ಹೊನ್ನಾಳಿ ಸೀಮೆಯ ಕನ್ನಡ | ನಮ್ಮೂರಾಗ ಎಲ್ಲಾ ಜಾತೇರು ಸೇರ್ಕೆಂದ್ ಮಾಡಾ ಮಯೇಶುರಿ ಹಬ್ಬ

Date:


(ಸಂಪೂರ್ಣ ಆಡಿಯೊ ಕೇಳಲು ಇಲ್ಲಿ ಕ್ಲಿಕ್ ಮಾಡಿ: ಗೂಗಲ್ ಪಾಡ್‌ಕಾಸ್ಟ್ ಅಥವಾ ಸ್ಪಾಟಿಫೈ ಮ್ಯೂಸಿಕ್)
ಅಜ್ಜ, ದೊಡಪ್ಪ, ಅಪ್ಪ, ಸಣಪ್ಪ, ಮಾವ, ಅಣ್ಣ, ತಮ್ಮಂದಿರ ಜೊತಿಗೆ ಅಜ್ಜಿ, ಅವ್ವ, ದೊಡವ್ವ, ಸಣವ್ವ, ಅತ್ತಿ, ಸೊಸಿ, ಅತ್ಗೆಮ್ಮ, ಅಕ್ಕ, ತಂಗೇರು ಒಟ್ಟಿಗೆ ಸೇರ್ಕೆಂದು ಮುಂದಿನ ವರ್ಶ ಮಯೆಶುರಿ ಹಬ್ಬ ಮಾಡ್ರಿ ಅಂತ ಈ ದೇವ್ರು ಅಪ್ಣಿ ಯಾಕ ಕೊಡಲ್ಲ?
ಎಲ್ಲಾ ಜನ್ರು ಸೇರ್ಕೆಂದು ಅಂದ್ರ ತಿನ್ನುಣ್ಣಜನ, ಕಾಟುಗ್ರು, ಲಿಂಗ್ಯಾತ್ರು, ವಡ್ರು, ಮಾದ್ರು, ಕುರುಬ್ರು, ಸಾಬ್ರು, ತಳ್ವಾರ್ರು ನಾನಾನಮ್ನಿ ಜಾತೇರು ಕೂಡ್ಕೆಂದು ಮಯೆಶ್ವರಿ ಹಬ್ಬ ವರ್ಸವರ್ಸಾ ಬಿಡ್ದಂಗ ಮಾಡ್ತಾರ, 1952 ನೇ ಇಸ್ವಿಂದನೂ ನಾಗವ್ವರ ಮನಿ ವಂಶಸ್ತ್ರು ಡಿಸೆಂಬರ್/ ಜನ್ವರಿ ತಿಂಗಳ ಅಮಾಸಿವಳಗ ಈ ಆಚರ್ಣಿ ಮಾಡ್ಕೆಂತ ಬಂದಾರ. ಯಾಕಂದ್ರ ಊರ್ವರಗಿನ ವಲ್ದಾಗ ಪತ್ರಿಗಿಡ ಪಿತಿಪಿತಿ ಅನ್ನಂಗ ಬಾಳ ಬೆಳೀತಿದ್ವಂತ, ಅದುನ್ನ ಕಡ್ಮಿ ಮಾಡಾಕಂತ ಬೀರಪ್ಪ ದೇವ್ರನ್ನ ಅಪ್ಣಿ ಕೇಳಿದ್ಕೆ ಆ ಜಾಗ್ದಾಗ ಕಟ್ಲಿಮಾಡ್ಸಿ ಅಲ್ಲಿ 1959ನೆ ಇಸ್ವ್ಯಾಗ ಮಠ ಕಟ್ಸಿದಾರ. ಪ್ರತಿವರ್ಸಾ ಮಹೆಶುರಿ ಮಠದ್ಮುಂದ ಒಂದ್ನಮುನಿ ಹಬ್ಬ ಮಾಡಾಕ ಶುರು ಮಾಡ್ಯಾರ. ಅಮ್ಯಾಕಿಂದ ಆ ವಲ್ದಾಗ ಒಂದ್ಕಿಂತ ಹೆಚ್ಗಿ ಪತ್ರಿಗಿಡ ಬೆಳ್ದಿಲ್ಲಂತ. ಹಿಂಗ ದೇವ್ರ ನಂಬ್ಕಿ ನಡ್ಕಂಡ್‍ಬಂದೈತಿ.

