ದಾವಣಗೆರೆ | ಅನಧಿಕೃತ ಪಂಪ್‌ಸೆಟ್ ತೆರವಿಗೆ ರೈತರ ಆಗ್ರಹ

Date:

ಹರಪನಹಳ್ಳಿ ತಾಲೂಕಿನಲ್ಲಿರುವ ಹಿರೇಗಳಗೆರೆ ಭಾಗಕ್ಕೆ ಭದ್ರಾ ನಾಲೆಯ ನೀರು ತಲುಪಿಲ್ಲ. ಇದರಿಂದ ಈ ಭಾಗದ ರೈತರಿಗೆ ತೀವ್ರ ತೊಂದರೆಯಾಗಿದೆ.ಅಧಿಕಾರಿಗಳು ಕೂಡಲೇ ನೀರು ತಲುಪಿಸುವ ವ್ಯವಸ್ಥೆ ಮಾಡಬೇಕು ಎಂದು ದಾವಣಗೆರೆ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಪಿ ಮಹಾಬಲೇಶ್ವರ ಗೌಡ್ರು ಒತ್ತಾಯಿಸಿದರು.

- Advertisement -

ದಾವಣಗೆರೆಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಭದ್ರಾ ನೀರಾವರಿಯಿಂದ ಕಳೆದ 1969ರಿಂದ ಹಿರೇಮೇಗಳಗೆರೆ ವ್ಯಾಪ್ತಿಗೆ ನೀರಿನ ಸಮರ್ಪಕ ಸೌಲಭ್ಯವಿದೆ. ಇಷ್ಟುದಿನ ನೀರಿನ ಯಾವ ತೊಂದರೆ ಇರಲಿಲ್ಲ. ಆದರೆ ಇದೀಗ ಅನಧಿಕೃತ ಪಂಪ್‌ಸೆಟ್‌ಗಳ ಹಾವಳಿಯಿಂದಾಗಿ ನಮಗೆ ನೀರು ತಲುಪುತ್ತಿಲ್ಲ. ಕೊನೆ ಭಾಗಕ್ಕೆ ನೀರು ತಲುಪಿಸಬೇಕಾಗಿದ್ದ ಅಧಿಕಾರಿ ವರ್ಗದ ನಿರ್ಲಕ್ಷ್ಯದಿಂದಾಗಿ ನಮ್ಮ ಭಾಗಕ್ಕೆ ನೀರು ತಲುಪುತ್ತಿಲ್ಲ” ಎಂದು ಆರೋಪಿಸಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

₹2,000 ಕೋಟಿ ಆಸ್ತಿ, 3 ಕೋಟಿಗೆ ಡೀಲ್: ಸಾಲದಾತರಿಗೆ...

ಮುಂಬೈನ BKCಯಲ್ಲಿ ₹2,000 ಕೋಟಿ ಬೆಲೆಬಾಳುವ ಪ್ರಾಜೆಕ್ಟ್ ಕೇವಲ ₹3 ಕೋಟಿಗೆ ಅದಾನಿ ಪಾಲು! ಆಸ್ತಿಯ ಮೌಲ್ಯವನ್ನು ‘ಶೂನ್ಯ’ ಎಂದು ಬಿಂಬಿಸಿದ್ದು ಹೇಗೆ? ಕೊರ್ಬಾ ವೆಸ್ಟ್‌ನಲ್ಲಿ ತನ್ನದೇ ಕಂಪನಿಗೆ ತಾನೇ ಮತ ಹಾಕಿಕೊಂಡ...

ದೆಹಲಿಯ ಬಂಧನಗಳು ಮತ್ತು ಮಹಾತ್ಮ ಗಾಂಧಿ

ವ್ಯವಸ್ಥೆಗಳು ದುರ್ಬಲವಾಗುತ್ತಿರುವ ಇಂದಿನ ಕಾಲದಲ್ಲಿ, ಕೋಪಗೊಂಡ ಯುವಕರ ಬೀದಿ ಪ್ರತಿಭಟನೆಗಳೇ ಒಂದು ಹೊಸ ನಿಯಂತ್ರಣ ವ್ಯವಸ್ಥೆಯಾಗಿ ನಿಲ್ಲುತ್ತಿವೆ ಎಂದೆನಿಸುತ್ತದೆ. ಜನರಿಗೆ ಮತದಾನದ ಹಕ್ಕನ್ನು ಮತ್ತೆ ದೊರಕಿಸಿಕೊಡುವುದಕ್ಕೂ ಇಂತಹ ಹೋರಾಟಗಳತ್ತ ಮುಖ ಮಾಡಬೇಕಾಗಿದೆ. ಸಾರ್ವಜನಿಕರು...

