ಬೃಹತ್ ಗುರಿ ಬೆನ್ನಟ್ಟುವಲ್ಲಿ ವಿಫಲವಾದ ಆರ್‌ಸಿಬಿ: ಹೈದರಾಬಾದ್‌ಗೆ 25 ರನ್‌ಗಳ ಜಯ

Date:

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇಂದು ನಡೆದ ಆರ್‌ಸಿಬಿ ಹಾಗೂ ಹೈದರಾಬಾದ್ ನಡುವಿನ ಪಂದ್ಯದಲ್ಲಿ ಬೆಂಗಳೂರು 25 ರನ್‌ಗಳಿಂದ ಸೋಲೊಪ್ಪಿಕೊಂಡಿದೆ.

- Advertisement -

ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ್ದ ಪ್ಯಾಟ್ ಕಮ್ಮಿನ್ಸ್ ನೇತೃತ್ವದ ಹೈದರಾಬಾದ್ ತಂಡ, ಆರ್‌ಸಿಬಿಗೆ ಗೆಲ್ಲಲು 288 ರನ್‌ಗಳ ಬೃಹತ್‌ ಗುರಿ ನೀಡಿತ್ತು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ವಂದೇ ಮಾತರಂ: ರಾಷ್ಟ್ರಗೌರವದ ಸಂಕೇತವೋ, ಚಿತ್ತ ಚದುರಿಸುವ ರಾಜಕೀಯ...

ಭಾರತದ ಯುವಜನತೆಯಲ್ಲಿ ರಾಹುಲ್ ಗಾಂಧಿಯವರ ವರ್ಚಸ್ಸು ಹೆಚ್ಚುತ್ತಿರುವುದನ್ನು ಗಮನಿಸಿ, ಇದೇ ಸಂಸತ್ ಕಲಾಪದಲ್ಲಿ, "ವಂದೇ ಮಾತರಂ" ವಿಷಯವನ್ನು ಮುನ್ನೆಲೆಗೆ ತಂದು, ಯುವಜನತೆಯ ಗಮನವನ್ನು ಬೇರೆಡೆ ಸೆಳೆಯುವ old trick ಮಾಡಲಾಗಿದೆ ಎಂಬುದು ಈ...

ಮುಂಗಾರು ಹಿನ್ನಡೆ, ಹಿಂಗಾರಿಗೆ ಕಂಟಕ: ದೇಶದಲ್ಲಿ 2027ರವರೆಗೆ ಬರಗಾಲದ ಆತಂಕ!

ಪ್ರಕೃತಿಯ ಏರುಪೇರುಗಳನ್ನು ಎದುರಿಸಲು ಸರ್ಕಾರಗಳು ತಕ್ಷಣದ ಆಪತ್ಕಾಲೀನ ಪರಿಹಾರ ಕ್ರಮಗಳಿಗೆ ಸೀಮಿತವಾಗದೆ, ದೀರ್ಘಕಾಲೀನ ಕಾರ್ಯತಂತ್ರಗಳನ್ನು ರೂಪಿಸುವುದು ಅತ್ಯಗತ್ಯ. ಮಣ್ಣಿನ ತೇವಾಂಶ ಸಂರಕ್ಷಣೆ, ನೀರಾವರಿ ವ್ಯಾಪ್ತಿಯ ವೈಜ್ಞಾನಿಕ ವಿಸ್ತರಣೆ, ಹವಾಮಾನ ಬದಲಾವಣೆಗೆ ಸ್ಥಿತಿಸ್ಥಾಪಕತ್ವ ಹೊಂದಿರುವ(Climate-resilient)...

ಕಾಲೇಜು ಕ್ಯಾಂಪಸ್‌ಗಳಲ್ಲಿ ದಲಿತ ವಿದ್ಯಾರ್ಥಿಗಳೇ ಏಕೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ?

‘ದಲಿತ ವಿದ್ಯಾರ್ಥಿಗಳೇ ಏಕೆ ಹೀಗೆ ಸಾಯುತ್ತಿದ್ದಾರೆ?’ — ಇದು ಐಐಟಿ ಬಾಂಬೆಯ ವಿದ್ಯಾರ್ಥಿ ಸಾಹಿಲ್ ವಾಕೋಡೆ ಅವರ ತಾಯಿ ಸೋನಾಲಿ ವಾಕೋಡೆ ಕೇಳಿದ ಪ್ರಶ್ನೆ. ಈ ಪ್ರಶ್ನೆ ಕೇವಲ ಮಗನನ್ನು ಕಳೆದುಕೊಂಡ ತಾಯಿಯ...

