ಬ್ಯಾಗ್ ಅಂತೊಟ್ಟು ಒಗಾಯಿಸಿ ಬಂಗರ ಹಿಡಿಬೇಕು ಅಂತ ರಾಜು ಸ್ಕೂಲ್ ಮುಗಿಸಿ ಬಿರ್ಬಿರ್ಣೆ ಮನೆಗೆ ಬಂದ. ಆದರ ಮನೆಗೆ ಬೀಗ! ಎಲ್ಲೊಯ್ತು ಅಪ್ಪನು? ಆ ಟಯಾನಿಗೆ ಸರಿಯಾಗಿ ಕಿಟಕಿ 'ಟಕ್' ಅಂತ ತೆಗೀತು. ರಾಜು ದಿಗಿಲು ಬಿದ್ದುಬಿಟ್ಟ. ಕಿಟಕಿ ಒಳಗ ಅಪ್ಪನು ನಿಂತಯ್ತೆ! ಮೊಕದಾಗ ಬೆಮರು, ಗಾಬರಿ...
ನಾಳೆ ಸನಿವಾರ. ಸ್ಕೂಲ್ಕ ಆಫ್ ಡೇ. ರಾಜು ತನ್ನ ಪ್ಯಾಂಟ್ ಜೋಬಿನಲ್ಲಿ ಮಡಗಿದ್ದ ಕೆಂಪು ಬಂಗರ, ಕರಪ್ಪು ಚಾಟಿಯನ್ನ ಮುಟ್ಟಿ ನೋಡಿಕೊಂಡ. ಹೋದ ಸನಿವಾರ ತ್ಯಾಗು ತನ್ನ ಬಂಗರಕ್ಕ ಕಚ್ಚು ಮಡಗಿದ್ದ. ಆಗ ಅವನು ಸಖತ್ ಯಾತನೆಪಟ್ಟಿದ್ದ. ಅದಕ್ಕ ಮುಯ್ಯಿ ತೀರಿಸಬೇಕು. ತಾನು ಅವನ ಬಂಗರಕ್ಕ ವಾಪಸ್ ಕಚ್ಚು ಮಡಗಬೇಕು. ಆಗಲೇ ತನ್ನ ರೋಸ ಅಡಗುವುದು. ಹಿಂಗೆ ರಾಜು ಏನೇನೋ ಯೋಸ್ನೆ ಮಾಡಿದ.
ಸುಕ್ರವಾರದ ರಾತ್ರಿ ಅಮ್ಮನು ಅಪ್ಪನುಕ ಒರು ಸಂಗತಿ ಹೇಳಿದ್ಲು: “ಮಾಮೋ… ಗೋವುಕ ಬಾವು ಇಳಿದೇ ಇಲ್ಲ. ಬಸಣ್ಣನುಕ ಮಕ್ಕಿಕೊಂಡಿದ್ದೀನಿ. ನಾಳೆ ರಾಂಪುರಕ್ಕ ಹಿಂಗ್ ಹೋಗಿ ಅಂಗ್ ಬತ್ತೀನಿ. ಗೋವುಗಳು ಜ್ವಾಪಾನ! ರಾಗಿಹುಲ್ಲು ಹಾಕ್ಕಂಡು ಮನೆಗೇ ಇರು. ಮಳೆಗಾಲ. ಆಚಕಾ ಗೊಡ್ಡುಗಳನ್ನ ಅಟ್ಟಬೇಡ…”
ಅಪ್ಪನು, ಬೀಡಿ ಹೊಗೆ ಬುಡುತ್ತ, “ಹಂಗೆ ಮಾಡು…” ಅಂದ.
ರಾಜುಕ ದಿಲ್ಕುಸಿ ಆಯ್ತು. ಅಮ್ಮನು ಇದ್ದರ ಗೊಡ್ಡುಗಳನ್ನ ಮೇಯಿಸೋಕೆ ಕಳಿಸೋಳು. ಈಗ ಸುಖವಾಗಿ ಬಂಗರ ಆಡಬೋದು. ತ್ಯಾಗು ಬಂಗರಕ್ಕ ಕಚ್ಚು ಮಡಗಬಹುದು. ಹಿಂಗೆ, ಅವನು ಅವನದೇ ಲೆಕ್ಕದಾಗ ಮೈ ಮರೆತು ಕನವುಗಳನು ಕಂಡ.
