ಐಪಿಎಲ್‌ 2023 | ಮೊಹಾಲಿಯಲ್ಲಿ ʻರನ್‌ ಹೊಳೆʼ; ಪಂಜಾಬ್ ವಿರುದ್ಧ‌ ರಾಹುಲ್ ಪಡೆಗೆ ಭರ್ಜರಿ ಜಯ

Date:

ʻರನ್‌ ಹೊಳೆʼ ಹರಿದ ಐಪಿಎಲ್‌ 16ನೇ ಆವೃತ್ತಿಯ 38ನೇ ಪಂದ್ಯದಲ್ಲಿ ಲಕ್ನೋ ಸೂಪರ್‌ ಜೈಂಟ್ಸ್‌ ತಂಡ ಪಂಜಾಬ್‌ ವಿರುದ್ಧ 56 ರನ್‌ಗಳ ಭರ್ಜರಿ ಜಯ ದಾಖಲಿಸಿದೆ.

ಮೊಹಾಲಿಯಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ್ದ ಕೆ.ಎಲ್‌.ರಾಹುಲ್‌ ಸಾರಥ್ಯದ ಲಕ್ನೋ ಸೂಪರ್‌ ಜೈಂಟ್ಸ್‌ 5 ವಿಕೆಟ್‌ ನಷ್ಟದಲ್ಲಿ 257 ರನ್‌ ಗಳಿಸಿತ್ತು. ಉತ್ತರವಾಗಿ ಪಂಜಾಬ್‌ 19.5 ಓವರ್‌ಗಳಲ್ಲಿ 201 ರನ್‌ಗಳಿಗೆ ಅಲೌಟ್‌ ಆಯಿತು.

ಎರಡನೇ ಅತಿಹೆಚ್ಚು ಮೊತ್ತದ ದಾಖಲೆ; ಶುಕ್ರವಾರದ ಪಂದ್ಯದಲ್ಲಿ ಲಕ್ನೋ ಸೂಪರ್‌ ಜೈಂಟ್ಸ್‌ ತಂಡ ಹೊಸ ದಾಖಲೆ ಬರೆದಿದೆ. ಪಂಜಾಬ್‌ ವಿರುದ್ಧ 257 ರನ್‌ ಗಳಿಸುವ ಮೂಲಕ, ಐಪಿಎಲ್‌ನಲ್ಲಿ ಎರಡನೇ ಅತಿಹೆಚ್ಚು ಮೊತ್ತ ದಾಖಲಿಸಿದ ತಂಡ ಎಂಬ ಕೀರ್ತಿಗೆ ಲಕ್ನೋ ಪಾತ್ರವಾಗಿದೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

2013ರ ಆವೃತ್ತಿಯಲ್ಲಿ ಬೆಂಗಳೂರಿನಲ್ಲಿ ನಡೆದ ಪಂದ್ಯದಲ್ಲಿ ಪುಣೆ ವಾರಿಯರ್ಸ್ ವಿರುದ್ಧ ಆರ್‌ಸಿಬಿ ತಂಡ 5 ವಿಕೆಟ್‌ ನಷ್ಟದಲ್ಲಿ 263 ರನ್‌ ಗಳಿಸಿದ್ದು ಐಪಿಎಲ್ ಗರಿಷ್ಠ ಸ್ಕೋರ್ ದಾಖಲೆಯಾಗಿದೆ.

ಪಂಜಾಬ್‌ ವಿರುದ್ಧದ ಪಂದ್ಯದಲ್ಲಿ ಮೊದಲ 10 ಓವರ್‌ಗಳಲ್ಲಿ 128 ರನ್‌ಗಳಿಸಿದ್ದ ಲಕ್ನೋ, ನಂತರದ 10 ಓವರ್‌ಗಳಲಿ 129 ರನ್‌ ಗಳಿಸುವ ಮೂಲಕ ಕಿಂಗ್ಸ್ ಬೌಲರ್‌ಗಳ ಬೆವರಿಳಿಸಿತು. ಸಿಡಿಲಬ್ಬರದ ಬ್ಯಾಟಿಂಗ್‌ ನಡೆಸಿದ ಮಾರ್ಕಸ್‌ ಸ್ಟೋಯ್ನಿಸ್‌, 40 ಎಸೆತಗಳಲ್ಲಿ 5 ಸಿಕ್ಸರ್‌ ಮತ್ತು 6 ಬೌಂಡರಿಗಳ ನೆರವಿನೊಂದಿಗೆ 72 ರನ್‌ ಗಳಿಸಿದರು. ಆರಂಭಿಕ ಕೈಯ್ಲ್‌ ಮೇಯರ್ಸ್‌ 54 ರನ್‌, ಆಯುಷ್‌ ಬದೋನಿ 43 ಹಾಗೂ ನಿಕಲಸ್‌ ಪೂರನ್‌ 45 ರನ್‌ಗಳಿಸುವ ಮೂಲಕ ಬೃಹತ್‌ ಮೊತ್ತ ಪೇರಿಸಲು ಕಾರಣರಾದರು.

