ಪ್ರೀಮಿಯಂ ಲೇಖನ | ದೇಶದಲ್ಲಿ ಎಡಪಂಥೀಯ ರಾಜಕಾರಣಕ್ಕೆ ಗ್ರಹಣ ಹಿಡಿದಿದೆಯೇ?

Date:

ದೇಶದಲ್ಲಿ ತುರ್ತು ಪರಿಸ್ಥಿತಿಯ ನಂತರ ವಿವಿಧ ರಾಜ್ಯಗಳ ವಿಧಾನ ಸಭೆಗೆ ನಡೆದ ಚುನಾವಣೆಯ ಹಿನ್ನೆಲೆಯಲ್ಲಿ ಗಮನಿಸಿದರೆ, ಈ 2026 ರ ಚುನಾವಣೆಯಲ್ಲಿ ಸಿಪಿಐ (ಎಂ) ನೇತೃತ್ವದ ಎಲ್ ಡಿ ಎಫ್‌ ನೇತೃತ್ವದ ಸರ್ಕಾರ ಯುಡಿಎಫ್ ನ ಎದುರು ನೆಲಕಚ್ಚಿರುವುದು, ಎಡಪಂಥೀಯ ರಾಜಕಾರಣ ನಿಧಾನವಾಗಿ ನೇಪಥ್ಯಕ್ಕೆ ಸರಿಯುತ್ತಿದೆಯೇ ಎಂಬ ಪ್ರಶ್ನೆ ಮತ್ತು ಚರ್ಚೆಯನ್ನು ಸಾರ್ವಜನಿಕ ವಲಯದಲ್ಲಿ ಮುನ್ನೆಲೆಗೆ ತಂದಿದೆ.

- Advertisement -

ದೇಶದಲ್ಲಿ ತುರ್ತು ಪರಿಸ್ಥಿತಿಯ ನಂತರ ವಿವಿಧ ರಾಜ್ಯಗಳ ವಿಧಾನ ಸಭೆಗೆ ನಡೆದ ಚುನಾವಣೆಯ ಹಿನ್ನೆಲೆಯಲ್ಲಿ ಗಮನಿಸಿದರೆ, ಈ 2026ರ ಚುನಾವಣೆಯಲ್ಲಿ ಸಿಪಿಐ (ಎಂ) ನೇತೃತ್ವದ ಎಲ್‌ಡಿಎಫ್‌ ನೇತೃತ್ವದ ಸರ್ಕಾರ ಯುಡಿಎಫ್ ಎದುರು ನೆಲಕಚ್ಚಿರುವುದು, ಎಡಪಂಥೀಯ ರಾಜಕಾರಣ ನಿಧಾನವಾಗಿ ನೇಪಥ್ಯಕ್ಕೆ ಸರಿಯುತ್ತಿದೆಯೇ ಎಂಬ ಪ್ರಶ್ನೆ ಮತ್ತು ಚರ್ಚೆಯನ್ನು ಸಾರ್ವಜನಿಕ ವಲಯದಲ್ಲಿ ಮುನ್ನೆಲೆಗೆ ತಂದಿದೆ. ಎಡಪಂಥೀಯ ಪಕ್ಷಗಳು ತಮ್ಮ ಭದ್ರಕೋಟೆಯೆಂದು ಭಾವಿಸಿದ್ದ ಕೇರಳದಲ್ಲಿ ಸೋಲನ್ನಪ್ಪಿಕೊಂಡಿರುವುದು ಎಡಪಕ್ಷಗಳು ಆತ್ಮನಿರೀಕ್ಷಣೆ ಮಾಡಿಕೊಳ್ಳಬೇಕಾದ ಅವಶ್ಯಕತೆಯನ್ನು ಸೂಚಿಸುತ್ತದೆ. ಕೇರಳದಲ್ಲಿ 140 ಸ್ಥಾನಗಳ ವಿಧಾನಸಭೆಯಲ್ಲಿ ಕಾಂಗ್ರೆಸ್‌ ನೇತೃತ್ವದ ಯುಡಿಎಫ್‌ 102 ಸ್ಥಾನಗಳನ್ನು ಗಳಿಸಿರುವುದು ಎಡಪಕ್ಷಗಳಿಗೆ ನುಂಗಲಾರದ ತುತ್ತಾಗಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

History Repeats | ರೋಮ್‌ ಉರಿಯುತ್ತಿದ್ದಾಗ ಪಿಟೀಲು ನುಡಿಸಿದ...

ದೇಶದ ಪ್ರಜಾಪ್ರಭುತ್ವದ ಆಧಾರಸ್ತಂಭಗಳು ಒಂದೊಂದಾಗಿ ಕುಸಿಯುತ್ತಾ, ಚುನಾವಣಾ ವ್ಯವಸ್ಥೆಯೇ ಅಕ್ರಮ ಎಸಗುತ್ತಿರುವಾಗ, ನಿರುದ್ಯೋಗ-ಬೆಲೆ ಏರಿಕೆಯ ಭಾರದಿಂದ ಜನ ಹೈರಾಣಾಗಿರುವಾಗ ಭಾರತದ ಪ್ರಧಾನಿ ಭಜನೆ ಮಾಡುತ್ತಿದ್ದಾರೆ. ರೋಂ ಹೊತ್ತಿ ಉರಿಯುತ್ತಿದ್ದಾಗ ನೀರೋ ಪಿಟೀಲು...

