ಸತ್ಯ ಎದುರಿಸುವ ತಾಕತ್ತು ಮೋದಿ ಸರ್ಕಾರಕ್ಕೆ ಇಲ್ಲ: ಮಲ್ಲಿಕಾರ್ಜುನ ಖರ್ಗೆ ಕಿಡಿ

Date:

Advertisements
  • ಚುನಾವಣಾ ಕಣದಲ್ಲಿ ಪ್ರಧಾನಿ ಮೋದಿ ಟೀಕಿಸಿದ ಮಲ್ಲಿಕಾರ್ಜುನ ಖರ್ಗೆ
  • ರಾಹುಲ್‌ ಗಾಂಧಿ ಅನರ್ಹಗೊಳಿಸಿ ಹೇಡಿತನ ಪ್ರದರ್ಶಿಸಿದ ಬಿಜೆಪಿ

ಸರ್ಕಾರದ ಆಸ್ತಿ ಮಾರುವುದು, ಸರ್ಕಾರದ ಆಸ್ತಿಯನ್ನು ಒಂದೇ ವ್ಯಕ್ತಿಗೆ ಕೊಡುವುದು ಹಾಗೂ ಜನರ ದುಡ್ಡುನ್ನು ದೊಡ್ಡ ಕುಳಗಳಿಗೆ ಕೊಟ್ಟದೇ ಬಿಜೆಪಿಯ ದೊಡ್ಡ ಸಾಧನೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು.

ಶಿವಮೊಗ್ಗ ಜಿಲ್ಲೆಯಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಭಾನುವಾರ ಮಾತನಾಡಿದ ಅವರು, “ಆದಾನಿಯ ಸಂಪತ್ತಿನಲ್ಲಿ ಎರಡು ವರ್ಷಗಳಲ್ಲಿ ಹಠಾತ್ತನೆ 12 ಲಕ್ಷ ಕೋಟಿ ರೂಪಾಯಿ ಆಸ್ತಿ ಹೆಚ್ಚಳವಾಗಿದೆ. ಇದನ್ನು ರಾಹುಲ್‌ ಗಾಂಧಿ ಪ್ರಶ್ನಿಸಿ, ಸತ್ಯ ಹೇಳಲು ಹೊರಟರೆ, ಅದನ್ನು ಎದುರಿಸಲಾಗದ ನರೇಂದ್ರ ಮೋದಿ ಸರ್ಕಾರ ಅವರನ್ನು ಲೋಕಸಭಾ ಸದಸ್ಯತ್ವದಿಂದ ಅನರ್ಹಗೊಳಿಸಿ ತನ್ನ ಹೇಡಿತನ ಜಾಹೀರುಗೊಳಿಸಿದೆ” ಎಂದು ಕಿಡಿಕಾರಿದರು.

“ಸಂಸತ್ತಿನಲ್ಲಿ ನಾನು ಮತ್ತು ರಾಹುಲ್‌ ಗಾಂಧಿ ಮಾಡಿದ ಭಾಷಣಗಳನ್ನು ಕಿತ್ತು ಎಸೆಯುತ್ತಿದ್ದಾರೆ. ಮೋದಿ ಸರ್ಕಾರಕ್ಕೆ ಸತ್ಯ ಎದುರಿಸುವ ತಾಕತ್ತು ಇಲ್ಲ. ರಾಜ್ಯದಲ್ಲೂ ಬಿಜೆಪಿ ಸರ್ಕಾರ ಲಂಚ, ಮಿತಿಮೀರಿದ ಭ್ರಷ್ಟಾಚಾರ, ಪಠ್ಯ ಬದಲಾವಣೆ ಹಾಗೂ ಇತಿಹಾಸ ತಿರುಚಿದ್ದೇ ಈ ಬಿಜೆಪಿ ಸರ್ಕಾರದ ಸಾಧನೆ” ಎಂದರು.