ಶಿಕ್ಷಣ ಮಾರಾಟ ಮಾಡಿದ ಶಾಲೆಗಳೇ ಈಗ ಮಾರಾಟಕ್ಕೆ!

ಕರ್ನಾಟಕದಲ್ಲಿ ಖಾಸಗಿ ಶಾಲೆಗಳು ಮುಚ್ಚುವ ಹಂತಕ್ಕೆ ತಲುಪಿದ್ದು, ಮಾರಾಟಕ್ಕೆ ಸಜ್ಜಾಗಿವೆ. ಕೋವಿಡ್-19 ಆಕ್ರಮಣದ ನಂತರದಲ್ಲಿ ಖಾಸಗಿ ಶಾಲೆಗಳಲ್ಲಿ ದಾಖಲಾತಿಯಲ್ಲಿ ಭಾರೀ ಕುಸಿತ, ಪ್ರತಿಷ್ಠಿತ ಶಾಲೆಗಳ ಜೊತೆಗೆ ಪೈಪೋಟಿ, ಮೂಲಭೂತ ಸೌಕರ್ಯಕ್ಕೆ ತಕ್ಕಂತೆ ಲಾಭದ...

“ಚನ್ನಗಿರಿ ವ್ಯಾಪ್ತಿಯಲ್ಲಿ ಸುಮಾರು 10 ಸಾವಿರ ಅನಧಿಕೃತ ಪಂಪ್‌ಸೆಟ್ ಇವೆ. ಆದರೆ ಇದನ್ನು ನಿಯಂತ್ರಿಸುವಲ್ಲಿ ಅಧಿಕಾರಿಗಳ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ” ಎಂದು ಆರೋಪಿಸಿದರು.

“ಜಿಲ್ಲಾಧಿಕಾರಿ ಸಮಿತಿ ರಚನೆ ಮಾಡಿ ಅಧಿಕಾರಿಗಳ ತಂಡ ರಚನೆ ಮಾಡಿದ್ದಾರೆ. ನಾಮಕಾವಸ್ಥೆಗೆ ಒಂದರೆಡು ಪಂಪ್‌ಸೆಟ್ ತೆರವು ಮಾಡಿದ್ದಾರೆ ಅಷ್ಟೇ. ಬೆಸ್ಕಾಂನವರು ಕೂಡ ಚಾನಲ್ ಪಂಪ್‌ಸೆಟ್‌ಗೆ ಕರೆಂಟ್ ನೀಡಿದ್ದಾರೆ. ಇದು ಖಂಡನೀಯ. ಅನಧಿಕೃತ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಸ್ಥಗಿತಗೊಳಿಸಿದರೆ ಕೊನೆ ಭಾಗಕ್ಕೆ ನೀರು ಸಿಗಲಿದೆ. ನಮ್ಮ ವ್ಯಾಪ್ತಿಯಲ್ಲಿ ಹತ್ತು ಸಾವಿರ ಎಕರೆ ನೀರಾವರಿ ಪ್ರದೇಶವಿದೆ. ಅದರಲ್ಲಿ ಎರಡೂವರೆ ಸಾವಿರ ಎಕರೆಗೆ ನೀರು ಸಿಗುತ್ತದೆ ಅಷ್ಟೇ. ಆದರೆ ಪ್ರಸ್ತುತ ನಮ್ಮ ಭಾಗಕ್ಕೆ ನೀರು ತಲುಪುತ್ತಿಲ್ಲ. ನಮ್ಮ ಭಾಗದಲ್ಲೂ ಅಡಕೆ ಇದೆ. ಆದರೆ ನೀರಿಲ್ಲದೇ ಒಣಗಿ ಹೊಗುತ್ತಿವೆ. ನಾವೂ ಕೂಡ ಅಚ್ಚುಕಟ್ಟು ಪ್ರದೇಶದ ವ್ಯಾಪ್ತಿಯ ಒಳಗಿದ್ದೇವೆ. ಹೊರಗಿನವರಿಗೆ ಊಟ ಹಾಕುವ ಬದಲು ಮನೆ ಮಕ್ಕಳಿಗೆ ಮೊದಲು ಊಟ ಹಾಕಿ. ಇಬ್ಬಂದಿ ಧೋರಣೆ ಮಾಡುವುದು ಸರಿಯಲ್ಲ” ಎಂದು ಸಲಹೆ ನೀಡಿದರು.

