ಔರಾದ್ ಸೀಮೆಯ ಕನ್ನಡ | ಈವೊರ್ಷ್ ಯಳಮಾಸಿ ಭಜ್ಜಿ ಉಳ್ಳಾಕ್ ನಮ್ ಹೊಲ್ಕಡಿನೇ ಬರೀ

Date:


(ಸಂಪೂರ್ಣ ಆಡಿಯೊ ಕೇಳಲು ಇಲ್ಲಿ ಕ್ಲಿಕ್ ಮಾಡಿ: ಗೂಗಲ್ ಪಾಡ್‌ಕಾಸ್ಟ್ ಅಥವಾ ಸ್ಪಾಟಿಫೈ ಮ್ಯೂಸಿಕ್)

ಯಳಮಾಸಿ ಪೈಲಾ ದಿನಾ ಸಂಜಿಪರಿ ಎಲ್ಲರ ಮನ್ಯಾಗ್ ಘಮಂತ್ ಘಮಾಕಿ ಹೊಡಿಲಾತಿತ್ತ್. ಎಲ್ಲಾ ಕಡಿ ಫಟ್-ಫಟ್ ಅಂತ ರೊಟ್ಟಿ ಬಡೆದ್ ಅವಾಜ್ ಹೊಂಟಿತ್. ಯಾಕಂದುರ್, ಯಳಮಾಸಿ ಹಬ್ಬ ಅಂದುರ್ ಭಜ್ಜಿ ಉಂಬದೇ ಭಾಳ್ ಮಜಾ, ಭಜ್ಜಿ ಸಂಗ್ಟ್ ಬಿಸಿ ರೊಟ್ಟಿ ಛಂದ್ ಹತ್ತಾಲ್ದ್. ಅದ್ಕೆ ಪೈಲಾ ದಿನಾನೇ ಮನ್ಯಾಗ್ ಒಲಿಮ್ಯಾಲ್ ಖಡಕ್ ಜ್ವಾಳಾ ರೊಟ್ಟಿ, ಸಜ್ಜಿ ರೊಟ್ಟಿ, ಧಪಾಟಿ ಮಾಡಿ ಇಡ್ತಾರ್…

ನಾ ಡ್ಯೂಟಿ ಮುಗ್ಸಕೊಂಡ್ ಗಾಡಿ ಮ್ಯಾಗ್ ಮನಿಗಿ ಹೊಂಟಿದಾ, ಬಾಜು ಮನಿ ಆಯಿ ಏನೋ ಕಾಯಿ ಸುಲ್ಕೋತಾ ಕುಂತಿದುಳ್. ಈ ಆಯಿಗಿ ಎಡ್ಡೂ ಕಣ್ಣ್ ಕಾಣಾಲಾ ಖರೇ ಏನಾರಾ ಧಂಧ್ಯಾ ಮಾಡ್ಕೊತಾ ಕೂಡ್ತಾಳ್; ಹೋದೋಟ್ ಉಂಡಿ, ತಂತಾ ಸುಮುನ್ ನಿಚಿಂತೀ ಕೂಡದ್ ಬಿಟ್ಟಿ ಇಲ್ದೊಂದ್ ಝಂಜಾಟ್ ಮೈಗ್ ಹಚ್ಕೊತಾಳ್ ಅಂತ ಅನ್ಕೊತಾ, ಗಾಡಿ ಮ್ಯಾಗಿಂದ ಇಳ್ದಿ ಆಯಿ ಬಲ್ಲಿ ಹೋದಾ.

