ನಮ್ಮ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಎಚ್ ಡಿ ಕುಮಾರಸ್ವಾಮಿಯವರು ಮೈತ್ರಿ ಧರ್ಮವನ್ನು ಪಾಲನೆ ಮಾಡಲು ಸೂಚನೆ ನೀಡಿದ್ದಾರೆ. ಅದರಿಂದ ಇಂದು ಸಭೆ ಕರೆದು ಮಾಹಿತಿ ನೀಡಿದ್ದೇನೆ. ಮುಂದೆ ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯ ಗೆಲುವಿಗೆ ಎಲ್ಲರೂ ಶ್ರಮಿಸಬೇಕು ಎಂದು ದಾವಣಗೆರೆ ಜೆಡಿಎಸ್ ಪಕ್ಷದ ಮಾಜಿ ಶಾಸಕ ಎಚ್ ಎಸ್ ಶಿವಶಂಕರ್ ಹೇಳಿದರು.
ಜನತಾದಳ(ಜಾತ್ಯತೀತ) ಪಕ್ಷದ ನಿರ್ದೇಶನದ ಹಿನ್ನೆಲೆಯಲ್ಲಿ ದಾವಣಗೆರೆ ಜಿಲ್ಲೆಯ ಹರಿಹರದ ಮಾಜಿ ಶಾಸಕ ಎಚ್ ಎಸ್ ಶಿವಶಂಕರ್ ಅವರ ಗೃಹಕಚೇರಿಯಲ್ಲಿ ನಡೆದ ಪ್ರಮುಖ ಮುಖಂಡರ ಸಭೆಯಲ್ಲಿ ಮಾತನಾಡಿದರು.
“ನಮ್ಮ ಪಕ್ಷ ಎನ್‌ಡಿಎ ಕೂಟದ ಭಾಗವಾಗಿದ್ದರಿಂದ ಮಂಡ್ಯ, ಹಾಸನ, ಕೋಲಾರ ಲೋಕಸಭಾ ಕ್ಷೇತ್ರಗಳನ್ನು ಬಿಜೆಪಿ ಬಿಟ್ಟುಕೊಟ್ಟಿದ್ದು, ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಿಂದ ಡಾ. ಮಂಜುನಾಥ್ ಅವರನ್ನು ಬಿಜೆಪಿ ಅಭ್ಯರ್ಥಿ ಮಾಡಿದ್ದಾರೆ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಅನಧಿಕೃತ ಪಂಪ್‌ಸೆಟ್ ತೆರವಿಗೆ ರೈತರ ಆಗ್ರಹ
ಈ ಸಂದರ್ಭದಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷ ಬಿ ಚಿದಾನಂದಪ್ಪ, ತೇಜಸ್ವಿ ಪಾಟೀಲ್, ಆನಂದಪ್ಪ, ಗಣೇಶ್ ದಾಸ್ ಕರಿಯಪ್ಪ, ಜೆ ಅಮಾನುಲ್ಲಾ ಖಾನ್, ಟಿ ಅಸ್ಗರ್, ಶಾನವಜ್ ಖಾನ್, ಬಾತಿ ಶಂಕರ್, ಧನಂಜಯ ಡಿ ಆರ್, ಪರಮೇಶಪ್ಪ ಹರಪನಹಳ್ಳಿ, ಗಂಗಾಧರಪ್ಪ, ಜಾವಿದ್ ಚನ್ನಗಿರಿ, ಮೋತಿ ಶಂಕ್ರಪ್ಪ ಸೇರಿದಂತೆ ಬಹುತೇಕ ಮುಖಂಡರು ಇದ್ದರು.