“ಮುಖ್ಯವಾಗಿ ಚಾನಲ್‌ಗಳಲ್ಲಿ ಅನಧಿಕೃತ ಪಂಪ್‌ಸೆಟ್‌ಗಳನ್ನು ಕಂಟ್ರೋಲ್ ಮಾಡಬೇಕು. ತೆರವು ಕಾರ್ಯಾಚರಣೆಗೆ ಹೋದ ಎಂಜಿನಿಯರ್ ಹಾಗೂ ಪೊಲೀಸರಿಗೆ ಬೆದರಿಕೆ ಹಾಕುವ ಪರಿಸ್ಥಿತಿ ಇದೆ. ಅಧಿಕಾರಿಗಳು ಅಸಹಾಯಕರಾಗಿದ್ದಾರೆ. ನಮ್ಮ ಭಾಗಕ್ಕೆ ಕಳೆದ ಬಾರಿಯೂ ನೀರು ಸಿಗಲಿಲ್ಲ. ಇನ್ನಾದರೂ ಮಂಜೂರಾತಿ ಆಗಿರುವ ಕಡೆ ನೀರಾವರಿ ಸೌಲಭ್ಯ ನೀಡಬೇಕು. ಜಿಲ್ಲಾಧಿಕಾರಿ ಸಭೆ ಮಾಡುತ್ತಿದ್ದಾರೆ, ಅದರ ಪ್ರತಿಫಲ ಮಾತ್ರ ಶೂನ್ಯವಾಗಿದೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಈ ಸುದ್ದಿ ಓದಿದ್ದೀರಾ? ತುಮಕೂರು | ನನ್ನದು ಟೀಕೆ ಟಿಪ್ಪಣಿಯ ರಾಜಕಾರಣವಲ್ಲ, ಅಭಿವೃದ್ಧಿಯ ರಾಜಕಾರಣ: ಮುದ್ದಹನುಮೇಗೌಡ

“ಸರ್ಕಾರ ರೈತರಿಗೆ ಅನ್ಯಾಯವಾಗದಂತೆ ಸರಿಪಡಿಸಬೇಕು. ದಾವಣಗೆರೆ, ಶಿವಮೊಗ್ಗ ಜಿಲ್ಲಾಧಿಕಾರಿಗಳು, ಶಾಸಕರು ಸಚಿವರ ಮುಲಾಜಿಲ್ಲದಂತೆ ನೀರು ತಲುಪಿಸಬೇಕು. ಇಲ್ಲವಾದಲ್ಲಿ ನಾವು ಅರೆಬೆತ್ತಲೆ ಮೆರವಣಿಗೆ ಮೂಲಕ ಪ್ರತಿಭಟನೆ ಮಾಡಲಿದ್ದೇವೆ. ಇನ್ನೆರಡು ದಿನದಲ್ಲಿ ಸರಿ ಮಾಡದಿದ್ದಲ್ಲಿ ಮುಂದಿನ ಹೋರಾಟ ಮಾಡಲಾಗುವುದು” ಎಂದು ಎಚ್ಚರಿಕೆ ನೀಡಿದರು.

ಅಂಗಡಿ ಚಂದ್ರಪ್ಪ, ಎ ಅಂಜಿನಪ್ಪ, ಸುನೀಲ್‌ ಸೇರಿದಂತೆ ಇತರ ರೈತರು ಇದ್ದರು.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೋಲಾರ | ಎಸ್‌ಐಆರ್ ವಿರುದ್ಧದ ಹೋರಾಟ ಹತ್ತಿಕ್ಕಲು ಕೇಂದ್ರ ಸರ್ಕಾರದ ಯತ್ನ: ಖಂಡನೆ

ಎಸ್‌ಐಆರ್‌ ವಿರುದ್ಧ ದೆಹಲಿಯಲ್ಲಿ ಸಿಪಿಐ(ಎಂ), ವಿದ್ಯಾರ್ಥಿ ಹಾಗೂ ಯುವಜನ ಸಂಘಟನೆಗಳು ನಡೆಸುತ್ತಿರುವ...

​ಚಿಂತಾಮಣಿ | ಪದವೀಧರರ ಶಿಕ್ಷಕರ ನಿಜವಾದ ಧ್ವನಿಯಾಗಲು ಸ್ಪರ್ಧೆ;ಯಾವುದೇ ಒತ್ತಡಕ್ಕೂ ಹಿಂದೆ ಸರಿಯಲ್ಲ:ವಕೀಲ ಬರೀದ್

ಆಗ್ನೇಯ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ವಕೀಲ ಬರೀದ್...

ಬಾಗೇಪಲ್ಲಿ | ದೆಹಲಿ ಜಂತರ್ ಮಂತರ್ ನಲ್ಲಿ ನಡೆಯುತ್ತಿರುವ ಪ್ರತಿಭಟನೆಗೆ ಸಿಪಿಐಎಂ ಬೆಂಬಲ

ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ವಿರುದ್ಧದ ಪ್ರತಿಭಟನೆಗೆ ದೇಶದ ವಿವಿಧ...