Advertisements

“ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ದಂಗೆ ಆಗುತ್ತವೆ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಪ್ರಚೋದನಾತ್ಮಕ ಹೇಳಿಕೆ ನೀಡುತ್ತಿದ್ದಾರೆ. ಕಾಂಗ್ರೆಸ್‌ ಅಧಿಕಾರದಲ್ಲಿದ್ದಾಗ ಯಾವಾಗ ಗಲಾಟೆ ಆಗಿದೆ ತೋರಿಸಿ. ಶಾ ಅವರು ತಕ್ಷಣ ಈ ರೀತಿಯ ಪ್ರಚೋದನಾಕಾರಿ ಹೇಳಿಕೆ ನಿಲ್ಲಿಸಲಿ. ಬಡ ಜನರೊಳಗಡೆ ಬಿಜೆಪಿ ಅವರು ಜಗಳ ಹಚ್ಚಿಸುತ್ತಿದ್ದಾರೆ” ಎಂದು ದೂರಿದರು.

ಈ ಸುದ್ದಿ ಓದಿದ್ದೀರಾ? ಬ್ಯಾಟರಾಯನಪುರ ಕ್ಷೇತ್ರ | ಕಾಂಗ್ರೆಸ್‌ನ ಭರವಸೆ ನಾಯಕ ಕೃಷ್ಣ ಬೈರೇಗೌಡ ಗೆಲುವಿಗೆ ನೀರೆರೆದ ಬಿಜೆಪಿ ಬಂಡಾಯ

“ನಮ್ಮ ಹೋರಾಟ ನ್ಯಾಯಕ್ಕಾಗಿ. ಈ ದೇಶದ ಜಾತ್ಯತೀತತೆಯ ಉಳಿವಿಗೋಸ್ಕರ ಇರುವ ಹೋರಾಟ. ನಾನು ಮತ್ತು ರಾಹುಲ್‌ ಗಾಂದಿ ಯಾರಿಗೂ ಹೆದರುವವರು ಅಲ್ಲ. ಈ ದೇಶದಲ್ಲಿ ಜನ ಸುಖ-ಸಂತೋಷ, ನೆಮ್ಮದಿಯಿಂದ ಕೂಡಿ ಬಾಳಬೇಕೆಂಬುದೇ ಕಾಂಗ್ರೆಸ್‌ ಪಕ್ಷದ ಪರಮ ಗುರಿ. ಆದರೆ ಧರ್ಮಗಳ ನಡುವೆ ವಿಷ ಬೀಜ ಬಿತ್ತಿ, ಜಾತಿಗಳ ಮಧ್ಯೆ ಜಗಳ ತಂದು ದಂಗೆ ಶುರು ಮಾಡುವುದೇ ಬಿಜೆಪಿಯ ಕೆಲಸ” ಎಂದು ಮಲ್ಲಿಕಾರ್ಜುನ ಖರ್ಗೆ ಹರಿಹಾಯ್ದರು.

“ಇದು ಮಹತ್ವದ ಚುನಾವಣೆ, ನಾವೆಲ್ಲ ಒಗ್ಗಟ್ಟಾಗಿ ಮತ್ತು ಒಮ್ಮತದಿಂದ ನಮ್ಮ ಅಭ್ಯರ್ಥಿಯನ್ನು ಗೆಲ್ಲಿಸಬೇಕಿದೆ. ನಾವು ಪ್ರಯತ್ನ ಮಾಡದೇ ಹೋದರೆ, ಮುಂಬರುವ ಹೊಸ ಪೀಳಿಗೆಗೆ ಕುತ್ತು ಬರುವ ಸಾಧ್ಯತೆ ಇದೆ” ಎಂದು ಆತಂಕ ವ್ಯಕ್ತಪಡಿಸಿದರು.

