ದಾಸರಹಳ್ಳಿ ಕ್ಷೇತ್ರ | ಜೆಡಿಎಸ್‌, ಬಿಜೆಪಿಯ ಗಟ್ಟಿನೆಲೆಯಲ್ಲಿ ಕಾಂಗ್ರೆಸಿಗೆ ಭರವಸೆ!

Date:

Advertisements
  • ಎರಡು ಬಾರಿ ಬಿಜೆಪಿ, ಪ್ರಸ್ತುತ ಜೆಡಿಎಸ್‌ ಶಾಸಕ ಪ್ರತಿನಿಧಿಸುವ ಕ್ಷೇತ್ರ
  • ಕ್ಷೇತ್ರದ ಚಿತ್ರಣ ಗಮನಿಸಿದರೆ ಮೇಲ್ನೋಟಕ್ಕೆ ತ್ರಿಕೋನ ಸ್ಪರ್ಧೆಯ ಕಾವು  

ದಾಸರಹಳ್ಳಿ ವಿಧಾನಸಭಾ ಕ್ಷೇತ್ರ ದಕ್ಷಿಣ ಏಷ್ಯಾದಲ್ಲಿಯೇ ಅತಿ ದೊಡ್ಡ ಕೈಗಾರಿಕಾ ಪ್ರದೇಶ ಪೀಣ್ಯವನ್ನು ಹೊಂದಿರುವ ಹೆಗ್ಗಳಿಕೆಗೆ ಪಾತ್ರವಾಗಿದೆ. ಬೆಂಗಳೂರಿನ ವಿವಿಧಡೆಯಿಂದ ಈ ಪ್ರದೇಶಕ್ಕೆ ಬರುವ ಸಾವಿರಾರು ಉದ್ಯೋಗಿಗಳಿಗೆ ಬದುಕು ಕಟ್ಟಿಕೊಂಡಿರುವ ಕ್ಷೇತ್ರವಿದು.

ಹೊರ ರಾಜ್ಯಗಳ ಜನರೂ ಒಳಗೊಂಡು ಕರ್ನಾಟಕದ 22ಕ್ಕೂ ಹೆಚ್ಚು ಜಿಲ್ಲೆಗಳ 9 ಲಕ್ಷಕ್ಕೂ ಅಧಿಕ ಮಂದಿ ಈ ಕ್ಷೇತ್ರದಲ್ಲಿ ವಾಸವಾಗಿದ್ದಾರೆ. ಹಿಂದೆ ಇದು ಪೀಣ್ಯ ದಾಸರಹಳ್ಳಿ ಮುನ್ಸಿಪಲ್ ಕೌನ್ಸಿಲ್ ಆಗಿತ್ತು. ನಂತರ ಬೆಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಗೆ ಬಂತು. 2008ರ ವಿಧಾನಸಭಾ ಕ್ಷೇತ್ರ ಪುನರ್ ವಿಂಗಡಣೆಯ ವೇಳೆಯಲ್ಲಿ ದಾಸರಹಳ್ಳಿ ಕ್ಷೇತ್ರವಾಯಿತು. ಈ ಮೊದಲು ಇದು ಅತೀ ದೊಡ್ಡ ವಿಧಾನಸಭಾ ಕ್ಷೇತ್ರವಾದ ಉತ್ತರಹಳ್ಳಿ ವ್ಯಾಪ್ತಿಗೆ ಸೇರಿತ್ತು. ನಗರ ಪ್ರದೇಶದ ಜೊತೆ ಸುತ್ತಲಿನ ಹತ್ತು ಹಳ್ಳಿಗಳನ್ನು ಈ ಕ್ಷೇತ್ರ ಒಳಗೊಂಡಿದೆ.

2023ರ ಈ ಬಾರಿಯ ಚುನಾವಣೆಯಲ್ಲಿ ದಾಸರಹಳ್ಳಿಯಲ್ಲಿ ಜೆಡಿಎಸ್ ಮತ್ತು ಬಿಜೆಪಿ ಪಕ್ಷಗಳು ಕಳೆದ ಬಾರಿಯ ಹಾಲಿ ಅಭ್ಯರ್ಥಿಗಳಿಗೆ ಟಿಕೆಟ್ ನೀಡಿವೆ. ಕಾಂಗ್ರೆಸ್ ಮಾತ್ರ ಪ್ರತಿಸಲದಂತೆ ಈ ಬಾರಿಯೂ ಹೊಸ ಮುಖಕ್ಕೆ ಮಣೆ ಹಾಕಿದೆ. ಜೆಡಿಎಸ್‌ನಿಂದ ಶಾಸಕ ಆರ್‌ ಮಂಜುನಾಥ್ ಕಣಕ್ಕಿಳಿದರೆ, ಮಾಜಿ ಶಾಸಕ ಪಿ ಮುನಿರಾಜು ಬಿಜೆಪಿಯಿಂದ ನಾಲ್ಕನೇ ಬಾರಿ ಸ್ಪರ್ಧಿಸಿದ್ದಾರೆ. ಕಾಂಗ್ರೆಸಿನಿಂದ ಮೊದಲ ಬಾರಿಗೆ ಟಿಕೆಟ್ ಪಡೆದುಕೊಂಡಿರುವ ಸ್ಥಳೀಯ ಮುಖಂಡ ಜಿ ಧನಂಜಯ ಇವರಿಬ್ಬರಿಗೂ ಸವಾಲು ನೀಡಿ ಚುನಾವಣೆ ಎದುರಿಸಬೇಕಿದೆ.