ಬೆಳಗ್ಗೆ ಅವನು ಬೇಗ ಏಳುವ ಹೊತ್ತಿಗೆ ಅವನಮ್ಮನು ಹೊಂಟೋಗಿದ್ದಳು. ಅಪ್ಪನು ಬೀಡಿ ಹಚ್ಕಂಡು ಕುಂತಿತ್ತು. “ಅಪೋ… ನಾ ಸ್ಕೂಲ್ಕಾ ಒಯ್ತೀನಿ,” ಅಂತು ರಾಜು. ಪೆತ್ತವನು ಆ ಅನ್ನಲಿಲ್ಲ ಊ ಅನ್ನಲಿಲ್ಲ.
ಎಲ್ಲ ಸನಿವಾರಗಳಂತೆ ಇವತ್ತೂ ಬೆಳಗ್ಗೆ ಏನೂ ಗದುಕದೆ ರಾಜು ಹೊಂಟ. ಜೇಬಿನಾಗ ಕೆಂಪು ಬಂಗರ, ಕಪ್ಪು ಚಾಟಿ ಇದ್ದುದ ಖಾತ್ರಿ ಮಾಡಿಕೊಂಡಿದ್ದ.

ಬ್ಯಾಗ್ ಅಂತೊಟ್ಟು ಒಗಾಯಿಸಿ ಬಂಗರ ಹಿಡಿಬೇಕು ಅಂತ ಸ್ಕೂಲ್ ಮುಗಿಸಿ ಬಿರ್ಬಿರ್ಣೆ ಮನೆಗೆ ಬಂದ. ಆದರ ಮನೆಗೆ ಬೀಗ! ಎಲ್ಲೊಯ್ತು ಅಪ್ಪನು? ಗೊಡ್ಡುಗಳು ಆಚೆನೇ ಅವೇ! ಅವು ರಾಗಿಹುಲ್ಲ ‘ಕುಟಮ್ ಕುಟಮ್’ ಅಂತ ಕುಟುಂತಾ ಇದ್ದವು.
ರಾಜು ಗಟ್ಟಿಯಾಗೆ ಮಾತಾಡಿಕೊಂಡ. ಆ ಟಯಾನಿಗೆ ಸರಿಯಾಗಿ ಕಿಟಕಿ ‘ಟಕ್’ ಅಂತ ತೆಗೀತು. ರಾಜು ದಿಗಿಲು ಬಿದ್ದುಬಿಟ್ಟ. ಕಿಟಕಿ ಒಳಗ ಅಪ್ಪನು ನಿಂತಯ್ತೆ! ಮೊಕದಾಗ ಬೆಮರು, ಗಾಬರಿ.
ಅಪ್ಪುನೇ ಅಂತು… “ಅಲ್ಲಿ ಎಲ್ಲಾದ್ರೂ ಕಲ್ ಇದ್ದರೆ ಬೀಗ ಹೊಡೆದಾಕು…”
“ಯಾಕಪ್ಪ?” ರಾಜು ಕ್ವಶ್ಚನ್ನು ಅಪ್ಪುನುಕ ಹಿಡಿಸಲಿಲ್ಲ.
“ಕ್ವಶ್ಚನ್ನು ಬೇಡ. ಹೇಳಿದಷ್ಟು ಮಾಡು…”
ರಾಜು ಏನೆಲ್ಲ ಮುಕ್ಕಿ ಇರಿದ್ರು ಬೀಗ ಒಡೆಯೋಕೆ ಆಗ್ನಿಲ್ಲ. “ಈ ಬೀಗ ನಮ್ದಲ್ಲ ಅಪ್ಪ…” ಅಂದ ರಾಜು.
ಅಪ್ಪುನುಕ ಉರೀತು.
“ಹೇಳಿದಶ್ಟು ಮಾಡಲಾ, ಪುಲಾರ ಮಾಡ್ಬೇದ…”
ರಾಜು ಕೈನಾಗ ಅದು ಆಗ್ಣಿಲ್ಲ.