ಅಪರಾಧಿಗಳ ಪರ ಬಿ ಸಿ ರೋಡ್ ಚಲೋ: ಎಂದಿನಂತೆ...

ಕೊಲೆಯಂತಹ ಗಂಭೀರ ಅಪರಾಧ ಎಸಗಿದ ಆರೋಪ ಹೊತ್ತವರ ಪರವಾಗಿ ಸಂಘಪರಿವಾರ ಬೀದಿಗಿಳಿಯುತ್ತಿರುವುದು ಇದೇ ಮೊದಲೇನಲ್ಲ. ಕರಾವಳಿಯ ಜನತೆ ಇಂತಹ ಪ್ರಚೋದನಾತ್ಮಕ ನಡೆಗಳನ್ನು ತಿರಸ್ಕರಿಸಿ, ಸತ್ಯ ಮತ್ತು ನ್ಯಾಯದ ಪರವಾಗಿ ನಿಲ್ಲಬೇಕಾಗಿದೆ. ಕರಾವಳಿ ಕರ್ನಾಟಕವಾಗಲಿ...

14 ಆಕ್ಷೇಪಗಳಿಂದ SIT ಬೇಡಿಕೆಯವರೆಗೆ: ಗ್ಯಾನೇಶ್‌ ಕುಮಾರ್ ಸುತ್ತ...

ಚುನಾವಣಾ ಆಯೋಗದೊಳಗಿನ ಭಿನ್ನಾಭಿಪ್ರಾಯಗಳು ಬಹಿರಂಗಗೊಂಡ ಬೆನ್ನಲ್ಲೇ ಎಸ್‌ಐಆರ್‌ ವಿವಾದ ಹೊಸ ತಿರುವು ಪಡೆದುಕೊಂಡಿದೆ. ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್‌ ಕುಮಾರ್ ಅವರ ನಿರ್ಧಾರಗಳ ಕುರಿತು ಚುನಾವಣಾ ಆಯುಕ್ತರಾದ ಸುಖಬೀರ್‌ ಸಿಂಗ್‌ ಸಂಧು ಮತ್ತು...

ಎಡಪಂಥೀಯ ಪಕ್ಷಗಳ ಅವರೋಹಣ ಪರ್ವ

ಕಳೆದ ನಾಲ್ಕು ದಶಕಗಳಲ್ಲಿ ಎಡಪಕ್ಷಗಳು ಎಂದೂ ಭಾರತದ ಎಲ್ಲ ರಾಜ್ಯಗಳಲ್ಲಿಯೂ, ಅಧಿಕಾರದಿಂದ ಹೊರಕ್ಕುಳಿದಿರುವ ನಿದರ್ಶನವೇ ಇಲ್ಲ. ಈ ಬಾರಿಯಂತೂ ಅಧಿಕಾರರೂಢ ಎಲ್‌ಡಿಎಫ್‌ ಕೇವಲ 35 ಸ್ಥಾನಗಳನ್ನು ಗಳಿಸುವುದರ ಮೂಲಕ ಮುಖಭಂಗ ಅನುಭವಿಸಿದೆ. ಕೇರಳದಲ್ಲಿ ಪರ್ಯಾಯ ರಾಜಕಾರಣದ ರೂವಾರಿಯಾಗಿದ್ದ ಎಲ್‌ಡಿಎಫ್‌ ಈಗ ಆ ವೇದಿಕೆಯನ್ನು ಕಳೆದುಕೊಂಡಿರುವುದು ಎಡ ಪಕ್ಷಗಳಿಗೆ ನುಂಗಲಾರದ ತುತ್ತಾಗಿದೆ. ಎಲ್‌ಡಿಎಫ್‌ ನಾಯಕರಾದ ಪಿಣರಾಯಿ ವಿಜಯನ್‌ ಅವರು “ಎಡಪಕ್ಷಗಳ ರಾಜಕಾರಣ ನೀತಿಯನ್ನು ಪುನರ್‌ ಆಲೋಚಿಸುವಂತೆ ಮಾಡಿದೆ” ಎಂದು ಸ್ವತಃ ಒಪ್ಪಿಕೊಂಡಿರುವುದು ಇದಕ್ಕೆ ನಿದರ್ಶನ.

