ಈದಿನ.ಕಾಮ್ ಸಮೀಕ್ಷೆ-5: ಸರ್ಕಾರದ ಯೋಜನೆಗಳ ʼಫಲʼ ಬಿಜೆಪಿಗೆ ಸಿಗದು; ಕಾಂಗ್ರೆಸ್‌ನ ಗ್ಯಾರಂಟಿಗಳಿಗೆ ಇನ್ನೂ ಇಲ್ಲ ಗ್ಯಾರಂಟಿ

Date:

Advertisements

ಹಲವು ಚುನಾವಣೆಗಳಲ್ಲಿ ಬಿಜೆಪಿಗೆ ಫಲ ನೀಡಿದ್ದ ‘ಫಲಾನುಭವಿ’ಗಳ ದಾಳ ಕರ್ನಾಟಕದಲ್ಲಿ ಯಶಸ್ಸು ನೀಡುವ ಸಾಧ್ಯತೆ ಕಡಿಮೆ. ಇನ್ನೊಂದೆಡೆ, ಕಾಂಗ್ರೆಸ್‌ ಸಹಾ ತನ್ನ ‘ಗ್ಯಾರಂಟಿ’ ಬಗ್ಗೆ ಜನರಲ್ಲಿ ಪೂರ್ಣ ವಿಶ್ವಾಸ ಮೂಡಿಸುವ ಕೆಲಸ ಮಾಡಿಲ್ಲ ಎಂಬುದು ಸ್ಪಷ್ಟವಾಗಿದೆ.

ಮೊದಲಿಗೆ ಈ ಸಮೀಕ್ಷೆ ಏನೆಂದು ಅರಿಯಲು ಈ ವರದಿ ಓದಿ: ಚುನಾವಣೆ 2023: ಕರ್ನಾಟಕ ವಿಧಾನಸಭಾ ಚುನಾವಣೆಯ ಅತಿ ದೊಡ್ಡ ಸಮೀಕ್ಷೆ ‘ಈ ದಿನ.ಕಾಮ್‌’ನ ಸಮೀಕ್ಷೆ

ದೇಶದ ಕೆಲವು ರಾಜ್ಯಗಳಲ್ಲಿ ಬಿಜೆಪಿಯು ಆಡಳಿತ ವಿರೋಧಿ ಅಲೆಯನ್ನು ಸರ್ಕಾರದ ಕೆಲವು ಜನಪ್ರಿಯ ಯೋಜನೆಗಳಿಂದ ಪ್ರಯೋಜನ ಪಡೆದ ‘ಫಲಾನುಭವಿಗಳಿಗೆʼ ಅದನ್ನು ಮತ್ತೆ ಮತ್ತೆ ನೆನಪಿಸುವ ಮೂಲಕ ನಿವಾರಿಸಿಕೊಂಡಿತ್ತು. ಎರಡು ಕಾರಣಗಳಿಂದ ಇದು ಕರ್ನಾಟಕದಲ್ಲಿ ಫಲ ನೀಡುವ ಸಾಧ್ಯತೆ ಕಡಿಮೆ ಎಂದು ತೋರುತ್ತದೆ.

Advertisements

ಎ) ಕರ್ನಾಟಕದಲ್ಲಿ ಕೇಂದ್ರ ಸರ್ಕಾರದ ಯೋಜನೆಗಳಿಂದ ಪ್ರಯೋಜನ ಪಡೆದಿದ್ದೀರಾ ಎಂಬ ಪ್ರಶ್ನೆಗೆ 35% ಜನರು ಯಾವುದೇ ಯೋಜನೆ ತಮಗೆ ತಲುಪಿಲ್ಲ ಎಂದಿದ್ದಾರೆ. ಪಿಎಂ ಕಿಸಾನ್‌ ಯೋಜನೆ, ಆಯುಷ್ಮಾನ್‌ ಭಾರತ್‌ ಮತ್ತು ಉಜ್ವಲ ಗ್ಯಾಸ್‌ ಯೋಜನೆಗಳಿಂದ ಲಾಭ ಪಡೆದವರು (ಪ್ರತಿಕ್ರಿಯೆ ನೀಡಿದವರಲ್ಲಿ) ಕ್ರಮವಾಗಿ 21%, 21% ಮತ್ತು 23% ಮಾತ್ರ.