“ಏನ್ ಆಯಿ… ಪೈಲಾನೇ ಕಣ್ಣ್ ಕಾಣಾಲುವ್, ಕಿವಿ ಕೇಳ್ ಬರಾಲುವ್, ಮತ್ತ್ ಧಿನ್ನಾ ಏನಾರಾ ಒಂದ್ ಧಂಧ್ಯಾ ಮಾಡ್ತಿ ಅಲಾ? ನಿನ್ ಜಿವಾ ಬಿ ಸುಮ್ಮುನ್ ಕೂಡ್ಬೇಕ್ ಅಂಬ್ಲದೇನ್?” ಅಂತ ನಾ ಜರಾ ಜೋರ್ದಿಂದೇ ಕೇಳ್ದಾ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

“ಯಾನ್ ಮಾಡ್ಲಿ ಬಟಾ… ಈ ಹಳ್ಳಿ ಊರಾಗಾ ಮಟಾಮಟಾ ಮದ್ಯಾನ್ಯಾಳಿ ಯಾರ್ ಇರ್ತಾವ್ ಹೇಳ್? ಈಗ ಹೊಲ್ದಾಗೆಲ್ಲಾ ರಾಶಿ, ರುಪ್ಟಿ ನಡ್ದಾವ್; ಯಲ್ಲಾ ಮಂದಿ ಹೊಲ ಕಡೀನೇ ಹೊಯ್ತಾರ್. ಇದ್ದ ಸಣ್ಣ ಪಾರ್ಗೊಳ್, ಪುಡ್ಚಿ ಶಾಳಿಗಿ ಹೊಯ್ತಾರ್. ಯಾರಾರ್ ಮನ್ಯಾಗ್ ಇದ್ದಿನ್? ಹೆಣ್ಮಕ್ಕುಳು ಬಿ ಟಿವಿ, ಫೋನು ನೋಡ್ಕಾತಾ ಮನ್ಯಾಗೇ ಇರ್ತಾರಾ. ಈ ಕಾಲ್ದಾಗ್ ನಮ್ಮಂಥಾ ಮುದ್ಕೇರ್ ಸರಿ ಯಾರ್ ಕುಂತಿ ಮಾತಾಡ್ತಾರಾ, ನಮ್ ಮಾತ್ ಯಾರ್ ಕೇಳ್ತಾರ್, ನಾವ್ ಏನಾರಾ ಹೇಳ್ದುರ್ ಬಿ ಈಗಿನೋರಿಗ್ ಪಸಂದ್ ಬರಲ್ದು, ಸುಮ್ಮುನ್ ಇದ್ದೇವ್ ಅಂದುರ್ ಇದ್ದೇವ್ ಅಟೇ, ‘ಒಂದ್ ಕಾಲ್ ಮನ್ಯಾಗ್, ಒಂದ್ ಕಾಲ್ ಕುಣ್ಯಾಗ್’ ನಾವ್ ಇದ್ದುರೇಟು ಸತ್ತುರೇಟು! ಮನ್ಸ್ ಬರಲ್ದುಕ್ ಖಿಂಗೇ ಏನಾರಾ ಮಾಡ್ಕೊತಾ ಕುಂತಿ ದಿನಾ ಕಳಿಬೇಕ್ ಆಯ್ತುದ್,” ಅಂತ ಆಯಿ ಭಾಳ್ ಬ್ಯಾಜರದಗ್ ಹೇಳ್ದುಳ್.

ಆಯಿ ಅವ್ರೆಕಾಯಿ ಸುಲೇದ್ ನೋಡಿ ನಂಗ್ ಬಿ ಅನ್ಸುತ್ ನಾಳಿಗೋ, ನಾಡ್ದಿಗೋ ಯಳ್ಮಾಸಿ ಕಾಣ್ತುದ್, ಭಜ್ದಿ ಮಾಡ್ಲಾಕ್ ಅಂತ ಈಟ್ ತೋಲ್ ಕಾಯಿ ಸುಲಿಲಾತಾಳ್ ಅಂತ. ಅದೂ ಖರೇ ಮತ್ತ್… “ನಿಂಗ್ ಭಜ್ಜಿ, ಜ್ವಾಳ್ ರೊಟ್ಟಿ ಉಳ್ಳಾಕೇ ಬರಲ್ದ್ ಅಲಾ, ಈಟ್ ಕಾಯಿ ಯಾರಿಗಿ ಸುಲ್ದಿ ಕುಡ್ಲಾತಿ, ನಿಂಬಲಿ ಯಳಾಮಾಸಿ ಬಿ ಮಾಡಾಲೂರ್ ಅಲಾ, ಈಟೊಂದ್ ಅವ್ರೆಕಾಯಿ ಯಾರ್ ಕೊಟ್ಟಾರ್ ನಿಂಗ್ ಸುಲಿಲಾಕ್,” ಅಂತ ಆಯಿ ಬಾಜು ಕುಂತಿ ಕೇಳ್ದಾ.

