ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇಂದು ನಡೆದ ಆರ್‌ಸಿಬಿ ಹಾಗೂ ಹೈದರಾಬಾದ್ ನಡುವಿನ ಪಂದ್ಯದಲ್ಲಿ ಬೆಂಗಳೂರು 25 ರನ್‌ಗಳಿಂದ ಸೋಲೊಪ್ಪಿಕೊಂಡಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ್ದ ಪ್ಯಾಟ್ ಕಮ್ಮಿನ್ಸ್ ನೇತೃತ್ವದ ಹೈದರಾಬಾದ್ ತಂಡ, ಆರ್‌ಸಿಬಿಗೆ ಗೆಲ್ಲಲು 288 ರನ್‌ಗಳ ಬೃಹತ್ ಗುರಿ ನೀಡಿತ್ತು.
For the first time ever, both sides cross 250 in an IPL game, but it's the Sunrisers who prevail in this Chinnaswamy run-fest 👏
🔗: https://t.co/VXLGJFVL3t | #IPL2024 | #RCBvsSRH pic.twitter.com/r5akMnIc6K
— ESPNcricinfo (@ESPNcricinfo) April 15, 2024
ಈ ಗುರಿ ಬೆನ್ನತ್ತಿದ ಪಾಫ್ ಡು ಪ್ಲೆಸಿ ನೇತೃತ್ವದ ಆರ್‌ಸಿಬಿ ತಂಡ, ನಿಗದಿತ 20 ಓವರುಗಳಲ್ಲಿ 7 ವಿಕೆಟ್ ಕಳೆದುಕೊಂಡು 262 ರನ್ ಗಳಿಸಲಷ್ಟೇ ಶಕ್ತವಾಯಿತು.
ದಿನೇಶ್ ಕಾರ್ತಿಕ್ ಏಕಾಂಗಿ ಹೋರಾಟ
288 ರನ್‌ಗಳ ಗುರಿಯನ್ನು ಸಾಧಿಸಲು ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಹಾಗೂ ನಾಯಕ ಫಾಫ್ ಡು ಪ್ಲೆಸಿ ಉತ್ತಮ ಆರಂಭ ನೀಡಿದ್ದರು. ಆರ್‌ಸಿಬಿ, ಪವರ್ ಪ್ಲೇ ನಲ್ಲಿ ವಿಕೆಟ್ ನಷ್ಟವಿಲ್ಲದೇ 79 ರನ್ ದಾಖಲಿಸಿತ್ತು.
ಆ ಬಳಿಕ ಕೊಹ್ಲಿ ಔಟ್ ಆಗುತ್ತಿದ್ದಂತೆಯೇ ರನ್ ಗಳಿಸುವುದು ನಿಧಾನಗತಿಯಲ್ಲಿ ಸಾಗಿತು. ನಾಯಕ ಡು ಪ್ಲೆಸಿ ಅರ್ಧಶತಕ ಗಳಿಸಿ ರನ್ ಕಲೆ ಹಾಕುವಲ್ಲಿ ಯಶಸ್ವಿಯಾಗಿ ಮುಂದುವರಿಯುವಾಗ ಪ್ಯಾಟ್ ಕಮ್ಮಿನ್ಸ್ ವಿಕೆಟ್ ಪಡೆಯುವಲ್ಲಿ ಸಫಲರಾದರು. ಔಟ್ ಆಗುವುದಕ್ಕಿಂತ ಮುನ್ನ 28 ಎಸೆತಗಳಲ್ಲಿ 4 ಸಿಕ್ಸರ್ ಹಾಗೂ 7 ಬೌಂಡರಿ ನೆರವಿನಿಂದ 62 ರನ್ ಗಳಿಸಿದರು.