Advertisements

ಈ ಸುದ್ದಿ ಓದಿದ್ದೀರಾ? ರಾಜರಾಜೇಶ್ವರಿ ನಗರ ವಿಧಾನಸಭೆ ಕ್ಷೇತ್ರ | ಒಕ್ಕಲಿಗರ ಕೋಟೆಯಲ್ಲಿ ಅನ್ಯ ಭಾಷಿಕರೆ ಗೆಲುವಿನ ನಿರ್ಣಾಯಕರು

ಹಾಗೆ ನೋಡಿದರೆ ಕಾಂಗ್ರೆಸ್ ಅಭ್ಯರ್ಥಿ ಧನಂಜಯಗೆ ಇದು ಮೊದಲ ಚುನಾವಣೆ. ಜೆಡಿಎಸ್‌ನ ಮಂಜುನಾಥ್ ಈಗಾಗಲೇ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದರೆ, ಬಿಜೆಪಿಯ ಮುನಿರಾಜ್‌ ಎರಡು ಬಾರಿ ಶಾಸಕರಾಗಿದ್ದಾರೆ. ಒಂದೆರಡು ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಿರುವ ಧನಂಜಯ ಅವರ ತಂದೆ ಗಂಗಾಧರಯ್ಯ ನಗರಸಭೆ ಚುನಾವಣೆಗಳಲ್ಲಿ ಸ್ಪರ್ಧಿಸಿ ಸ್ಥಳೀಯರ ನಾಡಿಮಿಡಿತವನ್ನು ಅರಿತು, ರಾಜಕಾರಣಿ ಎನಿಸಿಕೊಂಡವರು.

ಸ್ಥಳೀಯರೊಂದಿಗೆ ಹೆಚ್ಚು ಸಕ್ರಿಯವಾಗಿರುವ ತೆನೆ ಪಕ್ಷದ ಮಂಜುನಾಥ್ ಹಾಗೂ ರಾಜಕೀಯವಾಗಿ ಹೆಚ್ಚು ಪ್ರಭಾವ ಹೊಂದಿರುವ ಬಿಜೆಪಿಯ ಪಿ ಮುನಿರಾಜು ಅವರೊಂದಿಗೂ ಕಾಂಗ್ರೆಸ್ ಅಭ್ಯರ್ಥಿ ಸ್ಪರ್ಧಿಸಬೇಕಿದೆ. ಮೇಲ್ನೋಟಕ್ಕೆ ತ್ರಿಕೋನ ಸ್ಪರ್ಧೆಯಂತೆ ಕಂಡರೂ ಜೆಡಿಎಸ್ ಹಾಗೂ ಬಿಜೆಪಿ ನೇರ ಹಣಾಹಣಿ ನಡೆಯಲಿದೆ ಎನ್ನುತ್ತಾರೆ ಇಲ್ಲಿನ ಜನರು. ಆದರೆ ಅಂತಿಮ ತೀರ್ಮಾನ ನಿರ್ಧಾರವಾಗುವುದು ಮೇ 10 ರಂದು.