“ಹ್ಹೂ… ಕಾಯಿ ನಮ್ದಿಲ್ಲಾ. ನಮ್ ದೊಡ್ಮಗಾ ಧೂಳಪ್ಪ್ ನೌಕ್ರಿ ಹನಾಲಾ ಪಟೇಲುರ್ ನಿಂಗಪ್ಪೋರ್ ಮನ್ಯಾಗ್, ಅವರ್ ಗೌಡ್ತಿ ಖಳಸ್ಯಾರ್ ಸುಲ್ಕುಡು ಅಂತಾ. ಅವ್ರ್ ಬಲ್ಲಿ ಯಳಮಾಸಿ ಅದಾ, ಯಳಮಾಸಿ ದಿನಾ ಊರಾಗ್ ಬೇಕಾಗಿನೋರಿಗ್, ಕೂಲ್ಕಾರ್ ಮಂದಿಗೆಲ್ಲ ಉಳ್ಳಾಕ್ ಹೇಳ್ತಾರ್. ಅದಕ್ಕ್ ಒಮ್ಮಿಗೆ ನಾಕೈದ್ ಶೇರ್ ಬೀಜ್ ಬೇಕ್ ಭಜ್ಜಿ ಮಾಡ್ಲಾಕ್. ಈಗ ಓಸೊಂದ್ ಕಾಯಿ ಸುಲೇದ್ ಅವ್ರಿಗಿ ಆಗಲ್ದ್ ಅಂತ. ಒಂದ್ ಶೇರೋಟ್ ಬೀಜದ್ ಕಾಯಿ ಕೊಟ್ಟಾರ್ ಸುಲೀ,” ಅಂತ ಹೇಳಾತನ್ಕಾ ಆಯೀ, ಆಗಳೇ ಒಂದ್ ಪಾವೋಟ್ ಅವ್ರೇಕಾಯಿ ಮತ್ತ್ ತೊಗ್ರಿಕಾಯಿ ಬೀಜಾ ಸುಲ್ದಿ ಇಟ್ಟಿದೂಳ್ ಬುಟ್ಟ್ಯಾಗ್.

“ಹಂಗೇನ್…! ಆಯ್ತು ಆಯೀ ಸುಲೀ-ಸುಲೀ… ಏಟ್ ವಯಸ್ಸಾದ್ರೂ ಬೀ ಜಿವಾ ಒಂದ್ ಸುಮ್ಮುನ್ ಕೂಡ್ಲದ್ ಅಲಾ, ಏನಾರಾ ಮಾಡ್ಬೇಕೇ ಅಂತೂದ್,” ಅಂತ ಅಂದಾ.

“ಈ ಯಳಮಾಸೀ ಫೈಲೇಕಿನಾಂಗ್ ಆಗಲ್ ಹೋಗ್ಯಾದ್ ನೋಡ್ ಆಯಿ… ನಾವ್ ಸಣ್ಣೋರಿದ್ದಾಗ್ ಆಗಿದ್ಹಾಂಗ್ ಈಗ ಆಗಲ್ ಹೋಗ್ಯಾದ್,” ಅಂದಾ.

“ಅಯ್ಯೀ… ಅದೇನ್ ಹೇಳ್ತೀ ಮಗಾ, ಯಳಮಾಸೀ ಒಂದೇ ಅಲ್ಲಾ, ಯಲ್ಲಾ ಹಬ್ಬ ಹರಿದಿನಾ ಖಿಂಗೇ ಆಗ್ಲಾತಾವ್. ಯಲ್ಲೋರ್ ಹೋಗಿ ಪ್ಯಾಟೀ ಸೇರ್ಯಾರ್. ಇದ್ದ ನಮ್ಮಂಥಾ ಹಿಂದ್ಕಿಂದ್ ಮಂದಿ ಊರಾಗಾ ಹರಾ. ಆಯ್ತಿಗ್ ಮಸಿನಿರಿ ಬಂದ್ಮ್ಯಾಲ್ ಒಕ್ಕಲತನ್ ಮಾಡೋ ಮಂದಿ ಬಿ ಕಮ್ಮ್ ಆಗ್ಯಾರ್. ಯಾರ್ ಬಲ್ಲಿ ಒಕ್ಕಲತನ್ ಅದಾ ಅವರೇ ಥೋಡೆ ಮಂದಿ ಯಳಮಾಸಿ ಮಾಡ್ಲಾತಾರ್,” ಅಂತ ಅಂದುಳು ಆಯೀ.

