ್ಕಮಗಳೂರು | SIR ವಿರೋಧ: ಫಾರಂ – 7ರಲ್ಲಿ ತಪ್ಪು ಮಾಹಿತಿ ನೀಡಿ, ಮತವಂಚಿಸಲಾಗಿದೆ; ಎದ್ದೇಳು ಕರ್ನಾಟಕ 

SIR ವಿರೋಧಿಸಿ, ಚುನಾವಣಾ ಆಯುಕ್ತರಾದ ಜ್ಞಾನೇಶ್‌ಕುಮಾರ್‌ರವರನ್ನು ವಜಾಗೊಳಿಸಲು ಮತ್ತು ಫಾರಂ ನಂ.7...

ಗದಗ | ಮಾಜಿ ಗ್ರಾ. ಪಂ ಸದಸ್ಯನ ಬರ್ಬರ ಹತ್ಯೆ

ಲಕ್ಕುಂಡಿ ಗ್ರಾಮದ ಹೊರವಲಯದಲ್ಲಿ ಗ್ರಾಮ ಪಂಚಾಯಿತಿ ಮಾಜಿ ಸದಸ್ಯರೊಬ್ಬರನ್ನು ಬರ್ಬರವಾಗಿ ಹತ್ಯೆ...

ಹಾವೇರಿ‌ | ಬಾಲಕರ ವಸತಿ ನಿಲಯಕ್ಕೆ ಜಿಲ್ಲಾಧಿಕಾರಿ ಭೇಟಿ ನೀಡಿ ಪರಿಶೀಲನೆ

ಚುನಾವಣಾ ಸಂಬಂಧಿತ ಕಾರ್ಯಗಳ ಪರಿಶೀಲನೆಯ ಜೊತೆಗೆ, ಹಾವೇರಿ ಜಿಲ್ಲೆಯ ಹಾನಗಲ್ಲ ತಾಲೂಕಿನ...