ಈ ಘೋಟಾಳೆನಾಗ ಹಿಂದ್ತೊಟ್ಟಿಂದ ಕುಪ್ಪಮುನು ಬಂದವಳೆ, “ಏನ್ಲಾ ಬೀಗ ಹೊಡೀತಾ ಇದೀಯಾ?” ಅಂದ್ಲು – ಗದರ್ದಂಗೆ.
“ಹೂನಕ್ಕೊ, ಬತ್ತಾನೆ ಇಲ್ಲ…” ಎಂದ ರಾಜು.
ಕುಪ್ಪಮ್ಮುನು ಅವನ ಜುಟ್ಟುಗಳ ಸುಳಿ ಹಿಡಿದು ಸುಳುಕ್ ಅನ್ನಿಸಿದಳು.
ರಾಜು, “ಅಯ್ಯಮ್ಮ…” ಅಂತ ಮುಲುಗಾಡ್ದ.
“…ಮಗನೇ, ಬೀಗ ವಡಿತೀಯಾ…!” ಅಂತ ರಪ್ಪನೆ ಅವನ ತಲೆ ಮ್ಯಾಲೆ ಒಂದು ಬಿಟ್ಟಳು.
ರಾಜು ಕಕಮಕ ಆದ.
ಒಳಗಿಂದ ಅಪ್ಪನು, “ಬ್ಯಾಡ ಕುಪ್ಪಮ್ಮೋ… ಪುಳ್ಳೆ ಅದು…” ಅಂತ ಏನೇನೋ ಒರಲ್ತಾ ಇದೆ. ರಾಜುನುಕ ಅದೊಂದೂ ತಿಳಿಯದು.
ಮುಂದ ಹಿಂಗಾಯ್ತು… ರಾಜುನುಕು ಕೂಡ ಒಳಗೆ ಹಾಕಿ ಬೀಗ ಹಾಕಲಾಯಿತು. ಅಪ್ಪನು ಅವನುಕ ಒಂದು ಮಡಗಿ, “ದಿನಾ ಗದಕ್ತಿಯಾ, ಬೀಗ ಮುರಿಯಾಕೆ ಆಗಾಕಿಲ್ಲವಾ?” ಅಂತ ಬೊಯ್ದ. “ಕುಪ್ಪಮನು ಯಾಕಪ್ಪಾ ಹಿಂಗ್ ಮಾಡಿದಳು?” ಅಂತ ಅವನು ಬಾಯಿ ತೆಗೆಯೋಕೆ ಆಸ್ಪದ ಕೊಡದಂಗೆ ಮತ್ತೆಲ್ದು ಮಡಗಿ ಬಾಯಿ ಮುಚ್ಚಿಸಿದ.
ಅಪ್ಪನು ಒಳಗೇ ತಾರಾಡಿ-ತಾರಾಡಿ ಕೊನೇಕ ಒಂದು ಸಂದು ಹಿಡಿದ. ಕಿಟಕಿಕ ಕಾಲ್ ಕೊಟ್ಟು ಮೇಲಕ್ಕೆ ಹಾರಿ, ತೊಲೆ ಮೇಲೆ ನಿಂತ್ಕಂಡ. ಪೆಂಕುಗಳನ್ನು ಜರುಗಿಸಿ ಮೇಲಿಂದ ಧುಮುಕಿದ.
ಕಿಟಕಿ ತಾವ ನಿಂತ್ಕಂಡು ಮಗನುಕ ಅಂದ, “ಸಂಜೀಕ ನಿಮ್ ಅಮ್ಮನು ಬತ್ತಾಳೆ. ಬೀಗ ತೆಗೆಸ್ತಾಳೆ. ನನ್ ಕೇಳಿದ್ರೆ ಊರ ಕಡೆ ಓದ ಅನ್ನು…”
ರಾಜು ಒಳಗೇ ಬಂಗರ ಆಡ್ಕಂಡು ಇದ್ದ.
ಮುಂದೆ ಮೂರ್ನಾಲ್ಕು ದಿನ ಆದ ಮ್ಯಾಲೆನೇ ರಾಜುಕಾ ಇದರ ಪತ್ತಾ ಗೊತ್ತಾದದ್ದು. ಬಂಗರ ಆಡುವಾಗ ಈಗಲೂ ಯಾರಾದರೂ ಅವನ್ನ ಇದರ ಬಗ್ಗೆ ಕೇಳ್ತಾರೆ.