ಯಳಮಾಸಿ ಬಾಲಾಜಿ ಕುಂಬಾರ್ ಔರಾದ್ ಸೀಮೆಯ ಕನ್ನಡ

ವರ್ಷಿಗೊಮ್ಮಿ ಬರೋ ಯಳಮಾಸಿ ಬಂದುರ್ ಸಾಕ್, ಒಕ್ಕಲಗೇರ್ ಮಂದಿಗ್ ಭಾಳ್ ಹಿಗ್ಗ್, ಮೈಥುಂಬಿ ನಿಂತಿಂದ್ ಕಡ್ಡಿ, ದೊಡ್ಡ್‌ಜ್ವಾಳಾ, ಖುಸ್ಬಿ, ಲೆಂಕಿ ಅದ್ರಾಗೇ ಕಟ್ಟೀಗಿ ನಾಕ್ ಅಕ್ಡಿ ಹಾಕಿಂದ್ ಒಟಾಣಿ ಸಾಲಾ… ಹಿನಾ ಏನೇನೋ ಬಿತ್ತಿಂದ್ ರಬ್ಬಿ ಬೆಳಿದಾಗ, ನಾಳಿಗಿ ಯಳಮಾಸಿ ಅಂದುರ್ ಫೈಲಾ ದಿನಾನೇ ತಯ್ಯಾರಿ ಮಾಡ್ತಾರ್, ಒಣಗಿಂದ ಕಳಕಿ ಸೂಡ್ ತಂದಿ ನಡು ಹೊಲ್ದಾಗ್ ಗುಡ್ಸಿ ಹಾಕಿ, ಹಳ್ಳದ ಕಟ್ಟಿಗಿ ಮುತ್ತಿನ ಗಿಡದ ಕೆಳಗ್ ಕೂಡ್ಸಿಂದ ಪಾಂಡೋರಿಗಿ ಪೂಜಾ ಮಾಡ್ಲಾಕ್ ಅಂತ ಸುತ್ತಾ ಬೆಳ್ದಿಂದ ಜಾಳಿ ಎಲ್ಲಾ ಕುಡ್ಗೀಲ್ ತಕೊಂಡ್ ಸಾಫ್ ಮಾಡಿ ಮನಿಗಿ ಬರ್ತಾರ್.

