ಕಾಂಗ್ರೆಸ್‌ಗೆ ಈಗ ಲಿಂಗಾಯತರ ಮೇಲೆ ಪ್ರೀತಿ ಹೆಚ್ಚಾಗಿದೆ: ಸಿಎಂ ಬೊಮ್ಮಾಯಿ

Date:

Advertisements
  • ಕಾಂಗ್ರೆಸ್ ವಿರುದ್ಧ ಹರಿಹಾಯ್ದ ಮುಖ್ಯಮಂತ್ರಿ ಬೊಮ್ಮಾಯಿ
  • ಲಿಂಗಾಯತರ ಬಗ್ಗೆ ಕಾಂಗ್ರೆಸ್ ಪಕ್ಷದ್ದು ತೋರಿಕೆಯ ಪ್ರೀತಿ

ವಿರೋಧ ಪಕ್ಷ ಕಾಂಗ್ರೆಸ್‌ಗೆ ಈಗ ಲಿಂಗಾಯತರ ಮೇಲೆ ಪ್ರೀತಿ ಹೆಚ್ಚಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಬಾಗಲಕೋಟೆಯಲ್ಲಿ ಮಾದ್ಯಮಗಳೊಂದಿಗೆ ಮಾತನಾಡಿದ ಅವರು, ಚುನಾವಣೆ ಸಮೀಪವಾಗುತ್ತಿರುವಂತೆ ಕಾಂಗ್ರೆಸ್‌ನವರಿಗೆ ಲಿಂಗಾಯತರ ಮೇಲೆ ಪ್ರೀತಿ ಹೆಚ್ಚಾಗಿದೆ. ಇದು ಲಿಂಗಾಯತರ ಪರ ಇರುವ ಕಾಳಜಿಯಿಂದಲ್ಲ, ಬರೀ ತೋರಿಕೆಯ ಪ್ರೀತಿ ಎಂದು ಅವರು ಹೇಳಿದರು.

ಈ ಹಿಂದೆ ಲಿಂಗಾಯತರನ್ನು ಧರ್ಮದ ಹೆಸರಿನಲ್ಲಿ ಛಿದ್ರ ಮಾಡಲು ಹೊರಟಿದ್ದರು. ಇವರ ಕಾಲದಲ್ಲಿ ಲಿಂಗಾಯತರಿಗೆ ಮೀಸಲು ಕೊಡಲು ಹಿಂದೇಟು ಹಾಕಿದರು. ಈಗ ನಾವು ಆ ಬೇಡಿಕೆಯನ್ನು ಈಡೇರಿಸಿ ಮೀಸಲು ನೀಡಿದ್ದೇವೆ.

Advertisements

ಆದರೆ ಈಗ ಕಾಂಗ್ರೆಸ್ ಅದನ್ನೇ ವಿರೋಧಿಸಿ ಕೋರ್ಟ್ಗೆ ದೂರು ದಾಖಲಿಸಿದ್ದಾರೆ ಎಂದು ಬೊಮ್ಮಾಯಿ ಕಾಂಗ್ರೆಸ್ ವಿರುದ್ದ ಕಿಡಿಕಾರಿದರು.

ಕಾಂಗ್ರೆಸ್ ಗೆ ಈಗ ಲಿಂಗಾಯತ ಮೇಲೆ ಪ್ರೀತಿ ಹೆಚ್ಚಿದೆ. ಲಿಂಗಾಯತರನ್ನು ಛಿದ್ರ ಮಾಡಲು ಹೊರಟಿದ್ದವರು ಇವರು. ಇವರ ಕಾಲದಲ್ಲಿ ಮೀಸಲಾತಿ ವಿಚಾರದಲ್ಲಿ ಯಾವುದೇ ದೈರ್ಯ ಮಾಡಲಿಲ್ಲ.

ಈಗ ಲಿಂಗಾಯತರ ಬಗ್ಗೆ ಮಾತನಾಡುತ್ತಿದ್ದಾರೆ. ಇವರೇ ಈಗ ಕೋರ್ಟ್‌ಗೆ ನಮ್ಮ ವಿರುದ್ದ ದೂರು ದಾಖಲಿಸಿದ್ದಾರೆ. ಮೀಸಲಾತಿ ವಿರೋಧಿಸಿದವರೇ ಇವರು ಎಂದು ಸಿಎಂ ಕಿಡಿಕಾರಿದರು.

ಸಾಮಾಜಿಕ ನ್ಯಾಯದ ಬಗ್ಗೆ ಮಾತನಾಡುವ ಕಾಂಗ್ರೆಸ್ ಇಲ್ಲಿಯವರೆಗೆ ಅದನ್ನು ಎಷ್ಟರಮಟ್ಟಿಗೆ ಪಾಲಿಸುತ್ತಾ ಬಂದಿದೆ. 1967ರಲ್ಲಿ ವಿರೇಂದ್ರ ಪಾಟೀಲ್ ಬಳಿಕ ಇಲ್ಲಿಯವರೆಗೆ ಲಿಂಗಾಯತರನ್ನು ಇನ್ನೂ ಕಾಂಗ್ರೆಸ್ ನವರು ಸಿಎಂ ಮಾಡಿಲ್ಲ.

ವೀರೇಂದ್ರ ಪಾಟೀಲರನ್ನು , ರಾಜಶೇಖರ್ ಮೂರ್ತಿ ಅವರುಗಳನ್ನು ಇವರು ಹೇಗೆ ನಡೆಸಿಕೊಂಡರೆನ್ನುವುದು ಸಮಾಜಕ್ಕೆ ಗೊತ್ತಿದೆ, ಜನ ಇದಕ್ಕೆ ತಕ್ಕ ಉತ್ತರ ಕೊಡುತ್ತಾರೆ ಎಂದ ಸಿಎಂ ಕಾಂಗ್ರೆಸ್ ಕುಟುಕಿದರು.