ಕ್ಷೇತ್ರ ಪುನರ್‌ ವಿಂಗಡಣೆ ನಂತರ 2008ರ ಮೊದಲ ಚುನಾವಣೆಯಲ್ಲಿ ವ್ಯಾಪಾರದ ಹಿನ್ನೆಲೆ ಹೊಂದಿದ್ದ ಎಸ್ ಮುನಿರಾಜು ಕಾಂಗ್ರೆಸಿನ ಕೆ ಸಿ ಅಶೋಕ ವಿರುದ್ಧ 22,155 ಮತಗಳ ಅಂತರದಿಂದ ಗೆಲ್ಲುವುದರ ಮೂಲಕ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾಗಿದ್ದರು. 2013ರ ಚುನಾವಣೆಯಲ್ಲಿ ಎಸ್ ಮುನಿರಾಜು ಕಾಂಗ್ರೆಸಿನ ಹಿರಿಯ ರಾಜಕಾರಣಿ, ಮಾಜಿ ಸಭಾಪತಿ ಬಿ ಎಲ್ ಶಂಕರ್ ಅವರನ್ನು 10,828 ಮತಗಳ ಅಂತರದಿಂದ ಸೋಲಿಸಿ ಪುನರಾಯ್ಕೆಯಾದರು. 2018ರಲ್ಲಿ ಮುನಿರಾಜು ಹ್ಯಾಟ್ರಿಕ್ ಕನಸಿಗೆ ಭೂ ಹಗರಣ ಸೇರಿದಂತೆ ಹಲವು ಹಗರಣಗಳು ಅಡ್ಡಿಯಾದವು. ಮಾಜಿ ಮುಖ್ಯಮಂತ್ರಿ ಎಸ್‌ ಎಂ ಕೃಷ್ಣ ಅವರ ಗನ್‌ ಮ್ಯಾನ್‌ ಆಗಿ ಸರ್ಕಾರಿ ಕೆಲಸದಿಂದ ನಿವೃತ್ತಿ ಪಡೆದು ರಾಜಕೀಯ ಪ್ರವೇಶಿಸಿದ್ದ ಆರ್ ಮಂಜುನಾಥ್ ಅವರಿಗೆ ಕ್ಷೇತ್ರದ ಜನತೆ ಗೆಲುವು ನೀಡಿತು.

ಈ ಬಾರಿ ಮಂಜುನಾಥ್ ಅವರಿಗೂ ಗೆಲುವು ಅಷ್ಟು ಸುಲಭವಾಗಿಲ್ಲ. ಕ್ಷೇತ್ರದಲ್ಲಿ ಹಲವು ಸಮಸ್ಯೆಗಳು ಹಾಸು ಹೊದ್ದಿವೆ. ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಸರ್ಕಾರ ಇದ್ದಾಗ ಆಗಿನ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ದಾಸರಹಳ್ಳಿ ಕ್ಷೇತ್ರಕ್ಕೆ ಸುಮಾರು 700 ಕೋಟಿ ರೂ. ಅನುದಾನ ನೀಡಿದ್ದರು. ನಂತರ ಬಂದ ಬಿಜೆಪಿ ಸರ್ಕಾರ ಅನುದಾನವನ್ನು ತಡೆ ಹಿಡಿದಿತ್ತು. ಈ ಬಗ್ಗೆ ಸ್ಥಳೀಯ ಜನತೆಯಲ್ಲೂ ಒಂದಿಷ್ಟು ಕೋಪವಿದೆ. 2018ರಿಂದ ಚುನಾವಣೆಯಲ್ಲಿ ಸೋತ ನಂತರ ಬಿಜೆಪಿಯ ಪಿ ಮುನಿರಾಜು ಕ್ಷೇತ್ರದತ್ತ ಮುಖ ಮಾಡಿಲ್ಲ. ಆಡಳಿತ ವಿರೋಧಿ ಅಲೆಯ ಜೊತೆ ಈ ಸಿಟ್ಟು ಕೂಡ ಮತದಾರರಲ್ಲಿದೆ.

ಕ್ಷೇತ್ರದ ಸಮಸ್ಯೆಗಳು

ಅಸಂಖ್ಯಾತ ಜನರಿಗೆ ಉದ್ಯೋಗ ಕೊಟ್ಟಿರುವ ಕೈಗಾರಿಕಾ ಪ್ರದೇಶ ಸಮಸ್ಯೆಗಳಿಂದ ಮಾತ್ರ ಮುಕ್ತವಾಗಿಲ್ಲ. ಇಲ್ಲಿನ ನಿವಾಸಿಗಳು ಉತ್ತಮ ಸರ್ಕಾರಿ ಆಸ್ಪತ್ರೆಗಳ ಕೊರತೆ, ಉದ್ಯಾನವನಗಳು ಮತ್ತು ಟ್ರಾಫಿಕ್ ಅಡೆತಡೆಗಳನ್ನು ಪ್ರಮುಖ ಚುನಾವಣಾ ಸಮಸ್ಯೆಗಳಾಗಿ ಪಟ್ಟಿ ಮಾಡಿದ್ದಾರೆ. ಪೌರಕಾರ್ಮಿಕ ಕಾಮಗಾರಿಗಳೂ ನಡೆಯುತ್ತಿಲ್ಲ ಹಾಗೂ ರಾಜಕಾರಣಿಗಳ ನಡುವಿನ ಘರ್ಷಣೆಯಿಂದ ಅನುದಾನವನ್ನು ತಡೆಹಿಡಿಯಲಾಗಿದೆ ಎಂದು ದೂರುತ್ತಾರೆ.