ಮಯೇಶುರಿ ಮಠ ಅಂದ್ರೆ ದೊಡ್ದಿಲ್ಲ ಒಂದವ್ಣಿಗೈತಿ, ನೋಡಾಕ ಸಣ್ಗುಡಿ ತರ ಐತಿ. ಒಂದ್ಮೂರ್ಜನ ಗುಡಿಯೊಳಗ ನಿಂತು ಪೂಜಿ ಮಾಡೋಟು ಅಷ್ಟೇ ಜಾಗ ಇರದು. ಆ ಮಟುದ್ಸುತ್ಲು ಇರಬರ ವಲನೆಲ್ಲಾ ಈ ದೇವ್ರೆ ಕಾಯ್ತನ ಅನ್ನ ನಂಬ್ಕಿ ಐತಿ. ಅವತ್ತಿಂದಿನ ಊರ್ಜನುಕ್ಕ ಅನ್ನ, ಹಾಲು, ಬೆಲ್ಲ, ಬಾಳೆಣ್ಣು ಫಳಾರ ಮಾಡಿ, ಎಡಿ ಇಡ್ದು ಊರಿನ ಎಲ್ಲಾ ಗಣ್ಮಕ್ಕಳಿಗೆ ಪ್ರಸಾದ ಕೊಡ್ತಾರ, ಸುತ್ಮುತ್ತಳ್ಳಿ ಜನಾನು ಬರ್ತತಿ. ಅಂದ್ರೇನಪ ಗಣ್ಮಕ್ಕಳು ಮಾತ್ರ ವೂಕರ ಅಲ್ಲಿಗೆ. ಊರಾಗಿನ ಯಾವ ಹೆಣ್ಮಕ್ಳು ಮಾತ್ರ ಹಬ್ಬದ್ದಿನ ಆ ಮಟುದತ್ರ ಹೋಗಂಗಿಲ್ಲ ಪೂಜಿ ಮಾಡಂಗಿಲ್ಲ. ಇದ್ಯಾಕಿಂಗ ಅಂತ ಯಾರನ ಕೇಳಿದ್ರ ಅದು ಹಿಂದಿಂದ ನಡ್ಕಂಬಂದೈತಿ, ಸಂಪ್ರದಾಯ ಮೀರಂಗಿಲ್ಲ ಅಂತಾರ ಊರಾಗಿನ ಹಿರೇರು.

ಹಿಂದಿನ್ಕಾಲ್ದಾಗ ಮಂತ್ಯಾನ ಬೆಳಿಬಕು ಅಂದ್ರ ಮಕ್ಳುಮರಿ ಇರ್ಬಕು ಅಂತ ಆಸೆಮಾಡಿ ದೇವ್ರ ಅರ್ಕಿ ವೊತ್ಕಂಡ್ಮ್ಯಾಗ ಮಕ್ಳಾದ್ವಂತ, ಅವಾಗಿಂದ ಈ ಮಠದ ಪೂಜಿ ಪುನಸ್ಕಾರ ನಡ್ಕಂತ ಬಂದತಿ. ಅವಾಗಿನ ಕಾಲ್ದಾಗ ಎಲ್ಡ್ ಪಲ್ಲ ಅಕ್ಕಿ ಬಸ್ದು ಅನ್ನ ಮಾಡಿದ್ರ ಒಂಚೂರು ಉಳಿತುದುಲ್ಲ ಎಲ್ಲಾ ಕಾಲಿಯಾಕುತ್ತು ಅಟಾಕಣ ಮಂದಿ ಬರ್ತುತ್ತು ಅವಾಗ. ಈಗೆಲ್ಲಿ ಜನ ಬರದೇ ಕಮ್ಮಿ, ಬಂದ್ರು ಒಂದು ಪಲ್ಲ ಅಕ್ಕಿನೂ ಕಾಲಿಯಾಗಲ್ಲ. ಎನೆಆದ್ರು ಬಿಡಂಗಿಲ್ಲ ನೊಡು ಯಾಕಂದ್ರ ಬಡ್ಡಿಂದ ಇದು ನಡ್ಕಂಬಂದೈತಿ ಅಂತಿದ್ರು ನಾಗವ್ವರ ಈಶ್ವರಪ್ಪ.