ರಾಜು ಬಂಗರ ಆಡ್ತಾ ಆಡ್ತಾನೇ ಹೇಳ್ತಾನೆ… “ನಮ್ ಅಪ್ಪನು ಕುಪ್ಪಪ್ಪನ್ನ ಹಿಡ್ಕಲ್ಲಕ್ಕೆ ಓಗಿದ್ನಂತೆ. ಆಯಮ್ಮನು ಆಗ ಇಳಿಗೆಮಣೆ ಮೇಲೆ ತರಕಾರಿ ಕಟ್ ಮಾಡ್ತಾ ಇತ್ತಂತೆ. ಹಂಗೆ ಮಣೆನಾ ಕೈಯಾಗ ಬೀಸಿದ್ಲಂತೆ. ನಮ್ ಅಪ್ಪನು ಸರ್ಕಂತ ತಪ್ಪಿಸಿಕೊಂಡು ಓಡಿ ಬಂದು ಮನೆ ಸೇರ್ಕಂಡ. ಕುಪ್ಪಮುನು ತನ್ ಮನೆಯ ಬೀಗ ತಂದು ಬಾಗುಲುಕ ಹಾಕುದ್ಲು. ನಾನು ಸ್ಕೂಲ್ ಬಿಟ್ ಮೇಲೆ ಬ್ಯಾಗ್ ಬಿಸಾಕೋಣ ಅಂತ ಹೋದ್ರೆ, ನಮ್ ಅಪ್ಪನು, ‘ಬೀಗ ಹೊಡಿಲಾ’ ಅಂತು. ನನ್ ಕೈಯಾಗ ಆಗ್ನಿಲ್ಲಾ. ‘ಥೂ!’ ಅಂತ ಬೈತು. ಆಮೇಲೆ… ಆಮೇಲೆ… ಹ್! ಕುಪ್ಪಮನು ನನ್ನೂ ಒಳಕ್ ಆಕ್ತು. ನಮ್ ಅಪ್ಪನು ಕಿಟಕಿ ಹತ್ತಿ ಪೆಂಕುಗಳು ಸರಿಸಿ ಆಚ್ಗೆ ಬಂದ. ‘ಊರ್ಕಾ ಒಯ್ತೀನಿ ಅಂತ ನಿಮ್ ಅಮ್ಮುನುಕ ಹೇಳು’ ಅಂತ ಹೇಳಿ ಮನೆ ಮುಂದಲ ಈಪ್ಲೀಸ್ ತೋಪು ಒಳಗೆ ಒಂಟೋದ…”
ರಾಜು ಅಪ್ಪನು ವಾರ ಆದ ಮೇಲೆ ವಾಪಸ್ ಬಂತು. ಊರಾಗ ಏನೇನೋ ಪಂಚಾತಿ ಆಯ್ತು. ಮನೇನಾಗ ಅಮ್ಮುನು ಏನೇನೋ ಅನ್ನೊಳು. ಅಪ್ಪನು ಆಗೆಲ್ಲಾ ಅಮ್ಮುನ ಹಿಡ್ಕಂಡು ಚೆನ್ನಾಗಿ ರುಡ್ಡೋಣು.
ರಾಜುನುಕ ಆಗೆಲ್ಲ ಭಯವಾಗೋದು. ಅವನೂ ಆಗ ಅಳೋನು. ಅತ್ತು-ಅತ್ತು ಸಾಕಾದ ಮೇಲೆ ಬಂಗರ ಆಟ ಆಡೋಕೆ ತ್ಯಾಗೂ ಮನೆತಾಕ ಹೋಗೋನು.
ಕಠಿಣ ಪದದ ಅರ್ಥ: ಬಂಗರ – ಬುಗುರಿ
ಬರಹಗಳನ್ನು ಆಲಿಸಲು ಕ್ಲಿಕ್ ಮಾಡಿ – ಈದಿನ.ಕಾಮ್ ಕೇಳುದಾಣ