ಯಳಮಾಸಿ ಪೈಲಾ ದಿನಾ ಸಂಜಿಪರಿ ಎಲ್ಲರ ಮನ್ಯಾಗ್ ಘಮಂತ್ ಘಮಾಕಿ ಹೊಡಿಲಾತಿತ್ತ್. ಎಲ್ಲಾ ಕಡಿ ಫಟ್-ಫಟ್ ಅಂತ ರೊಟ್ಟಿ ಬಡೆದ್ ಅವಾಜ್ ಹೊಂಟಿತ್. ಯಾಕಂದುರ್, ಯಳಮಾಸಿ ಹಬ್ಬ ಅಂದುರ್ ಭಜ್ಜಿ ಉಂಬದೇ ಭಾಳ್ ಮಜಾ, ಭಜ್ಜಿ ಸಂಗ್ಟ್ ಬಿಸಿ ರೊಟ್ಟಿ ಛಂದ್ ಹತ್ತಾಲ್ದ್. ಅದ್ಕೆ ಪೈಲಾ ದಿನಾನೇ ಮನ್ಯಾಗ್ ಒಲಿಮ್ಯಾಲ್ ಖಡಕ್ ಜ್ವಾಳಾ ರೊಟ್ಟಿ, ಸಜ್ಜಿ ರೊಟ್ಟಿ, ಧಪಾಟಿ ಮಾಡಿ ಇಡ್ತಾರ್. ಅದರ್ ಸರಿ ಜ್ವಾಳ್ ಬಾನಾ, ದೊಡ್ಡ ಜ್ವಾಳ್ ಅಂಬಲಿ, ಘೋದಿ ಹುಗ್ಗಿ, ತುಪ್ಪಾ, ಕೆನಿ ಮೊಸ್ರು, ದಿವ್ಡಿ ಮತ್ ಭಜ್ಜಿ ಸರಿ ಉಳ್ಳಾಕ್ ಬೆಳಗಡ್ಡಿ, ಜೀರ್ಗಿ ಹಾಕಿ ಕಾಸಿಂದ್ ಒಳ್ಳೆಣ್ಣಿ, ಎಡ್ಮೂರ್ ತೀರ್ ಖಾರಾ… ಹಿನಾ ಹತ್ ತೀರಿಂದ್ ಉಳ್ಳಾಕ್ ಎಲ್ಲಾ ಕಟ್ಕೊಂಡಿ ಮುಂಜಾನತ್ ಬುಟ್ಟಿ ತಕೊಂಡಿ ಹೊಗ್ತಾರ್. ಮಣ್ಣಿನ್ ಗಡ್ಗ್ಯಾಗ್ ಅಂಬಲಿ ಥುಂಬ್ಕೊಂಡ್ ಒಬ್ಬುರ್ ತಲಿ ಮ್ಯಾಲಿ ತಕೊಂಡಿ ಹೋಗ್ತಾರ್. ಅವ್ರ್ ಸರಿ ಮನೇಷ್ ಮಂದಿ ಎಲ್ಲಾ ಹೊಲುಕ್ ಹೋಗ್ತಾರ್.

ಯಳಮಾಸಿ ಎಂಬುದು ದೊಡ್ಡ ಹಬ್ಬ
ಇದು ದೊಡ್ಡ ಹಬ್ಬ, ಸುಳ್ಳೆ ಹೋಳಗಿ ಮಾಡಲ್ಯಾಂಗ್
ಬುಟ್ಟಿ ತುಂಬಾಲ್ಯಾಂಗ್
ಮುಂದೆ ನಡೀರಿ ನೀವು ಗಂಡಸುರು
ಹಿಂದೆ ಬರ್ತೇವು ನಾವು ಹೆಂಗಸುರು
ಒಯ್ದು ಇಳಸರೀ ಬುಟ್ಟಿ ನಮ್ಮ ಹೊಲ್ದಾಗ್
ಸಣ್ಣ ಮೊಳಿನಾಗ, ಸೆರ್ಗಾ ಚೆಲ್ಲರೀ ನಮ್ಮ ಹೊಲ್ದಾಗ್
ಪೂಜೆ ಮಾಡ್ರೀ ಪಂಚ್ ಪಾಂಡವರಿಗಿ…

…ಹಿಂಗ್ ನಮ್ ಹಿಂದ್ಕಿನ್ ಮಂದಿ ಪದ ಕಟ್ಟಿಂದ್ ಈಗ್ಬಿ ಹಾಡೋದ್ ಕೇಳ್ದೂರ್, ಯಳಮಾಸಿ ಅಂದುರ್ ಏಟ್ ಐಸಿರಿ ಇರ್ತೂದ್ ಅಂತ ಖುನಾ ಆಯ್ತುದ್.