ಈ ಸುದ್ದಿ ಓದಿದ್ದೀರಾ? :ಸುದೀಪ್‌ ನಟನೆಯ ಜಾಹೀರಾತುಗಳಿಗೆ ತಡೆ ನೀಡಿ: ಚುನಾವಣಾ ಆಯೋಗಕ್ಕೆ…

ಅಂದು ಶುರುವಾದ ಕಾಂಗ್ರೆಸ್‌ನ ಲಿಂಗಾಯತ ವಿರೋಧಿ ಧೋರಣೆ ಇನ್ನೂ ಮರೆಯಾಗಿಲ್ಲ. ಅದಕ್ಕೆ ಈಗ ಮತ್ತೊಂದು ಸಾಕ್ಷಿ ಕಾಂಗ್ರೆಸ್ ಹಿರಿಯ ನಾಯಕ ಎಸ್ ಆರ್ ಪಾಟೀಲ್, ಇವರನ್ನು ಪಕ್ಷ ಈಗ ನಡೆಸಿಕೊಳ್ಳುತ್ತಿದೆ ಎನ್ನುವುದನ್ನು ಜನ ಕಣ್ಣಾರೆ ನೋಡುತ್ತಿದ್ದಾರೆ. ಇವಕ್ಕೆಲ್ಲ ಅವರೇ ಉತ್ತರ ಕೊಡಲಿ ಎಂದರು.

ಕಲ್ಯಾಣ ಹಾಗೂ ಉತ್ತರ ಕರ್ನಾಟಕದ ಅಭಿವೃದಿ ಆದರೆ ಅದು ನಮ್ಮ ಪಕ್ಷದಿಂದ ಮಾತ್ರ ಯಾವ ಭಾಗದಿಂದ ನಾಯಕರು ಹೊರ ಹೋಗಿದ್ದಾರೋ ಅಲ್ಲೇ ನಾವು ಹೆಚ್ಚು ಸ್ಥಾನ ಗೆಲ್ಲುತ್ತೇವೆ ಎಂದು ಸಿಎಂ ಬೊಮ್ಮಾಯಿ ಹೇಳಿದರು.

ಬಳಿಕ ಮುಖ್ಯಮಂತ್ರಿಗಳು ಬೀಳಗಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮುರುಗೇಶ್ ನಿರಾಣಿ, ಹಾಗೂ ಮಧೋಳ ಅಭ್ಯರ್ಥಿ ಗೋವಿಂದ ಕಾರಜೋಳ ಅವರುಗಳ ನಾಮಪತ್ರ ಸಲ್ಲಿಕೆ ಕಾರ್ಯದಲ್ಲಿ ಭಾಗಿಯಾಗಿ ಅವರ ಪರ ಮತಯಾಚನೆ ಮಾಡಿದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮಧ್ಯಪ್ರದೇಶ ಚುನಾವಣೆ | ಆಡಳಿತ ವಿರೋಧಿ ಅಲೆಯ ನಡುವೆಯೂ ಬಿಜೆಪಿ ಜಯಭೇರಿ

ಮಧ್ಯಪ್ರದೇಶದಲ್ಲಿ ಬಿಜೆಪಿ ಉಗ್ರ ಹಿಂದುತ್ವ ಪ್ರತಿಪಾದಿಸಿದರೆ, ಕಾಂಗ್ರೆಸ್‌ನ ಕಮಲನಾಥ್ ಸಾಫ್ಟ್ ಹಿಂದುತ್ವದ...

ಛತ್ತೀಸ್‌ಗಡ: ಹಗರಣಗಳ ಆರೋಪಕ್ಕೆ ಸಿಲುಕಿ ಅಧಿಕಾರ ಕಳೆದುಕೊಂಡ ಕಾಂಗ್ರೆಸ್

ಛತ್ತೀಸ್‌ಗಢ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಗೆಲುವು ಸಾಧಿಸಿ ರಾಜ್ಯದಲ್ಲಿ ಮತ್ತೆ ಅಧಿಕಾರ...

ಕಾಂಗ್ರೆಸ್‌ ಕೈ ಜಾರಿದ ರಾಜಸ್ಥಾನ- ವಾಡಿಕೆ ತಪ್ಪಿಸದೆ ಪಕ್ಷ ಬದಲಿಸಿದ ಮತದಾರರು

ರಾಜಸ್ಥಾನದಲ್ಲಿ ಪ್ರತಿ ಅವಧಿಗೂ ಸರ್ಕಾರ ಬದಲಾಯಿಸುವ ರೂಢಿಯಿದೆ ಹಾಲಿ ಚುನಾವಣೆಯಲ್ಲಿ...

ತೆಲಂಗಾಣ ಫಲಿತಾಂಶ: ಕೆಸಿಆರ್ ಸರ್ವಾಧಿಕಾರಕ್ಕೆ ಏಟು; ಕಾಂಗ್ರೆಸ್ ಗ್ಯಾರಂಟಿಗಳಿಗೆ ಓಟು

2014ರಿಂದಲೂ ಕಾಂಗ್ರೆಸ್ ತೆಲಂಗಾಣದ ಗದ್ದುಗೆ ಮೇಲೆ ಕಣ್ಣಿಟ್ಟಿತ್ತು. ಈ ಬಾರಿ ಕರ್ನಾಟಕದಲ್ಲಿ...

Download Eedina App Android / iOS

X