table 1

ಅದಕ್ಕಿಂತ ಮುಖ್ಯವಾಗಿ, ಸದರಿ ಯೋಜನೆಗಳ ಫಲಾನುಭವಿಗಳಾಗಬಹುದಾಗಿದ್ದ ಜನರಲ್ಲಿ ಈ ಯೋಜನೆಗಳಿಂದ ಅನುಕೂಲ ಪಡೆದವರ ಸಂಖ್ಯೆ ಬಹಳ ಕಡಿಮೆಯಿದೆ. ಉದಾಹರಣೆಗೆ ಪಿಎಂ ಕಿಸಾನ್‌ ಯೋಜನೆಯ ಅನುಕೂಲ ಪಡೆದಿದ್ದೇವೆ ಎಂದು ಹೇಳಿದ ರೈತರು 33% ಮಾತ್ರ ಆಗಿದ್ದಾರೆ.

table 2

ಈ ಸಮೀಕ್ಷಾ ವರದಿಯನ್ನೂ ಓದಿ: ಚುನಾವಣೆ 2023 | ಈದಿನ.ಕಾಮ್‌ ಸಮೀಕ್ಷೆ-3: ಭ್ರಷ್ಟಾಚಾರ, ಅಸಮರ್ಥತೆಯೇ ತಿರಸ್ಕಾರಕ್ಕೆ ಪ್ರಧಾನ ಕಾರಣ

ಬಿ) ರಾಜ್ಯ ಸರ್ಕಾರದ ಯೋಜನೆಗಳ ವಿಷಯಕ್ಕೆ ಬಂದರೆ, ಪ್ರಸ್ತುತ ಬಿಜೆಪಿ ಸರ್ಕಾರ ಪ್ರಾರಂಭಿಸಿದ ಯಾವುದೇ ಯೋಜನೆಯನ್ನು ಹೆಸರಿಸಲೂ ಮತದಾರರಿಗೆ ಸಾಧ್ಯವಾಗಲಿಲ್ಲ.

table 3

ಕಾಂಗ್ರೆಸ್‌ ಗ್ಯಾರಂಟಿಯೂ ಪೂರ್ಣ ಮತ ತಂದುಕೊಡುವ ಗ್ಯಾರಂಟಿಯಿಲ್ಲ.

ಮತದಾರರಿಗೆ ನಾಲ್ಕು ದೊಡ್ಡ ‘ಗ್ಯಾರಂಟಿ’ಗಳನ್ನು (ಭರವಸೆ) ನೀಡುವ ಮೂಲಕ ಕಾಂಗ್ರೆಸ್ ಈ ನಿರ್ವಾತದ ಲಾಭವನ್ನು ಪಡೆಯಲು ಪ್ರಯತ್ನಿಸುತ್ತಿದೆ. ಪ್ರಸ್ತುತ ಸಮೀಕ್ಷೆಯು ಈ ನಾಲ್ಕರ ಪೈಕಿ ಎರಡು ಗ್ಯಾರಂಟಿಗಳಿಗೆ ಮತದಾರರ ಪ್ರತಿಕ್ರಿಯೆಯೇನು ಎಂಬುದನ್ನು ಪರಿಶೀಲಿಸಿತು. ಇಲ್ಲಿ ಕಾಂಗ್ರೆಸ್‌ನ ಎರಡು ಸಮಸ್ಯೆಗಳು ಸಮೀಕ್ಷೆಯಲ್ಲಿ ಗಮನಕ್ಕೆ ಬಂದವು.

ಎ) ಸುಮಾರು ಮೂರನೇ ಒಂದು ಭಾಗದಷ್ಟು ಮತದಾರರಿಗೆ, ವಿಶೇಷವಾಗಿ ಯಾರನ್ನು ಉದ್ದೇಶಿಸಿ ಈ ಘೋಷಣೆಗಳನ್ನು ಮಾಡಲಾಗಿದೆಯೋ ಆ ಸಮುದಾಯಗಳ ಮತದಾರರಲ್ಲಿ ಗಣನೀಯ ಪ್ರಮಾಣದ ಜನರಿಗೆ ಈ ಘೋಷಣೆಗಳ ಬಗ್ಗೆ ಮಾಹಿತಿಯೇ ಇಲ್ಲ.