ಯಳಮಾಸಿ ದಿನಾ ಆಯಿ ಜಲ್ದಿನೇ ಮೈತೊಳ್ಕೊಂಡಿ ಇಳಕಲ್ ಸೀರಿ ಉಟ್ಕೊಂಡಿ ಮನಿಮುಂದ್ ಕಟ್ಟಿಮ್ಯಾಲ್ ಕುಂತಿದುಳ್. ಇವತ್ ನಾಬಿ ಹೊಲ್ಕಡಿ ಹೊಗರ್ ಅಂತ ತಯ್ಯಾರ್ ಆಗಿ ನಡ್ದಿದಾ, ಆಯಿ ಕುಂತಿಂದ್ ನೋಡ್ತಿಕಿ ಮತ್ ಆಯಿ ಬಲ್ಲಿ ಹೋದಾ, “ಏನ್ ಆಯಿ, ಭಾಳ್ ಝಲ್ದಿನೇ ತಯ್ಯಾರಾಗಿ ಕುಂತಿದಿ! ಯಳಮಾಸಿ ಮಾಡ್ಲಾಕ್ ಹೊಲಕ್ ನಡ್ದಿ ಏನ್? ಅಂತ ಕೇಳ್ದಾ.

“ಇಲ್ಲ ಮಗಾ… ನಂಗೆಲ್ಲಿ ನಡಿಲಾಕ್ ಕೈಲ್ಗಾತುದ್ ಅಂತ ಹೊಲುಕ್ ಬರ್ಲಿ? ನೀವೇ ಎಲ್ಲೋರ್ ಹೋಗ್ರೀ, ನಾ ಮನಿ ಕಾಯ್ಕೊತಾ ಮನ್ಯಾಗೇ ಇರ್ತಾ. ಮತ್ ಜಲ್ದಿ ಹೋಗ್ರೀ; ಚರಗ ಛೆಲ್ಬೇಕ್, ಪಾಂಡೋರಿಗಿ, ಹಿರ್ಡೋರಿಗಿ ನೆವ್ದಿ ತೋರ್ಬೇಕ್ ಅಲಾ? ನೀ ಅಂಬ್ಲಿ ಬಿಂದ್ಗಿ ತಕೋ. ನಿಮ್ಮಪ್ಪ ಬುಟ್ಟಿ ತಕೋತಾರ್. ಹಂಗೇ ನಿನ್ ಕಾಲೇಜ್ ದೋಸ್ತುರಿಗಿ ಯಾರಿಗರಾ ಭಜ್ಜಿ ಉಳ್ಳಾಕ್ ಬಾ ಅಂಬಾನಿತ್ತ್, ಆ ಕಟ್ಟಿಗಿ ಬೇನ್ ಗಿಡ್ಕ್ ಝೂಕಾಲಿ ಹಾಕ್ರೀ. ಪಾರ್ಗೊಳ್ ಪುಡ್ಚಿ ಯಾರ್ಯಾರಾ ಆಡ್ತಾವ್…” ಅಂತ ಆಯಿ ಒಂದೇ ಫೆಕಿ ದಮ್ ಬಿಟ್ಕೊತಾ ಎಲ್ಲಾ ಹೇಳ್ದುಳ್.

ಎಲ್ಲೋರ್ ಕಲ್ತಿ ಹೊಲುಕ್ ಹೋಗಿ ಚರಗ್ ಛೆಲ್ಲಿ, ಭಜ್ಜಿ ಉಂಡಿ ಕಟ್ಟಿಗಿ ಹುಂಚ್ಯಾ ಗಿಡ್ ಕೆಳಗ್ ಜರಾ ಮಕೊಂಬರಿ ಅಂದುರ್. ಪಾರ್ಗೊಳ್ ಬಂದಿ, “ಮಾಮಾ… ಝುಕಾಲಿ ಹಾಕೂಡ್ರಿ,” ಅಂತ ಗುಲ್ ಎಬ್ಸದೂರ್. ಮತ್ ನೇಗಿಲ್ ಮಿಳಿ ತಕೊಂಡಿ ಗಿಡ್ ಏರಿ ಝೂಕಾಲಿ ಹಾಕೊಟ್ಟಾ. ಹೊಲ್ದ್ ಬಾಜು ಹಣ್ಯಾದ್ಯಾಗಿಂದ ಹೋಗಾ ಬರಾ ಮಂದಿಗಿ, “ಬರೀ… ಥೊಡೇ ಭಜ್ಜಿ ಉಬಂಟ್ರೀ,” ಅಂತ ಕರ್ಕೋತಾ ಕುಂತಾ. ಅವ್ರು “ಭ್ಯಾಡ್ರೀ… ಈಗೇ ನಾಕ್ ಹೊಲಾ ಮುಗ್ಸಿ ಹೊಂಟಿದೇವ್, ಈಗ ಏಟ್ಬಿ ಹಿಡೆಲ್ದ್,” ಅಂತ ಅನ್ಕೊತಾ ಮುಂದ್ ಹೋಗೋರ್. “ಅಯ್ಯೀ! ಬರೀ ಇವತ್ ಹೊಟ್ಟಿ ಜರಾ ದೊಡ್ಡುದ್ ಮಾಡ್ಕೊಬೇಕ್. ಏಟ್ ಉಂಡುರ್ಬಿ ತಾನೇ ಕರ್ಗತುದ್. ಇವತ್ ಯಾರ್ ಕರ್ದುರ್ ಬಿ ವಲ್ಲಾ ಅನಭ್ಯಾಡ್ದು. ಭಜ್ಜಿ ಉಂಬಲ್ ಹೋದುರ್ ಒಂದ್ ಗಿಲಾಸ್ ಅಂಬ್ಲಿರಾ ಕೊಂಡಿ ಹೋಗ್ರಿ,” ಅಂತ ಅವ್ವು ಕರ್ದುಳ್.