LDF supporters at a public meeting in Kochi on Tuesday. AP

ಎಡಪಕ್ಷಗಳು ಈಗಾಗಲೇ, 2011ರಲ್ಲಿ ಪಶ್ಚಿಮ ಬಂಗಾಳ ಹಾಗೂ 2018ರಲ್ಲಿ ತ್ರಿಪುರದಲ್ಲಿ ಅಧಿಕಾರ ಕಳೆದುಕೊಂಡಿದ್ದು, ಈಗ ಕೇರಳ ಕೂಡ ಅದರ ಕೈ ಬಿಟ್ಟಿದೆ. ಪಶ್ಚಿಮ ಬಂಗಾಳದಲ್ಲಿ ಮೊಟ್ಟಮೊದಲ ಬಾರಿಗೆ ಬಿಜೆಪಿ ಅಧಿಕಾರಕ್ಕೆ ಬಂದಿದೆ. ಹಾಗೆಯೇ ಅಸ್ಸಾಂ ಮತ್ತು ಪುದುಚೆರಿಯಲ್ಲಿ ಅಧಿಕಾರ ಹಿಡಿದಿದೆ. ತಮಿಳುನಾಡಿನಲ್ಲಿ ಸಾಂಪ್ರದಾಯಿಕವಾಗಿ ಅಧಿಕಾರ ಹಂಚಿಕೊಳ್ಳುತ್ತಿದ್ದ ಎಐಡಿಎಂಕೆ ಮತ್ತು ಆಡಳಿತರೂಢ ಡಿಎಂಕೆ ಪಕ್ಷಗಳನ್ನು ಪಕ್ಕಕ್ಕೆ ಸರಿಸಿ, ಫೆಬ್ರುವರಿ 2, 2024 ರಂದು ಅಂದರೆ ಕೇವಲ ಹದಿನೈದು ತಿಂಗಳ ಹಿಂದೆ ಹುಟ್ಟಿದ ನಟ ಜೋಸೆಫ್‌ ವಿಜಯ್‌ ನೇತೃತ್ವದ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಅಧಿಕಾರ ಹಿಡಿದಿದೆ. ನಟ ಮತ್ತು ಯುವ ಜನಾಂಗದ ಆಶಾಕಿರಣವಾಗಿ ಎದ್ದು ನಿಂತಿರುವ ವಿಜಯ್‌ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಅಧಿಕಾರ ಹಿಡಿದಿರುವ ಸಂದರ್ಭದಲ್ಲಿಯೂ ಅವರು ಅತ್ಯಂತ ಗೌರವದಿಂದ ನಡೆದುಕೊಂಡಿರುವುದು ಅವರ ರಾಜಕೀಯದ ಹೊಸ ಮಜಲಿನ ಸೂಚನೆಯನ್ನು ನೀಡಿದೆ. ಅವರು ತಮ್ಮನ್ನು ಬೆಂಬಲಿಸಿದ ಎಡಪಂಥೀಯ ಪಕ್ಷಗಳ ನಾಯಕರನ್ನು, ಕಾಂಗ್ರೆಸ್‌ ನ ರಾಹುಲ್‌ ಗಾಂಧಿ ಅವರನ್ನು ನಡೆಸಿಕೊಂಡಿರುವ ರೀತಿ ಎಲ್ಲರ ಮೆಚ್ಚಿಗೆಗೆ ಪಾತ್ರವಾಗಿದೆ. ಅವರು ಡಿಎಂಕೆಯ ಮಾಜಿ ಮುಖ್ಯಮಂತ್ರಿ ಎಂ. ಕೆ. ಸ್ಟ್ಯಾಲಿನ್‌ ಅವರನ್ನು ಟೀಕಿಸಿದರೂ, ಅವರನ್ನು ಸೌಹಾರ್ದವಾಗಿ ಭೇಟಿ ಮಾಡಿ, ಅವರನ್ನು ಗೌರವಿಸಿರುವುದು ಎಲ್ಲರ ಹುಬ್ಬೇರಿಸುವಂತೆ ಮಾಡಿದೆ. ಈ ಮೂಲಕ ವಿಜಯ್‌ ತಮಿಳು ರಾಜಕಾರಣದ ಹೊಸ ಅಧ್ಯಾಯಕ್ಕೆ ಮುನ್ನುಡಿ ಬರೆದಿದ್ದಾರೆ.

ಬಲಪಂಥೀಯ ಪಕ್ಷಗಳ ಪ್ರಾಬಲ್ಯ

ಒಟ್ಟು ಫಲಿತಾಂಶವನ್ನು ಗಮನಿಸಿದರೆ, ಎಡಪಕ್ಷಗಳು ಹಿನ್ನೆಲೆಗೆ ಸರಿದು ಬಲಪಂಥೀಯ ಪಕ್ಷ ದೇಶದಲ್ಲಿ ಪ್ರಬಲವಾಗುತ್ತಿರುವುದನ್ನು ಸೂಚಿಸುತ್ತಿದೆ. ಉತ್ತರ ಭಾರತದಲ್ಲಿ ಗುಜರಾತಿನಿಂದ ಪಶ್ಚಿಮ ಬಂಗಾಳದವರೆಗೆ ತಮ್ಮ ಸಾಮ್ರಾಜ್ಯವನ್ನು ವಿಸ್ತರಿಸಿಕೊಂಡಿದೆ. ಈ ಎಲ್ಲ ಬೆಳವಣಿಗೆಗಳ ಹಿನ್ನೆಲೆಯಲ್ಲಿ ನೋಡಿದರೆ ಒಂದು ಸಂಗತಿಯಂತೂ ನಿಚ್ಛಳವಾಗಿ ಕಾಣಿಸುತ್ತದೆ. ಈ ಬೆಳವಣಿಗೆಯನ್ನು ಎಡಪಕ್ಷಗಳ ಯುಗ ಅಂತ್ಯವೆಂದು ತಳ್ಳಿಹಾಕಲು ಸಾಧ್ಯವಿಲ್ಲ. ಆದರೆ, ಸ್ವಾತಂತ್ರ್ಯಾನಂತರ ಮೊಟ್ಟ ಮೊದಲ ಬಾರಿಗೆ ಅತಿ ದುರ್ಬಲವಾದ ಸ್ಥಿತಿಯನ್ನು ತಲುಪಿದೆ. ಪಶ್ಚಿಮ ಬಂಗಾಲ ಮತ್ತು ಕೇರಳದ ಸೋಲು ಎಡಪಕ್ಷಗಳ ಮುಂದೆ ತೀವ್ರತರ ಪ್ರಶ್ನೆಗಳನ್ನು ಒಡ್ಡಿದೆ ಎನ್ನುವುದಂತೂ ಸತ್ಯ. ಎಡಪಕ್ಷಗಳು ರಾಷ್ಟ್ರೀಯವಾಗಿ ರಾಜಕೀಯ ಶಕ್ತಿಯಾಗುವ ಸ್ಥಾನವನ್ನು ಕಳೆದುಕೊಂಡು, ಕೇವಲ, ಪ್ರಾಂತೀಯವಾಗಿ ಸೈದ್ಧಾಂತಿಕ ಪಕ್ಷವಾಗಿ ಉಳಿಯುತ್ತದೆಯೇ ಎಂಬ ಪ್ರಶ್ನೆ ಹಲವರದು.