ಅವತ್ತಿಂದಿನ ಅಂತ್ರೊಳ್ಳಿ ಬೀರಪ್ಪ, ನಿಟ್ಟೂರು ಬೀರಪ್ಪ ದೇವ್ರನ್ನ ಉರಿಗೆ ಕರ್ಕಬಂದು ನಡುರಾತ್ರಿ ಹೊಳಿ ಪೂಜಿ ಮಾಡಿ, ಮಹೇಶುರಿ ದೇವ್ರಿಗೆ ಅಭಿಶೇಕ ಮಾಡ್ತಾರ. ತಿರ್ಬೆಳಿಗ್ಗೆನೇ ಮಠದತ್ರ ಅನ್ನ ದಾಸೋಹ ನಡೀತತಿ. ಕರ್ನಾಟಕದಾದ್ಯಂತ ಲಿಂಗ್ಯಾತ್ರು ಮಾತ್ರ ಮಯೇಶುರಿ ಹಬ್ಬ ಮಾಡಿದ್ರಾ ನಮ್ಮೂರಾಗ ಮಾತ್ರ ಎಲ್ಲಾ ಜಾತೇರು ಸೇರ್ಕೆಂದ್ ಮಾಡಾದು ಒಂತರಾ ವಿಶೇಶ. ಇವತ್ತಿನ್ ಕಾಲ್ದಾಗ ದೊಡ್ದೊಡ್ ಮಠಗೋಳ್ ಅನಾಚಾರ ಎಷ್ಟ್ ಹೆಳಿದ್ರು ಕಮ್ಮಿನೆಯ. ಅಂತದ್ರಾಗ ನಗವ್ವಾರ ಮನೆವ್ರು ಹೊಲಮನಿ ಅಂತ ದುಡಿಮಿ ಮಾಡ್ಕೆಂತ ತಮ್ಮೊಲ್ದಾಗ ಸಣ್ಣುದು ಮಠ ಕಟ್ಟಿ ವರ್ಶುಕ್ಕೊಂದ್ಸಾರಿ ಎಲ್ಲಾ ಜನ ಸೇರಿಸ್ಕೆಂದು ಅನ್ನ ದಾಸೋಹ ಮಾಡಿ ಹಬ್ಬ ಮಾಡ್ತರ ಅನ್ನೋದೆ ಒಂದ್ನಮುನಿ ಕುಶಿ ಪಡ ಸಂಗ್ತಿ. ಅಜ್ಜ, ದೊಡಪ್ಪ, ಅಪ್ಪ, ಸಣಪ್ಪ, ಮಾವ, ಅಣ್ಣ, ತಮ್ಮಂದಿರ ಜೊತಿಗೆ ಅಜ್ಜಿ, ಅವ್ವ, ದೊಡವ್ವ, ಸಣವ್ವ, ಅತ್ತಿ, ಸೊಸಿ, ಅತ್ಗೆಮ್ಮ, ಅಕ್ಕ, ತಂಗೇರು ಒಟ್ಟಿಗೆ ಸೇರ್ಕೆಂದು ಮುಂದಿನ ವರ್ಶ ಮಯೆಶುರಿ ಹಬ್ಬ ಮಾಡ್ರಿ ಅಂತ ಈ ದೇವ್ರು ಅಪ್ಣಿ ಯಾಕ ಕೊಡಲ್ಲ ಅಂತ ಒಮ್ಮೊಮ್ಮಿ ಅಂತನುಸ್ತತಿ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಈದಿನ.ಕಾಮ್ ಆಡಿಯೊಗಳನ್ನು ಆಲಿಸಲು ಕ್ಲಿಕ್ ಮಾಡಿ:
ನುಡಿ ಹಲವು | ಅಂಕಣ | ವೈವಿಧ್ಯ

ಪೋಸ್ಟ್ ಹಂಚಿಕೊಳ್ಳಿ:

ರಾಧ ಹರಗನಹಳ್ಳಿ
ರಾಧ ಹರಗನಹಳ್ಳಿ
ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಹರಗನಹಳ್ಳಿಯವರು. ಸದ್ಯ, ಕುವೆಂಪು ವಿಶ್ವವಿದ್ಯಾಲಯದಲ್ಲಿ ಸಂಶೋಧನಾ ವಿದ್ಯಾರ್ಥಿ. ಸಾಹಿತ್ಯ, ಹೆಣಿಗೆ, ಚಿತ್ರಕಲೆ ಮೇಲೆ ಪ್ರೀತಿ.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕಲಬುರಗಿ ಸೀಮೆಯ ಕನ್ನಡ | ನಂಗಂತೂ ಅತ್ತಿ ಹೇಳದೂ ಖರೆ ಅನಸ್ತದ, ಸೊಸಿ ಹೇಳದೂ ಖರೆನೇ ಅನಸ್ತದ!

(ಸಂಪೂರ್ಣ ಆಡಿಯೊ ಕೇಳಲು ಇಲ್ಲಿ ಕ್ಲಿಕ್ ಮಾಡಿ: ಗೂಗಲ್ ಪಾಡ್‌ಕಾಸ್ಟ್ ಅಥವಾ...

ಬೀದರ್ ಸೀಮೆಯ ಕನ್ನಡ | ವಯಸ್ಸೀಗಿ ಬಂದ್ ಮ್ಯಾಲ ಎಲ್ಲರಿಗಿ ಲವ್ ಆಯ್ತದ್; ಆಗಿಲ್ಲಾಂದ್ರ…?

(ಸಂಪೂರ್ಣ ಆಡಿಯೊ ಕೇಳಲು ಇಲ್ಲಿ ಕ್ಲಿಕ್ ಮಾಡಿ: ಗೂಗಲ್ ಪಾಡ್‌ಕಾಸ್ಟ್ ಅಥವಾ...

ಕಲಬುರಗಿ ಸೀಮೆಯ ಕನ್ನಡ | ಈ ಪದ್ದತಿಗಳು ಹೆಂಗಸರಿಗಿ ಜೀವಾ ತಿಂತಾವ ನೋಡ್ರೀ…

(ಸಂಪೂರ್ಣ ಆಡಿಯೊ ಕೇಳಲು ಇಲ್ಲಿ ಕ್ಲಿಕ್ ಮಾಡಿ: ಗೂಗಲ್ ಪಾಡ್‌ಕಾಸ್ಟ್ಸ್ ಅಥವಾ...