“ಬೆಲೆ ಏರಿಕೆಯಿಂದಾಗಿ ಜನ ತತ್ತರಿಸಿದ್ದಾರೆ. ಅಡುಗೆ ಅನಿಲ ಬೆಲೆ ಗಗನಕ್ಕೇರಿದೆ. ಯುಪಿಎ ಸರ್ಕಾರವಿದ್ದಾಗ ಅಡುಗೆ ಅನಿಲ ಬೆಲೆ ರೂ 450, ಇತ್ತು, ಇದು ರೂ 1100 ಇದೆ. ಜನರಿಗೆ ಕಷ್ಟವಾಗುತ್ತಿದೆ. ಜನರ ಕಷ್ಟಗಳಿಗೆ ಕಿವಿಯಾಗುವಲ್ಲಿ ಈ ಬಿಜೆಪಿ ಸರ್ಕಾರ ವಿಫಲವಾಗಿದೆ. ಹಳೆ ಡಬ್ಬಿಗಳಿಗೆ ಬಣ್ಣಬಳಿದು, ಅದನ್ನು ಮೋದಿ ಅವರು ಹಸಿರು ನಿಶಾನೆ ತೋರಿಸುವುದೇ  ಬಿಜೆಪಿ ಸಾಧನೆ. ನಮ್ಮ ಸರ್ಕಾರದ ಅವಧಿಯಲ್ಲಿ ಆಗಿರುವ ಕೆಲಸಗಳ ಕುರಿತು ಬಿಜೆಪಿಯವರು ಹೇಳುವುದಿಲ್ಲ. ಎಲ್ಲವನ್ನೂ ತಮ್ಮದೆಂದು ಹೇಳಿಕೊಳ್ಳುತ್ತಾರೆ” ಎಂದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ರಾಜಸ್ಥಾನದ ಶಾಸಕನಾದ ಬೆಂಗಳೂರಿನ ಬಟ್ಟೆ ವ್ಯಾಪಾರಿ

ಬೆಂಗಳೂರಿನಲ್ಲಿ ವಾಸವಿರುವ ಬಟ್ಟೆ ವ್ಯಾಪಾರಿಯೊಬ್ಬರು ರಾಜಸ್ಥಾನ ರಾಜ್ಯದ ಶಾಸಕರಾಗಿ ಆಯ್ಕೆಯಾಗಿದ್ದಾರೆ. ರಾಜಾಜಿನಗರದಲ್ಲಿ ವಾಸವಿರುವ...

ಮಿಜೋರಾಂ ಮತ ಎಣಿಕೆ: ಬಹುಮತದತ್ತ ಝೆಡ್‌ಪಿಎಂ

ಈಶಾನ್ಯ ರಾಜ್ಯ ಮಿಜೋರಾಂ ವಿಧಾನಸಭಾ ಚುನಾವಣೆಯ ಮತ ಎಣಿಕೆ ಪ್ರಗತಿಯಲ್ಲಿದ್ದು, ಒಟ್ಟು...

ಮಧ್ಯಪ್ರದೇಶ ಚುನಾವಣೆ | ಆಡಳಿತ ವಿರೋಧಿ ಅಲೆಯ ನಡುವೆಯೂ ಬಿಜೆಪಿ ಜಯಭೇರಿ

ಮಧ್ಯಪ್ರದೇಶದಲ್ಲಿ ಬಿಜೆಪಿ ಉಗ್ರ ಹಿಂದುತ್ವ ಪ್ರತಿಪಾದಿಸಿದರೆ, ಕಾಂಗ್ರೆಸ್‌ನ ಕಮಲನಾಥ್ ಸಾಫ್ಟ್ ಹಿಂದುತ್ವದ...

ಛತ್ತೀಸ್‌ಗಡ: ಹಗರಣಗಳ ಆರೋಪಕ್ಕೆ ಸಿಲುಕಿ ಅಧಿಕಾರ ಕಳೆದುಕೊಂಡ ಕಾಂಗ್ರೆಸ್

ಛತ್ತೀಸ್‌ಗಢ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಗೆಲುವು ಸಾಧಿಸಿ ರಾಜ್ಯದಲ್ಲಿ ಮತ್ತೆ ಅಧಿಕಾರ...

Download Eedina App Android / iOS

X