ಎಡಪಕ್ಷಗಳ ಉತ್ಕರ್ಷದ ಕಾಲ

ಇಲ್ಲೊಂದು ಮುಖ್ಯವಾದ ಸಂಗತಿಯನ್ನು ನೆನಪಿಸಿಕೊಳ್ಳುವುದು ಒಳ್ಳೆಯದು. 2004ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಎಡಪಕ್ಷಗಳು 61 ಸ್ಥಾನಗಳನ್ನು ಗೆಲ್ಲುವುದರ ಮೂಲಕ ತನ್ನ ಜೀವಮಾನದ ಮಹತ್ವದ ಸಾಧನೆಯನ್ನು ಮಾಡಿದ್ದೇ ಅಲ್ಲದೆ, ಕಾಂಗ್ರೆಸ್‌ ನೇತೃತ್ವದ United Progressive Alliance (UPA) ಸರ್ಕಾರ ಅಧಿಕಾರಕ್ಕೆ ಬರುವಲ್ಲಿ ಪ್ರಮುಖ ಪಾತ್ರ ವಹಿಸಿತು. ಇದರಿಂದಾಗಿ ಬಿಜಿಪಿ ನೇತೃತ್ವದ ಒಕ್ಕೂಟವನ್ನು ಅಧಿಕಾರದಿಂದ ದೂರವಿಡಲು ಸಾಧ್ಯವಾಯಿತು. ಮೊಟ್ಟಮೊದಲ ಬಾರಿಗೆ ಸಿಪಿಐ (ಎಂ) ಪಶ್ಷಿಮ ಬಂಗಾಳದಲ್ಲಿ ಅಧಿಕಾರಕ್ಕೆ ಬಂದಿದ್ದು 1977ರಲ್ಲಿ. ಅಂದಿನಿಂದ 2011ರವರೆಗೆ ನಿರಂತರವಾಗಿ ಅಧಿಕಾರ ಹಿಡಿದ ಸಿಪಿಐ(ಎಂ)ನ್ನು ಸೋಲಿಸಿದ್ದು ಮಮತಾ ಬ್ಯಾನರ್ಜಿ ಅವರ ತೃಣಮೂಲ ಕಾಂಗ್ರೆಸ್ (TMC).‌ ಈ ಬಾರಿ ಅಂದರೆ 2026ರಲ್ಲಿ ಪಶ್ಚಿಮ ಬಂಗಾಳದಲ್ಲಿ ಸಿಪಿಐ (ಎಂ) ಪಡೆದುಕೊಂಡಿರುವುದು ಏಕೈಕ ಸ್ಥಾನ ಎನ್ನುವುದು ಇಲ್ಲಿ ಗಮನಾರ್ಹ. ಕೇರಳದಲ್ಲಿ ಎಲ್‌ಫ್‌ಡಿಎಫ್‌ ಎರಡು ಬಾರಿಗೆ ಸತತವಾಗಿ ಅಂದರೆ 2016 ಮತ್ತು 2021ರಲ್ಲಿ ಅಧಿಕಾರದ ಗದ್ದುಗೆಗೆ ಏರಿ, ಈ ಬಾರಿ ಹೀನಾಯ ಸೋಲು ಅನುಭವಿಸಿತು. ಸಿಪಿಐ (ಎಂ) 1978ರಿಂದ 2013ರವರೆಗೆ ಏಳು ಬಾರಿ (1977, 1983, 1993, 1998, 2003, 2008, 2013) ಅಧಿಕಾರ ಸೂತ್ರ ಹಿಡಿಯಿತು. ಬಿಜೆಪಿ 2018ರಲ್ಲಿ ಅಧಿಕಾರ ಹಿಡಿಯುವ ಮೂಲಕ, ಎಡಪಕ್ಷದ ಆಡಳಿತವನ್ನು ಅಂತ್ಯಗೊಳಿಸಿತು.

WhatsApp Image 2026 05 11 at 11.36.40 PM
ಬಂಗಾಳದಲ್ಲಿ ಎಡಪಕ್ಷಗಳ ಚುನಾವಣಾ ಪ್ರಚಾರದ ಪೋಸ್ಟರ್