ಈ ಗುರಿ ಬೆನ್ನತ್ತಿದ ಪಾಫ್ ಡು ಪ್ಲೆಸಿ ನೇತೃತ್ವದ ಆರ್‌ಸಿಬಿ ತಂಡ, ನಿಗದಿತ 20 ಓವರುಗಳಲ್ಲಿ 7 ವಿಕೆಟ್ ಕಳೆದುಕೊಂಡು 262 ರನ್ ಗಳಿಸಲಷ್ಟೇ ಶಕ್ತವಾಯಿತು.

ದಿನೇಶ್ ಕಾರ್ತಿಕ್ ಏಕಾಂಗಿ ಹೋರಾಟ

288 ರನ್‌ಗಳ ಗುರಿಯನ್ನು ಸಾಧಿಸಲು ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಹಾಗೂ ನಾಯಕ ಫಾಫ್ ಡು ಪ್ಲೆಸಿ ಉತ್ತಮ ಆರಂಭ ನೀಡಿದ್ದರು. ಆರ್‌ಸಿಬಿ, ಪವರ್ ಪ್ಲೇ ನಲ್ಲಿ ವಿಕೆಟ್ ನಷ್ಟವಿಲ್ಲದೇ 79 ರನ್ ದಾಖಲಿಸಿತ್ತು.

ಆ ಬಳಿಕ ಕೊಹ್ಲಿ ಔಟ್ ಆಗುತ್ತಿದ್ದಂತೆಯೇ ರನ್ ಗಳಿಸುವುದು ನಿಧಾನಗತಿಯಲ್ಲಿ ಸಾಗಿತು. ನಾಯಕ ಡು ಪ್ಲೆಸಿ ಅರ್ಧಶತಕ ಗಳಿಸಿ ರನ್ ಕಲೆ ಹಾಕುವಲ್ಲಿ ಯಶಸ್ವಿಯಾಗಿ ಮುಂದುವರಿಯುವಾಗ ಪ್ಯಾಟ್ ಕಮ್ಮಿನ್ಸ್ ವಿಕೆಟ್ ಪಡೆಯುವಲ್ಲಿ ಸಫಲರಾದರು. ಔಟ್ ಆಗುವುದಕ್ಕಿಂತ ಮುನ್ನ 28 ಎಸೆತಗಳಲ್ಲಿ 4 ಸಿಕ್ಸರ್ ಹಾಗೂ 7 ಬೌಂಡರಿ ನೆರವಿನಿಂದ 62 ರನ್ ಗಳಿಸಿದರು.

ಆರ್‌ಸಿಬಿ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ವಿಫಲರಾದಾಗ ಕ್ರೀಸ್‌ಗೆ ಬಂದ ದಿನೇಶ್ ಕಾರ್ತಿಕ್ ಏಕಾಂಗಿಯಾಗಿ ಹೋರಾಟ ನಡೆಸಿದರು. ಇವರಿಗೆ ಲೋಮ್‌ರೋರ್ ಸಾಥ್ ನೀಡಿದರಾದರೂ ಹೆಚ್ಚು ರನ್ ಗಳನ್ನು ಕೂಡಿ ಹಾಕಲು ವಿಫಲರಾದರು.

ಕೊನೆಯವರೆಗೂ ಹೋರಾಡಿದ ದಿನೇಶ್ ಕಾರ್ತಿಕ್, ಕೇವಲ 35 ಎಸೆತಗಳಲ್ಲಿ 7 ಭರ್ಜರಿ ಸಿಕ್ಸರ್ ಹಾಗೂ 5 ಬೌಂಡರಿಯ ನೆರವಿನಿಂದ 83 ರನ್ ಗಳಿಸಿ, ನಟರಾಜನ್ ಎಸೆತದಲ್ಲಿ ವಿಕೆಟ್ ಒಪ್ಪಿಸಿದರು. ಆ ಮೂಲಕ ಆರ್‌ಸಿಬಿಯನ್ನು ಹೀನಾಯ ಸೋಲಿನಿಂದ ಕಾಪಾಡಿದರು. ಕೊನೆಯಲ್ಲಿ ಅನುಜ್ ರಾವತ್ 14 ಎಸೆತಗಳಲ್ಲಿ 25 ರನ್ ಗಳಿಸಿ ಔಟಾಗದೆ ಉಳಿದರು.