ಸಂಜಿತನ್ಕಾ ಊರಾಗಿಂದ್ ಮಂದಿ, ದೋಸ್ತುರ್, ಅವ್ರು-ಇವ್ರು ಹಿಂಗೆ ಎಲ್ಲೋರ್ ಬಂದಿ, ಭಜ್ಜಿ ಉಂಡಿ ಹೋದುರ್. ಒಬ್ಬುರ್ ಅಂಬ್ಲಿನೇ ಕೊಂಡುರ್. ಒಬ್ಬುರ್ ಜ್ವಾಳ್ ಬಾನಾ ಉಂಡುರ್. ಹಿನಾ ಥೊಡೆ ಮಂದಿ ಸುಮ್ಮುನ್ ಬಂದಿ ಕುಂತಿ, “ಈ ವರ್ಷ ಏನಾರಾ ಕಡ್ಡೆಕಾಯಿ ಘಟ್ಟ್ ಆಗ್ಯಾದಾ ಇಲ್ಲಾ? ಆ ಸಯ್ಯಾನ್ ಗಿಡಕ್ ಬಾರೇಕಾಯ್ಬಿ ಕಾಣಲ್ ಹೋಗ್ಯಾವ್; ಇಸ್ಮಾಲ್ ಸಾಬ್ ಹೊಲ್ದ್ ಕಟ್ಟಿ ಹಳ್ಳದಗೊಂಟಾ ಏನಾರಾ ಜೇನ್ ಸಿಗ್ತಾವೋ ಹ್ಯಾಂಗೋ,” ಅಂತ ಬಾಬೋರ್ ಸರಿ ಮಾತಾಡ್ಕೊತಾ ಕುಂತಿದೂರ್. “ಏಳ್ರೀ ಹೊತ್ ಹೋಗ್ಲಾಕ್ ಬಂದುದ್. ಥಾಳಿ ಒಳ್ಗಾ ಕುಳ್ಳ್ ಹಾಕಿ ಬೆಂಕಿ ಹಾಕ್ರಿ. ಜಲ್ದಿ ಹಾಲ್ ಉಕ್ಸಿ ಹೋಗಾರ್ ಮನಿಕಡೀ,” ಅಂತ ಅತ್ತ್ ಅವ್ವು ಕರೀಲಾತಿದ್ದುಳ್.