ಮೊದಲೇ ಸಿಕ್ಕಿದ್ದ ಸೋಲಿನ ಸೂಚನೆ

ದೇಶದಲ್ಲಿ ಎಡಪಂಥೀಯ ರಾಜಕಾರಣವನ್ನು ಸೂಕ್ಷ್ಮವಾಗಿ ಗಮನಿಸಿಕೊಂಡೇ ಬಂದಿರುವ ಕೆಲವು ಹಿರಿಯ ಪತ್ರಕರ್ತರಿಗಂತೂ, ಎಲ್ ಡಿ ಎಫ್‌ ನ ಸೋಲಿನ ಸೂಚನೆ ಮೊದಲೇ ಸಿಕ್ಕಿತ್ತು. ಅವರು ತಮ್ಮ ಬರಹಗಳ ಮೂಲಕ ಸಿಪಿಐ (ಎಂ) ಅನ್ನು ಹಲವು ಬಾರಿ ಎಚ್ಚರಿಸಿದರೂ, ಪಕ್ಷ ಮತ್ತು ಪಿಣರಾಯಿ ವಿಜಯನ್ ಅದನ್ನು ಲಕ್ಷಿಸುವ ಮನಸ್ಥಿತಿಯಲ್ಲಿಯೇ ಇರಲಿಲ್ಲ. ಹಾಗಾಗಿ ಈ ಚುನಾವಣೆಯಲ್ಲಿ ಪಕ್ಷದ ಸೋಲು ಯಾರಿಗೂ ಅಚ್ಚರಿಯನ್ನು ತರಲಿಲ್ಲ. ಬಹಳಷ್ಟು ಎಡಪಂಥೀಯ ಪತ್ರಕರ್ತರು, “ಅಭಿವೃದ್ಧಿ ಎಂಬ ಚರ್ವಿತ ಚರ್ವಣ ವಿಷಯವನ್ನು ಮುಂದು ಮಾಡಿ ಚುನಾವಣೆಯಲ್ಲಿ ಗೆಲ್ಲುವುದು ಪಕ್ಷಕ್ಕೆ ಅಸಾಧ್ಯ ಎಂದು ಷರಾ ಬರೆದಿದ್ದರು. ಆದರೆ ಸೈಬರ್‌-ಹವಾನಿಯಂತ್ರಿತ ಕೊಠಡಿಯೊಳಗೆ ತಣ್ಣಗೆ ಕುಳಿತ, ಬುದ್ದಿಜೀವಿಗಳಿಗೆ ಇದು ಅರ್ಥವಾಗಲೇ ಇಲ್ಲ. ಅಭಿವೃದ್ಧಿ ವಿಷಯವೇ ಗೆಲುವಿಗೆ ಹಾದಿ ಎಂದು ಈ ಪರಾವಲಂಬಿ ಬುದ್ಧಿಜೀವಿಗಳು ಪಿಣರಾಯಿ ವಿಜಯನ್‌ ಅವರನ್ನು ನಂಬಿಸಿದ್ದರು. ಪಿಣರಾಯಿ ವಿಜಯನ್‌ ಕೂಡ, ಇಂಥ ಆಲ್ಗರಿಧಂ ಆಧಾರಿತ ಸತ್ಯಕ್ಕೆ ದೂರವಾದ ಅವರ ಆಶಯಗಳಿಗೆ ಹತ್ತಿರವಾದ ಕಥನವನ್ನು ನಂಬಿ ಮತದಾರರ ಓಲೈಕೆಯ ಪ್ರಯತ್ನ ಮಾಡಿದ್ದರು. ಆದರೆ, ಈ ಚುನಾವಣೆ- ಕೇವಲ ಅಂಕಗಣಿತದ ಲೆಕ್ಕಾಚಾರವಲ್ಲ. ಇದು ರಾಜಕೀಯ ನಂಬಿಕೆಗಳ ಮೌಲ್ಯದ ಸವಕಳಿ ಎಂಬುದನ್ನು ಅರ್ಥಮಾಡಿಕೊಳ್ಳಲೇ ಇಲ್ಲ. ಶೇಕಡಾ ನಲವತ್ತೆಂಟಷ್ಟಿದ್ದ ಅಲ್ಪಸಂಖ್ಯಾತ ಮುಸ್ಲಿಮ್‌, ಕ್ರಿಶ್ಚಿಯನ್‌ ಮತಗಳೇ ತಮಗೇ ಬರುತ್ತವೆ ಎಂದು ನಂಬಿದ್ದ ಎಡಪಕ್ಷಗಳ ಲೆಕ್ಕಾಚಾರವನ್ನು ತಲೆಕೆಳಗು ಮಾಡಿ ಎಡಪಂಥೀಯ ಪಕ್ಷಗಳಿಗೆ ಪಾಠ ಕಲಿಸಿತು ಎಂದು ಕೇರಳದ ಹಿರಿಯ ಪತ್ರಕರ್ತರೊಬ್ಬರು ಈ ಹಿರಿಯ ಪತ್ರಕರ್ತರೊಂದಿಗೆ ಮಾತನಾಡುತ್ತಾ ಹೇಳಿದರು. ಅವರ ಮಾತು ಸುಳ್ಳಲ್ಲ ಎನ್ನಿಸುತ್ತದೆ.