ಇಂದಿನ ಪಂದ್ಯದಲ್ಲಿ ಹೈದರಾಬಾದ್ ತಂಡದ 287 ಹಾಗೂ ಆರ್‌ಸಿಬಿಯ 262 ರನ್ ಸೇರಿ ಒಂದೇ ಪಂದ್ಯದಲ್ಲಿ 549 ರನ್ ದಾಖಲಾಯಿತು. ಇದು ಟಿ20 ಇತಿಹಾಸದಲ್ಲಿ ದಾಖಲಾದ ಬೃಹತ್ ಮೊತ್ತವಾಗಿದೆ.

ಹೈದರಾಬಾದ್ ಪರ ಬೌಲಿಂಗ್‌ನಲ್ಲಿ ನಾಯಕ ಪ್ಯಾಟ್ ಕಮ್ಮಿನ್ಸ್ ಮೂರು, ಇಂಪ್ಯಾಕ್ಟ್ ಪ್ಲೇಯರ್ ಆಗಿ ಬಂದ ಮಯಾಂಕ್ ಮಾರ್ಕಾಂಡೆ 2 ಹಾಗೂ ನಟರಾಜನ್ ಒಂದು ವಿಕೆಟ್ ಪಡೆಯುವಲ್ಲಿ ಸಫಲರಾದರು.

WhatsApp Image 2025 11 17 at 3.21.38 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಚಿನ್ ಐತಿಹಾಸಿಕ ದಾಖಲೆ ಮುರಿದ ಜಿಂಬಾಬ್ವೆಯ ಬ್ರೆಂಡನ್ ಟೇಲರ್

ಜಿಂಬಾಬ್ವೆ ರಾಷ್ಟ್ರೀಯ ಕ್ರಿಕೆಟ್ ತಂಡದ ಅತ್ಯಂತ ಹಿರಿಯ ವಿಕೆಟ್ ಕೀಪರ್ ಹಾಗೂ...

​’ಇಮ್ರಾನ್ ಜೈಲಿನಲ್ಲೇ ಕೊನೆಯುಸಿರೆಳೆಯಬಹುದು’: ಆಸ್ಟ್ರೇಲಿಯಾದ 7 ಮಾಜಿ ನಾಯಕರ ತೀವ್ರ ಆತಂಕ

ಪಾಕಿಸ್ತಾನದ ಮಾಜಿ ಪ್ರಧಾನಿ ಹಾಗೂ 1992ರ ವಿಶ್ವಕಪ್ ವಿಜೇತ ನಾಯಕ ಇಮ್ರಾನ್...

ವಿಶ್ವ ಚಾಂಪಿಯನ್ ಶಿಪ್ ಟ್ರಯಲ್ಸ್ ಸ್ಪರ್ಧೆಗೆ ವಿನೇಶ್ ಪೋಗಟ್’ಗೆ ದೆಹಲಿ ಹೈಕೋರ್ಟ್ ನಕಾರ

ದೆಹಲಿಯಲ್ಲಿ ನಡೆಯಲಿರುವ ಮುಂಬರುವ ವಿಶ್ವ ಕುಸ್ತಿ ಚಾಂಪಿಯನ್‌ಶಿಪ್‌ನ ಆಯ್ಕೆ ಟ್ರಯಲ್ಸ್‌ನಲ್ಲಿ (Trials)...

ದುಲೀಪ್ ಟ್ರೋಫಿ ಫೈನಲ್: 13 ವರ್ಷಗಳ ನಂತರ ಚಾಂಪಿಯನ್ ಪಟ್ಟ ಅಲಂಕರಿಸಿದ ಪೂರ್ವ ವಲಯ

ದೇಶೀಯ ಕ್ರಿಕೆಟ್‌ನ ಪ್ರತಿಷ್ಠಿತ ಟೂರ್ನಿಗಳಲ್ಲಿ ಒಂದಾದ 'ದುಲೀಪ್ ಟ್ರೋಫಿ 2026'ರ ಫೈನಲ್...