ಬೆಟ್ಟದಷ್ಟು ಮೊತ್ತ ಎದುರಿಗಿದ್ದರೂ ಸಹ, ಪಂಜಾಬ್ ಆರಂಭಿಕರಿಬ್ಬರೂ ಬೇಗನೇ ಪೆವಿಲಿಯನ್‌ ಸೇರಿಕೊಂಡರು. ಕೇವಲ 1 ರ‌ನ್‌ಗಳಿಸಿ ನಾಯಕ ಶಿಖರ್ ಧವನ್‌ ಕ್ಯಾಚಿತ್ತು ನಿರ್ಗಮಿಸಿದರೆ, ಪ್ರಭಾಸಿಮ್ರಾನ್‌ ಸಿಂಗ್‌ ಕೊಡುಗೆ 9 ರನ್.‌ ಮೂರನೇ ಕ್ರಮಾಂಕದಲ್ಲಿ ಬಂದ ಅಥರ್ವಾ ಥೈಡೆ (66 ರನ್‌, 36 ಎಸೆತ) ಮಾತ್ರ ತಕ್ಕಮಟ್ಟಿನ ಹೋರಾಟ ಪ್ರದರ್ಶಿಸಿದರು.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ನಮ್ಮನ್ನು ಬೆಂಬಲಿಸಿ

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ವಿಂಬಲ್ಡನ್ ಛಾಂಪಿಯನ್ ಕಾರ್ಲೋಸ್ ಅಲ್ಕರಾಜ್ – ವಿಶ್ವ ಟೆನಿಸ್ ಯುಗದ ಅದ್ಭುತ ಪ್ರತಿಭೆ

ವಿಶ್ವ ಟೆನಿಸ್ ಯುಗದಲ್ಲಿ ಮತ್ತೊಂದು ಹೊಸದೊಂದು ಪ್ರತಿಭೆ ಪ್ರಜ್ವಲಿಸುತ್ತಿದೆ. 21 ವರ್ಷದ...

ಸ್ಪೇನ್‌ಗೆ ನಾಲ್ಕನೇ ಬಾರಿ ಯೂರೋ ಕಪ್; ಸತತ 2ನೇ ಬಾರಿ ಸೋತ ಇಂಗ್ಲೆಂಡ್

ಯುರೋಪ್‌ನ ಅತಿ ದೊಡ್ಡ ಫುಟ್ಬಾಲ್ ಪಂದ್ಯಾವಳಿ ಯೂರೋ ಕಪ್‌ ಪ್ರಶಸ್ತಿಯನ್ನು ಸ್ಪೇನ್‌...

ಜೊಕೊವಿಚ್ ಮಣಿಸಿದ ಸ್ಪೇನ್‌ನ ಕಾರ್ಲೋಸ್ ಅಲ್ಕರಾಜ್‌ಗೆ ವಿಂಬಲ್ಡನ್ ಕಿರೀಟ

ಸ್ಪೇನ್‌ನ ಕಾರ್ಲೋಸ್‌ ಅಲ್ಕರಾಜ್‌ ಅವರು ಭಾನುವಾರ(ಜು.14) ನಡೆದ ವಿಂಬಲ್ಡನ್‌ ಫೈನಲ್‌ನಲ್ಲಿ ನೇರ...

ಸಾಂಘಿಕ ಹೋರಾಟದಿಂದ ಜಿಂಬಾಬ್ವೆ ವಿರುದ್ಧ ಭಾರತಕ್ಕೆ ಗೆಲುವು: ಟೀಂ ಇಂಡಿಯಾಗೆ 4-1 ಟಿ20 ಸರಣಿ

ಭಾರತ ತಂಡ ಜಿಂಬಾಬ್ವೆ ವಿರುದ್ಧದ ಐದನೇ ಪಂದ್ಯದಲ್ಲಿ 42 ರನ್‌ಗಳ ಅಂತರದಲ್ಲಿ...