ಸಿಪಿಐ (ಎಂ) ಪ್ರತಿಕ್ರಿಯೆ

ಪಶ್ಚಿಮ ಬಂಗಾಳದಲ್ಲಿ ಎಡಪಂಥೀಯ ಪಕ್ಷಗಳು ಅಧಿಕಾರ ಸೂತ್ರ ಹಿಡಿಯಲು ಕಾರಣ; ರೈತ ಮತ್ತು ಕಾರ್ಮಿಕರ ಹಿತಾಸಕ್ತಿಯನ್ನು ಎತ್ತಿ ಹಿಡಿದು ಹೋರಾಟ ನಡೆಸಿಕೊಂಡು ಬಂದಿದ್ದು. ಆ ಸಂದರ್ಭದಲ್ಲಿಯೇ ಅಂದರೆ 1977ರ ಆರಂಭದಲ್ಲಿ, ಕಾರ್ಮಿಕರು ಮತ್ತು ರೈತರು ಕಾಂಗ್ರೆಸ್‌ ವಿರುದ್ಧ ಮಲೆತು ನಿಂತರು. ಈ ಚಳವಳಿಯನ್ನು ಬುದ್ದಿಜೀವಿಗಳೂ ಬೆಂಬಲಿಸಿದ ಕಾರಣ, ಎಡಪಕ್ಷಗಳು ಆಗ ಅಧಿಕಾರಕ್ಕೆ ಬಂದದ್ದು ಮತ್ತು ಮೂವತ್ನಾಲ್ಕು ವರ್ಷಗಳ ಕಾಲ ಆಡಳಿತ ನಡೆಸಿದ್ದು, ಇಂದು ಇತಿಹಾಸದ ಪುಟಗಳಲ್ಲಿ ಸೇರಿಹೋಗಿರುವುದು ಕಾಲದ ದುರಂತವಲ್ಲದೆ ಮತ್ತೇನೂ ಅಲ್ಲ. ಆದರೆ ಎಡಪಕ್ಷಗಳು ತಮ್ಮ ಆಡಳಿತಾವಧಿಯಲ್ಲಿ ಕೊಟ್ಟ ಕೊಡುಗೆ ಅಪಾರ. ಭೂಸುಧಾರಣೆ, ಪಂಚಾಯತ್‌ ರಾಜ್‌ ವ್ಯವಸ್ಥೆಯನ್ನು ಬಲಪಡಿಸಿದ್ದು, ಮತ್ತು ರೈತರ ಮತ್ತು ಕೃಷಿ ಕೂಲಿಕಾರ್ಮಿಕರ ಬೆನ್ನೆಲುಬಾಗಿ ನಿಂತಿದ್ದರಿಂದ ಎಡಪಕ್ಷಗಳು ಅಧಿಕಾರದಲ್ಲಿ ಉಳಿಯಲು ಸಾಧ್ಯವಾಯಿತು ಎನ್ನುವುದನ್ನು ಯಾರೂ ತಳ್ಳಿಹಾಕಲಾರರು. ಆದರೆ, ಒಮ್ಮೆ ಬೆಟ್ಟದಂತೆ ಎಡಪಂಥೀಯ ರಾಜಕಾರಣವನ್ನು ಬೆಂಬಲಿಸಿದ ಜನರು. ಈ ಆಡಳಿತದಲ್ಲಿ ಪಕ್ಷದ ಕಾರ್ಯಕರ್ತರು ನಡೆದುಕೊಂಡ ರೀತಿಯಿಂದ ನೊಂದುಕೊಂಡರು. ಸಿಂಗೂರ್‌ ಮತ್ತು ನಂದಿಗ್ರಾಮದ ಭೂಮಿಯನ್ನು ಔದ್ಯಮಿಕ ಕಾರಣಗಳಿಗಾಗಿ ವಶಪಡಿಸಿಕೊಳ್ಳಲು ನಡೆಸಿದ ಪ್ರಯತ್ನದಲ್ಲಿ ನಡೆದ ಹಿಂಸಾಚಾರದಿಂದ ಮಲೆತುನಿಂತರು. ಎಡಪಕ್ಷಗಳನ್ನು ಅಧಿಕಾರದಿಂದ ಕೆಳಕ್ಕಿಳಿಸಿ, ಮಮತಾ ಬ್ಯಾನರ್ಜಿಯ ತೃಣಮೂಲ ಕಾಂಗ್ರೆಸ್‌ ಅನ್ನು ಅಧಿಕಾರಕ್ಕೆ ತಂದರು. ಆರ್ ಜಿ ಕರ್‌ ಪ್ರಕರಣದಲ್ಲಿ ತೃಣಮೂಲ ಕಾಂಗ್ರೆಸ್‌ ನಡೆದುಕೊಂಡ ರೀತಿ ಅದೇ ಕಾರಣಕ್ಕೆ ಜನರ ವಿಶ್ವಾಸ ಕಳೆದುಕೊಂಡು, ಅಂತಿಮವಾಗಿ ಮೂಲಭೂತವಾದಿ, ಮತೀಯವಾದಿ ಹಾಗೂ ಸಂವಿಧಾನವಿರೋಧಿ ಬಿಜೆಪಿಯನ್ನು ಅಧಿಕಾರಕ್ಕೆ ತಂದಿದ್ದರಲ್ಲಿ, ಮಾಧ್ಯಮದ ಪಾಲೂ ಇದೆ ಎಂದು ನನಗನ್ನಿಸುತ್ತಿದೆ.