DINESH KARTHIK, YOU MADMAN. 🤯
83 (35) with 5 fours and 7 sixes – an absolute gun innings by DK in the mammoth run chase of 288. The 38 year old put on an exhibition at the Chinnaswamy. This knock will be celebrated for a long time. 🫡❤️ pic.twitter.com/433gDRifRq
— Mufaddal Vohra (@mufaddal_vohra) April 15, 2024
ಆರ್‌ಸಿಬಿ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ವಿಫಲರಾದಾಗ ಕ್ರೀಸ್‌ಗೆ ಬಂದ ದಿನೇಶ್ ಕಾರ್ತಿಕ್ ಏಕಾಂಗಿಯಾಗಿ ಹೋರಾಟ ನಡೆಸಿದರು. ಇವರಿಗೆ ಲೋಮ್‌ರೋರ್ ಸಾಥ್ ನೀಡಿದರಾದರೂ ಹೆಚ್ಚು ರನ್ ಗಳನ್ನು ಕೂಡಿ ಹಾಕಲು ವಿಫಲರಾದರು.
A 1⃣0⃣8⃣m monster! 💥
The bowlers can finally breathe at the Chinnaswamy as the batting carnage comes to an end! 🥶
Recap the match on @StarSportsIndia and @JioCinema 💻📱#TATAIPL | #RCBvSRH pic.twitter.com/lclY9rs2Kf
— IndianPremierLeague (@IPL) April 15, 2024
ಕೊನೆಯವರೆಗೂ ಹೋರಾಡಿದ ದಿನೇಶ್ ಕಾರ್ತಿಕ್, ಕೇವಲ 35 ಎಸೆತಗಳಲ್ಲಿ 7 ಭರ್ಜರಿ ಸಿಕ್ಸರ್ ಹಾಗೂ 5 ಬೌಂಡರಿಯ ನೆರವಿನಿಂದ 83 ರನ್ ಗಳಿಸಿ, ನಟರಾಜನ್ ಎಸೆತದಲ್ಲಿ ವಿಕೆಟ್ ಒಪ್ಪಿಸಿದರು. ಆ ಮೂಲಕ ಆರ್‌ಸಿಬಿಯನ್ನು ಹೀನಾಯ ಸೋಲಿನಿಂದ ಕಾಪಾಡಿದರು. ಕೊನೆಯಲ್ಲಿ ಅನುಜ್ ರಾವತ್ 14 ಎಸೆತಗಳಲ್ಲಿ 25 ರನ್ ಗಳಿಸಿ ಔಟಾಗದೆ ಉಳಿದರು.
ಇಂದಿನ ಪಂದ್ಯದಲ್ಲಿ ಹೈದರಾಬಾದ್ ತಂಡದ 287 ಹಾಗೂ ಆರ್‌ಸಿಬಿಯ 262 ರನ್ ಸೇರಿ ಒಂದೇ ಪಂದ್ಯದಲ್ಲಿ 549 ರನ್ ದಾಖಲಾಯಿತು. ಇದು ಟಿ20 ಇತಿಹಾಸದಲ್ಲಿ ದಾಖಲಾದ ಬೃಹತ್ ಮೊತ್ತವಾಗಿದೆ.
The highest-scoring T20 match of all time 😲
Carnage at the Chinnaswamy!#RCBvSRH | #IPL2024 pic.twitter.com/aVb5hBuJGT
— ESPNcricinfo (@ESPNcricinfo) April 15, 2024
ಹೈದರಾಬಾದ್ ಪರ ಬೌಲಿಂಗ್‌ನಲ್ಲಿ ನಾಯಕ ಪ್ಯಾಟ್ ಕಮ್ಮಿನ್ಸ್ ಮೂರು, ಇಂಪ್ಯಾಕ್ಟ್ ಪ್ಲೇಯರ್ ಆಗಿ ಬಂದ ಮಯಾಂಕ್ ಮಾರ್ಕಾಂಡೆ 2 ಹಾಗೂ ನಟರಾಜನ್ ಒಂದು ವಿಕೆಟ್ ಪಡೆಯುವಲ್ಲಿ ಸಫಲರಾದರು.