ಬಾಬೋರ್ ಎದ್ದಿ, “ಹಾ… ಆಯ್ತ್, ಆ ಎತ್ಗೊಳಿಗಿ ಜರಾ ನಿರ್ ಕುಡ್ಸಿ ಮೆವ್ ಹಾಕಿ ಬರ್ತಾ. ಧೂಳಪೋರ್ ಎತ್ಗೋಳ್ ಸರಿ ಸಂಜಿಕಿ ತಾನೇ ಮನೀಗಿ ಬರ್ತಾವ್, ನಾವ್ ಬುಟ್ಟಿ ತಕೊಂಡಿ ಹೋಗಾರಿ ಊರ್ಕಡಿ,” ಅಂತ ಹೇಳ್ಕೊತಾ, ಎತ್ಗೊಳ್ ಬಿಡ್ಲಾಕ್ ಹೋದೂರ್. ಆ ಬಾಜು ಮನೀ ಆಯಿಗಿ ಗಟ್ಟಂದ್ ಕಡ್ಡೆಕಾಯಿ ಹಲ್ಲಿಗಿ ಬರಲ್ದ್ ಅಂತೇಳಿ ಚಟ್ಟಿ-ಚಟ್ಟಿ ಇದ್ದಿಂದ್ ನಾಕ್ ಧಂಟ್ ಕಿತ್ಕೊಂಡಾ, ನಾ ಬಿ ಎಲ್ಲೋರ್ ಸಂಗ್ಟ್ ಸಂಜಿಕಿ ಮನೀಗಿ ಬಂದಾ.

ಈದಿನ.ಕಾಮ್ ಆಡಿಯೊಗಳನ್ನು ಆಲಿಸಲು ಕ್ಲಿಕ್ ಮಾಡಿ:
ನುಡಿ ಹಲವು | ಅಂಕಣ | ವೈವಿಧ್ಯ

ಪೋಸ್ಟ್ ಹಂಚಿಕೊಳ್ಳಿ:

ಬಾಲಾಜಿ ಕುಂಬಾರ್
ಬಾಲಾಜಿ ಕುಂಬಾರ್
ಕವಿ, ಪತ್ರಕರ್ತ

1 COMMENT

  1. ಅರ್ಥಪೂರ್ಣ ರೀತಿಯಲ್ಲಿ ವಿವರಣೆ ಮಾಡಲಾಗಿದೆ. ಪರಂಪರೆ ಸಮಕಾಲೀನತೆಗೆ ಈ ಲೇಖನ ಕೆೃಗನ್ನಡಿಯಾಗಿದೆ.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ನಮ್ಮನ್ನು ಬೆಂಬಲಿಸಿ

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕಲಬುರಗಿ ಸೀಮೆಯ ಕನ್ನಡ | ನಂಗಂತೂ ಅತ್ತಿ ಹೇಳದೂ ಖರೆ ಅನಸ್ತದ, ಸೊಸಿ ಹೇಳದೂ ಖರೆನೇ ಅನಸ್ತದ!

(ಸಂಪೂರ್ಣ ಆಡಿಯೊ ಕೇಳಲು ಇಲ್ಲಿ ಕ್ಲಿಕ್ ಮಾಡಿ: ಗೂಗಲ್ ಪಾಡ್‌ಕಾಸ್ಟ್ ಅಥವಾ...

ಬೀದರ್ ಸೀಮೆಯ ಕನ್ನಡ | ವಯಸ್ಸೀಗಿ ಬಂದ್ ಮ್ಯಾಲ ಎಲ್ಲರಿಗಿ ಲವ್ ಆಯ್ತದ್; ಆಗಿಲ್ಲಾಂದ್ರ…?

(ಸಂಪೂರ್ಣ ಆಡಿಯೊ ಕೇಳಲು ಇಲ್ಲಿ ಕ್ಲಿಕ್ ಮಾಡಿ: ಗೂಗಲ್ ಪಾಡ್‌ಕಾಸ್ಟ್ ಅಥವಾ...

ಕಲಬುರಗಿ ಸೀಮೆಯ ಕನ್ನಡ | ಈ ಪದ್ದತಿಗಳು ಹೆಂಗಸರಿಗಿ ಜೀವಾ ತಿಂತಾವ ನೋಡ್ರೀ…

(ಸಂಪೂರ್ಣ ಆಡಿಯೊ ಕೇಳಲು ಇಲ್ಲಿ ಕ್ಲಿಕ್ ಮಾಡಿ: ಗೂಗಲ್ ಪಾಡ್‌ಕಾಸ್ಟ್ಸ್ ಅಥವಾ...