WhatsApp Image 2026 05 11 at 11.38.42 PM

ಆದರೆ, ಎಡಪಂಥೀಯ ರಾಜಕಾರಣಕ್ಕೆ ಗ್ರಹಣ ಹಿಡಿದಿದೆ ಎಂಬುದನ್ನು ಸಿಪಿಐ (ಎಂ) ಒಪ್ಪುವುದಿಲ್ಲ. ಈ ಸೋಲಿಗೆ ಅಥವಾ ಪಕ್ಷದ ಇಂದಿನ ಸ್ಥಿತಿಗೆ, ಬಂಡವಾಳಶಾಹಿ, ಮತೀಯ ರಾಜಕಾರಣದ ಪ್ರಾಬಲ್ಯದತ್ತ ಬೆಟ್ಟು ಮಾಡುತ್ತಿದ್ದಾರೆ. ಸಂವಿಧಾನದ ಎಲ್ಲ ಅಂಗಗಳೂ, ಆಡಳಿತ ಪಕ್ಷದ ಕೈಗೊಂಬೆಯಾಗಿ ವರ್ತಿಸುತ್ತಿರುವುದು ಇದಕ್ಕೆ ಕಾರಣ ಎನ್ನುತ್ತಾರೆ. “ಮಾರ್ಕ್ಸ್ ವಾದಿ ಕಮ್ಯುನಿಸ್ಟ್‌ ಪಕ್ಷ ಒಂದು ಕ್ರಾಂತಿಕಾರಿ ಪಕ್ಷ. ಭಾರತದಲ್ಲಿ ಪಾಳೆಗಾರಿಕೆ, ಬಂಡವಾಳಶಾಹಿ ಭೂ ಮಾಲಿಕತ್ವವನ್ನು ಸಂಪೂರ್ಣ ರದ್ದು ಪಡಿಸುವ, ಎಲ್ಲ ಮೂಲಭೂತ ಕೈಗಾರಿಕೆಗಳನ್ನು, ಬ್ಯಾಂಕ್‌, ವಿಮೆ ಇತ್ಯಾದಿ ಹಣಕಾಸಿನ ಸಂಸ್ಥೆಗಳನ್ನು ರಾಷ್ಟ್ರೀಕರಣಗೊಳಿಸುವ ಗುರಿಯುಳ್ಳ ಪಕ್ಷ. ತನಗೆ ಸಿಕ್ಕ ಅಧಿಕಾರದ ಮಿತಿಯಲ್ಲಿ ಈ ಎಲ್ಲ ಜನಪರ ಸಂಗತಿಗಳನ್ನು ಎಲ್ಲ ಬಂಡವಾಳಶಾಹಿ ಶಕ್ತಿಗಳೊಂದಿಗೆ ಸೆಣಸಾಡಿ ಕಾರ್ಯರೂಪಕ್ಕೆ ತಂದ ಪಕ್ಷ. ಇಂಥ ನಮ್ಮ ಪಕ್ಷದ ಉದ್ದೇಶಗಳನ್ನು ಅದರ ಜಾರಿಯಲ್ಲಿ ನೋಡಿರುವುದು ಕೇರಳ, ಪಶ್ಚಿಮ ಬಂಗಾಳ ಮತ್ತು ತ್ರಿಪುರಗಳಲ್ಲಿ ನೋಡಿದ ಮಾರ್ಕ್ಸ್ ವಾದಿ ಕಮ್ಯುನಿಸ್ಟ್‌ ಪಕ್ಷದ ಈ ಕಾರ್ಯಕ್ರಮಗಳ ಜಾರಿಯನ್ನು ಕಾರ್ಯತಃ ನೋಡಿದ ಎಲ್ಲ ಪಟ್ಟಭದ್ರ ಹಿತಾಸಕ್ತಿ ಒಂದಾಗಿ ಸೋಲಿಸುವ ಪಣ ತೊಡುವುದು ಸಹಜ. ಅದಕ್ಕಾಗಿ ಯಥೇಚ್ಛ ಹಣದ ಹೊಳೆ ಹರಿಸಿದರು. ಉಳಿದವರು ಗೂಂಡಾಗಳ ಮೂಲಕ ದಾಳಿ ನಡೆಸಿದರು. ಮಾರ್ಕ್ಸ್‌ ವಾದಿ ಕಮ್ಯುನಿಸ್ಟ್‌ ಪಕ್ಷ, ಎಡಪಕ್ಷಗಳಿಗೆ ಸಂಬಂಧಿಸಿದಂತೆ ಈ ಮುಖ್ಯ ಆಯಾಮಗಳು ಉಂಟುಮಾಡುವ complexityಯನ್ನು ಪರಿಗಣಿಸದೆ ಮಾತನಾಡುವವರು ಮಾತ್ರ, ದೇಶದಲ್ಲಿ ಎಡಪಂಥೀಯ ರಾಜಕಾರಣದ ಶಕೆ ಅಂತ್ಯವೇ ಎಂದು ಸಂಶಯಿಸುತ್ತಾರೆ. ಕಮ್ಯುನಿಸ್ಟ್‌ ಪಕ್ಷ ಇಂಥ ಹಲವಾರು ದಾಳಿಗಳನ್ನು ಹಿಂದೆಯೂ ನೋಡಿದೆ. ಎದುರಿಸಿದೆ, ಗೆದ್ದಿದೆ, ಕುಗ್ಗಿದೆ. ಶೋಷಿತರ ಸಂಘರ್ಷದ ಆಧಾರದ ಮೇಲೆ ಎದ್ದು ನಿಂತಿದೆ. ಮುಂದೆಯೂ ಎದ್ದು ನಿಲ್ಲುತ್ತದೆ” ಎಂದು ಭಾರತೀಯ ಕಮ್ಯುನಿಸ್ಟ್‌ ಪಕ್ಷ (ಮಾರ್ಕ್ಸವಾದಿ) ಪಕ್ಷದ ಹಿರಿಯ ನಾಯಕರಲ್ಲಿ ಒಬ್ಬರಾದ ಜಿ. ಎನ್‌. ನಾಗರಾಜ್‌ ಪ್ರತಿಕ್ರಿಯಿಸಿದ್ದಾರೆ.  