ದಾಸರಹಳ್ಳಿ ಬಿಬಿಎಂಪಿಗೆ ಸೇರ್ಪಡೆಗೊಂಡ ನಂತರ ಕ್ಷೇತ್ರದ ಚಿತ್ರಣ ಬದಲಾದರೂ ಜನರ ಕನಿಷ್ಠ ನಿರೀಕ್ಷೆಗಳನ್ನು ಈಡೇರಿಸಲಾಗಿಲ್ಲ. ಕಿರಿದಾದ ರಸ್ತೆಗಳಿಂದ ಪಾದಚಾರಿಗಳು, ವಾಹನ ಸವಾರರು ಸಂಚಾರ ದಟ್ಟಣೆಯಿಂದ ನಿತ್ಯ ತೊಂದರೆ ಪಡಬೇಕಿದೆ. ಕುಡಿಯುವ ನೀರಿನ ಸಮಸ್ಯೆ ಪ್ರತಿ ಬೇಸಿಗೆಯಲ್ಲಿ ತಾಂಡವವಾಡುತ್ತದೆ. ಒಳಚರಂಡಿ ಸಮಸ್ಯೆಗಳಿಗೆ ಪರಿಹಾರ ಸಿಕ್ಕಿಲ್ಲ.

ಜಾತಿವಾರು ಪ್ರಾಬಲ್ಯ

ದಾಸರಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು ಮತದಾರರ ಸಂಖ್ಯೆ 4,37 ಲಕ್ಷ. ಈ ಪೈಕಿ 1,70,000 ಒಕ್ಕಲಿಗರು. ಈ ಕಾರಣದಿಂದಲೇ ಮೂರು ಪಕ್ಷಗಳು ಒಕ್ಕಲಿಗರಿಗೆ ಟಿಕೆಟ್ ನೀಡಿವೆ. ಇನ್ನುಳಿದಂತೆ ಲಿಂಗಾಯತರು 43,000, ಪರಿಶಿಷ್ಟ ಜಾತಿ ಮತ್ತು ಪಂಗಡ 90,000, ಬ್ರಾಹ್ಮಣರು 25,000, ಒಬಿಸಿ 80,000 ಹಾಗೂ ಇತರೇ ಭಾಷಿಕರು 29,000 ಇದ್ದಾರೆ.

blank profile picture 973460 640
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಾವಣಗೆರೆ | ಪರಿಶಿಷ್ಟ ಜಾತಿ ಒಳಮೀಸಲಾತಿ; ಅಲೆಮಾರಿಗಳಿಗೆ ಅನ್ಯಾಯ ವಿರೋಧಿಸಿ ಪ್ರತಿಭಟನೆ

""ಒಳ ಮೀಸಲಾತಿ ಹಂಚಿಕೊಳ್ಳುವಾಗ ನಿರ್ಗತಿಕ ಅಲೆಮಾರಿ ಜಾತಿಗಳನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ಅಲೆಮಾರಿ...

ಈದಿನ ವಿಶೇಷ | ಧರ್ಮಸ್ಥಳ: ಉತ್ತರ ನೀಡಿದ ಗೃಹ ಸಚಿವರು; ಈಗಲೂ ಉಳಿದ ಹಲವು ಪ್ರಶ್ನೆಗಳು

ಸದನದಲ್ಲಿ ನಿಂತು ಷಡ್ಯಂತ್ರ ಎನ್ನುವವರಿಗೆ, ಎಸ್‌ಐಟಿ ರಚನೆಯಾಗಿದ್ದೇಕೆ? ಕಾನೂನು ಏನು ಹೇಳುತ್ತೆ?...

ಬಿಹಾರದಂತೆಯೇ, ಇಡೀ ದೇಶ ಚುನಾವಣಾ ಕಳ್ಳತನವನ್ನು ವಿರೋಧಿಸುತ್ತದೆ: ರಾಹುಲ್ ಗಾಂಧಿ

ಬಿಹಾರದಲ್ಲಿ ತಮ್ಮ 'ಮತದಾರ ಅಧಿಕಾರ ಯಾತ್ರೆ'ಗೆ ಸಕಾರಾತ್ಮಕ ಪ್ರತಿಕ್ರಿಯೆಯನ್ನು ಸ್ವಾಗತಿಸಿದ ಲೋಕಸಭೆ...

ಪಟ್ಟಣ ಪಂಚಾಯತ್ ಚುನಾವಣೆ: ಮೂರರಲ್ಲಿ ಕಾಂಗ್ರೆಸ್‌ಗೆ ಮೇಲುಗೈ; ಎರಡರಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿಗೆ ಜಯ

ಕರ್ನಾಟಕದಲ್ಲಿ ಐದು ಪ್ರದೇಶಗಳು ತಾಲೂಕು ಸ್ಥಾನಕ್ಕೇರಿದ ಬಳಿಕ ರಚನೆಯಾದ ಪಟ್ಟಣ ಪಂಚಾಯಿತಿಗೆ...

Download Eedina App Android / iOS

X