ಬಿ) ಯೋಜನೆಗಳ ಬಗ್ಗೆ ಮಾಹಿತಿ ಇರುವವರ ಪೈಕಿ ಅರ್ಧದಷ್ಟು ಮಂದಿಯು ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ತನ್ನ ಭರವಸೆಗಳನ್ನು ಕಾರ್ಯಗತಗೊಳಿಸುತ್ತದೆ ಎಂದು ನಂಬಿಲ್ಲ. ಅಂದರೆ ತನ್ನ ಸಂಭಾವ್ಯ ಮತದಾರರ ಮನವೊಲಿಸುವ ಸವಾಲನ್ನು ಕಾಂಗ್ರೆಸ್ ಎದುರಿಸುತ್ತಿದೆ.

table 4
table 5

ಈ ಸಮೀಕ್ಷಾ ವರದಿಯನ್ನೂ ಓದಿ: ಚುನಾವಣೆ 2023 | ಈದಿನ.ಕಾಮ್‌ ಸಮೀಕ್ಷೆ-4: ಭ್ರಷ್ಟಾಚಾರವೇ ಚುನಾವಣೆಯ ಪ್ರಧಾನ ಸಂಗತಿ

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

1 COMMENT

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕಾಂಗ್ರೆಸ್‌ ಕೈ ಜಾರಿದ ರಾಜಸ್ಥಾನ- ವಾಡಿಕೆ ತಪ್ಪಿಸದೆ ಪಕ್ಷ ಬದಲಿಸಿದ ಮತದಾರರು

ರಾಜಸ್ಥಾನದಲ್ಲಿ ಪ್ರತಿ ಅವಧಿಗೂ ಸರ್ಕಾರ ಬದಲಾಯಿಸುವ ರೂಢಿಯಿದೆ ಹಾಲಿ ಚುನಾವಣೆಯಲ್ಲಿ...

ತೆಲಂಗಾಣ ಫಲಿತಾಂಶ: ಕೆಸಿಆರ್ ಸರ್ವಾಧಿಕಾರಕ್ಕೆ ಏಟು; ಕಾಂಗ್ರೆಸ್ ಗ್ಯಾರಂಟಿಗಳಿಗೆ ಓಟು

2014ರಿಂದಲೂ ಕಾಂಗ್ರೆಸ್ ತೆಲಂಗಾಣದ ಗದ್ದುಗೆ ಮೇಲೆ ಕಣ್ಣಿಟ್ಟಿತ್ತು. ಈ ಬಾರಿ ಕರ್ನಾಟಕದಲ್ಲಿ...

ರಾಜಸ್ಥಾನ | ಬಿಜೆಪಿ ವಿರುದ್ಧ ಬಂಡಾಯವೆದ್ದ 26 ವರ್ಷದ ಸ್ವತಂತ್ರ ಅಭ್ಯರ್ಥಿಗೆ ಭಾರಿ ಮುನ್ನಡೆ

ರಾಜಸ್ಥಾನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಬಂಡಾಯವೆದ್ದು ಸ್ಪರ್ಧಿಸಿದ್ದ ಅಭ್ಯರ್ಥಿಯೊಬ್ಬರು ಭಾರಿ...

ರಾಜಸ್ಥಾನ | ಬಿಜೆಪಿ ಮುನ್ನಡೆ ಕಾಯ್ದುಕೊಂಡಂತೆ ಸಿಎಂ ಸ್ಥಾನಕ್ಕೆ ಮೂವರ ಪೈಪೋಟಿ!

ರಾಜಸ್ಥಾನ ರಾಜ್ಯದ 199 ವಿಧಾನಸಭಾ ಕ್ಷೇತ್ರಗಳ ಪೈಕಿ ಮಧ್ಯಾಹ್ನ 12 ಗಂಟೆ...

Download Eedina App Android / iOS

X