ಎಡಪಂಥೀಯ ರಾಜಕಾರಣಕ್ಕೆ ಗ್ರಹಣ ಹಿಡಿಯಲು ಮತ್ತೊಂದು ಕಾರಣವೆಂದರೆ, ಉದಾರವಾದಿ ನಿಲುವಿನ ಕಾಲದ ತೀರ್ಮಾನಗಳಿಂದ ಬದಲಾದ ಭಾರತೀಯ ಸಮಾಜ. ಈ ಸಂದರ್ಭದಲ್ಲಿ ವರ್ಗ ರಾಜಕಾರಣ ನೇಪಥ್ಯಕ್ಕೆ ಸರಿದು, ಜಾತಿ ಮತ್ತು ಹಣದ ರಾಜಕಾರಣ ಮುನ್ನೆಲೆಗೆ ಬಂದಿದ್ದು. ಈ ಬೆಳವಣಿಗೆಗೆ ಬೆನ್ನುಗಾವಲಾಗಿ ಬಂದದ್ದು, ಮತೀಯ ರಾಜಕಾರಣ, ಹಿಂದುತ್ವದ ಪ್ರಾಬಲ್ಯ, ರಾಷ್ಟ್ರೀಯತೆಯ ಹುಸಿ ಕಲ್ಪನೆ. ಅದಲ್ಲಕ್ಕಿಂತ ಮುಖ್ಯವಾಗಿ ಭಾರತದ great middle class ಮನಸ್ಥಿತಿ. ಇದೆಲ್ಲದರ ಜೊತೆಗೆ ಪ್ರಾಂತೀಯ ಪಕ್ಷಗಳ ಪ್ರಾಬಲ್ಯ ಕೂಡ, ಸೈದ್ಧಾಂತಿಕ ರಾಜಕೀಯ ಪಕ್ಷಗಳ ವರ್ಚಸ್ಸನ್ನು ಕುಗ್ಗಿಸಿದ್ದು ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ.

IMG 20251121 WA0005
ಮುರಳೀಧರ ಖಜಾನೆ
+ posts

ಹಿರಿಯ ಪತ್ರಕರ್ತ. ಉದಯವಾಣಿ, ಪ್ರಜಾವಾಣಿ, ದಿ ಹಿಂದೂ ಪತ್ರಿಕೆಗಳಲ್ಲಿ ವರದಿಗಾರರಾಗಿ ಕೆಲಸ ಮಾಡಿದ್ದಾರೆ. ಸದ್ಯ ಸ್ವತಂತ್ರ ಪತ್ರಕರ್ತರಾಗಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

ಮುರಳೀಧರ ಖಜಾನೆ
ಮುರಳೀಧರ ಖಜಾನೆ
ಹಿರಿಯ ಪತ್ರಕರ್ತ. ಉದಯವಾಣಿ, ಪ್ರಜಾವಾಣಿ, ದಿ ಹಿಂದೂ ಪತ್ರಿಕೆಗಳಲ್ಲಿ ವರದಿಗಾರರಾಗಿ ಕೆಲಸ ಮಾಡಿದ್ದಾರೆ. ಸದ್ಯ ಸ್ವತಂತ್ರ ಪತ್ರಕರ್ತರಾಗಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಅಪರಾಧಿಗಳ ಪರ ಬಿ ಸಿ ರೋಡ್ ಚಲೋ: ಎಂದಿನಂತೆ ಅಮಾನವೀಯ ಕೊಲೆಗಡುಕರ ಬೆಂಬಲಕ್ಕೆ ನಿಂತ ಸಂಘಪರಿವಾರ

ಕೊಲೆಯಂತಹ ಗಂಭೀರ ಅಪರಾಧ ಎಸಗಿದ ಆರೋಪ ಹೊತ್ತವರ ಪರವಾಗಿ ಸಂಘಪರಿವಾರ ಬೀದಿಗಿಳಿಯುತ್ತಿರುವುದು...

14 ಆಕ್ಷೇಪಗಳಿಂದ SIT ಬೇಡಿಕೆಯವರೆಗೆ: ಗ್ಯಾನೇಶ್‌ ಕುಮಾರ್ ಸುತ್ತ ಬಿಗಿಯಾಗುತ್ತಿರುವ ಬಿಕ್ಕಟ್ಟು!

ಚುನಾವಣಾ ಆಯೋಗದೊಳಗಿನ ಭಿನ್ನಾಭಿಪ್ರಾಯಗಳು ಬಹಿರಂಗಗೊಂಡ ಬೆನ್ನಲ್ಲೇ ಎಸ್‌ಐಆರ್‌ ವಿವಾದ ಹೊಸ ತಿರುವು...

ಮೋದಿ ಜನ್ಮದಿನದ ನಾಟಕದಲ್ಲಿ ಅಭಿನಯಿಸಲು ನಕಾರ; ವಿದ್ಯಾರ್ಥಿಗೆ ‘ಅಂಕ ಕಡಿತ’ದ ಬೆದರಿಕೆ

ಪ್ರಧಾನಿ ಮೋದಿ ಜನ್ಮದಿನದ ಅಂಗವಾಗಿ ಆಯೋಜಿಸಲಾಗಿರುವ ನಾಟಕದಲ್ಲಿ ಅಭಿನಯಿಸಲು ನಿರಾಕರಿಸಿದ ವಿದ್ಯಾರ್ಥಿಗಳಿಗೆ...